Viral Video: ನೀರು ತುಂಬಿದ ರಸ್ತೆಯಲ್ಲಿ ಹಾಯಾಗಿ ಮಲಗಿದ ವ್ಯಕ್ತಿಯ ವಿಡಿಯೋ ವೈರಲ್

ರಸ್ತೆಯಲ್ಲಿ ತುಂಬಿದ ನೀರಿನಲ್ಲಿ ಮಲಗಿರುವ ವ್ಯಕ್ತಿಯೊಬ್ಬರ ವಿಡಿಯೋ ವೈರಲ್ ಆಗುತ್ತಿದ್ದು, ಮಲಾಡ್‌ನಲ್ಲಿ ಮಾಲ್ಡೀವ್ಸ್ ಅನ್ನು ಅನುಭವಿಸುತ್ತಿದ್ದಾನೆ ಎಂದು ನೆಟ್ಟಿಗರು ಹಾಸ್ಯವಾಗಿ ಕಾಮೆಂಟ್ ಮಾಡುತ್ತಿದ್ದಾರೆ. ವೈರಲ್ ವಿಡಿಯೋ ಇಲ್ಲಿದೆ.

Viral Video: ನೀರು ತುಂಬಿದ ರಸ್ತೆಯಲ್ಲಿ ಹಾಯಾಗಿ ಮಲಗಿದ ವ್ಯಕ್ತಿಯ ವಿಡಿಯೋ ವೈರಲ್
ನೀರು ತುಂಬಿದ ರಸ್ತೆಯಲ್ಲಿ ಮಲಗಿಕೊಂಡಿರುವ ವ್ಯಕ್ತಿ
Edited By:

Updated on: Jul 08, 2022 | 12:38 PM

ಮುಂಬೈನಲ್ಲಿ ಸೋಮವಾರದಿಂದ ಭಾರೀ ಮಳೆ(Rain In Mumbai)ಯಾಗುತ್ತಿದ್ದು, ನಗರದ ನಿವಾಸಿಗಳಿಗೆ ಭಾರಿ ತೊಂದರೆಯಾಗಿದೆ. ಜಲಾವೃತ ಮತ್ತು ಇತರ ಮಳೆ ಸಂಬಂಧಿತ ಘಟನೆಗಳಿಂದ ಮಹಾನಗರದಲ್ಲಿ ಸಂಚಾರ ಅಸ್ತವ್ಯಸ್ತಗೊಂಡಿದೆ. ಈ ನಡುವೆ ವ್ಯಕ್ತಿಯೊಬ್ಬರು ರಸ್ತೆಯಲ್ಲಿ ತುಂಬಿದ ನೀರಿನಲ್ಲಿ ಮಲಗಿರುವ ವ್ಯಕ್ತಿಯೊಬ್ಬರ ವಿಡಿಯೋ ವೈರಲ್(Video Viral) ಆಗುತ್ತಿದ್ದು, ಮಲಾಡ್‌ನಲ್ಲಿ ಮಾಲ್ಡೀವ್ಸ್ ಅನ್ನು ಅನುಭವಿಸುತ್ತಿದ್ದಾನೆ ಎಂದು ನೆಟ್ಟಿಗರು ಹಾಸ್ಯವಾಗಿ ಹೇಳಿದ್ದಾರೆ.

ಇದನ್ನೂ ಓದಿ: Viral Video: ಮದುವೆ ಮನೆಯಲ್ಲಿ ಮೋಜು ಮಸ್ತಿ ವೇಳೆ ಕೈಯಲ್ಲಿ ಪಟಾಕಿ ಹಿಡಿದುಕೊಂಡು ಅವಾಂತರ ಸೃಷ್ಟಿಸಿದ ಕುಡುಕ

ವಿಕ್ರಾಂತ್ ಜೋಶಿ ಎಂಬವರು ತಮ್ಮ ಫೇಸ್ ಬುಕ್ ಖಾತೆಯಲ್ಲಿ ವ್ಯಕ್ತಿಯ ವಿಡಿಯೋವನ್ನು ಹಂಚಿಕೊಂಡಿದ್ದು, ”ಧನ್ಯವಾದಗಳು ಬಿಎಂಸಿ, ಈ ವ್ಯಕ್ತಿಯನ್ನು ಮಲಾಡ್​ನಲ್ಲಿ ಮಾಲ್ಡೀವ್ಸ್ ಎಂದು ಭಾವಿಸಿದ್ದಕ್ಕಾಗಿ” ಎಂದು ಶೀರ್ಷಿಕೆ ಬರೆದಿದ್ದಾರೆ. ಈ ವಿಡಿಯೋವನ್ನು ಶಾಹಿದ್ ಎಂಬವರು ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡು, ”ಈ ವ್ಯಕ್ತಿ ಮಲಾಡ್​ನಲ್ಲಿ ಮಾಲ್ಡೀವ್ಸ್ ಅನ್ನು ಅನುಭವಿಸುತ್ತಿದ್ದಾನೆ” ಎಂದು ಹೇಳಿ ಹಿಂದಿ ಸಾಂಗ್​ನ ಲೈನ್ ಒಂದನ್ನು ಬರೆದುಕೊಂಡಿದ್ದಾರೆ.

ಇದನ್ನೂ ಓದಿ: Viral Video: ನೀರಿನಲ್ಲಿ ಆಕ್ಟೋಪಸ್​ಗಳು ಬಣ್ಣ ಬದಲಾಯಿಸುತ್ತವೆ ಎಂದು ತಿಳಿದಿದೆಯಾ? ಇಲ್ಲಿದೆ ನೋಡಿ ವಿಡಿಯೋ

ವೀಡಿಯೋದಲ್ಲಿ, ಬಸ್ಸುಗಳು ಮತ್ತು ಕಾರುಗಳಂತಹ ವಾಹನಗಳು ಹಾದು ಹೋಗುತ್ತಿರುವಾಗ, ನೀರು ತುಂಬಿದ ರಸ್ತೆಯ ಮೇಲೆ ವ್ಯಕ್ತಿ ಶಾಂತವಾಗಿ ಮಲಗಿರುವುದು ಮತ್ತು ಅವನ ಮೇಲೆ ನೀರು ಚಿಮುಕುವುದನ್ನು ಕಾಣಬಹುದು. ವಿಡಿಯೋ ಹಂಚಿಕೊಂಡಾಗಿನಿಂದ ಸಾವಿರಾರು ವೀಕ್ಷಕರನ್ನು ತಲುಪುವಲ್ಲಿ ಯಶಸ್ವಿಯಾಗಿದೆ ಮತ್ತು ಜನರು ಕಾಮೆಂಟ್ ವಿಭಾಗದಲ್ಲಿ ತಮಾಷೆಯ ಟೀಕೆಗಳನ್ನು ಮಾಡಿದ್ದಾರೆ. ಫೇಸ್​ಬುಕ್​ನಲ್ಲಿ ಈ ವಿಡಿಯೋವನ್ನು 10,000 ಕ್ಕೂ ಹೆಚ್ಚು ಹಂಚಿಕೆಗಳನ್ನು ಪಡೆದುಕೊಂಡಿದೆ.

ಒಬ್ಬ ಬಳಕೆದಾರ ತನ್ನ ಇಬ್ಬರು ಸ್ನೇಹಿತರನ್ನು ಟ್ಯಾಗ್ ಮಾಡಿ, “ಮಾಲ್ಡೀವ್ಸ್‌ಗೆ ಹೋಗೋಣ” ಎಂದು ಬರೆದಿದ್ದಾರೆ. “ಮನುಷ್ಯ, ಮಾಲ್ಡೀವ್ಸ್ ಅನ್ನು ಅನುಭವಿಸಲು ಸ್ವತಃ ಸಾಕಷ್ಟು ಸಹಾಯ ಮಾಡಿದಂತಿದೆ” ಎಂದು ಮತ್ತೊಬ್ಬ ಬಳಕೆದಾರರು ಹೇಳಿಕೊಂಡಿದ್ದಾರೆ.

ಮುಂದಿನ ದಿನಗಳಲ್ಲಿ ಮುಂಬೈನಲ್ಲಿ ಹೆಚ್ಚಿನ ಮಳೆಯಾಗುವ ನಿರೀಕ್ಷೆಯಿದ್ದು, ಭಾರತೀಯ ಹವಾಮಾನ ಇಲಾಖೆ (IMD) ಶುಕ್ರವಾರ ಮುಂಬೈ ಮತ್ತು ಹತ್ತಿರದ ಪ್ರದೇಶಗಳಿಗೆ ರೆಡ್ ಅಲರ್ಟ್ ನೀಡಿದೆ. ಬೃಹನ್ ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ (BMC) ಜನರು ಬೀಚ್‌ಗಳಿಗೆ ಭೇಟಿ ನೀಡುವುದನ್ನು ನಿಷೇಧಿಸಿದೆ.

ಇದನ್ನೂ ಓದಿ: Viral Pic: ಎರಡು ನಾಯಿಗಳು ಪರಸ್ಪರ ತಬ್ಬಿಕೊಂಡಿರುವ ಸ್ನೇಹದ ಫೋಟೋ ವೈರಲ್, ಇದರಲ್ಲಿ ವಿಶೇಷ ಏನು ಗೊತ್ತಾ?

Published On - 12:38 pm, Fri, 8 July 22