ಮೊದಲ ಮಗುವಿಗೆ ಜನ್ಮ ನೀಡಿದ 22 ದಿನಗಳ ನಂತರ 2ನೇ ಮಗುವಿಗೆ ಜನ್ಮ ನೀಡಿದ ಮಹಿಳೆ
ಮಹಿಳೆಯೊಬ್ಬಳು ಅವಳಿ ಮಕ್ಕಳಿಗೆ ಜನ್ಮ ನೀಡಿದ್ದು ನಿಜ. ಆದರೆ, ಮೊದಲ ಮಗು ಜನಿಸಿದ 22 ದಿನಗಳ ನಂತರ ಮತ್ತೊಂದು ಮಗು ಜನಿಸಿದೆ.ಈ ಅಪರೂಪದ ಘಟನೆ ನಡೆದಿರುವುದು ಇಂಗ್ಲೆಂಡ್ ನಲ್ಲಿ.
ಮಹಿಳೆಯೊಬ್ಬಳು ಅವಳಿ ಮಕ್ಕಳಿಗೆ ಜನ್ಮ ನೀಡಿದ್ದು ನಿಜ. ಆದರೆ, ಮೊದಲ ಮಗು ಜನಿಸಿದ 22 ದಿನಗಳ ನಂತರ ಮತ್ತೊಂದು ಮಗು ಜನಿಸಿದೆ.ಈ ಅಪರೂಪದ ಘಟನೆ ನಡೆದಿರುವುದು ಇಂಗ್ಲೆಂಡ್ ನಲ್ಲಿ. ಇಂಗ್ಲೆಂಡ್ ನಲ್ಲಿ ನೆಲೆಸಿರುವ ಕೈಲಿ ಡಾಯ್ಲ್ ಎಂಬ ಮಹಿಳೆ ಕೆಲ ತಿಂಗಳ ಹಿಂದೆ ಅವಳಿ ಮಕ್ಕಳಿಗೆ ಜನ್ಮ ನೀಡಿದ್ದಾಳೆ. ಆದರೆ ಕೇವಲ 22 ದಿನಗಳ ಅಂತರದಲ್ಲಿ ಮಕ್ಕಳಿಬ್ಬರೂ ಹುಟ್ಟಲು ಹೇಗೆ ಸಾಧ್ಯ ಎಂಬುದು ಈಗ ಚರ್ಚೆಯ ವಿಷಯವಾಗಿದೆ.
ಹೆರಿಗೆ ನೋವಿನಿಂದ ಆಸ್ಪತ್ರೆಗೆ ದಾಖಲಾಗಿದ್ದ ಕೈಲಿ ಮೊದಲ ಮಗುವಿಗೆ ಜನ್ಮ ನೀಡಿದ ವೇಳೆ, ಮಗು ಅದಾಗಲೇ ಸತ್ತಿರುವುದಾಗಿ ವೈದ್ಯೆರು ಘೋಷಿಸಿದ್ದರು. 1.1 ಪೌಂಡ್ ತೂಕವಿರುವ ಈ ಮಗು ಹೊಕ್ಕುಳಬಳ್ಳಿಯಲ್ಲಿ ರಕ್ತ ಹೆಪ್ಪುಗಟ್ಟಿ ಸಾವನ್ನಪ್ಪಿದೆ ಎಂದು ತಿಳಿದುಬಂದಿತ್ತು.
ಇದನ್ನೂ ಓದಿ: ಈ ಐಸ್ಕ್ರೀಮ್ ನೋಡಿದ್ರೆ, ಮಕ್ಕಳು ಯಾವಾತ್ತೂ ಐಸ್ಕ್ರೀಮ್ ಬೇಕು ಎಂದು ಹಠ ಮಾಡಲ್ಲ!
ಎರಡನೇ ಮಗು ಸಂಪೂರ್ಣವಾಗಿ ಆರೋಗ್ಯವಾಗಿ ಜನಿಸಲಿ ಎಂದು ಕೈಲಿ ದೇವರಲ್ಲಿ ಪ್ರಾರ್ಥಿಸಿದ್ದರು. ಆದರೆ ಕೆಲವೇ ಗಂಟೆಗಳಲ್ಲಿ ಹೆರಿಗೆ ನೋವು ನಿಂತಿದ್ದ ಕಾರಣ ಎರಡು ದಿನಗಳಾದರೂ ಹೆರಿಗೆ ನೋವು ಕಾಣಿಸದೇ ಇರುವ ಕಾರಣ ವೈದ್ಯರು ಕೈಲಿಯನ್ನು ಮನೆಗೆ ಕಳುಹಿಸಿದ್ದರು. ಆದರೆ 22 ದಿನಗಳ ಬಳಿಕ ಈಕೆಗೆ ಹೆರಿಗೆ ನೋವು ಕಾಣಿಸಿಕೊಂಡಿದ್ದು, ಆಸ್ಪತ್ರೆಗೆ ದಾಖಲಾದ ಕೇಲವೇ ಹೊತ್ತಿನಲ್ಲಿ ಎರಡನೇ ಮಗುವಿನ ಜನನವಾಗಿದೆ.
ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ