ಸಾಮಾಜಿಕ ಜಾಲತಾಣದಲ್ಲಿ ಅನೇಕ ವಿಡಿಯೋ ಪ್ರತಿದಿನ ವೈರಲ್ ಆಗುತ್ತಿರುತ್ತದೆ, ಕೆಲವೊಂದು ಮಾನವೀಯತೆ, ಪ್ರತಿಭೆಗಳು ಇನ್ನೂ ಅನೇಕ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿರುತ್ತದೆ. ಈಗ ಇಲ್ಲಿಯೊಂದು ವಿಡಿಯೋ ವೈರಲ್ ಆಗಿದೆ, ಹೌದು ಇದು ತಮಾಷೆಯಾಗಿದೆ. ಸಿಂಹ ಮತ್ತು ಆಮೆಯ ಈ ವಿಡಿಯೋ ನೆಟ್ಟಿಗರನ್ನು ನಗುವಂತೆ ಮಾಡಿದೆ. ಆಮೆ ಚೆಷ್ಠೆಗೆ ಸಿಂಹ ಸೋತು ಹೋಗಿದೆ. ಸಿಂಹ ಕಾಡಿನ ರಾಜ, ಎಲ್ಲ ಪ್ರಾಣಿಗಳು ಸಿಂಹಕ್ಕೆ ಭಯಪಡುವುದುಂಟು ಆದರೆ ಇಲ್ಲಿ ಆಮೆಗೆ ಸಿಂಹ ಭಯಪಟ್ಟಿದ್ದು ವಿಶೇಷವಾಗಿದೆ.
ಈಗ ವೈರಲ್ ಆಗಿರುವ ಇನ್‌ಸ್ಟಾಗ್ರಾಮ್ ನಲ್ಲಿ ವೀಡಿಯೊ ಹಂಚಿಕೊಂಡಿದ್ದಾರೆ , ಈಗ ವಿಡಿಯೋದಲ್ಲಿ ಸಿಂಹವನ್ನು ಆಮೆಯಿಂದ ಬೆದರಿಸುತ್ತಿರುವುದನ್ನು ಕಾಣಬಹುದು. ನದಿಯಲ್ಲಿ ಸಿಂಹ ಬಾಯರಿಕೆಯಿಂದ ನೀರನ್ನು ಕುಡಿಯಲು ಪ್ರಯತ್ನ ಮಾಡುತ್ತಿರುತ್ತದೆ. ಆದರೆ ಆಮೆಯು ಸಿಂಹಕ್ಕೆ ತೊಂದರೆಯನ್ನು ನೀಡುತ್ತದೆ. ಆಮೆ ಕಾಡಕ್ಕೆ ಸಿಂಹವು ಬೆಸತ್ತಿರುವುದನ್ನು ಈ ವಿಡಿಯೋವನ್ನು ಕಾಣಬಹುದು.
ಸಿಂಹವು ನದಿಯ ದಡದಿಂದ ನೀರು ಕುಡಿಯಲು ಪ್ರಯತ್ನಿಸುತ್ತಿರುವುದನ್ನು ನಾವು ನೋಡಬಹುದು ಮತ್ತು ಇದ್ದಕ್ಕಿದ್ದಂತೆ ಒಂದು ಸಣ್ಣ ಆಮೆ ಸಿಂಹದ ಬಾಯಿಯ ಬಳಿ ಕಾಣಿಸಿಕೊಳ್ಳುತ್ತದೆ. ಆಮೆ ಕೊಡುತ್ತಿದ್ದ ಕಾಟಕ್ಕೆ ಕಿರಿಕಿರಿಗೊಂಡ ಸಿಂಹ, ವಿಪರಿತ ಬಾಯರಿಕೆಯಿಂದ ಆ ಸ್ಥಳದಿಂದ ಸಿಂಹ ಸ್ವಲ್ಪ ದೂರ ಸರಿಯುತ್ತದೆ. ಈ ಕಾಟ ಇಲ್ಲಿಗೆ ಮುಗಿಯುವುದಿಲ್ಲ. ಸಿಂಹವು ಬಾಯರಿಕೆಯನ್ನು ತಣಿಸಲು ಇನ್ನೊಂದು ಕಡೆ ನೀರನ್ನು ಕುಡಿಯಲು ಪ್ರಯತ್ನ ,ಮಾಡುತ್ತದೆ. ಆದರೆ ಧೈರ್ಯಶಾಲಿ ಆಮೆ ಮತ್ತೆ ಕಾಣಿಸಿಕೊಳ್ಳುತ್ತದೆ ಮತ್ತು ಈ ಸಮಯದಲ್ಲಿ, ಸಿಂಹದ ಮೀಸೆಯನ್ನು ಕಚ್ಚಲು ಸಹ ಧೈರ್ಯ ಮಾಡುತ್ತಾದೆ.
ಸಿಂಹವು ಮತ್ತೆ ದೂರ ಸರಿಯುತ್ತದೆ ಆದರೆ ಆಮೆ ಅದನ್ನು ಹಿಂಬಾಲಿಸುತ್ತದೆ. ಈ ಸಖತ್ ಕಾಮಿಡಿ ವಿಡಿಯೋವನ್ನು ಇನ್‌ಸ್ಟಾಗ್ರಾಮ್ ಹ್ಯಾಂಡಲ್‌ನಲ್ಲಿ ‘ಫೈನೆಸ್ಟ್ ಆಫ್ ವರ್ಲ್ಡ್’ ಎಂಬ ಹೆಸರಿನಲ್ಲಿ ಪೋಸ್ಟ್ ಮಾಡಲಾಗಿದೆ ಮತ್ತು ಇದುವರೆಗೆ 500 ಸಾವಿರಕ್ಕೂ ಹೆಚ್ಚು ಲೈಕ್‌ಗಳನ್ನು ಸ್ವೀಪಡೆದುಕೊಂಡಿದೆ. ನಟ್ಟಿಗರು ವಿಭಿನ್ನವಾಗಿ ಈ ವಿಡಿಯೋಗೆ ಕಮೆಂಟ್ ಮಾಡಿದ್ದಾರೆ. “ಆಮೆಯು ಸಿಂಹವನ್ನು ಬೆದರಿಸುವುದನ್ನು ನಾನು ನೋಡುತ್ತೇನೆ ಎಂದು ನಾನು ಎಂದಿಗೂ ಯೋಚಿಸಿರಲಿಲ್ಲ” ಎಂದು ಬಳಕೆದಾರರು ಕಾಮೆಂಟ್ ಮಾಡಿದ್ದಾರೆ. “ನನ್ನ ಮನೆಯನ್ನು ತಿನ್ನುವುದನ್ನು ನಿಲ್ಲಿಸಿ,” ಇನ್ನೊಬ್ಬ ಬಳಕೆದಾರರು ಕಾಮೆಂಟ್ ಮಾಡಿದ್ದಾರೆ. “ನನ್ನನ್ನು ಪ್ರಯತ್ನಿಸಿ ಸರ್, ನನ್ನನ್ನು ಪ್ರಯತ್ನಿಸಿ ಸರ್” ಎಂದು ಮತ್ತೊಬ್ಬರು ಸೇರಿಸಿದರು. “ಆ ಬಡ ಸಿಂಹವು ಆ ಬೇಸಿಗೆಯ ದಿನದಂದು ಶಾಂತಿಯಿಂದ ದೀರ್ಘವಾದ ನೀರನ್ನು ಕುಡಿಯಲು ಬಯಸಿತ್ತು” ಎಂದು ಮತ್ತೊಬ್ಬರು ಹೇಳಿದರು.
Published On - 11:51 am, Sat, 16 April 22