AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಿಮಾನದ ಶೌಚಾಲಯದಲ್ಲಿ ಸಿಗರೇಟ್​ ಸೇದಿದ ಆರೋಪಿಯ ಬಂಧನ

ದುಬೈನಿಂದ ಬೆಂಗಳೂರಿಗೆ ಬರುತ್ತಿದ್ದ ಇಂಡಿಗೋ ವಿಮಾನದ ಶೌಚಾಲಯದಲ್ಲಿ ಮೊಹಮ್ಮದ್​ ಅಸ್ಲಾಂ ಎಂಬ ಪ್ರಯಾಣಿಕ ಸಿಗರೇಟ್​ ಸೇದಿದ್ದಾನೆ. ಈ ಸಂಬಂಧ ವಿಮಾನ ಸಿಬ್ಬಂದಿ ಬೆಂಗಳೂರು ವಿಮಾನ ನಿಲ್ದಾಣ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಆರೋಪಿಯನ್ನು ಬಂಧಿಸಲಾಗಿದೆ.

ವಿಮಾನದ ಶೌಚಾಲಯದಲ್ಲಿ ಸಿಗರೇಟ್​ ಸೇದಿದ ಆರೋಪಿಯ ಬಂಧನ
ವಿಮಾನದಲ್ಲಿ ಸಿಗರೇಟ್​ ಸೇದಿದ ಆರೋಪಿ ಮೊಹಮ್ಮದ್ ಅಸ್ಲಾಂ
Follow us
TV9 Web
| Updated By: ವಿವೇಕ ಬಿರಾದಾರ

Updated on: May 08, 2024 | 10:05 AM

ಬೆಂಗಳೂರು, ಮೇ 08: ದುಬೈನಿಂದ ಬೆಂಗಳೂರಿಗೆ ಬರುತ್ತಿದ್ದ ಇಂಡಿಗೋ ವಿಮಾನದ (Indigo flight) ಶೌಚಾಲಯದಲ್ಲಿ ಸಿಗರೇಟ್ ಸೇದಿದ ಪ್ರಯಾಣಿಕನನ್ನು ಕೆಂಪೇಗೌಡ ಅಂತಾರಷ್ಟ್ರೀಯ ವಿಮಾನ ನಿಲ್ದಾಣದ (KIA) ಪೊಲೀಸರು (Police) ಬಂಧಿಸಿದ್ದಾರೆ. ಮೊಹಮ್ಮದ್ ಅಸ್ಲಾಂ ಸಿಗರೇಟ್ ಸೇದಿದ ವ್ಯಕ್ತಿ. ಮೊಹಮ್ಮದ್ ಅಸ್ಲಾಂ ಸಿಗರೇಟ್ ಸೇದಿದ ಬಗ್ಗೆ ವಿಮಾನ ನಿಲ್ದಾಣದ ಅಧಿಕಾರಿಗಳು ಠಾಣೆಗೆ ದೂರು ನೀಡಿದ್ದರು. ದೂರು ಆಧರಿಸಿ ಪೊಲೀಸರು ಮೊಹಮ್ಮದ್ ಅಸ್ಲಾಂನನ್ನು ಬಂಧಿಸಿದ್ದಾರೆ.

ತುರ್ತು ನಿರ್ಗಮನ ಬಾಗಿಲು ತೆರಯಲು ಯತ್ನಿಸಿದ ವಿದ್ಯಾರ್ಥಿ

ಕಳೆದ ತಿಂಗಳು ಏಪ್ರಿಲ್ 29ರಂದು ಸೋಮವಾರ ರಾತ್ರಿ ಕೋಲ್ಕತ್ತಾದಿಂದ ಬೆಂಗಳೂರಿಗೆ ಬರುತ್ತಿದ್ದ ಇಂಡಿಗೋ ವಿಮಾನದ ತುರ್ತು ನಿರ್ಗಮನ ಬಾಗಿಲನ್ನು ಪಶ್ಚಿಮ ಬಂಗಾಳದ ಬಂಕುರಾ ಮೂಲದ ಎಂಜಿನಿಯರಿಂಗ್ ವಿದ್ಯಾರ್ಥಿ ಕೌಶಿಕ್ ಕರಣ್ (22 ವರ್ಷ) ತೆರೆಯಲು ಯತ್ನಿಸಿದ್ದನು.

ಇಂಡಿಗೋದ ವಿಮಾನ ಸಂಖ್ಯೆ 6E-6314 ಏಪ್ರಿಲ್ 29 ರಂದು ಕೋಲ್ಕತ್ತಾದಿಂದ ರಾತ್ರಿ 8.15 ಕ್ಕೆ ಟೇಕ್ ಆಫ್ ಆಗಿತ್ತು. ರಾತ್ರಿ 10.30 ಕ್ಕೆ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್ 1 ತಲುಪಬೇಕಿತ್ತು. ಆರೋಪಿ ಕರಣ್‌ಗೆ ಆಸನ ಸಂಖ್ಯೆ 18E ಅನ್ನು ನಿಗದಿಪಡಿಸಲಾಗಿತ್ತು. ಆದರೆ ಆತ ತುರ್ತು ನಿರ್ಗಮನ ಬಾಗಿಲು ಇರುವ ಸೀಟ್ ಸಂಖ್ಯೆ 18F ಅನ್ನು ವಿನಂತಿ ಮಾಡಿ ಪಡೆದುಕೊಂಡಿದ್ದನು. ವಿಮಾನವು ಬೆಂಗಳೂರು ವಿಮಾನ ನಿಲ್ದಾಣ ಸಮೀಪಿಸುತ್ತಿದ್ದಾಗ ತುರ್ತು ನಿರ್ಗಮನ ಬಾಗಿಲಿನ ಸ್ಟಾರ್‌ಬೋರ್ಡ್ ಬದಿಯಿಂದ (ಬಲಭಾಗ) ಹ್ಯಾಂಡಲ್‌ನಲ್ಲಿದ್ದ ಫ್ಲಾಪ್ ಕವರ್ ಅನ್ನು ತೆಗೆದುಹಾಕಿದ್ದಾನೆ. ಆದರೆ, ಕರಣ್ ಬಾಗಿಲು ತೆರೆಯದಂತೆ ಸಿಬ್ಬಂದಿ ತಡೆದಿದ್ದಾರೆ ಎಂದು ಸಿಐಎಸ್‌ಎಫ್ ಮೂಲಗಳು ತಿಳಿಸಿದ್ದವು.

ಇದನ್ನೂ ಓದಿ: ಬೆಂಗಳೂರು ವಿಮಾನ ನಿಲ್ದಾಣಕ್ಕೆ ಬಾಂಬ್​ ಬೆದರಿಕೆ, ಎಫ್​​ಐಆರ್​ ದಾಖಲು

ಬೆಂಗಳೂರಿನಲ್ಲಿ ವಿಮಾನ ಲ್ಯಾಂಡ್ ಆದ ಬೆನ್ನಲ್ಲೇ ವಿಮಾನದ ಸಿಬ್ಬಂದಿ ಆತನನ್ನು ಇಂಡಿಗೋ ಭದ್ರತಾ ಸಿಬ್ಬಂದಿ ಮತ್ತು ಸಿಐಎಸ್ಎಫ್​​​ಗೆ ಹಸ್ತಾಂತರಿಸಿದ್ದರು. ಏರ್‌ಲೈನ್ಸ್ ಸಿಬ್ಬಂದಿ ಮಂಗಳವಾರ (ಏಪ್ರಿಲ್ 30) 12.33ಕ್ಕೆ ಆರೋಪಿಯನ್ನು ಕೆಐಎ ಪೊಲೀಸರಿಗೆ ಹಸ್ತಾಂತರಿಸಿದ್ದರು. ಆರೋಪಿ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದನು. ಈ ವಿಚಾರವಾಗಿ ಇಂಡಿಗೋ ಸಿಬ್ಬಂದಿ ಮೊಹಮ್ಮದ್ ಉಮರ್ ಮಂಗಳವಾರ ಕೆಐಎಗೆ ದೂರು ಸಲ್ಲಿಸಿದ್ದರು.

ರಾಜ್ಯದ ಇನ್ನಷ್ಟು ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ