AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ಕುದುರೆಯಲ್ಲ ಬಿಳಿ ಸ್ಕೂಟಿ ಏರಿ  ಮದುವೆ ಮನೆಗೆ ಬಂದ ಮದುಮಗ; ದಿಬ್ಬಣ ನೋಡಿ ಖುಷಿಪಟ್ಟ ಜನ

ಸಾಮಾನ್ಯವಾಗಿ ಉತ್ತರ ಭಾರತದ ಕಡೆ ವರನು ಕುದುರೆಯೇರಿ ಮದುವೆ ಮಂಟಪಕ್ಕೆ ಬರುವಂತಹ ಸಂಪ್ರದಾಯವಿದೆ. ಈ ಸಂಪ್ರದಾಯವನ್ನು ಹೆಚ್ಚಿನವರು ಇಂದಿಗೂ ಪಾಲಿಸುತ್ತಾರೆ. ಆದ್ರೆ ಇಲ್ಲೊಬ್ರು ವ್ಯಕ್ತಿ ಮದುವೆ ಮಂಟಪಕ್ಕೆ ರಾಜ ಕುಮಾರನಂತೆ ಎಂಟ್ರಿ ಕೊಡಲು ನನ್ ಬಳಿ ಬಿಳಿ ಕುದುರೆ ಇಲ್ಲವಲ್ಲ ಎಂದು ಬಿಳಿ ಬಣ್ಣದ ಸ್ಕೂಟರ್ ಏರಿ ಮದುವೆ ಛತ್ರಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಈ ಕುರಿತ ಪೋಸ್ಟ್ ಇದೀಗ ಸಖತ್ ವೈರಲ್ ಆಗುತ್ತಿದೆ. 

Viral Video: ಕುದುರೆಯಲ್ಲ ಬಿಳಿ ಸ್ಕೂಟಿ ಏರಿ  ಮದುವೆ ಮನೆಗೆ ಬಂದ ಮದುಮಗ; ದಿಬ್ಬಣ ನೋಡಿ ಖುಷಿಪಟ್ಟ ಜನ
ಮಾಲಾಶ್ರೀ ಅಂಚನ್​
| Edited By: |

Updated on:May 15, 2024 | 11:43 AM

Share

ಇತ್ತೀಚಿನ ದಿನಗಳಲ್ಲಿ ಜನರು ತಮ್ಮ ಮದುವೆ ಸಮಾರಂಭವನ್ನು ಸ್ಪೆಷಲ್ ಆಗಿ ಆಚರಿಸಲು ಏನೇನೋ ಟ್ರೆಂಡ್ ಫಾಲೋ ಮಾಡುತ್ತಿರುತ್ತಾರೆ. ಅದರಲ್ಲಿ ದಿಬ್ಬಣದಲ್ಲಿ ವಿಭಿನ್ನವಾಗಿ ಎಂಟ್ರಿ ಕೊಡುವುದು ಕೂಡಾ ಒಂದು. ಹಿಂದೆಲ್ಲಾ ಕುದುರೆಯೇರಿ ವರ ಮದುವೆ ಮಂಟಪಕ್ಕೆ ಬರುವತಹ ಸಂಪ್ರದಾಯವಿತ್ತು. ಆದ್ರೆ ಇಂದಿನ ದಿನಗಳಲ್ಲಿ ವಧು ವರರು ಎತ್ತಿನ ಗಾಡಿ, ಜೆಸಿಬಿ ಏರಿ ದಿಬ್ಬಣ ಬರುವಂತಹ ಟ್ರೆಂಡ್ ಸೃಷ್ಟಿಯಾಗಿವೆ. ಇಂತಹ ಸಾಕಷ್ಟು ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ. ಇದೀಗ ಅದೇ ರೀತಿಯ ಪೋಸ್ಟ್ ಒಂದು ವೈರಲ್ ಆಗಿದ್ದು, ರಾಜಕುಮಾರನಂತೆ ಮದುವೆ ಮಂಟಪಕ್ಕೆ ಎಂಟ್ರಿ ಕೊಡಲು ನನ್ ಬಳಿ ಬಿಳಿ ಕುದುರೆ ಇಲ್ವೇ ಎಂದು ಮದುಮಗ ಕುದುರೆಯ ಬದಲಿಗೆ ಬಿಳಿ ಬಣ್ಣದ ಎಲೆಕ್ಟ್ರಿಕ್ ಸ್ಕೂಟರ್ ಏರಿ ಮದುವೆ ಮಂಟಪಕ್ಕೆ ಎಂಟ್ರಿ ಕೊಟ್ಟಿದ್ದಾರೆ.

ನಮ್ಮ ಬೆಂಗಳೂರಿನ ನಿವಾಸಿಯಾಗಿರುವಂತಹ ದರ್ಶನ್ ಪಟೇಲ್ ಎಂಬವರು ತಮ್ಮ ಮದುವೆಯ ದಿನ ಎಲೆಕ್ಟ್ರಿಕ್ ಸ್ಕೂಟರ್ ಏರಿ ಮದುವೆ ಮಂಟಪಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಈ ಎಲೆಕ್ಟ್ರಿಕ್ ಸ್ಕೂಟರ್ ಇತ್ತೀಚಿಗೆ ಪರಿಚಯಿಸಲಾದ ಅಥೆರ್ ರಿಜ್ಟಾ ಎಂಬ ಹೆಸರಿನ ಸ್ಕೂಟರ್ ಆಗಿದೆ. ವರದಿಗಳ ಪ್ರಕಾರ ಅಥೆರ್ ಎನರ್ಜಿ ಕಂಪೆನಿಯಲ್ಲಿ ಇಂಡಸ್ಟ್ರಿಯಲ್ ಡಿಸೈನರ್ ಆಗಿರುವ ದರ್ಶನ್ ಪಟೇಲ್ ತಮ್ಮ ಮದುವೆಯ ದಿನ ತಮ್ಮದೇ ಕಂಪೆನಿಯ ಹೊಸ ಎಲೆಕ್ಟ್ರಿಕ್ ಸ್ಕೂಟರ್ ಏರಿ ಮದುವೆ ಮಂಟಪಕ್ಕೆ ಎಂಟ್ರಿ ಕೊಟ್ಟಿದ್ದಾರೆ.

ಈ ಕುರಿತ ವಿಡಿಯೋವನ್ನು ಅಥೆರ್ ಎನರ್ಜಿಯ ಸಹ ಸಂಸ್ಥಾಪಕ ಮತ್ತು ಸಿಇಒ ತರುಣ್ ಮೆಹ್ತಾ ಅವರು ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ವಿಡಿಯೋದಲ್ಲಿ ವರ ದರ್ಶನ್ ಪಟೇಲ್ ಅವರು ಬಿಳಿ ಬಣ್ಣದ ಕುದುರೆಯ ಬದಲಿಗೆ ತಮ್ಮದೇ ಕಂಪೆನಿಯ ಬಿಳಿ ಬಣ್ಣದ ಎಲೆಕ್ಟ್ರಿಕ್ ಸ್ಕೂಟರ್ ಏರಿ ದಿಬ್ಬಣ ಬಂದಿರುವಂತಹ ದೃಶ್ಯವನ್ನು ಕಾಣಬಹುದು.

ಇದನ್ನೂ ಓದಿ: ಬಸ್ಸಿನಲ್ಲೇ ಪ್ರೇಮಿಗಳ ರೊಮ್ಯಾನ್ಸ್; ಲವ್ ಬರ್ಡ್ಸ್ ಹುಚ್ಚಾಟಕ್ಕೆ ಛಿ ಛೀ ಎಂದ ನೆಟ್ಟಿಗರು

ಒಂದು ದಿನದ ಹಿಂದೆ ಹಂಚಿಕೊಳ್ಳಲಾದ ಈ ವಿಡಿಯೋ 29 ಸಾವಿರಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದ್ದು, ಈ ವರನ ದಿಬ್ಬಣವಂತೂ ತುಂಬಾನೇ ಸ್ಪೆಷಲ್ ಆಗಿದೆ ಎನ್ನುತ್ತಾ  ಜನರು ವರನ ಎಂಟ್ರಿಗೆ ಫುಲ್ ಫಿದಾ ಆಗಿದ್ದಾರೆ.

ಮತ್ತಷ್ಟು ವೈರಲ್​ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 11:39 am, Wed, 15 May 24

Follow Us
ಮಾಲಾಶ್ರೀ ಅಂಚನ್​
ಮಾಲಾಶ್ರೀ ಅಂಚನ್​

ಮಾಲಾಶ್ರೀ ಅಂಚನ್- ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದವರು. ಸಮೂಹ ಸಂವಹನ ಮತ್ತು ಪತ್ರಿಕೋದ್ಯಮದಲ್ಲಿ (MCJ) ಸ್ನಾತಕೋತ್ತರ ಪದವಿಧರೆ. ಪ್ರಾರಂಭದಿಂದಲೂ ಬರವಣಿಗೆಯಲ್ಲಿ ಹೆಚ್ಚಿನ ಒಲವನ್ನು ಹೊಂದಿದ್ದು, ಪತ್ರಿಕಾ ರಂಗದಲ್ಲಿ 2 ವರ್ಷಗಳ ಅನುಭವವಿದೆ. ಜೀವನಶೈಲಿ, ವೈರಲ್ ಸುದ್ದಿಗಳನ್ನು ಬರೆಯುವುದರಲ್ಲಿ ಆಸಕ್ತಿಯನ್ನು ಹೊಂದಿದ್ದು, ಓದುಗರಿಗೆ ಉತ್ತಮ ಲೇಖನಗಳನ್ನು ಒದಗಿಸುತ್ತಿದ್ದಾರೆ.

Read More
ರಿಷಬ್ ಶೆಟ್ಟಿ ಹೊಸ ಸಿನಿಮಾನಲ್ಲಿ ನಟಿಸಲು ನೂಕು ನುಗ್ಗಲು: ವಿಡಿಯೋ ನೋಡಿ
ರಿಷಬ್ ಶೆಟ್ಟಿ ಹೊಸ ಸಿನಿಮಾನಲ್ಲಿ ನಟಿಸಲು ನೂಕು ನುಗ್ಗಲು: ವಿಡಿಯೋ ನೋಡಿ
ಕಾಂಗ್ರೆಸ್ ಸೇವಾದಳದಿಂದ ಎಡವಟ್ಟು: ಉಲ್ಟಾ ಧ್ವಜ ನೀಡಿ ಅಧಿಕಾರ ಹಸ್ತಾಂತರ
ಕಾಂಗ್ರೆಸ್ ಸೇವಾದಳದಿಂದ ಎಡವಟ್ಟು: ಉಲ್ಟಾ ಧ್ವಜ ನೀಡಿ ಅಧಿಕಾರ ಹಸ್ತಾಂತರ
ಉಪ್ಪಿನ ಕೇಕ್ ತಿಂದ ಶಾಸ್ತ್ರಿ, ಅದ್ಭುತ ನಟನೆ ಎಂದ ಕಿಚ್ಚ: ವಿಡಿಯೋ ನೋಡಿ
ಉಪ್ಪಿನ ಕೇಕ್ ತಿಂದ ಶಾಸ್ತ್ರಿ, ಅದ್ಭುತ ನಟನೆ ಎಂದ ಕಿಚ್ಚ: ವಿಡಿಯೋ ನೋಡಿ
ಗಣಪತಿ ಮೂರ್ತಿ ಮೆರವಣಿಗೆಯಲ್ಲಿ ರಾರಾಜಿಸಿದ ಪೈಲಟ್ ಸ್ಮಿತ್ ಮಚ್ಚರ್ ಫೋಟೋ!
ಗಣಪತಿ ಮೂರ್ತಿ ಮೆರವಣಿಗೆಯಲ್ಲಿ ರಾರಾಜಿಸಿದ ಪೈಲಟ್ ಸ್ಮಿತ್ ಮಚ್ಚರ್ ಫೋಟೋ!
ಶೌಚಾಲಯಕ್ಕೂ ಜಾತಿ ಕೇಳಿದ ಅಧಿಕಾರಿಗಳು: ಪ್ರಜಾಸೇವಾಯಲ್ಲಿ ಕಣ್ಣೀರಿಟ್ಟ ಮಹಿಳೆ
ಶೌಚಾಲಯಕ್ಕೂ ಜಾತಿ ಕೇಳಿದ ಅಧಿಕಾರಿಗಳು: ಪ್ರಜಾಸೇವಾಯಲ್ಲಿ ಕಣ್ಣೀರಿಟ್ಟ ಮಹಿಳೆ
ನೆಲಮಂಗಲ ಭಾಗದಲ್ಲಿ ಮಿತಿಮೀರಿದ ಕಳ್ಳರ ಹಾವಳಿ: ದೇವರನ್ನೂ ಬಿಡದ ಖದೀಮರು
ನೆಲಮಂಗಲ ಭಾಗದಲ್ಲಿ ಮಿತಿಮೀರಿದ ಕಳ್ಳರ ಹಾವಳಿ: ದೇವರನ್ನೂ ಬಿಡದ ಖದೀಮರು
ಬಿ.ವೈ.ವಿಜಯೇಂದ್ರ ಸಮ್ಮುಖದಲ್ಲೇ ಕಿತ್ತಾಡಿಕೊಂಡ ಬಿಜೆಪಿ ಮುಖಂಡರು
ಬಿ.ವೈ.ವಿಜಯೇಂದ್ರ ಸಮ್ಮುಖದಲ್ಲೇ ಕಿತ್ತಾಡಿಕೊಂಡ ಬಿಜೆಪಿ ಮುಖಂಡರು
ಗದಗ ಸರ್ಕಾರಿ ಶಾಲಾ ವಿದ್ಯಾರ್ಥಿಗಳ ಆವಿಷ್ಕಾರ ರಾಷ್ಟ್ರೀಯ ಮಟ್ಟಕ್ಕೆ ಆಯ್ಕೆ
ಗದಗ ಸರ್ಕಾರಿ ಶಾಲಾ ವಿದ್ಯಾರ್ಥಿಗಳ ಆವಿಷ್ಕಾರ ರಾಷ್ಟ್ರೀಯ ಮಟ್ಟಕ್ಕೆ ಆಯ್ಕೆ
ದಸರಾ ಸಮಿತಿಯಿಂದ ಕೊಪ್ಪಳ ಶ್ರೀಗಳಿಗೆ ಅಧಿಕೃತ ಆಹ್ವಾನ
ದಸರಾ ಸಮಿತಿಯಿಂದ ಕೊಪ್ಪಳ ಶ್ರೀಗಳಿಗೆ ಅಧಿಕೃತ ಆಹ್ವಾನ
SIR ಗೊಂದಲ: ಜೀವಂತ ವ್ಯಕ್ತಿಗಳ ಮರಣ ಪತ್ರ ಪ್ರದರ್ಶಿಸಿದ ಯತ್ನಾಳ್
SIR ಗೊಂದಲ: ಜೀವಂತ ವ್ಯಕ್ತಿಗಳ ಮರಣ ಪತ್ರ ಪ್ರದರ್ಶಿಸಿದ ಯತ್ನಾಳ್