ಚಲಿಸುತ್ತಿದ್ದ ರೈಲಿನಲ್ಲಿ ಹೆರಿಗೆ ನೋವು: ರೈಲು ನಿಲ್ದಾಣದಲ್ಲೇ ಅವಳಿ ಮಕ್ಕಳಿಗೆ ಜನ್ಮ ನೀಡಿದ ಮಹಿಳೆ

ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಗೆ ಹೆರಿಗೆ ನೋವು ಕಾಣಿಸಿಕೊಂಡಿದ್ದು, ರೈಲು ನಿಲ್ದಾಣದಲ್ಲಿ ಇಳಿಯುತ್ತಿದಂತೆ ಅವಳಿ ಮಕ್ಕಳಿಗೆ ಜನ್ಮ ನೀಡಿರುವಂತಹ ಅಪರೂಪದ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ನಗರದ ರೈಲ್ವೆ ನಿಲ್ದಾಣದಲ್ಲಿ ನಡೆದಿದೆ. ಕಲಬುರಗಿ ಜಿಲ್ಲೆಯ ಚಂದ್ರಮ್ಮ ಅವಳಿ ಮಕ್ಕಳಿಗೆ ಜನ್ಮ ನೀಡಿದ್ದು, ತಾಯಿ ಹಾಗೂ ಇಬ್ಬರು ಮಕ್ಕಳು ಆರೋಗ್ಯವಾಗಿದ್ದಾರೆ.

ಚಲಿಸುತ್ತಿದ್ದ ರೈಲಿನಲ್ಲಿ ಹೆರಿಗೆ ನೋವು: ರೈಲು ನಿಲ್ದಾಣದಲ್ಲೇ ಅವಳಿ ಮಕ್ಕಳಿಗೆ ಜನ್ಮ ನೀಡಿದ ಮಹಿಳೆ
ಅವಳಿ ಮಕ್ಕಳಿಗೆ ಜನ್ಮ ನೀಡಿದ ಮಹಿಳೆ ಚಂದ್ರಮ್ಮ
Follow us
| Updated By: ಗಂಗಾಧರ​ ಬ. ಸಾಬೋಜಿ

Updated on:Aug 31, 2023 | 5:35 PM

ಚಿಕ್ಕಬಳ್ಳಾಪುರ, ಆಗಸ್ಟ್​ 31: ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಗೆ (Woman) ಹೆರಿಗೆ ನೋವು ಕಾಣಿಸಿಕೊಂಡಿದ್ದು, ರೈಲು ನಿಲ್ದಾಣದಲ್ಲಿ ಇಳಿಯುತ್ತಿದಂತೆ ಅವಳಿ ಮಕ್ಕಳಿಗೆ ಜನ್ಮ ನೀಡಿರುವಂತಹ ಅಪರೂಪದ ಘಟನೆ ನಡೆದಿದೆ. ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ನಗರದ ರೈಲ್ವೆ ನಿಲ್ದಾಣದಲ್ಲಿ ಈ ಘಟನೆ ನಡೆದಿದೆ. ಮೂಲತಃ ಕಲಬುರಗಿ ಜಿಲ್ಲೆಯ ಚಂದ್ರಮ್ಮ ಅವಳಿ ಮಕ್ಕಳಿಗೆ ಜನ್ಮ ನೀಡಿದ ಮಹಿಳೆ. ಚಂದ್ರಮ್ಮ 8 ತಿಂಗಳ ಗರ್ಭಿಣಿಯಾಗಿದ್ದು ಬೆಂಗಳೂರಿನಲ್ಲಿ ವಾಸವಾಗಿದ್ದರು.

ಚಿತ್ತಾಪುರ ಗ್ರಾಮದಲ್ಲಿ ಸಂಬಂಧಿಕರ ಮನೆಗೆ ಸಹೋದರ ಹಾಗೂ ಸಂಬಂಧಿಕ‌ ಜೊತೆ ಉದ್ಯಾನವನ ಎಕ್ಸ್ ಪ್ರೆಸ್ ಮೂಲಕ ಕಲಬುರಗಿಗೆ ಪ್ರಯಾಣ ಬೆಳೆಸಿದ್ದರು. ರೈಲು ಬೆಂಗಳೂರಿನಿಂದ ಯಲಹಂಕ ತಲಪುವಷ್ಟರಲ್ಲಿ ಹೆರಿಗೆ ನೋವು ಕಾಣಿಸಿಕೊಂಡಿತ್ತು. ನಂತರ ರೈಲ್ವೆ ಕಂಟ್ರೋಲ್ ರೂಂಗೆ ಕರೆ ಮಾಡಿ ಸಹಾಯಕ್ಕೆ ಮನವಿ‌ ಮಾಡಿದ್ದರು.

ಇದನ್ನೂ ಓದಿ: ಅನಾರೋಗ್ಯದಲ್ಲಿರುವ ಮಗನನ್ನು ನೋಡಲು ದೇವರ ಪ್ರಸಾದದೊಂದಿಗೆ ಆಸ್ಪತ್ರೆಗೆ ಆಗಮಿಸಿದ ಚೆನ್ನಮ್ಮ ದೇವೇಗೌಡ

ಅದರಂತೆ ಗೌರಿಬಿದನೂರು ರೈಲ್ವೆ ನಿಲ್ದಾಣದಲ್ಲಿ ಇಳಿದಿದ್ದಾಳೆ. ಅಷ್ಟರಲ್ಲಿ ಹೆರಿಗೆಯಾಗಿದೆ. ನಗರದ ತಾಯಿ ಹಾಗೂ ಮಕ್ಕಳ ಆಸ್ಪತ್ರೆಗೆ ದಾಖಲಿಸಲು ಸಿದ್ದತೆ ಮಾಡಲಾಗಿತ್ತು. ಆದರೆ ಚಂದ್ರಮ್ಮ ಗೌರಿಬಿದನೂರು ರೈಲ್ವೆ ನಿಲ್ದಾಣಕ್ಕೆ ಬರುತ್ತಿದ್ದಂತೆ ಹೆರಿಗೆ ನೋವು ಮತ್ತಷ್ಟು ಹೆಚ್ಚಾಗಿ ರೈಲ್ವೆ ನಿಲ್ದಾಣದ ಫ್ಲಾಟ್ ಫಾರಂನಲ್ಲೇ ಮಹಿಳೆಗೆ ಹೆರಿಗೆ ಆಗಿದೆ. ಇಬ್ಬರು ಅವಳಿ ಗಂಡು ಮಕ್ಕಳಿಗೆ ಜನ್ಮ‌ ನೀಡಿದ್ದು, ತಾಯಿ ಹಾಗೂ ಇಬ್ಬರು ಮಕ್ಕಳು ಆರೋಗ್ಯವಾಗಿದ್ದಾರೆ.

ಹೆರಿಗೆಯ‌ ನಂತರ ಇಬ್ಬರನ್ನ ಗೌರಿಬಿದನೂರು ತಾಯಿ ಹಾಗೂ ಮಕ್ಕಳ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅಲ್ಲಿನ ವೈದ್ಯರು ತಾಯಿ ಮಕ್ಕಳಿಗೆ ಹಾರೈಕೆ ಮಾಡುತ್ತಿದ್ದಾರೆ.

ಆ್ಯಂಬ್ಯುಲೆನ್ಸ್​ನಲ್ಲಿಯೇ ಹೆರಿಗೆ

ಚಿಕ್ಕಮಗಳೂರು: ತುಂಬು ಗರ್ಭೀಣಿಯನ್ನ ಕರೆದುಕೊಂಡು ಹೋಗುವ ವೇಳೆ ಪುರುಷ ಸಿಬ್ಬಂದಿಗಳೇ ಆಂಬ್ಯುಲೆನ್ಸ್​ನಲ್ಲಿಯೇ ಹೆರಿಗೆ ಮಾಡಿಸಿರುವಂತಹ ಅಪರೂಪದ ಘಟನೆ ಇತ್ತೀಚಿಗೆ ಜಿಲ್ಲೆಯ ಕೊಪ್ಪ ತಾಲೂಕಿನ ಶಾಂತಿಪುರದಲ್ಲಿ ನಡೆದಿತ್ತು. ಬಾಳೆಹೊನ್ನೂರಿನಿಂದ ಕೊಪ್ಪ ಆಸ್ಪತ್ರೆಗೆ ಅಂಬ್ಯುಲೆನ್ಸ್​ನಲ್ಲಿ ಕರೆದುಕೊಂಡು ಹೋಗುವ ವೇಳೆ ಮಹಿಳೆಗೆ ತೀವ್ರ ಹೆರಿಗೆ ನೋವು ಕಾಣಿಸಿಕೊಂಡಿತ್ತು.

ಇದನ್ನೂ ಓದಿ: ಕುಮಟಾದಲ್ಲಿ ಪತ್ತೆಯಾಯ್ತು ಭಾರತದಲ್ಲೇ ಅತೀ ದೊಡ್ಡ ಬಿಳಿ ಹೆಬ್ಬಾವು; ಇಲ್ಲಿದೆ ವಿಡಿಯೋ

ನೋವನ್ನ ತಡೆದುಕೊಳ್ಳಲಾಗದೇ ಮಹಿಳೆ ಕಿರುಚಾಟ ಆರಂಭಿಸಿದ್ದರು. ಆಗ ಅಂಬ್ಯುಲೆನ್ಸ್​ನಲ್ಲಿದ್ದ ಸಿಬ್ಬಂದಿ ಅಶ್ವಿನ್ ಹಾಗೂ ಚಾಲಕ ಮನ್ಸೂರ್ ಅನಿವಾರ್ಯವಾಗಿ ಹೆರಿಗೆ ಮಾಡಿಸಲು ಮುಂದಾಗಿದ್ದರು. ಮಹಿಳೆ ಹೆಣ್ಣು ಮಗುವಿಗೆ ಜನ್ಮ ನೀಡಿದ್ದು, ಹೆರಿಗೆ ಸುಸೂತ್ರವಾಗಿ ಅಂಬ್ಯಲೆನ್ಸ್​ನಲ್ಲಿ ನಡೆದಿತ್ತು. ಸದ್ಯ ತಾಯಿ-ಮಗು ಆರೋಗ್ಯವಾಗಿದ್ದು, ಕೊಪ್ಪ ಆಸ್ಪತ್ರೆಗೆ ದಾಖಲಾಗಿದ್ದರು. ಸಕಾಲಕ್ಕೆ ಹೆರಿಗೆ ಮಾಡಿಸಲು ನೆರವಾದ ಅಶ್ವಿನ್ ಹಾಗೂ ಮನ್ಸೂರ್ ಕಾರ್ಯಕ್ಕೆ ಜನಸಾಮಾನ್ಯರು ಮೆಚ್ಚುಗೆ ವ್ಯಕ್ತಪಡಿಸಿದ್ದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 5:29 pm, Thu, 31 August 23