ನೋಡಲು ಭಿಕ್ಷುಕಿಯಂತೆ ಕಾಣುವ ಈ ಮಹಿಳೆಯನ್ನು ದೇವರಂತೆ ಕಾಣುತ್ತಾರೆ!
ವೈರಲ್ ಆದ ವಿಡಿಯೋ ಒಂದರಲ್ಲಿ ಈಕೆ ಅರ್ಧ ಕುಡಿದು ಬಿಸಾಕಿದ ಕಾಫಿಯನ್ನು ಜನರು ದೇವರ ತೀರ್ಥದಂತೆ ಕುಡಿಯುತ್ತಿರುವುದನ್ನು ಕಾಣಬಹುದು. ಆದರೆ ಈ ಮಹಿಳೆಯನ್ನು ಭಕ್ತಿಯಿಂದ ಕಾಣಲು ಕಾರಣವೇನು?
ಸದಾ ಕೊಳಕು ಬಟ್ಟೆಯನ್ನು ಧರಿಸಿ ಬೀದಿಯಲ್ಲಿ ಓಡಾಡುವ ಈ ಮಹಿಳೆಯ ವಿಡಿಯೋ ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗುತ್ತಿದೆ. ವೈರಲ್ ಆದ ವಿಡಿಯೋ ಒಂದರಲ್ಲಿ ಈಕೆ ಅರ್ಧ ಕುಡಿದು ಬಿಸಾಕಿದ ಕಾಫಿಯನ್ನು ಜನರು ದೇವರ ತೀರ್ಥದಂತೆ ಕುಡಿಯುತ್ತಿರುವುದನ್ನು ಕಾಣಬಹುದು. ಆದರೆ ಈ ಮಹಿಳೆಯನ್ನು ಭಕ್ತಿಯಿಂದ ಕಾಣಲು ಕಾರಣವೇನು? ಈ ಮಹಿಳೆ ಇರುವುದೆಲ್ಲಿ? ಎಂಬೆಲ್ಲಾ ಪ್ರಶ್ನೆಗಳಿಗೆ ಉತ್ತರ ಇಲ್ಲಿ ತಿಳಿದುಕೊಳ್ಳಿ.
ತಮಿಳುನಾಡಿನ ತಿರುವಣ್ಣಾಮಲೈನಲ್ಲಿ ಈ ಮಹಿಳೆನ್ನು ಟೋಪಿ ಅಮ್ಮ ಎಂದು ಕರೆಯಲಾಗುತ್ತದೆ. ಇದಲ್ಲದೇ ಈಕೆಯನ್ನು ಸಿದ್ಧಿ ಮಾತೆ ಎಂದು ಕೂಡ ಕರೆಯುತ್ತಾರೆ. ಈಕೆ ನಡೆದ ಹಾದಿ ಹಾಗೂ ಈಕೆಯನ್ನು ಮುಟ್ಟಿದರೆ ಪಾಪವೆಲ್ಲವೂ ನಿವಾರಣೆಯಾಗುತ್ತದೆ ಎಂಬ ನಂಬಲಾಗಿದೆ. ಇದಕ್ಕೊಂದು ಉತ್ತಮ ನಿದರ್ಶನವೆಂದರೆ ಮಣಿಮಾರನ್ ಎಂಬ ವ್ಯಕ್ತಿ.
ವೈರಲ್ ವಿಡಿಯೋ ಇಲ್ಲಿದೆ ನೋಡಿ:
View this post on Instagram
ಇದನ್ನೂ ಓದಿ: ಈ ದೇವಾಲಯದಲ್ಲಿ 1 ನಿಂಬೆ ಹಣ್ಣನ್ನು ಹರಾಜಿನ ಮೂಲಕ ಲಕ್ಷ ಲಕ್ಷ ಕೊಟ್ಟು ಖರೀದಿಸುತ್ತಾರೆ; ಯಾಕಿಷ್ಟು ದುಬಾರಿ?
ಹಲವು ವರ್ಷಗಳಿಂದ ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದ ಮಣಿ ಮಾರನ್ ಎಂಬ ವ್ಯಕ್ತಿಗೆ ಟೋಪಿ ಅಮ್ಮನ ಆಶೀರ್ವಾದದಿಂದ ಕಿಡ್ನಿ ಸಮಸ್ಯೆ ನಿವಾರಣೆಯಾಗಿದೆ ಎಂದು ನಂಬಲಾಗಿದೆ. ಆದ್ದರಿಂದಲೇ ಕಳೆದ 17 ವರ್ಷಗಳಿಂದ ಮಣಿಮಾರನ್ ಈ ಟೋಪಿ ಅಮ್ಮನ ಸೇವೆ ಮಾಡುತ್ತಾ ಬಂದಿದ್ದಾರೆ.
ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 5:29 pm, Fri, 29 March 24