
ಜೆರುಸಲೆಂ: ಬಿಗಿ ಭದ್ರತೆಯಿದ್ದ ಜೈಲಿನಲ್ಲಿದ್ದ 6 ಪ್ಯಾಲೆಸ್ತೀನ್ ಉಗ್ರರು (Palestinian Militants) ಚಮಚಗಳಿಂದಲೇ ಟಾಯ್ಲೆಟ್ ನೆಲವನ್ನು ಕೊರೆದು ಪರಾರಿಯಾಗಿದ್ದಾರೆ. ಹಾಲಿವುಡ್ (Hollywood) ಸ್ಟೈಲ್ನಲ್ಲಿ ಇಸ್ರೇಲ್ನಲ್ಲಿ ಈ ಘಟನೆ ನಡೆದಿದೆ. ತಮ್ಮ ಸೆಲ್ನ ನೆಲವನ್ನು ಅಗೆದು ಜೈಲಿನಿಂದ ಪರಾರಿಯಾಗಿರುವ ಕೈದಿಗಳ ವರ್ತನೆಯಿಂದ ಜೈಲಧಿಕಾರಿಗಳು ಶಾಕ್ ಆಗಿದ್ದಾರೆ. ಈ ಕೈದಿಗಳ ಪೈಕಿ ಅಲ್-ಅಕ್ಸಾ ಬ್ರಿಗೇಡ್ (Al-Aqsa Martyrs’ Brigade) ಉಗ್ರ ಸಂಘಟನೆಯ ಮಾಜಿ ನಾಯಕ ಕೂಡ ಇದ್ದ ಎನ್ನಲಾಗಿದೆ.
ಬಂಧಿತರಾಗಿದ್ದ ಉಗ್ರರು ಜೈಲಿನಲ್ಲಿದ್ದ ತಮ್ಮ ಬಾತ್ ರೂಂನ ನೆಲವನ್ನು ಅಗೆದು, ಗುಪ್ತ ಮಾರ್ಗ ಸಿದ್ದಪಡಿಸಿಕೊಂಡಿದ್ದರು. ಆ ಬಾತ್ ರೂಂ ಕ್ಲೀನ್ ಮಾಡಲು ಬೇರೆ ಯಾರೂ ಬರುತ್ತಿರಲಿಲ್ಲವಾದ್ದರಿಂದ ಇವರು ಹಲವು ದಿನಗಳಿಂದ ನೆಲವನ್ನು ಅಗೆದಿದ್ದು ಯಾರಿಗೂ ಗೊತ್ತಾಗಿರಲಿಲ್ಲ. ತಮ್ಮ ಬಳಿಯಿದ್ದ ಚಮಚ, ಲೋಟಗಳನ್ನೇ ಬಳಸಿ ಹೊಂಡ ತೋಡಿ ಉಗ್ರರು ಪರಾರಿಯಾಗಿದ್ದಾರೆ.
ಬಾತ್ ರೂಂನಿಂದ ಕೆಳಗೆ ಜೈಲಿನಿಂದ ಹೊರಗೆ ಸಂಪರ್ಕ ಕಲ್ಪಿಸುವ ಗೋಡೆಯಾಚೆ ಸಣ್ಣದಾದ ಕಂದಕ ಕೊರೆದ ಉಗ್ರರು ಅದರ ಮೂಲಕ ಜೈಲಿನಿಂದ ಹೊರಗೆ ಹೋಗಿದ್ದಾರೆ. ಉಗ್ರರು ಮಾಡಿರುವ ಈ ಕೃತ್ಯದ ವಿಡಿಯೋವನ್ನು ಟ್ವಿಟ್ಟರ್ನಲ್ಲಿ ಹಂಚಿಕೊಳ್ಳಲಾಗಿದೆ. ಜೈಲಿನ ಪಕ್ಕದ ತೋಟದಲ್ಲಿ ಅನುಮಾನಾಸ್ಪದ ವ್ಯಕ್ತಿಗಳು ಓಡಿ ಹೋಗುತ್ತಿದ್ದುದನ್ನು ನೋಡಿದ ರೈತರು ಜೈಲಧಿಕಾರಿಗಳಿಗೆ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಆಗ ಪರಿಶೀಲನೆ ಮಾಡಿದಾಗ 6 ಉಗ್ರರಿದ್ದ ಸೆಲ್ ಖಾಲಿಯಾಗಿರುವುದು ಗೊತ್ತಾಗಿದೆ.
ಇದನ್ನೂ ಓದಿ: Viral Video: ಹೋಟೆಲ್ ರೂಮಿನಲ್ಲಿ ಪ್ರೇಯಸಿಯೊಂದಿಗೆ ಸಿಕ್ಕಿಬಿದ್ದ ಗಂಡ; ಎಲ್ಲರೆದುರೇ ಗ್ರಹಚಾರ ಬಿಡಿಸಿದ ಹೆಂಡತಿ
Viral News: ಮನೆ ಖರೀದಿಸಲು ಯೋಚಿಸುತ್ತಿದ್ದೀರಾ?; ಈ ಊರಿನಲ್ಲಿ 87 ರೂ.ಗೆ ಮನೆ ಮಾರಾಟಕ್ಕಿದೆ!
(Viral Video 6 Prisoners Dig Hole in Toilet Floor With Spoon Escape from High Security Israel Jail)