Dual Flush Toilets: ಟಾಯ್ಲೆಟ್​​ನಲ್ಲಿ ಎರಡು ಫ್ಲಶ್ ಬಟನ್‌ಗಳು ಏಕೆ ಇರುತ್ತವೆ ಎಂದು ತಿಳಿದಿದೆಯೇ?

ನೀವು ಎಂದಾದರೂ ಫ್ಲಶ್ ಮಾಡುವ ಬಟನ್ ಗಳ ಗಮನಿಸಿದ್ದೀರಾ? ಫ್ಲಶ್ ವಾಸ್ತವವಾಗಿ ಎರಡು ಬಟನ್‌ಗಳನ್ನು ಹೊಂದಿರುತ್ತದೆ.ಆ ರೀತಿ ಯಾಕೆ ವಿನ್ಯಾಸಗೊಳಿಸಲಾಗಿದೆ ಎಂದು ನಿಮಗೆ ತಿಳಿದಿದೆಯೇ?

Dual Flush Toilets: ಟಾಯ್ಲೆಟ್​​ನಲ್ಲಿ ಎರಡು ಫ್ಲಶ್ ಬಟನ್‌ಗಳು  ಏಕೆ ಇರುತ್ತವೆ ಎಂದು ತಿಳಿದಿದೆಯೇ?
Follow us
ಅಕ್ಷತಾ ವರ್ಕಾಡಿ
|

Updated on: May 15, 2024 | 2:37 PM

ಒಂದು ಕಾಲದಲ್ಲಿ ವಿದೇಶಗಳಲ್ಲಿ ಮಾತ್ರ ಬಳಸುತ್ತಿದ್ದ ಪಾಶ್ಚಿಮಾತ್ಯ ಶೌಚಾಲಯಗಳು ಈಗ ನಮ್ಮ ದೇಶದಲ್ಲಿ ವ್ಯಾಪಕವಾಗಿ ಬಳಸಲ್ಪಡುತ್ತವೆ. ಈಗ ಬಹುತೇಕ ಕಡೆ ಪಾಶ್ಚಿಮಾತ್ಯ ಶೌಚಾಲಯಗಳು ಕಂಡುಬರುತ್ತಿವೆ. ಆದರೆ ನೀವು ಎಂದಾದರೂ ಫ್ಲಶ್ ಮಾಡುವ ಬಟನ್ ಗಳ ಗಮನಿಸಿದ್ದೀರಾ? ಫ್ಲಶ್ ವಾಸ್ತವವಾಗಿ ಎರಡು ಬಟನ್‌ಗಳನ್ನು ಹೊಂದಿರುತ್ತದೆ.ಆ ರೀತಿ ಯಾಕೆ ವಿನ್ಯಾಸಗೊಳಿಸಲಾಗಿದೆ ಎಂದು ನಿಮಗೆ ತಿಳಿದಿದೆಯೇ?

ಫ್ಲಶ್‌ಗಾಗಿ ಎರಡು ಬಟನ್‌ಗಳನ್ನು ಹೊಂದುವುದರ ಹಿಂದಿನ ನಿಜವಾದ ಕಾರಣವೆಂದರೆ ಟಾಯ್ಲೆಟ್ ಫ್ಲಶ್ ಅನ್ನು ಮೂಲತಃ ವಿನ್ಯಾಸಗೊಳಿಸಿದಾಗ ಅದು ಕೇವಲ ಒಂದು ಬಟನ್ ಅನ್ನು ಹೊಂದಿತ್ತು. ಈ ಗುಂಡಿಯನ್ನು ಒತ್ತುವುದರಿಂದ ಸಾಕಷ್ಟು ನೀರು ವ್ಯರ್ಥವಾಗುತ್ತಿತ್ತು. ಆದಾಗ್ಯೂ, ಪ್ರಸಿದ್ಧ ಅಮೇರಿಕನ್ ಕೈಗಾರಿಕಾ ವಿನ್ಯಾಸಕ ವಿಕ್ಟರ್ ಪಾಪನೆಕ್ ಅವರು 1976 ರಲ್ಲಿ ಬರೆದ ‘ಡಿಸೈನ್ ಫಾರ್ ದಿ ರಿಯಲ್ ವರ್ಲ್ಡ್’ ಪುಸ್ತಕದಲ್ಲಿ ಮೊದಲ ಬಾರಿಗೆ ಡ್ಯುಯಲ್-ಫ್ಲಶ್ ಟಾಯ್ಲೆಟ್ ಅನ್ನು ಉಲ್ಲೇಖಿಸಿದ್ದಾರೆ. 1980 ರಲ್ಲಿ, ಆಸ್ಟ್ರೇಲಿಯಾದ ಕರೋಮಾ ಇಂಡಸ್ಟ್ರೀಸ್‌ನ ಎಂಜಿನಿಯರ್‌ಗಳು ನೀರಿನ ವ್ಯರ್ಥವನ್ನು ತಡೆಗಟ್ಟಲು ಮೊದಲ ಡ್ಯುಯಲ್-ಫ್ಲಶ್ ಟಾಯ್ಲೆಟ್ ವಿನ್ಯಾಸವನ್ನು ಅಭಿವೃದ್ಧಿಪಡಿಸಿದರು. ಆ ಸಮಯದಲ್ಲಿ ಆಸ್ಟ್ರೇಲಿಯಾದಲ್ಲಿ ತೀವ್ರ ನೀರಿನ ಬರ ಇತ್ತು. ಹಾಗಾಗಿ ನೀರನ್ನು ಉಳಿಸಲು ಈ ಡ್ಯುಯಲ್ ಫ್ಲಶ್ ಟಾಯ್ಲೆಟ್ ತುಂಬಾ ಉಪಯುಕ್ತವಾಗಿದೆ. ನಂತರ 1992 ರಲ್ಲಿ, ಈ ಡ್ಯುಯಲ್ ಫ್ಲಶ್ ಟಾಯ್ಲೆಟ್ ಅಮೇರಿಕಾದಲ್ಲಿ ಬಳಕೆಗೆ ಬಂದಿತು.

ಇದನ್ನೂ ಓದಿ: ಈ ಹೆಡ್​​ ಪೋನ್​​ ಬೆಲೆ ಕೇಳಿದ್ರೆ ನೀವು ಶಾಕ್​​ ಆಗುವುದಂತೂ ಖಂಡಿತಾ

ಡಬಲ್ ಫ್ಲಶ್ ಆವಿಷ್ಕಾರವಾದಾಗ ದೊಡ್ಡ ಬಟನ್​ ಒಮ್ಮೆ ಫ್ಲಶ್ ಮಾಡಿದರೆ 11 ಲೀಟರ್ ನೀರು ಬರುತ್ತಿತ್ತು. ಮತ್ತು ಸಣ್ಣ ಗುಂಡಿಯನ್ನು ಫ್ಲಶ್ ಮಾಡಿದಾಗ, 5.5 ಲೀಟರ್ ನೀರು ಹೊರಬರಲು ವಿನ್ಯಾಸಗೊಳಿಸಲಾಗಿದೆ. ಅಲ್ಲದೆ, ನೀರು ಸಾಕಷ್ಟು ವ್ಯರ್ಥವಾಗುತ್ತಿರುವ ಕಾರಣ ಇದರ ವಿನ್ಯಾಸದಲ್ಲಿ ಇನ್ನೂ ಕೆಲವು ಬದಲಾವಣೆಗಳನ್ನು ಮಾಡಲಾಗಿದೆ. ದೊಡ್ಡ ಗುಂಡಿಯನ್ನು ಫ್ಲಶ್ ಮಾಡಿದಾಗ 6-7 ಲೀಟರ್ ನೀರು, ಅದೇ ಚಿಕ್ಕ ಗುಂಡಿಯನ್ನು ಫ್ಲಶ್ ಮಾಡಿದಾಗ 3-4 ಲೀಟರ್ ನೀರು ಫ್ಲಶ್ ಆಗುವಂತೆ ಹೊಸ ವಿನ್ಯಾಸದ ಡ್ಯುಯಲ್ ಫ್ಲಶ್ ವಿನ್ಯಾಸ ಮಾಡಲಾಗಿದೆ. ಈ ಎರಡು ಬಟನ್ ಗಳನ್ನು ಬಳಸುವುದು ಹೇಗೆ.. ಮಲವಿಸರ್ಜನೆ ಮಾಡುವಾಗ ದೊಡ್ಡ ಗುಂಡಿಯನ್ನು ಒತ್ತಬೇಕು. ಮೂತ್ರ ವಿಸರ್ಜಿಸಲು ಸಣ್ಣ ಗುಂಡಿಯನ್ನು ಫ್ಲಶ್ ಮಾಡಿ. ಇದರಿಂದ ನೀರಿನ ಉಳಿತಾಯವೂ ಆಗುತ್ತದೆ. ಈ ರೀತಿ ಬಳಸುವುದರಿಂದ, ಒಬ್ಬ ವ್ಯಕ್ತಿಯು ವರ್ಷಕ್ಕೆ ಸುಮಾರು 20 ಸಾವಿರ ಲೀಟರ್ ನೀರನ್ನು ಉಳಿಸಬಹುದು.

ಇನ್ನಷ್ಟು ವೈರಲ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಪಿಎಸ್‌ಸಿ ಪರೀಕ್ಷೆ ರದ್ದುಗೊಳಿಸಲು ಪ್ರತಿಭಟನೆ; ಪೊಲೀಸರ ಲಾಠಿ ಚಾರ್ಜ್
ಬಿಪಿಎಸ್‌ಸಿ ಪರೀಕ್ಷೆ ರದ್ದುಗೊಳಿಸಲು ಪ್ರತಿಭಟನೆ; ಪೊಲೀಸರ ಲಾಠಿ ಚಾರ್ಜ್
ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಮುನಿರತ್ನ ಮೇಲೆ ಒತ್ತಡ: ವಿಜಯೇಂದ್ರ
ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಮುನಿರತ್ನ ಮೇಲೆ ಒತ್ತಡ: ವಿಜಯೇಂದ್ರ
ಸಿಟಿ ರವಿ ಬಂಧನ ಕೇಸ್: ಸಿಪಿಐನ ಅಮಾನತು ಮಾಡಿದ್ಯಾಕೆ? ಕಾರಣ ಕೊಟ್ಟ ಸಿಎಂ
ಸಿಟಿ ರವಿ ಬಂಧನ ಕೇಸ್: ಸಿಪಿಐನ ಅಮಾನತು ಮಾಡಿದ್ಯಾಕೆ? ಕಾರಣ ಕೊಟ್ಟ ಸಿಎಂ
ಡಿ 31ರಿಂದ ಬಸ್​ಗಳು ಸಂಚರಿಸುವುದಿಲ್ಲ: ಪ್ರಯಾಣಿಕರಿಗೆ ಕರಪತ್ರ ಹಂಚಿಕೆ
ಡಿ 31ರಿಂದ ಬಸ್​ಗಳು ಸಂಚರಿಸುವುದಿಲ್ಲ: ಪ್ರಯಾಣಿಕರಿಗೆ ಕರಪತ್ರ ಹಂಚಿಕೆ
‘ಮ್ಯಾಕ್ಸ್’ ಸಿನಿಮಾ ನೋಡಿದ್ರೆ ನಾಲ್ಕು ಕ್ವಾಟ್ರು ಹೊಡೆದ ಕಿಕ್ಕು’
‘ಮ್ಯಾಕ್ಸ್’ ಸಿನಿಮಾ ನೋಡಿದ್ರೆ ನಾಲ್ಕು ಕ್ವಾಟ್ರು ಹೊಡೆದ ಕಿಕ್ಕು’
ಮುನಿರತ್ನ ಘಟನೆ ಬಗ್ಗೆ ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಡಾ ಮಂಜುನಾಥ್
ಮುನಿರತ್ನ ಘಟನೆ ಬಗ್ಗೆ ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಡಾ ಮಂಜುನಾಥ್
ಇಡೀ ಬಿಗ್ ಬಾಸ್ ಮನೆಯಲ್ಲಿ ರಂಪಾಟ ಶುರು ಮಾಡಿದ ರಜತ್
ಇಡೀ ಬಿಗ್ ಬಾಸ್ ಮನೆಯಲ್ಲಿ ರಂಪಾಟ ಶುರು ಮಾಡಿದ ರಜತ್
ಕುಡಿದ ಅಮಲಿನಲ್ಲಿ ಬೈಕ್​ಗೆ ಟ್ರಕ್ ಡಿಕ್ಕಿ;3 ವರ್ಷದ ಮಗು ಸೇರಿ ಇಬ್ಬರು ಸಾವು
ಕುಡಿದ ಅಮಲಿನಲ್ಲಿ ಬೈಕ್​ಗೆ ಟ್ರಕ್ ಡಿಕ್ಕಿ;3 ವರ್ಷದ ಮಗು ಸೇರಿ ಇಬ್ಬರು ಸಾವು
ಬಿಜೆಪಿ ಶಾಸಕ ಮುನಿರತ್ನಗೆ ಬಿತ್ತು ಮೊಟ್ಟೆ ಏಟು: ಇಲ್ಲಿದೆ ನೋಡಿ ವಿಡಿಯೋ
ಬಿಜೆಪಿ ಶಾಸಕ ಮುನಿರತ್ನಗೆ ಬಿತ್ತು ಮೊಟ್ಟೆ ಏಟು: ಇಲ್ಲಿದೆ ನೋಡಿ ವಿಡಿಯೋ
ಕೆನ್-ಬೇತ್ವಾ ನದಿ ಜೋಡಣೆ ಯೋಜನೆಗೆ ಮೋದಿ ಶಂಕುಸ್ಥಾಪನೆ
ಕೆನ್-ಬೇತ್ವಾ ನದಿ ಜೋಡಣೆ ಯೋಜನೆಗೆ ಮೋದಿ ಶಂಕುಸ್ಥಾಪನೆ