Viral Video: ಈ ಐಸ್​ಕ್ರೀಮ್​​​ ನೋಡಿದ್ರೆ, ಮಕ್ಕಳು ಯಾವಾತ್ತೂ ಐಸ್​ಕ್ರೀಮ್​ ಬೇಕು ಎಂದು ಹಠ ಮಾಡಲ್ಲ!

ಐಸ್​​ಕ್ರೀಮ್​​ ಒಂದರ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದ್ದು, ಮಕ್ಕಳು ಈ ಐಸ್​ಕ್ರೀಮ್​​ ನೋಡಿದರೆ ಹೆದರುವುದಂತೂ ಖಂಡಿತಾ. ವೈರಲ್​​ ವಿಡಿಯೋ ಇಲ್ಲಿದೆ ನೋಡಿ.

Viral Video: ಈ ಐಸ್​ಕ್ರೀಮ್​​​ ನೋಡಿದ್ರೆ, ಮಕ್ಕಳು  ಯಾವಾತ್ತೂ ಐಸ್​ಕ್ರೀಮ್​ ಬೇಕು ಎಂದು ಹಠ ಮಾಡಲ್ಲ!
Scary Ice CreamImage Credit source: instagram
Follow us
ಅಕ್ಷತಾ ವರ್ಕಾಡಿ
|

Updated on:Mar 30, 2024 | 4:40 PM

ಎಲ್ಲದರೊಂದು ಐಸ್​ಕ್ರೀಮ್​​ ಅಂಗಡಿ ಕಂಡರೇ ಸಾಕು, ಮಕ್ಕಳು ಐಸ್​ಕ್ರೀಮ್​ ಬೇಕೇಬೇಕು ಎಂದು ಹಠ ಮಾಡಲು ಪ್ರಾರಂಭಿಸುತ್ತಾರೆ. ಇದೀಗ ಐಸ್​​ಕ್ರೀಮ್​​ ಒಂದರ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದ್ದು, ಮಕ್ಕಳು ಈ ಐಸ್​ಕ್ರೀಮ್​​ ನೋಡಿದರೆ ಹೆದರುವುದಂತೂ ಖಂಡಿತಾ. ಜೊತೆಗೆ ಮುಂದೆ ಯಾವತ್ತೂ ಐಸ್​​ಕ್ರೀಮ್​​ ಬೇಕು ಅಂತ ಹಠ ಹಿಡಿಯಲ್ಲ.

@creepycum ಎಂಬ ಇನ್ಸ್ಟಾಗ್ರಾಮ್​ ಖಾತೆಯಲ್ಲಿ ಈ ವಿಚಿತ್ರವಾದ ಐಸ್​​ಕ್ರೀಮ್​​ನ ವಿಡಿಯೋ ಹಂಚಿಕೊಳ್ಳಲಾಗಿದೆ. ಮಾರ್ಚ್​​​ 12ರಂದು ಹಂಚಿಕೊಂಡಿರುವ ಈ ವಿಡಿಯೋ ಇಲ್ಲಿಯವರೆಗೆ 15 ಮಿಲಿಯನ್​​ಗಿಂತಲೂ ಹೆಚ್ಚು ಅಂದರೆ 1.5 ಕೋಟಿಗಿಂತಲೂ ಹೆಚ್ಚಿನ ವೀಕ್ಷಣೆಯನ್ನು ಪಡೆದುಕೊಂಡಿದೆ. ಇದಲ್ಲದೇ 315,806 ಜನರು ವಿಡಿಯೋಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

​​​ಇದನ್ನೂ ಓದಿ: ಯುವತಿಯ ಕಿಡ್ನಿ ವೈಫಲ್ಯಕ್ಕೆ ಕಾರಣವಾದ ಹೇರ್ ಸ್ಟ್ರೈಟ್ನಿಂಗ್ ಟ್ರೀಟ್​​ಮೆಂಟ್​​​​​​

ಭಯಾನಕವಾದ ಐಸ್​​ಕ್ರೀಮ್​​ನ ವೈರಲ್​​ ವಿಡಿಯೋ ಇಲ್ಲಿದೆ ನೋಡಿ:

View this post on Instagram

A post shared by creepycum (@creepycum)

ವಿಡಿಯೋ ಎಲ್ಲೆಡೆ ವೈರಲ್​ ಆಗುತ್ತಿದ್ದಂತೆ ಸಾವಿರಾರು ಜನರು ಕಾಮೆಂಟ್ ಮೂಲಕ ಪ್ರತಿಕ್ರಿಯಿಸಿದ್ದಾರೆ. ಒಬ್ಬ ಬಳಕೆದಾರರು ಬರೆದಿದ್ದಾರೆ, ‘ಈ ದೃಶ್ಯವು ತುಂಬಾ ಭಯಾನಕವಾಗಿದೆ’ ಎಂದು ಬರೆದರೆ, ಮತ್ತೊಬ್ಬರು ‘ಈ ಐಸ್​ಕ್ರೀಮ್​​ ನೋಡಿದರೆ ಮಕ್ಕಳು ಐಸ್​​ಕ್ರೀಮ್​​ಗೆ ಹಠ ಮಾಡಲ್ಲ’ ಎಂದು ಬರೆದುಕೊಂಡಿದ್ದಾರೆ.

ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 4:39 pm, Sat, 30 March 24