Ice Cream: ಜನರನ್ನು ಅಚ್ಚರಿಗೊಳಿಸಿದ ಬೆಳ್ಳುಳ್ಳಿ ಐಸ್ಕ್ರೀಮ್ ವಿಡಿಯೋ
ಹಣ್ಣುಗಳೊಂದಿಗೆ ಸಂಯೋಜಿಸಿದ ಐಸ್ಕ್ರೀಮ್ಗಳನ್ನು ನೋಡಿದ್ದೀರಿ, ಆದರೆ ಬೆಳ್ಳುಳ್ಳಿಯಿಂದ ತಯಾರಿಸಿದ ಐಸ್ಕ್ರೀಮ್ ಅನ್ನು ಎಂದಾದರು ನೋಡಿದ್ದೀರಾ? ವಿಲಕ್ಷಣ ಐಸ್ಕ್ರೀಮ್ ವಿಡಿಯೋ ಇಲ್ಲಿದೆ ನೋಡಿ.

ರುಚಿಕರವಾದ ಬಾಯಲ್ಲಿ ನೀರು ತರಿಸುವ ಐಸ್ಕ್ರೀಮ್ಗಳು ಒಂದಾ ಎರಡಾ, ವಿಧವಿಧವಾದ ಫ್ಲೇವರ್ಗಳು ಲಭ್ಯವಾಗುತ್ತಿವೆ. ಈ ನಡುವೆ ಅನೇಕ ಆವಿಷ್ಕಾರಗಳು ಅದರಲ್ಲೂ ವಿಲಕ್ಷಣ ಆವಿಷ್ಕಾರಗಳನ್ನು ಕೂಡ ಕಾಣಬಹುದು. ಹಣ್ಣಿನ ಐಸ್ಕ್ರೀಮ್ ಸಂಯೋಜನೆಯನ್ನು ನೋಡಿದ್ದೇವೆ, ಕೆಲವೊಂದು ತಿನ್ನಬಹುದಾದ ತರಕಾರಿಗಳ ಸಂಯೋಜನೆಯೊಂದಿಗೆ ತಯಾರಿಸಿದ ಐಸ್ಕ್ರೀಂ ಅನ್ನು ಅಪರೂಪಕ್ಕೆ ನೋಡಿದ್ದೇವೆ. ಆದರೆ ಬೆಳ್ಳುಳ್ಳಿಯಿಂದ ಐಸ್ಕ್ರೀಮ್ ಅನ್ನು ತಯಾರಿಸಿದ್ದು ನೀವು ಎಂದಾದರು ನೋಡಿದ್ದೀರಾ? ಕೇಳಿದ್ದೀರಾ? ಆದರೆ ಇದರ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುವ ಮೂಲಕ ನೆಟ್ಟಿಗರನ್ನು ಅಚ್ಚರಿಗೊಳಿಸಿದೆ.
ವಿಡಿಯೋ ನೋಡಿ ದಂಗಾದ ಪೌಷ್ಟಿಕತಜ್ಞೆ ಮೇಘಾ, ಮೂಲ ವೀಡಿಯೊದೊಂದಿಗೆ ತನ್ನ ರೀಲ್ ಅನ್ನು ಮಾಡಿಕೊಂಡು ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿದ್ದಾರೆ. “ಬೆಳ್ಳುಳ್ಳಿ ಐಸ್ ಕ್ರೀಮ್” ಎಂಬ ಶೀರ್ಷಿಕೆ ಬರೆದರು ಹಂಚಿಕೊಂಡ ರೀಲ್ಸ್ನಲ್ಲಿ ಮೇಘಾ ಅವರು, “ಬೆಳ್ಳುಳ್ಳಿಯಲ್ಲಿ ಚಟ್ನಿ ಮಾಡುತ್ತಾರೆ, ಬೆಳ್ಳುಳ್ಳಿಯಿಂದ ಪಲ್ಯ ಮಾಡುತ್ತಾರೆ, ಈಗ ಬೆಳ್ಳುಳ್ಳಿಯಿಂದ ಐಸ್ಕ್ರೀಮ್ ಕೂಡ ತಯಾರಿಸುತ್ತಿದ್ದಾರೆ” ಎಂದು ಹೇಳಿಕೊಂಡಿದ್ದಾರೆ.
ಬ್ಲಾಗರ್ ಸ್ಕಾಟ್ಸ್ ರಿಯಾಲಿಟಿ ಬೆಳ್ಳುಳ್ಳಿ ಐಸ್ಕ್ರೀಮ್ ತಯಾರಿಸುವುದನ್ನು ವಿಡಿಯೋದಲ್ಲಿ ಕಾಣಬಹುದು. ಮೊದಲಿಗೆ ಬೆಳ್ಳುಳ್ಳಿಯನ್ನು ಗ್ಲಾಸ್ ಒಂದಕ್ಕೆ ತುಂಬಿ ನೀರನ್ನು ಹಾಕಿ ಅದರಲ್ಲಿ ಒಂದು ಸಣ್ಣ ಚಮಚ ಇಟ್ಟು ಫ್ರಿಜ್ನಲ್ಲಿ ಇಡುತ್ತಾನೆ, ಕೆಲವೇ ಸೆಕೆಂಡುಗಳಲ್ಲಿ ಫ್ರಿಜ್ನಿಂದ ಹೊರತೆಗೆದು ಲೋಟದಿಂದ ಐಸ್ಕ್ರೀಮ್ ಅನ್ನು ತೆಗೆದು ಕಚ್ಚಿ ರುಚಿ ನೋಡುವುದನ್ನು ವಿಡಿಯೋ ತೋರಿಸುತ್ತದೆ.
View this post on Instagram
ಮತ್ತಷ್ಟು ಟ್ರೆಂಡಿಂಗ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ