Viral Video: ಗೆಳೆಯನೊಂದಿಗೆ ಲವ್ ಬ್ರೇಕಪ್; ಖುಷಿಯನ್ನು ಕುಟುಂಬದೊಂದಿಗೆ ಸಂಭ್ರಮಿಸಿದ ಯುವತಿ
ಈ ಬ್ರೇಕಪ್ ನೋವು ಸಾವಿನ ನೋವಿಗಿಂತ ಕಡಿಮೆಯೇನಿಲ್ಲ. ಈ ನೋವಿನಿಂದ ಹೊರಬರಲಾರದೆ ತಮ್ಮ ಜೀವನವನ್ನೇ ಹಾಳು ಮಾಡಿಕೊಂಡವರು ಹಲವರಿದ್ದಾರೆ. ಆದ್ರೆ ಇಲ್ಲೊಬ್ಬಳು ಯುವತಿ ಮಾತ್ರ ಲವ್ ಬ್ರೇಕ್ ಮಾಡಿಕೊಂಡು, ಯಾವುದಕ್ಕೂ ತಲೆ ಕೆಡಿಸಿಕೊಳ್ಳದೆ ಈ ಖುಷಿಯನ್ನು ಕುಟುಂಬ ಸದಸ್ಯರೊಂದಿಗೆ ಸಂಭ್ರಮದಿಂದ ಆಚರಿಸಿದ್ದಾಳೆ. ಈ ಕುರಿತ ವಿಡಿಯೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.

ಪ್ರೀತಿ ಅನ್ನೋದು ಪ್ರತಿಯೊಬ್ಬರ ಜೀವನದಲ್ಲಿ ಕೂಡಾ ಆಗುವಂತಹ ಒಂದು ಪವಿತ್ರ ಸಂಬಂಧ. ಆದ್ರೆ ಪ್ರೀತಿ ಮಾಡಿದವರೆಲ್ಲಾ ಒಂದಾಗುತ್ತಾರೆ ಎಂದೇನಿಲ್ಲ. ಕೆಲವೊಂದು ಕಾಣಗಳಿಂದ ಈ ಪ್ರೇಮಿಗಳು ದೂವಾಗಬೇಕಾದಂತಹ ಪರಿಸ್ಥಿತಿ ಎದುರಾಗುತ್ತದೆ. ಈ ಪ್ರೀತಿಯ ಸಂಬಂಧದಿಂದ ಬ್ರೇಕ್ ಅಪ್ ಮಾಡಿಕೊಂಡು ಹೊರಗೆ ಬರುವುದು ಸಾಕಷ್ಟು ಕಷ್ಟಕರವಾದ ವಿಚಾರ ಅಂತಾನೇ ಹೇಳ್ಬೋದು. ಈ ಬ್ರೇಕ್ ಅಪ್ ನೋವಿನಿಂದ ಹೊರ ಬರಲಾರದೆ ತಮ್ಮ ಸಂಗಾತಿಯ ಗುಂಗಿನಲ್ಲಿ ಜೀವನವನ್ನು ಹಾಳು ಮಾಡಿಕೊಳ್ಳುವವರು ಸಾಕಷ್ಟು ಜನ ಇದ್ದಾರೆ. ಆದ್ರೆ ಇಲ್ಲೊಬ್ಬ ಯುವತಿ ಮಾತ್ರ ಲವ್ ಬ್ರೇಕ್ ಅಪ್‌ಗೆಲ್ಲ ನೋ ಟೆನ್ಷನ್ ಎನ್ನುತ್ತಾ, ಬ್ರೇಕಪ್ ಖುಷಿಯನ್ನು ಕುಟುಂಬ ಸದಸ್ಯರೊಂದಿಗೆ ಸಂಭ್ರಮದಿಂದ ಆಚರಿಸಿದ್ದಾಳೆ. ಈ ವಿಡಿಯೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.
ಈ ಕುರಿತ ವಿಡಿಯೋವನ್ನು @FadeHubb ಎಂಬ ಹೆಸರಿನ ಎಕ್ಸ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದ್ದು, “ಕುಟುಂಬದೊಂದಿಗೆ ಬ್ರೇಕ್ ಅಪ್ ಸಂಭ್ರಮಾಚರಣೆ” ಎಂಬ ಶೀರ್ಷಿಕೆಯನ್ನು ಬರೆಯಲಾಗಿದೆ.
Whole family celebrating the breakup is wild😭 pic.twitter.com/dNkDAEceDE
— FadeHubb (@FadeHubb) May 9, 2024
ವೈರಲ್ ವಿಡಿಯೋದಲ್ಲಿ ಯುವತಿಯೊಬ್ಬಳು ಕುಟುಂಬ ಸದಸ್ಯರ ಸಮ್ಮುಖದಲ್ಲಿ ತನ್ನ ಗೆಳಯನಿಗೆ ಬ್ರೇಕಪ್ ಮೆಸೇಜ್ ಕಳುಹಿಸುತ್ತಾಳೆ. ನಂತರ ಈ ಒಂದು ಖುಷಿಯ ವಿಚಾರವನ್ನು ಕುಟುಂಬ ಸದಸ್ಯರು ಚಪ್ಪಾಳೆ ತಟ್ಟುವ ಮೂಲಕ ಸಂಭ್ರಮದಿಂದ ಆಚರಿಸುವಂತಹ ದೃಶ್ಯವನ್ನು ಕಾಣಬಹುದು. ಮೇ 09 ರಂದು ಹಂಚಿಕೊಳ್ಳಲಾದ ಈ ವಿಡಿಯೋ 3.6 ಮಿಲಿಯನ್ ವೀಕ್ಷಣೆಗಳನ್ನು ಪಡೆದುಕೊಂಡಿದ್ದು, ಅಬ್ಬಬ್ಬಾ ಈ ಸಮಾಜದಲ್ಲಿ ಇಂತಹ ವಿಚಿತ್ರಗಳೂ ಕೂಡಾ ನಡೆಯುತ್ತದೆಯೇ ಎಂದು ವಿಡಿಯೋ ನೋಡಿ ನೆಟ್ಟಿಗರು ಶಾಕ್ ಆಗಿದ್ದಾರೆ.
ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




