Hair Straightening: ಯುವತಿಯ ಕಿಡ್ನಿ ವೈಫಲ್ಯಕ್ಕೆ ಕಾರಣವಾದ ಹೇರ್ ಸ್ಟ್ರೈಟ್ನಿಂಗ್ ಟ್ರೀಟ್ಮೆಂಟ್
ಇತ್ತೀಚಿಗಷ್ಟೇ ಸ್ಟ್ರೈಟನಿಂಗ್ ಬಳಿಕ ಆರೋಗ್ಯ ಸಮಸ್ಯೆ ಹೆಚ್ಚಾಗಿದ್ದು,ಆಸ್ಪತ್ರೆಗೆ ತೆರಳಿದ್ದಾಳೆ. ಹೇರ್ ಸ್ಟ್ರೈಟನಿಂಗ್ನಲ್ಲಿ ಬಳಸುವ ರಾಸಾಯನಿಕವು ಚರ್ಮದ ಮೂಲಕ ಮೂತ್ರಪಿಂಡವನ್ನು ಪ್ರವೇಶಿಸಿ ಮೂತ್ರಪಿಂಡ ವೈಫಲ್ಯಕ್ಕೆ ಕಾರಣವಾಗಿದೆ ಎಂದು ವೈದ್ಯರು ಹೇಳಿದ್ದಾರೆ.
ಹಲವು ಬಾರಿ ಹೇರ್ ಸ್ಟ್ರೈಟನಿಂಗ್ ಮಾಡಿದ ಬಳಿಕ 26 ವರ್ಷದ ಯುವತಿಯ ಕಿಡ್ನಿ ಹಾನಿಯಾಗಿರುವ ಘಟನೆ ದಿ ನ್ಯೂ ಇಂಗ್ಲೆಂಡ್ ಜರ್ನಲ್ ಆಫ್ ಮೆಡಿಸಿನ್ ನಲ್ಲಿ ಪ್ರಕಟವಾಗಿದೆ. ವೈದ್ಯಕೀಯ ತಜ್ಞರ ಪ್ರಕಾರ, ಯುವತಿ ಜೂನ್ 2020 ರಿಂದ ಏಪ್ರಿಲ್ 2021 ರವರೆಗೆ ಹಲವಾರು ಬಾರಿ ಹೇರ್ ಸ್ಟ್ರೈಟ್ನಿಂಗ್ ಮಾಡಿಸಿಕೊಂಡಿದ್ದಾಳೆ. ಪ್ರತೀ ಬಾರಿ ಹೇರ್ ಸ್ಟ್ರೈಟನಿಂಗ್ ಮಾಡಿಸಿದ ಬಳಿಕ ವಾಂತಿ ಮತ್ತು ಅತಿಸಾರದಂತಹ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದಳು. ಜೊತೆಗೆ ಜ್ವರ, ಬೆನ್ನು ನೋವು ಮತ್ತು ನೆತ್ತಿ ಸುಡುತ್ತಿರುವಂತೆ ಭಾಸವಾಗುತ್ತಿತ್ತು ಎಂದು ಹೇಳಿಕೊಂಡಿದ್ದಳು.
ಇತ್ತೀಚಿಗಷ್ಟೇ ಸ್ಟ್ರೈಟನಿಂಗ್ ಬಳಿಕ ಆರೋಗ್ಯ ಸಮಸ್ಯೆ ಹೆಚ್ಚಾಗಿದ್ದು, ನೆತ್ತಿಯ ಮೇಲೆ ಹುಣ್ಣು ಕಾಣಿಸಿಕೊಂಡಿರುವ ಕಾರಣ ಆಸ್ಪತ್ರೆಗೆ ತೆರಳಿದ್ದಾಳೆ. ವೈದ್ಯರು ಆಕೆಗೆ ಹಲವಾರು ಪರೀಕ್ಷೆಗಳನ್ನು ಮಾಡಿಸಿದ ನಂತರ ವರದಿಗಳಲ್ಲಿ, ಆಕೆಯ ರಕ್ತದಲ್ಲಿ ಕ್ರಿಯೇಟಿನೈನ್ ಅಧಿಕವಾಗಿರುವುದನ್ನು ವೈದ್ಯರು ಗಮನಿಸಿದ್ದಾರೆ. ಇದಲ್ಲದೇ ಕಿಡ್ನಿ ವೈಫಲ್ಯವೂ ಆಗಿದೆ ಎಂದು ವೈದ್ಯರು ತಿಳಿಸಿದ್ದಾರೆ. ಮೂತ್ರದಲ್ಲಿ ರಕ್ತ ಕಂಡು ಬಂದಿದ್ದರಿಂದ ಸಿಟಿ ಸ್ಕ್ಯಾನ್ ಮಾಡಿಸಲಾಗಿತ್ತು.
ಇದನ್ನೂ ಓದಿ: ಮೊದಲ ಮುಟ್ಟಿನ ನೋವಿಗೆ ಹೆದರಿ 14ವರ್ಷದ ಬಾಲಕಿ ಆತ್ಮಹತ್ಯೆ
ವೈದ್ಯರು ಮಹಿಳೆಯನ್ನು ವಿಚಾರಿಸಿದಾಗ ಆಕೆಯ ಹೇರ್ ಸ್ಟ್ರೈಟನಿಂಗ್ ಕ್ರೀಂನಲ್ಲಿರುವ ಗ್ಲೈಆಕ್ಸಿಲಿಕ್ ಆಸಿಡ್ ಎಂಬ ರಾಸಾಯನಿಕವು ಚರ್ಮದ ಕಿರಿಕಿರಿಯನ್ನುಂಟು ಮಾಡುತ್ತಿದೆ ಎಂದು ತಿಳಿದುಬಂದಿದೆ. ರಾಸಾಯನಿಕವು ಚರ್ಮದ ಮೂಲಕ ಮೂತ್ರಪಿಂಡವನ್ನು ಪ್ರವೇಶಿಸಿ ಮೂತ್ರಪಿಂಡ ವೈಫಲ್ಯಕ್ಕೆ ಕಾರಣವಾಗಿದೆ ಎಂದು ವೈದ್ಯರು ಹೇಳಿದ್ದಾರೆ. ಆಕೆಯ ಮೂತ್ರಪಿಂಡದ ಕೊಳವೆಗಳಲ್ಲಿ ಕ್ಯಾಲ್ಸಿಯಂ ಆಕ್ಸಲೇಟ್ ಹರಳುಗಳ ಶೇಖರಣೆಯಿಂದ ಉಂಟಾಗುವ ಅಪರೂಪದ ಅಸ್ವಸ್ಥತೆ ಎಂದು ವೈದ್ಯರು ಬಹಿರಂಗಪಡಿಸಿದರು.
ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ