ಪತ್ನಿಯನ್ನು ‘ಸೆಕೆಂಡ್ ಹ್ಯಾಂಡ್’ ಎಂದು ಕರೆದ ಪತಿ; 3 ಕೋಟಿ ರೂ.ದಂಡ ವಿಧಿಸಿದ ಕೋರ್ಟ್
ಪತಿ ತನ್ನನ್ನು ದೈಹಿಕವಾಗಿ ಬಳಸಿ, ಬಳಿಕ ಸೆಕೆಂಡ್ ಹ್ಯಾಂಡ್ ಎಂದು ಕರೆದಿದ್ದಾನೆ ಎಂದು ಆರೋಪಿಸಿ ಮಹಿಳೆಯೊಬ್ಬಳು ನೀಡಿದ ದೂರಿನ ಆಧಾರ ಮೇಲೆ ಬಾಂಬೆ ಹೈಕೋರ್ಟ್ ಇತ್ತೀಚೆಗೆ ವಿಚಾರಣಾ ನ್ಯಾಯಾಲಯವು ಮಹತ್ವದ ತೀರ್ಪು ನೀಡಿದೆ.
ಮುಂಬೈನಲ್ಲಿ ಬೆಳಕಿಗೆ ಬಂದಿರುವ ಅತ್ಯಂತ ವಿಲಕ್ಷಣ ಘಟನೆಯೊಂದರಲ್ಲಿ, ಕೌಟುಂಬಿಕ ಜಗಳದಿಂದ ಪತ್ನಿ ನ್ಯಾಯಾಲಯದ ಮೆಟ್ಟಿಲೇರಿದ್ದಾಳೆ ಮತ್ತು ಕೌಟುಂಬಿಕ ದೌರ್ಜನ್ಯ ಕಾನೂನಿನಡಿಯಲ್ಲಿ ಪತಿಯಿಂದ ಪರಿಹಾರವನ್ನು ಕೇಳಿದ್ದಾಳೆ. ತನ್ನ ಹೆಸರನ್ನು ಬಹಿರಂಗಪಡಿಸಲು ನಿರಾಕರಿಸಿದ ಪತ್ನಿ ಪ್ರಕಾರ, ತನ್ನ ಮೊದಲನೇ ಮದುವೆ ಮುರಿದ ಬಿದ್ದು,ಎರಡನೇ ಮದುವೆಯಾದ ಕಾರಣ ತನ್ನ ಪತಿ ತನ್ನನ್ನು ದೈಹಿಕವಾಗಿ ಬಳಸಿ ‘ಸೆಕೆಂಡ್ ಹ್ಯಾಂಡ್’ ಎಂದು ಕರೆದಿದ್ದಾನೆ. ಇದೀಗಾ ಮಹಿಳೆ ನೀಡಿದ ದೂರಿನ ಆಧಾರ ಮೇಲೆ ಬಾಂಬೆ ಹೈಕೋರ್ಟ್ ವಿಚಾರಣಾ ನ್ಯಾಯಾಲಯವು ಮಹತ್ವದ ತೀರ್ಪು ನೀಡಿದೆ.
ಪತಿ ತನ್ನ ಮೇಲೆ ದೈಹಿಕವಾಗಿ ಹಲ್ಲೆ ನಡೆಸಿದ್ದಾನೆ ಎಂದು ಆಕೆ ಆರೋಪಿಸಿದ್ದಾಳೆ. ಸಂತ್ರಸ್ತೆ ಮಾಡಿದ ಆರೋಪಗಳನ್ನು ತಾಯಿ ಮತ್ತು ಚಿಕ್ಕಪ್ಪ ಸಮರ್ಥಿಸಿಕೊಂಡಿದ್ದಾರೆ. ಇದೀಗ ಆರೋಪಿ ಪತಿಗೆ 3 ಕೋಟಿ ರೂಪಾಯಿ ಪರಿಹಾರ ಮತ್ತು ತಿಂಗಳಿಗೆ 1.5 ಲಕ್ಷ ರೂಪಾಯಿ ಮಾಸಿಕ ಜೀವನಾಂಶ ನೀಡುವಂತೆ ಹೈಕೋರ್ಟ್ ಆದೇಶಿಸಿದೆ.
ಇದನ್ನೂ ಓದಿ: ಮೊದಲ ಮುಟ್ಟಿನ ನೋವಿಗೆ ಹೆದರಿ 14ವರ್ಷದ ಬಾಲಕಿ ಆತ್ಮಹತ್ಯೆ
ಕಳೆದ ವರ್ಷ ಜನವರಿಯಲ್ಲಿ ವಿಚಾರಣಾ ನ್ಯಾಯಾಲಯವು ಮಹಿಳೆಯು ಪತಿಯಿಂದ ಕೌಟುಂಬಿಕ ದೌರ್ಜನ್ಯಕ್ಕೆ ಒಳಗಾಗಿದ್ದಾಳೆ ಮತ್ತು ಆಕೆಗೆ ₹ 3 ಕೋಟಿ ಪರಿಹಾರ ನೀಡುವಂತೆ ಸೂಚಿಸಿತ್ತು.
ಪಿಟಿಐ ಏಜೆನ್ಸಿ ವರದಿಯ ಪ್ರಕಾರ, ಈ ದಂಪತಿಗೆ ಜನವರಿ 1994 ರಲ್ಲಿ ಮುಂಬೈನಲ್ಲಿ ವಿವಾಹವಾಗಿತ್ತು. ನಂತರ ಪತ್ನಿ, 2017 ರಲ್ಲಿ, ಮ್ಯಾಜಿಸ್ಟ್ರೇಟ್ ನ್ಯಾಯಾಲಯದಲ್ಲಿ ಕೌಟುಂಬಿಕ ದೌರ್ಜನ್ಯ ಕಾಯಿದೆ (ಡಿವಿಎ) ನಿಬಂಧನೆಗಳ ಅಡಿಯಲ್ಲಿ ತನ್ನ ಪತಿ ವಿರುದ್ಧ ಪ್ರಕರಣವನ್ನು ದಾಖಲಿಸಿದರು.
ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ