AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: IPL ಪಂದ್ಯದ ವೇಳೆ ಬಾಲ್ ಎಗರಿಸಿ ಪ್ಯಾಂಟ್​​​​​ ಒಳಗಿಟ್ಟು ಪೊಲೀಸರ ಕೈಗೆ ಸಿಕ್ಕಿ ಬಿದ್ದ KKR ಅಭಿಮಾನಿ

ಇಂಡಿಯನ್ ಪ್ರೀಮಿಯಮ್ ಲೀಗ್ (IPL) 2024ನೇ ಆವೃತ್ತಿಯ ಪಂದ್ಯದ ವೇಳೆ ಕೋಲ್ಕತ್ತಾ ನೈಟ್ ರೈಡರ್ಸ್ (KKR) ಅಭಿಮಾನಿಯೊಬ್ಬ ಕ್ರಿಕೆಟ್ ಬಾಲ್ ಅನ್ನು ಕದಿಯಲು ಯತ್ನಿಸಿ, ಪೊಲೀಸರ ಕೈಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾನೆ. ಈ ಸ್ವಾರಸ್ಯಕರ ಘಟನೆಯ ವಿಡಿಯೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. 

Viral Video: IPL ಪಂದ್ಯದ ವೇಳೆ ಬಾಲ್ ಎಗರಿಸಿ ಪ್ಯಾಂಟ್​​​​​ ಒಳಗಿಟ್ಟು ಪೊಲೀಸರ ಕೈಗೆ ಸಿಕ್ಕಿ ಬಿದ್ದ KKR ಅಭಿಮಾನಿ
ಮಾಲಾಶ್ರೀ ಅಂಚನ್​
| Edited By: |

Updated on: May 15, 2024 | 1:36 PM

Share

ಅನೇಕರು ತಮ್ಮ ನೆಚ್ಚಿನ ಕ್ರಿಕೆಟ್ ತಂಡದ  ಆಟವನ್ನು ಕಣ್ಣಾರೆ ನೋಡಲು ಅದೆಷ್ಟೇ ಖರ್ಚಾದರೂ ಪರವಾಗಿಲ್ಲ ಎಂದು ಬಹಳ ಉತ್ಸಾಹದಿಂದ ಸ್ಟೇಡಿಯಂ ಗೆ  ಬರುತ್ತಾರೆ. ಹೀಗೆ ಬಂದವರು ತಮ್ಮ ನೆಚ್ಚಿನ ಆಟಗಾರನೊಂದಿಗೆ ಮಾತನಾಡಬೇಕು, ಅವರನ್ನು ಭೇಟಿಯಾಗಬೇಕೆಂದು  ಮೈದಾನದೊಳಗೆ ನುಗ್ಗುವಂತಹದ್ದೂ ಅಥವಾ ಇನ್ನಾವುದಾದರೂ ಕಿತಾಪತಿಗಳನ್ನು  ಮಾಡುತ್ತಿರುತ್ತಾರೆ. ಇಂತಹ ಹಲವಾರು ಪ್ರಸಂಗಗಳು ಈ ಹಿಂದೆ ನಡೆದಿವೆ. ಕೆಲ ದಿನಗಳ ಹಿಂದೆಯೂ  ಧೋನಿ ಅಭಿಮಾನಿಯೊಬ್ಬ ಕ್ರಿಕೆಟ್ ಪಂದ್ಯಾವಳಿಯ ವೇಳೆ ಮೈದಾನದೊಳಗೆ ನುಗ್ಗಿದ್ದ ಘಟನೆಯೊಂದು ನಡೆದಿದ್ದು. ಇದೀಗ ಮತ್ತೊಂದು ಸ್ವಾರಸ್ಯಕರ ಘಟನೆಯೊಂದು ನಡೆದಿದ್ದು,  ಕ್ರಿಕೆಟ್‌ನ ಹುಚ್ಚು ಅಬಿಮಾನಿಯೊಬ್ಬ  ಐಪಿಎಲ್ ಪಂದ್ಯಾವಳಿಯ ವೇಳೆ ಕ್ರಿಕೆಟ್ ಚೆಂಡನ್ನೇ ಎಗರಿಸಲು ಯತ್ನಿಸಿದ್ದಾನೆ. ಈ ಕುರಿತ ವಿಡಿಯೋವೊಂದು ಇದೀಗ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.

ವಾರಂತ್ಯದಲ್ಲಿ ಕೋಲ್ಕತ್ತಾದ ಈಡನ್ ಗಾರ್ಡನ್ಸ್ ಮೈದಾನದಲ್ಲಿ ನಡೆದ ಐಪಿಎಲ್ ಕ್ರಿಕೆಟ್ ಪಂದ್ಯಾವಳಿಯ ವೇಳೆ ಈ  ಘಟನೆ ನಡೆದಿದ್ದು, ಕೆಕೆಆರ್‌ ತಂಡದ ಅಪ್ಪಟ ಅಭಿಮಾನಿಯೊಬ್ಬ ಕ್ರಿಕೆಟ್‌ ಬಾಲ್‌ ಅನ್ನು ಕದಿಯಲು ಯತ್ನಿಸಿ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ. ಈ ಸ್ವಾರಸ್ಯಕರ ವಿಡಿಯೋವನ್ನು ಮುಫದಲ್‌ ವೋಹ್ರಾ (@mufaddal_vohra) ಎಂಬವರು ತಮ್ಮ ಎಕ್ಸ್‌  ಖಾತೆಯಲ್ಲಿ ಹಂಚಿಕೊಂಡಿದ್ದು, “ಅಭಿಮಾನಿಯೊಬ್ಬ ಪಂದ್ಯದ ವೇಳೆ ಚೆಂಡನ್ನು ಕದಿಯಲು ಯತ್ನಿಸಿ, ಸಿಕ್ಕಿಬಿದ್ದಿದ್ದಾನೆ” ಎಂಬ ಶೀರ್ಷಿಕೆಯನ್ನು ಬರೆದುಕೊಂಡಿದ್ದಾರೆ.

ವೈರಲ್‌ ವಿಡಿಯೋದಲ್ಲಿ ಕೆಕೆಆರ್‌ ಅಭಿಮಾನಿಯೊಬ್ಬ ಕ್ರಿಕೆಟ್‌ ಬಾಲ್‌ ಅನ್ನು ತನ್ನ ಪ್ಯಾಂಟ್‌ ಒಳಗೆ ಬಚ್ಚಿಟ್ಟು ಅದನ್ನು ಹೇಗಾದ್ರೂ ಮಾಡಿ ಮನೆಗೆ ತಗೊಂಡು ಹೋಗ್ಬೇಕಪ್ಪಾ ಎಂದು ಪ್ಲಾನ್‌ ಮಾಡುತ್ತಾನೆ. ಆದ್ರೆ ಈ ವಿಷಯ ಪೊಲೀಸರಿಗೆ ಗೊತ್ತಾಗಿ ಆತನನ್ನು ಗದರಿಸಿ ಚೆಂಡನ್ನು ಕಸಿದುಕೊಂಡಿದ್ದಾರೆ.  ಹೀಗೆ ಚೆಂಡನ್ನು ಕಸಿದುಕೊಂಡ ಬಳಿಕ ಪೊಲೀಸಪ್ಪ ಆ ಬಾಲಕನನ್ನು ಹೊರ ದಬ್ಬುವಂತಹ ದೃಶ್ಯವನ್ನು ಕಾಣಬಹುದು.

ಇದನ್ನೂ ಓದಿ: ಕುದುರೆಯಲ್ಲ ಬಿಳಿ ಸ್ಕೂಟಿ ಏರಿ ಮದುವೆ ಮನೆಗೆ ಬಂದ ಮದುಮಗ; ದಿಬ್ಬಣ ನೋಡಿ ಖುಷಿಪಟ್ಟ ಜನ

ಮೇ 14 ರಂದು ಹಂಚಿಕೊಳ್ಳಲಾದ ಈ ವಿಡಿಯೋ 1.2 ಮಿಲಿಯನ್‌ ವೀಕ್ಷಣೆಗಳನ್ನು ಪಡೆದುಕೊಂಡಿದ್ದು, ಆ ಪೊಲೀಸ್‌ ಬಾಲಕನೊಂದಿಗೆ ಅಷ್ಟು ಕಟುವಾಗಿ ವರ್ತಿಸಬಾರದಿತ್ತು ಎಂದು ನೆಟ್ಟಿಗರು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

ಮತ್ತಷ್ಟು ವೈರಲ್​ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Follow Us
H1N1 ಫ್ಲೂ ಆತಂಕ: ಪೋಷಕರು, ಶಾಲೆಗಳಿಗೆ ಆರೋಗ್ಯ ಸಚಿವರಿಂದ ಮಹತ್ವದ ಮಾಹಿತಿ
H1N1 ಫ್ಲೂ ಆತಂಕ: ಪೋಷಕರು, ಶಾಲೆಗಳಿಗೆ ಆರೋಗ್ಯ ಸಚಿವರಿಂದ ಮಹತ್ವದ ಮಾಹಿತಿ
ಕರ್ನಾಟಕದ ಮುಖ್ಯ ಚುನಾವಣಾಧಿಕಾರಿ ವಿ. ಅನ್ಬುಕುಮಾರ್ ಸುದ್ದಿಗೋಷ್ಠಿ
ಕರ್ನಾಟಕದ ಮುಖ್ಯ ಚುನಾವಣಾಧಿಕಾರಿ ವಿ. ಅನ್ಬುಕುಮಾರ್ ಸುದ್ದಿಗೋಷ್ಠಿ
ನೀರು ಸಂಸ್ಕರಣಾ ಘಟಕದಲ್ಲಿ ವಿಷಾನಿಲ ಸೋರಿಕೆ
ನೀರು ಸಂಸ್ಕರಣಾ ಘಟಕದಲ್ಲಿ ವಿಷಾನಿಲ ಸೋರಿಕೆ
ತುಂಗಭದ್ರೆಗೆ ಕಂಟಕ ತಂದ ‘ಅಂತರಗಂಗೆ’! ಕಲುಷಿತಗೊಂಡ ಗದಗ ಜಿಲ್ಲೆಯ ಜೀವನಾಡಿ
ತುಂಗಭದ್ರೆಗೆ ಕಂಟಕ ತಂದ ‘ಅಂತರಗಂಗೆ’! ಕಲುಷಿತಗೊಂಡ ಗದಗ ಜಿಲ್ಲೆಯ ಜೀವನಾಡಿ
ಸರ್ಕಾರಿ ಆಸ್ಪತ್ರೆಗಳಲ್ಲಿ ನಕಲಿ ಔಷಧಿ ಇಲ್ಲ: ಸಚಿವ ಯು.ಟಿ. ಖಾದರ್ ಸ್ಪಷ್ಟನೆ
ಸರ್ಕಾರಿ ಆಸ್ಪತ್ರೆಗಳಲ್ಲಿ ನಕಲಿ ಔಷಧಿ ಇಲ್ಲ: ಸಚಿವ ಯು.ಟಿ. ಖಾದರ್ ಸ್ಪಷ್ಟನೆ
ತಮಿಳುನಾಡಿಗೆ ನೀರು ಬಿಡುಗಡೆ ವಿರೋಧಿಸಿ ಮಂಡ್ಯದಲ್ಲಿ ರೈತರ ಪ್ರತಿಭಟನೆ ತೀವ್ರ
ತಮಿಳುನಾಡಿಗೆ ನೀರು ಬಿಡುಗಡೆ ವಿರೋಧಿಸಿ ಮಂಡ್ಯದಲ್ಲಿ ರೈತರ ಪ್ರತಿಭಟನೆ ತೀವ್ರ
ಆಯುರ್ವೇದಿಕ್ ಕಾಲೇಜಿಗೆ ಬೀಗ: 300ಕ್ಕೂ ಹೆಚ್ಚು ವಿದ್ಯಾರ್ಥಿಗಳು ಅತಂತ್ರ
ಆಯುರ್ವೇದಿಕ್ ಕಾಲೇಜಿಗೆ ಬೀಗ: 300ಕ್ಕೂ ಹೆಚ್ಚು ವಿದ್ಯಾರ್ಥಿಗಳು ಅತಂತ್ರ
'ಪನ್ನೀರ್ ಮಾತ್ರವಲ್ಲ, ಎಲ್ಲಾ ಕೃತಕ ಉತ್ಪನ್ನಗಳೂ ಬ್ಯಾನ್'
'ಪನ್ನೀರ್ ಮಾತ್ರವಲ್ಲ, ಎಲ್ಲಾ ಕೃತಕ ಉತ್ಪನ್ನಗಳೂ ಬ್ಯಾನ್'
ಹಾಸನ ಜಿಲ್ಲಾಧಿಕಾರಿ ವಿರುದ್ಧ ಎಚ್.ಡಿ. ರೇವಣ್ಣ ವಾಗ್ದಾಳಿ
ಹಾಸನ ಜಿಲ್ಲಾಧಿಕಾರಿ ವಿರುದ್ಧ ಎಚ್.ಡಿ. ರೇವಣ್ಣ ವಾಗ್ದಾಳಿ
ಸಚಿವ ನಾಗೇಂದ್ರ ರಾಜೀನಾಮೆಗೆ ಆಗ್ರಹಿಸಿ ವಿಧಾನಸೌಧ ಮುತ್ತಿಗೆಗೆ ಬಿಜೆಪಿ ಯತ್ನ
ಸಚಿವ ನಾಗೇಂದ್ರ ರಾಜೀನಾಮೆಗೆ ಆಗ್ರಹಿಸಿ ವಿಧಾನಸೌಧ ಮುತ್ತಿಗೆಗೆ ಬಿಜೆಪಿ ಯತ್ನ