ವರ್ಷದ ಅಪ್ಪ ಪ್ರಶಸ್ತಿ ಈ ಅಪ್ಪನಿಗೇ! ವೈರಲ್ ಆದ ವಿಡಿಯೋ

Father Daughter : ಅಮ್ಮಂದಿರು ಹೀಗೆ ಮಕ್ಕಳನ್ನು ಹುರಿದುಂಬಿಸುವುದುಂಟು. ಆದರೆ ಅಪ್ಪ? ವೇದಿಕೆಯ ಮೇಲೆ ಮಗಳು ನರ್ತಿಸುತ್ತಿದ್ದರೆ ಪ್ರೇಕ್ಷಕರ ಸಾಲಿನಲ್ಲಿ ಕುಳಿತ ಈ ಅಪ್ಪ ಮೈಮರೆತು ನರ್ತಿಸುತ್ತಿದ್ಧಾರೆ. ನೋಡಿ ಈ ಅಪರೂಪದ ಅಪ್ಪನನ್ನು.

ವರ್ಷದ ಅಪ್ಪ ಪ್ರಶಸ್ತಿ ಈ ಅಪ್ಪನಿಗೇ! ವೈರಲ್ ಆದ ವಿಡಿಯೋ
ಅಪ್ಪ ಮಗಳ ಈ ನೃತ್ಯ
ಶ್ರೀದೇವಿ ಕಳಸದ

Updated on: Feb 08, 2023 | 1:57 PM

Viral Video : ಈಗೇನಿದ್ದರೂ ಎಲ್ಲೆಡೆ ಶಾಲಾ ವಾರ್ಷಿಕೋತ್ಸವದ ಸಂಭ್ರಮ. ಮಕ್ಕಳನ್ನು ವೇದಿಕೆಯ ಮೇಲೆ ನೋಡಲು ತಂದೆತಾಯಿಗಳು ಅದೆಷ್ಟು ಕಾತರರಾಗಿ ಕಾಯುತ್ತಿರುತ್ತಾರೆ ಎನ್ನುವುದು ಅನುಭವವೇದ್ಯ. ಐಪಿಎಸ್​ ಅಧಿಕಾರಿ ದೀಪಾಂಶೂ ಕಾಬ್ರಾ ಹಂಚಿಕೊಂಡಿರುವ ಈ ವಿಡಿಯೋ ನೋಡಿ. ವೇದಿಕೆಯ ಮೇಲೆ ಮಗಳು ನರ್ತಿಸುತ್ತಿದ್ದರೆ, ಪ್ರೇಕ್ಷಕರ ಸಾಲಿನಲ್ಲಿ ಕುಳಿತ ಅಪ್ಪ ಮಗಳಿಗೆ ನರ್ತಿಸಲು ಪ್ರೋತ್ಸಾಹಿಸುತ್ತಿದ್ಧಾನೆ. ಇದನ್ನು ನೋಡಿದ ನೆಟ್ಟಿಗರು ಭಾವುಕರಾಗುತ್ತಿದ್ಧಾರೆ.

ಮಕ್ಕಳೊಂದಿಗೆ ಮಕ್ಕಳಾಗಿದ್ದರೆ ಮಾತ್ರ ಮಕ್ಕಳು ಏನನ್ನಾದರೂ ಕಲಿಯುವುದು. ಅದರಲ್ಲೂ ಆರಂಭದ ವರ್ಷಗಳಲ್ಲಂತೂ ಪ್ರತೀ ಹಂತದಲ್ಲಿಯೂ ಅವರೊಂದಿಗೆ ಹೆಜ್ಜೆ ಹಾಕಲೇಬೇಕು. ಇದೀಗ ವೈರಲ್ ಆಗಿರುವ ಈ ವಿಡಿಯೋ 24 ಸೆಕೆಂಡುಗಳದ್ದು. ದಲೇರ್ ಮೆಹಂದಿಯ ಜನಪ್ರಿಯ ಹಾಡಿಗೆ ಈ ಮಕ್ಕಳು ನರ್ತಿಸುತ್ತಿದ್ದಾರೆ. ಕೆಳಗೆ ಪ್ರೇಕ್ಷಕರ ಸಾಲಿನಲ್ಲಿ ಕುಳಿತ ಪೋಷಕರು ಮಕ್ಕಳಿಗೆ ನೃತ್ಯದ ಮಟ್ಟುಗಳನ್ನು ನೆನಪಿಸುತ್ತಿದ್ದಾರೆ.

ಇದನ್ನೂ ಓದಿ : ತಮಿಳುನಾಡಿನ ಸಮುದ್ರ ತೀರಕ್ಕೆ ಬಂದ ‘ಲಂಟಾನಾ ಆನೆಗಳು’! ನೋಡಿ ವೈರಲ್ ವಿಡಿಯೋ

ಆದರೆ ಈ ಅಪ್ಪ ಮಾತ್ರ ಸಂಪೂರ್ಣವಾಗಿ ಮೈಮರೆತು ಉತ್ಸಾಹದಿಂದ ಮಗಳೊಂದಿಗೆ ಕುಳಿತಲ್ಲಿಯೇ ತಾವೂ ನರ್ತಿಸುತ್ತಿದ್ದಾರೆ. 4.7 ಲಕ್ಷ ಜನರು ಈ ವಿಡಿಯೋ ನೋಡಿದ್ದಾರೆ. ಅನೇಕರು ಪ್ರತಿಕ್ರಿಯಿಸಿದ್ದಾರೆ. ಜೀವನದ ನಿಜವಾದ ಅಮೂಲ್ಯ ಕ್ಷಣಗಳಲ್ಲಿ ಇದೂ ಕೂಡ ಒಂದು ಎಂದಿದ್ದಾರೆ ಕೆಲವರು.

ಇದನ್ನೂ ಓದಿ : 35 ವರ್ಷದ ಆನೆಯ ಜೀವ ಉಳಿಸಲು ಕೈಜೋಡಿಸಿದ ಭಾರತೀಯ ಸೇನೆ; ನೋಡಿ ವಿಡಿಯೋ

ನನಗೆ ನನ್ನ ಬಾಲ್ಯ ನೆನಪಿಗೆ ಬರುತ್ತಿದೆ. ನನ್ನ ಅಮ್ಮನೂ ಹೀಗೆ ನನಗೆ ಪ್ರೋತ್ಸಾಹಿಸುತ್ತಿದ್ದರು ಎಂದು ಕೆಲವರು ಹೇಳಿದ್ದಾರೆ. ಅಮ್ಮಂದಿರು ಹೀಗೆ ನರ್ತಿಸಿ ಪ್ರೋತ್ಸಾಹಿಸುವುದುಂಟು. ಆದರೆ ಅಪ್ಪ! ಇದು ನಿಜಕ್ಕೂ ಅಪರೂಪದ ದೃಶ್ಯ. ಈ ಕುಟುಂಬಕ್ಕೆ ಒಳ್ಳೆಯದಾಗಲಿ ಎಂದು ಒಬ್ಬರು ಹೇಳಿದ್ದಾರೆ.

ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್​ ವಿಡಿಯೋಗಾಗಿ ಕ್ಲಿಕ್ ಮಾಡಿ

 

Published On - 1:56 pm, Wed, 8 February 23

Shridevi Kalasad

ಶ್ರೀದೇವಿ ಕಳಸದ : ಮುಖ್ಯ ಉಪಸಂಪಾದಕಿ. ವಿಜಯ ಕರ್ನಾಟಕ, ಸುವರ್ಣ ನ್ಯೂಸ್, ಪ್ರಜಾವಾಣಿ ಮತ್ತು ವಿವಿಧ ಮಾಧ್ಯಮ ಸಂಸ್ಥೆಗಳು ಸೇರಿದಂತೆ ಒಟ್ಟು 16 ವರ್ಷಗಳ ಅನುಭವ. ಸಂಗೀತ, ಸಾಹಿತ್ಯ ಮತ್ತು ಲಲಿತ ಕಲೆಗಳಲ್ಲಿ ವಿಶೇಷ ಆಸಕ್ತಿ.

Follow Us