
Viral : ಇಂದು ಸಾಧಾರಣ ಹೋಟೆಲ್ನಲ್ಲಿ ಒಂದು ಮಸಾಲೆ ದೋಸೆ ತಿನ್ನಬೇಕೆಂದರೆ ರೂ. 60 ಖರ್ಚಾಗುತ್ತದೆ. ಆದರೆ 1971ರಲ್ಲಿ? ಇದೀಗ ವೈರಲ್ ಆಗುತ್ತಿರುವ ದೆಹಲಿಯ ಮೋತಿ ಮಹಲ್ ರೆಸ್ಟೋರೆಂಟ್ನ ಬಿಲ್ ವಿವರ ನೋಡಿ. 51 ವರ್ಷಗಳ ಹಿಂದೆ ಎರಡು ಮಸಾಲೆ ದೋಸೆ ಮತ್ತು ಎರಡು ಕಾಫಿಗೆ ಕೇವಲ ರೂ. 2.16 ನೆಟ್ಟಿಗರಂತೂ ಈ ಬಿಲ್ ನೋಡಿ, ಅದೇ ಕಾಲ ವಾಪಸ್ ಮರಳಬಾರದೆ ಎಂದು ಕೇಳಿಕೊಳ್ಳುತ್ತಿದ್ದಾರೆ.
ಹಲವಾರು ವರ್ಷಗಳಿಂದ ದಕ್ಷಿಣ ಮತ್ತು ಉತ್ತರ ಭಾರತದ ತಿಂಡಿತಿನಿಸುಗಳಿಗೆ ಹೆಸರುವಾಸಿಯಾದ ಈ ರೆಸ್ಟೋರೆಂಟ್ ರಾಜಧಾನಿಯ ತಿಂಡಿಪ್ರಿಯರ ಸ್ವರ್ಗ. ಇಲ್ಲಿ ಕೈಗೆಟಕುವ ದರದಲ್ಲಿ ರುಚಿಯಾದ ತಿಂಡಿಗಳು ಲಭ್ಯ. ಇದೀಗ ವೈರಲ್ ಆಗಿರುವ ಈ ಬಿಲ್ ಅನ್ನು 2017ರ ಫೆಬ್ರವರಿಯಲ್ಲಿ ಟ್ವೀಟ್ ಮಾಡಲಾಗಿದ್ದು ಇದು ಮತ್ತೀಗ ವೈರಲ್ ಆಗುತ್ತಿದೆ.
ಇದನ್ನೂ ಓದಿ : ನೇಪಾಳ ವಿಮಾನ ದುರಂತಕ್ಕೂ ಮುನ್ನ ಕೊನೆಯ ಟಿಕ್ಟಾಕ್ ಮಾಡಿದ ಗಗನಸಖಿಯ ವಿಡಿಯೋ ವೈರಲ್
ಇಂಡಿಯನ್ ಹಿಸ್ಟರಿ ವಿತ್ ವಿಷ್ಣು ಶರ್ಮಾ ಎಂಬ ಖಾತೆಯಲ್ಲಿ ಈ ಪೋಸ್ಟ್ ಹಂಚಿಕೊಳ್ಳಲಾಗಿದೆ. ಇಂದು ದೆಹಲಿಯ ರೆಸ್ಟೋರೆಂಟ್ನಲ್ಲಿ ಒಂದು ಸಾದಾ ದೋಸೆಗೆ ರೂ. 92 ಖರ್ಚಾಗುತ್ತದೆ. ಐವತ್ತು ವರ್ಷಗಳಲ್ಲಿ ಕೊಳ್ಳುವ ಶಕ್ತಿ ಹೆಚ್ಚಾಗಿದೆ ಎಂಬುದನ್ನು ಇದು ತೋರಿಸುತ್ತದೆ. ಈ ಪೋಸ್ಟ್ ನೋಡಿದ ನೆಟ್ಟಿಗರು, ಇಲ್ಲಿ ಇನ್ನೂ ಮಸಾಲೆದೋಸೆ ಸಿಗುತ್ತದೆಯೇ ಎಂದು ಕೇಳಿದ್ಧಾರೆ.
ಇದನ್ನೂ ಓದಿ : ಊಟದ ಬಿಲ್ ಕೇಳಿದ್ದಕ್ಕೆ ಹೋಟೆಲ್ ಸಿಬ್ಬಂದಿ ಮೇಲೆ ಹಲ್ಲೆ ಮಾಡಿದ್ದ ರೌಡಿಗಳ ಬಂಧನ!
ಪಂಜಾಬಿ ರೆಸ್ಟೋರೆಂಟ್ 1971ರಲ್ಲಿ ಎರಡು ರೂಪಾಯಿಗೆ ಇಷ್ಟೆಲ್ಲ ತಿಂಡಿ ಸರ್ವ್ ಮಾಡುತ್ತಿತ್ತೇ!? ಅಚ್ಚರಿಯಾಗುತ್ತಿದೆ ಎಂದಿದ್ದಾರೆ ಒಬ್ಬರು. ಇದನ್ನು ನೋಡಿದ ನೀವು ನಿಮ್ಮೂರಲ್ಲಿ ನಿಮ್ಮ ಬಾಲ್ಯಕಾಲದಲ್ಲಿ ಯಾವೆಲ್ಲ ಹೋಟೆಲ್ನಲ್ಲಿ ಎಷ್ಟು ರೂಪಾಯಿಗೆಲ್ಲ ತಿಂಡಿ ತಿನಿಸುಗಳು ಸಿಗುತ್ತಿದ್ದವು ಎಂಬುದನ್ನು ನೆನಪಿಸಿಕೊಳ್ಳುತ್ತಿರಬಹುದು.
ಮತ್ತಷ್ಟು ವೈರಲ್ ನ್ಯೂಸ್ಗಾಗಿ ಕ್ಲಿಕ್ ಮಾಡಿ
Published On - 12:59 pm, Tue, 17 January 23