35 ವರ್ಷದ ಆನೆಯ ಜೀವ ಉಳಿಸಲು ಕೈಜೋಡಿಸಿದ ಭಾರತೀಯ ಸೇನೆ; ನೋಡಿ ವಿಡಿಯೋ
Elephant : ಉತ್ತರಾಖಂಡದ 35 ವರ್ಷದ ಮೋತಿ ಇದೀಗ ಸವಾರಿ ನಿಲ್ಲಿಸಿದೆ. ಎದ್ದು ನಿಂತು ಆಹಾರ, ನೀರು ಸೇವಿಸಲು ಪ್ರಯತ್ನಿಸುತ್ತಿದೆಯಾದರೂ ಆರೋಗ್ಯ ಸ್ಥಿತಿ ಗಂಭೀರವೇ. ನೆಟ್ಟಿಗರು ಇದರ ಉಳಿವಿಗಾಗಿ ಪ್ರಾರ್ಥಿಸುತ್ತಿದ್ದಾರೆ.
Viral Video : ಉತ್ತರಾಖಂಡದಲ್ಲಿ 35 ವರ್ಷದ ಆನೆಯ ಜೀವ ಉಳಿಸಲು ಎನ್ಜಿಒದೊಂದಿಗೆ ಭಾರತೀಯ ಸೇನೆಯು ಕೈಜೋಡಿಸುತ್ತಿರುವ ವಿಡಿಯೋ ವೈರಲ್ ಆಗುತ್ತಿದೆ. ಈ ಆನೆಯ ಹೆಸರು ಮೋತಿ. ವಯೋಸಹಜ ಕಾರಣದಿಂದ ನಿತ್ರಾಣಗೊಂಡಿದ್ದ ಇದು ವೈಲ್ಡ್ಲೈಫ್ ಎಸ್ಒಎಸ್ ಮತ್ತು ಸೇನೆಯ ಆರೈಕೆ ಮತ್ತು ಚಿಕಿತ್ಸೆಯ ಪರಿಣಾಮವಾಗಿ ಚೇತರಿಸಿಕೊಳ್ಳುತ್ತಿದೆ.
Moti Update 1/2: After his big day, #Moti is exhausted and resting upright. He is eating and drinking, which is easier in a vertical position. He still has a very long way to go and it will take time. Please consider a donation to support his care: https://t.co/FC9Hrsa81p pic.twitter.com/2bVqckYeYd
ಇದನ್ನೂ ಓದಿ— Wildlife SOS (@WildlifeSOS) February 7, 2023
ಉತ್ತರಾಖಂಡದ ರಾಮನಗರ ಜಿಲ್ಲೆಯಲ್ಲಿ ಮೋತಿ ಕುಸಿದು ಬೀಳುತ್ತಿದ್ದಂತೆ ಗಂಭೀರವಾಗಿ ಅಸ್ವಸ್ಥಗೊಂಡಿತು. ಆಗ ಮಾಜಿ ಸೇನಾ ಮುಖ್ಯಸ್ಥ ವಿ ಕೆ ಸಿಂಗ್ ಭಾರತೀಯ ಸೇನೆಯ ಸಹಾಯ ಕೋರಿದರು. ಭಾರತೀಯ ಸೇನೆಯ ಎಂಜಿನಿಯರ್ಗಳ ತಂಡವು ಮೋತಿಗೆ ಅವಶ್ಯಕವಿರುವ ಚಿಕಿತ್ಸೆಗೆ ಸಹಾಯ ಮಾಡಿತು. 24 ಗಂಟೆಗಳೊಳಗೆ ಅದು ಎದ್ದುನಿಲ್ಲಲು ಬೇಕಾದ ತಾಂತ್ರಿಕ ಸಹಾಯವನ್ನು ಈ ತಂಡ ಮಾಡಿತು.
ಇದನ್ನೂ ಓದಿ : ಚತುರ ಆನೆ! ವಿದ್ಯುತ್ ತಂತಿ ಬೇಲಿಯನ್ನು ಮುರಿದು ರಸ್ತೆ ದಾಟಿದ ಹಳೆಯ ವಿಡಿಯೋ ವೈರಲ್
ಮೋತಿ ಭಿಕ್ಷೆ ಬೇಡಲು ಸಹಕರಿಸುವ ಆನೆ. 35 ವರ್ಷಗಳ ತನಕ ಎಣಿಕೆಗೆ ಸಿಗದಷ್ಟು ಸಾರ್ವಜನಿಕ ಸವಾರಿ ಪೂರೈಸಿದೆ. ಇದೀಗ ವಯೋಸಹಜವಾಗಿ ದಣಿದಿದೆ. ಚಿಕಿತ್ಸೆ ಮತ್ತು ಉಪಚಾರದ ನಂತರ ಇದೀಗ ನಿಂತುಕೊಂಡೇ ಆಹಾರ ಸೇವಿಸುವುದು, ನೀರು ಕುಡಿಯುವುದನ್ನು ಶುರುಮಾಡಿದೆ. ಆದರೂ ಇದರ ಆರೋಗ್ಯದ ಬಗ್ಗೆ ಭರವಸೆ ಅಷ್ಟಕ್ಕಷ್ಟೇ. ಚಿಕಿತ್ಸೆಗೆ ದೀರ್ಘ ಸಮಯ ತೆಗೆದುಕೊಳ್ಳುತ್ತದೆ.
View this post on Instagram
‘ಮೋತಿ ಇನ್ನೂ ಗಂಭೀರ ಸ್ಥಿತಿಯಲ್ಲಿದೆ. ಮುಂಗಾಲುಗಳಲ್ಲಿ ಶಕ್ತಿ ಇಲ್ಲ. ಸಾಕಷ್ಟು ಮಸಾಜ್ ಮಾಡಿದಾಗ ಸ್ವಲ್ಪ ಎತ್ತಲು ಪ್ರಯತ್ನಿಸುತ್ತದೆ. ಹಿಂಗಾಲುಗಳಲ್ಲಿ ರಕ್ತಪರಿಚಲನೆ ಹೆಚ್ಚಿಸಲು ಸಾಧ್ಯವಾಗಿದೆ. ಚಿಕಿತ್ಸೆ ಮುಂದುವರಿಯುತ್ತದೆ’ ಎಂದು ವೈಲ್ಡ್ಲೈಫ್ ಎಸ್ಒಎಸ್ ಟ್ವೀಟ್ ಮಾಡಿದೆ. ಅನೇಕರು ಈ ಪೋಸ್ಟ್ ಮೆಚ್ಚಿಕೊಂಡು ಮೋತಿಯ ಆರೋಗ್ಯಕ್ಕೆ ಹಾರೈಸುತ್ತಿದ್ದಾರೆ.
ಇದನ್ನೂ ಓದಿ : ಚೆನ್ನೈನ ಈ ಅಮ್ಮನಿಗೆ 90, ಮಗಳಿಗೆ 72; ಇವರೀಗ ಸ್ವಂತ ಉದ್ಯಮಿಗಳು
ಮೋತಿಯ ಬಗ್ಗೆ ಅಪ್ಡೇಟ್ ಮಾಡಿದ್ದಕ್ಕೆ ಧನ್ಯವಾದ, ಖಂಡಿತವಾಗಿಯೂ ನೀವು ಅವನನ್ನು ನಿರಾಸೆಗೊಳಿಸುವುದಿಲ್ಲ. ಇದೋ ನಮ್ಮ ಪ್ರಾರ್ಥನೆ ಅವನಿಗೆ ಎಂದು ಅನೇಕರು ಪ್ರತಿಕ್ರಿಯಿಸಿದ್ದಾರೆ. ಮೋತಿ ನಿನಗಾಗಿ ನಾವೆಲ್ಲರೂ ಇದ್ದೇವೆ. ನಿನ್ನನ್ನು ಉಳಿಸಲು ಅವರು ನಡೆಸುತ್ತಿರುವ ಪ್ರಯತ್ನ ನೋಡಿ ಕಣ್ಣೀರಿಳಿಯಿತು. ನೀನು ಬೇಗ ಸುಧಾರಿಸುತ್ತೀ ಅವರ ಪ್ರೀತಿ ಮತ್ತು ಆರೈಕೆಯಲ್ಲಿ ಎಂದು ಮತ್ತೊಬ್ಬರು ಹೇಳಿದ್ದಾರೆ.
ಈ ವಿಡಿಯೋ ನೋಡಿ ನಾನು ಭಾವುಕನಾಗುತ್ತಿದ್ದೇನೆ. ನಿಮ್ಮ ಪ್ರೀತಿ, ಶ್ರಮಕ್ಕೆ ದೇವರು ಒಳ್ಳೆಯದನ್ನು ಮಾಡಲಿ ಎಂದು ಮಗದೊಬ್ಬರು ಹೇಳಿದ್ದಾರೆ.
ನೀವೇನಂತೀರಿ?
ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ
Published On - 12:30 pm, Wed, 8 February 23