AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video:  ನೀರು ಕುಡಿಯುತ್ತಿದ್ದ ಆನೆಯ ಮೇಲೆ ಏಕಾಏಕಿ ದಾಳಿ ಮಾಡಿದ ಮೊಸಳೆ, ಭಯಾನಕ ದಾಳಿಯ ವಿಡಿಯೋ ಇಲ್ಲಿದೆ 

ತನ್ನ ಗುಂಪಿನೊಂದಿಗೆ ಬಂದು ನೀರು ಕುಡಿಯುತ್ತಿದ್ದ ದೈತ್ಯ ಆನೆಯ ಮೇಲೆ  ಬೇಟೆಗಾಗಿ ಹೊಂಚು ಹಾಕಿ ಕುಳಿತಿದ್ದ ಮೊಸಳೆಯೊಂದು ದಾಳಿ ಮಾಡಿದೆ. ಕ್ಷಣಾರ್ಧದಲ್ಲಿ ತನ್ನ ಸಮಯ ಪ್ರಜ್ಞೆಯಿಂದ ಆನೆಯು ಮೊಸಳೆಯ ದಾಳಿಯಿಂದ ತಪ್ಪಿಸಿಕೊಂಡಿದೆ. ಈ ಭೀಕರ ದೃಶ್ಯಾವಳಿ ಇದೀಗ ಸಖತ್ ವೈರಲ್ ಆಗುತ್ತಿದೆ. 

Viral Video:  ನೀರು ಕುಡಿಯುತ್ತಿದ್ದ ಆನೆಯ ಮೇಲೆ ಏಕಾಏಕಿ ದಾಳಿ ಮಾಡಿದ ಮೊಸಳೆ, ಭಯಾನಕ ದಾಳಿಯ ವಿಡಿಯೋ ಇಲ್ಲಿದೆ 
ಮಾಲಾಶ್ರೀ ಅಂಚನ್​
| Updated By: ಅಕ್ಷಯ್​ ಪಲ್ಲಮಜಲು​​|

Updated on: May 15, 2024 | 5:54 PM

Share

ಕಾಡಿನಲ್ಲಿರುವ ಸಿಂಹ, ಚಿರತೆ, ಹುಲಿ ಎಷ್ಟು ಅಪಾಯಕಾರಿ ಜೀವಿಗಳೋ, ಅದೇ ರೀತಿ ನೀರಿನಲ್ಲಿರುವ ಮೊಸಳೆಗಳು ಕೂಡಾ ತುಂಬಾನೇ ಅಪಾಯಕಾರಿ. ಹೇಳಿ ಕೇಳಿ ಮೊಸಳೆಗಳು  ಬೇಟೆಯಾಡವುದರಲ್ಲಿ ಪಳಗಿರುವ ಪ್ರಾಣಿ. ನದಿ ನೀರಿನ ಬಳಿ ಬೇರಾವ ಪ್ರಾಣಿ ಬಂದರೂ ಮೊಸಳೆ  ಕ್ಷಣಾರ್ಧದಲ್ಲಿ  ಆ ಪ್ರಾಣಿಗಳ ಮೇಲೆರಗಿ ಅವುಗಳನ್ನು ಕೊಂದೇ ಬಿಡುತ್ತವೆ. . ಇಂತಹ ಭಯಾನಕ ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ಆಗಾಗ್ಗೆ ಕಾಣಸಿಗುತ್ತಿರುತ್ತವೆ. ಇದೀಗ ಅಂತಹದ್ದೇ ವಿಡಿಯೋವೊಂದು ವೈರಲ್ ಆಗಿದ್ದು, ತನ್ನ ಗುಂಪಿನೊಂದಿಗೆ ನೀರು ಕುಡಿಯಲು ಬಂದಂತಹ ದೈತ್ಯ ಆನೆಯ ಮೇಲೆ ಮೊಸಳೆಯೊಂದು ದಾಳಿ ಮಾಡಿ. ಆ ತಕ್ಷಣ ತನ್ನ ಬುದ್ಧಿವಂತಿಕೆಯಿಂದ ಆನೆಯು ಭೀಕರ ದಾಳಿಯಿಂದ ತಪ್ಪಿಸಿಕೊಂಡಿದೆ.

ಈ ಕುರಿತ ವಿಡಿಯೋವನ್ನು Latest Sightings ಎಂಬ ಹೆಸರಿನ ಯೂಟ್ಯೂಬ್ ಚಾನೆಲ್ ಒಂದರಲ್ಲಿ ಹಂಚಿಕೊಳ್ಳಲಾಗಿದೆ. ವೈರಲ್ ವಿಡಿಯೋದಲ್ಲಿ ಆನೆಗಳ ಹಿಂಡೊಂದು ನದಿ ಪಕ್ಕ ಬಂದು ಪ್ರಶಾಂತವಾಗಿ ನೀರು ಕುಡಿಯುತ್ತಿರುವಂತಹ ದೃಶ್ಯವನ್ನು ಕಾಣಬಹುದು.  ಹೀಗೆ ಆನೆಗಳು ನೀರು ಕುಡಿಯುತ್ತಿದ್ದ ವೇಳೆ ಬೇಟೆಗಾಗಿ ಹೊಂಚುಹಾಕಿ ಕುಳಿತಿದ್ದ ಮೊಸಳೆಯೊಂದು ದೈತ್ಯ ಆನೆಯ ಸೊಂಡಿಲಿನ ಮೇಲೆ ಬಂದೆರಗುತ್ತದೆ. ಆ ತಕ್ಷಣ ಆನೆ ತನ್ನ ಸಮಯ ಪ್ರಜ್ಞೆಯಿಂದ ಮೊಸಳೆಯ ದಾಳಿಯಿಂದ ತಪ್ಪಿಸಿಕೊಂಡು ಕಾಲ್ಕಿತ್ತು ಓಡಿ ಹೋಗುತ್ತದೆ. ನಂತರ ರಾತ್ರಿಯ ವೇಳೆಯೂ ಆನೆಗಳ ಮೇಲೆ ದಾಳಿ ನಡೆಸಲು ಮೊಸಳೆ ಹೊಂಚು ಹಾಕಿತ್ತು, ಆದರೆ ದುರಾದೃಷ್ಟವಶಾತ್ ಮೊಸಳೆಗೆ ತನ್ನ ಬೇಟೆಯೇ ಸಿಗಲಿಲ್ಲ.

ಇದನ್ನೂ ಓದಿ: IPL ಪಂದ್ಯದ ವೇಳೆ ಬಾಲ್ ಎಗರಿಸಿ ಪ್ಯಾಂಟ್​​​​​ ಒಳಗಿಟ್ಟು ಪೊಲೀಸರ ಕೈಗೆ ಸಿಕ್ಕಿ ಬಿದ್ದ KKR ಅಭಿಮಾನಿ

ಮೇ 14 ರಂದು ಹಂಚಿಕೊಳ್ಳಲಾದ  ವಿಡಿಯೋ 6 ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದ್ದು, ಮೊಸಳೆಯ ದಾಳಿಯ ಭೀಕರ ದೃಶ್ಯವನ್ನು ಕಂಡು ನೆಟ್ಟಿಗರು ಬೆಚ್ಚಿ ಬಿದ್ದಿದ್ದಾರೆ.

ಮತ್ತಷ್ಟು ವೈರಲ್​ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ

‘ಮಾರ್ಕ್’ ಸಿನಿಮಾದಲ್ಲಿ ಹೀರೋಯಿನ್ ಇಲ್ಲ ಯಾಕೆ? ಉತ್ತರಿಸಿದ ಕಿಚ್ಚ ಸುದೀಪ್
‘ಮಾರ್ಕ್’ ಸಿನಿಮಾದಲ್ಲಿ ಹೀರೋಯಿನ್ ಇಲ್ಲ ಯಾಕೆ? ಉತ್ತರಿಸಿದ ಕಿಚ್ಚ ಸುದೀಪ್
ಚುನಾವಣೆಯಲ್ಲಿ ಸೋತಿದ್ದಕ್ಕೆ ಮೀಸೆ ಬೋಳಿಸಿಕೊಂಡ ಎಲ್‌ಡಿಎಫ್ ಕಾರ್ಯಕರ್ತ
ಚುನಾವಣೆಯಲ್ಲಿ ಸೋತಿದ್ದಕ್ಕೆ ಮೀಸೆ ಬೋಳಿಸಿಕೊಂಡ ಎಲ್‌ಡಿಎಫ್ ಕಾರ್ಯಕರ್ತ
ಪಾಕ್ ವಿರುದ್ಧ ಫ್ಲಾಪ್: ಸುಲಭವಾಗಿ ಔಟಾದ ವೈಭವ್ ಸೂರ್ಯವಂಶಿ
ಪಾಕ್ ವಿರುದ್ಧ ಫ್ಲಾಪ್: ಸುಲಭವಾಗಿ ಔಟಾದ ವೈಭವ್ ಸೂರ್ಯವಂಶಿ
ಶಾಲೆಯ ಬಳಿ ಸೆಕ್ಯುರಿಟಿಯ ಭುಜಕ್ಕೆ ಕಚ್ಚಿದ ಬೀದಿ ನಾಯಿ
ಶಾಲೆಯ ಬಳಿ ಸೆಕ್ಯುರಿಟಿಯ ಭುಜಕ್ಕೆ ಕಚ್ಚಿದ ಬೀದಿ ನಾಯಿ
ರೈಲಿನಲ್ಲಿ ಟಾಯ್ಲೆಟ್​ನಿಂದ ಹೊರಬರಲಾರದೆ ಪೊಲೀಸರಿಗೆ ಕರೆ ಮಾಡಿದ ಮಹಿಳೆ
ರೈಲಿನಲ್ಲಿ ಟಾಯ್ಲೆಟ್​ನಿಂದ ಹೊರಬರಲಾರದೆ ಪೊಲೀಸರಿಗೆ ಕರೆ ಮಾಡಿದ ಮಹಿಳೆ
ನಕಲಿ ಪೊಲೀಸರಿಗೆ ಅಸಲಿ ಖಾಕಿ ಶಾಕ್​​: ದರೋಡೆಗಿಳಿದಿದ್ದ ಗ್ಯಾಂಗ್​​ ಅರೆಸ್ಟ್
ನಕಲಿ ಪೊಲೀಸರಿಗೆ ಅಸಲಿ ಖಾಕಿ ಶಾಕ್​​: ದರೋಡೆಗಿಳಿದಿದ್ದ ಗ್ಯಾಂಗ್​​ ಅರೆಸ್ಟ್
ರಜತ್ ಪಾಪದ ಕೊಡ ತುಂಬಿದೆ, ಮನೆಯಿಂದ ಹೊರಗೆ ಕಳಿಸ್ತೀನಿ: ಗಿಲ್ಲಿ ಚಾಲೆಂಜ್
ರಜತ್ ಪಾಪದ ಕೊಡ ತುಂಬಿದೆ, ಮನೆಯಿಂದ ಹೊರಗೆ ಕಳಿಸ್ತೀನಿ: ಗಿಲ್ಲಿ ಚಾಲೆಂಜ್
Video: ತರಗತಿಯಲ್ಲಿ ಕುಳಿತಿದ್ದಾಗಲೇ ಹೃದಯಾಘಾತದಿಂದ ವಿದ್ಯಾರ್ಥಿನಿ ಸಾವು
Video: ತರಗತಿಯಲ್ಲಿ ಕುಳಿತಿದ್ದಾಗಲೇ ಹೃದಯಾಘಾತದಿಂದ ವಿದ್ಯಾರ್ಥಿನಿ ಸಾವು
ರಸ್ತೆಯಲ್ಲಿರೋದು ಒಂದೇ ಒಂದು ಕಾರು, ಟ್ರಾಫಿಕ್ ಇಲ್ಲ, ಸ್ಟಿಲ್ ವೈಟಿಂಗ್
ರಸ್ತೆಯಲ್ಲಿರೋದು ಒಂದೇ ಒಂದು ಕಾರು, ಟ್ರಾಫಿಕ್ ಇಲ್ಲ, ಸ್ಟಿಲ್ ವೈಟಿಂಗ್
ಅಂತಿಮ ಪರೀಕ್ಷೆ ವೇಳೆ ಬ್ರೌನ್ ವಿವಿಯಲ್ಲಿ ಗುಂಡಿನ ದಾಳಿ, ಇಬ್ಬರು ಸಾವು
ಅಂತಿಮ ಪರೀಕ್ಷೆ ವೇಳೆ ಬ್ರೌನ್ ವಿವಿಯಲ್ಲಿ ಗುಂಡಿನ ದಾಳಿ, ಇಬ್ಬರು ಸಾವು