Dog Wedding: ಶ್ವಾನಗಳ ಅದ್ಧೂರಿ ಮದುವೆ ಹೇಗಿತ್ತು ನೋಡಿ, ಇಲ್ಲಿದೆ ವಿಡಿಯೋ

| Updated By: ಅಕ್ಷಯ್​ ಪಲ್ಲಮಜಲು​​

Updated on: May 15, 2024 | 3:00 PM

ಎರಡು ಶ್ವಾನಗಳ ಮಾಲೀಕರು ತಮ್ಮ ಶ್ವಾನಗಳಿಗೆ ಅದ್ದೂರಿಯಾಗಿ ಮದುವೆ ನೆರವೇರಿಸಿಕೊಡುವ ವಿಡಿಯೋ ಇದೀಗಾ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್​ ಆಗುತ್ತಿದೆ.

Dog Wedding: ಶ್ವಾನಗಳ ಅದ್ಧೂರಿ ಮದುವೆ ಹೇಗಿತ್ತು ನೋಡಿ, ಇಲ್ಲಿದೆ ವಿಡಿಯೋ
ಶ್ವಾನಗಳ ಅದ್ಧೂರಿ ಮದುವೆ
Image Credit source: Twitter
Follow us on

ಅದ್ಧೂರಿಯಾಗಿ ನಡೆಯುತ್ತಿದೆ ಮದುವೆ ಸಂಭ್ರಮ, ಎಲ್ಲೆಲ್ಲೂ ಬಣ್ಣದ ಬಟ್ಟೆಗಳನ್ನು ಉಟ್ಟು ಮದುವೆ ಸಂಭ್ರಮದಲ್ಲಿ ಪಾಲ್ಗೊಂಡ ಅತಿಥಿಗಳು, ಚೆಂಡೆ, ವಾದನದ ಸದ್ದು , ಅದ್ದೂರಿಯಾಗಿ ಸಜ್ಜಾಗಿ ನಿಂತಿದೆ ತಳಿರು ತೋರಣ. ಇಷ್ಟೆಲ್ಲಾ ಅದ್ದೂರಿಯಾಗಿ ನಡೆಯುತ್ತಿದೆ ಶ್ವಾನಗಳ ಮದುವೆ. ಹೌದು ಎರಡು ಶ್ವಾನಗಳ ಮಾಲೀಕರು ತಮ್ಮ ಶ್ವಾನಗಳಿಗೆ ಅದ್ದೂರಿಯಾಗಿ ಮದುವೆ ನೆರವೇರಿಸಿಕೊಡುವ ವಿಡಿಯೋ ಇದೀಗಾ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್​ ಆಗುತ್ತಿದೆ.

ನೀವು ಸಾಕಷ್ಟು ಮದುವೆ ಸಮಾರಂಭಗಳಲ್ಲಿ ಪಾಲ್ಗೊಂಡಿರುತ್ತೀರಿ. ಆದರೆ ಇಂತಹ ಅದ್ಧೂರಿ ಸಂಭ್ರಮ, ಅದರಲ್ಲೂ ಶ್ವಾನಗಳ ಮದುವೆಯನ್ನು ನೀವು ನೋಡಿರಲ್ಲ. ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಶ್ವಾನಗಳಿಗೆ ಮದುವೆ ಮಾಡಿಸಿದ ಅದೆಷ್ಟೋ ಸುದ್ದಿಗಳನ್ನು ನೀವು ನೋಡಿರುತ್ತೀರಿ. ಆದರೆ ಈ ವಿಡಿಯೋ ಸಾಕಷ್ಟು ವಿಭಿನ್ನ ಹಾಗೂ ವಿಶೇಷವಾಗಿದೆ. ಶ್ವಾನಗಳ ಅದ್ಧೂರಿ ಮದುವೆ ವಿಡಿಯೋ ಇಲ್ಲಿದೆ ನೋಡಿ.

ಇದನ್ನೂ ಓದಿ: ಇಬ್ಬರ ತಂದೆಯ ಮುದ್ದಿನ ಇಲಿ: ಗಂಡು ಇಲಿಗಳ ಜೀವಕೋಶಗಳಿಂದ ಅಂಡಾಣುವನ್ನು ತಯಾರಿಸಿದ ವಿಜ್ಞಾನಿಗಳು!

ಭಾರತೀಯ ಸಂಪ್ರದಾಯದಂತೆ ಅದ್ದೂರಿ ಆಹಾರ ಮತ್ತು ಅಲಂಕಾರಗಳೊಂದಿಗೆ ವಿವಾಹ ನಡೆಸಿರುವುದನ್ನು ವಿಡಿಯೋದಲ್ಲಿ ಕಾಣಬಹುದು. ಸಾಂಪ್ರದಾಯಿಕ ಬಟ್ಟೆ ಧರಿಸಿ ಅತಿಥಿಗಳು ನೃತ್ಯ ಮಾಡುತ್ತಿದ್ದಾರೆ. ಹೆಣ್ಣು ಶ್ವಾನದ ಮೇಲೆ ವಧುವಿನಂತೆ ಕೆಂಪು ದುಪಟ್ಟಾವನ್ನು ಸುತ್ತಿರುವುದನ್ನು ಕಾಣಬಹುದು. ಜೊತೆಗೆ ಗಂಡು ಶ್ವಾನ ಎಲೆಕ್ಟ್ರಿಕ್ ಆಟಿಕೆ ಕಾರಿನಲ್ಲಿ ಮದುವೆ ಮಂಟಪವನ್ನು ಪ್ರವೇಶಿಸುವುದನ್ನು ಕಾಣಬಹುದು. ಈ ವೀಡಿಯೊವನ್ನು @Hatindersinghr3 ಬಳಕೆದಾರರು ಟ್ವಟರ್​​​​ನಲ್ಲಿ ಹಂಚಿಕೊಂಡಿದ್ದಾರೆ. ಮಾರ್ಚ್​ 8ರಂದು ಹಂಚಿಕೊಳ್ಳಲಾದ ಈ ವಿಡಿಯೋ 17 ಸಾವಿರಕ್ಕೂ ಹೆಚ್ಚಿನ ವೀಕ್ಷಣೆಯನ್ನು ಪಡೆದುಕೊಂಡಿದೆ. ಜೊತೆಗೆ ಸಾಕಷ್ಟು ಲೈಕ್​ ಹಾಗೂ ಕಾಮೆಂಟ್​ ಕಾಣಬಹುದು.

ಮತ್ತಷ್ಟು ವೈರಲ್​ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ: