70ನೇ ವಯಸ್ಸಿನಲ್ಲಿ ಅವಳಿ ಮಕ್ಕಳಿಗೆ ಜನ್ಮ ನೀಡಿದ ಆಫ್ರಿಕಾದ ಮಹಿಳೆ
ಒಂದು ನಿರ್ದಿಷ್ಟ ವಯಸ್ಸಿನ ನಂತರ ಅಂದರೆ 45 ವರ್ಷಗಳ ಬಳಿಕ ಮಹಿಳೆಯರು ಗರ್ಭಧರಿಸಲು ಸಾಧ್ಯವಾಗುವುದಿಲ್ಲ ಎಂದು ಹೇಳುವ ಮಾತನ್ನು ಸಾಮಾನ್ಯವಾಗಿ ನಾವೆಲ್ಲರೂ ಕೇಳಿರುತ್ತೇವೆ. ಆದರೆ ಇಲ್ಲೊಂದು ಇದ್ದಕ್ಕೆ ವಿರುದ್ಧವಾದ ಘಟನೆ ನಡೆದಿದೆ. ಉಗಾಂಡದ ಮಹಿಳೆಯೊಬ್ಬರು ತನ್ನ 70ನೇ ವಯಸ್ಸಿನಲ್ಲಿ ಅವಳಿ ಮಕ್ಕಳಿಗೆ ಜನ್ಮವನ್ನು ನೀಡಿದ್ದು, ಈ ವಯಸ್ಸಿನಲ್ಲಿಯೂ ಗರ್ಭಧರಿಸಲು ಸಾಧ್ಯನಾ ಎಂದು ಹಲವರು ಅಚ್ಚರಿಪಟ್ಟಿದ್ದಾರೆ.
ಗರ್ಭ ಧರಿಸುವಲ್ಲಿ ಮಹಿಳೆಯ ವಯಸ್ಸು ಕೂಡಾ ಬಹು ದೊಡ್ಡ ಪಾತ್ರವನ್ನು ವಹಿಸುತ್ತದೆ ಎಂದು ವೈದ್ಯಕೀಯ ವಿಜ್ಞಾನ ಹೇಳುತ್ತದೆ. ಒಂದು ನಿರ್ಧಿಷ್ಟ ವಯಸ್ಸಿನ ನಂತರ ಅಂದರೆ 45 ರಿಂದ 50 ವಯಸ್ಸಿನ ಬಳಿಕ ಖಂಡಿತವಾಗಿಯೂ ಮಹಿಳೆಯು ಗರ್ಭ ಧರಿಸಲು ಸಾಧ್ಯವಾಗುವುದಿಲ್ಲ ಎಂದು ಹೇಳುವ ಮಾತುಗಳನ್ನು ಸಾಮಾನ್ಯವಾಗಿ ನಾವೆಲ್ಲರೂ ಕೇಳಿರುತ್ತೇವೆ. ಆದರೆ ಇಲ್ಲೊಂದು ಅದಕ್ಕೆ ವಿರುದ್ಧವಾದ ಅಚ್ಚರಿಯ ಘಟನೆ ನಡೆದಿದೆ. ಉಗಾಂಡದ ಮಹಿಳೆಯೊಬ್ಬರು ತಮ್ಮ 70ನೇ ವಯಸ್ಸಿನಲ್ಲಿ ಅವಳಿ ಮಕ್ಕಳಿಗೆ ಜನ್ಮವನ್ನು ನೀಡುವ ಮೂಲಕ ಇದೀಗ ಸುದ್ದಿಯಲ್ಲಿದ್ದಾರೆ. ಈ ಸುದ್ದಿಯನ್ನು ಕೇಳಿ ಇಳಿ ವಯಸ್ಸಿನಲ್ಲಿಯೂ ಗರ್ಭಧರಿಸಲು ಸಾಧ್ಯನಾ ಎಂದು ಹಲವರು ಅಚ್ಚರಪಪಟ್ಟಿದ್ದಾರೆ.
ನಾವು ಮಾತನಾಡುತ್ತಿರುವ ಈ ಮಹಿಳೆಯ ಹೆಸರು ಸಫೀನಾ ನಮುಕ್ವಾಯಾ. ಕಳೆದ ಬುಧವಾರ ಆಫ್ರಿಕಾದ ರಾಜಧಾನಿ ಕಂಪಾಲಾದ ಆಸ್ಪತ್ರೆಯೊಂದರಲ್ಲಿ ಸಿಸೇರಿಯನ್ ಮೂಲಕ ಸಫಿನಾ ಒಂದು ಗಂಡು ಮತ್ತು ಒಂದು ಹೆಣ್ಣು ಮಗುವಿಗೆ ಜನ್ಮ ನೀಡಿದ್ದು, ತಾಯಿ ಮತ್ತು ಮಕ್ಕಳಿಬ್ಬರೂ ಆರೋಗ್ಯವಾಗಿದ್ದಾರೆ ಎಂದು ಡಾ. ಎಡ್ವರ್ಡ್ ತಮಾಲೆ ಸಾಲಿ ಮಾಧ್ಯಮಗಳಿಗೆ ತಿಳಿಸಿದ್ದಾರೆ. ಆದರೆ ಈ ವಯಸ್ಸಿನಲ್ಲಿ ಗರ್ಭಧರಿಸಲು ಹೇಗೆ ಸಾಧ್ಯ ಎಂದು ಹಲವರಲ್ಲಿ ಪ್ರಶ್ನೆ ಮೂಡಿರಬಹುದು.
ಇದನ್ನೂ ಓದಿ: ಸ್ಮೈಲ್ ಪ್ಲೀಸ್, ಒನ್ ಸೆಲ್ಫಿ : ಸೆಲ್ಫಿಗೆ ಸಖತ್ ಪೋಸ್ ಕೊಟ್ಟ ಶ್ವಾನ
ಈಕೆ ಇಂಟ್ರಾ-ವೆನಸ್ ಫರ್ಟಿಲಿಟಿ (IVF) ಚಿಕಿತ್ಸೆಯ ಮೂಲಕ ಗರ್ಭ ಧರಿಸಿ ಇದೀಗ ಅವಳಿ ಮಕ್ಕಳಿಗೆ ಜನ್ಮವನ್ನು ನೀಡಿದ್ದಾರೆ. ಸಪೀನಾ ಅವರ ಮೊದಲ ಪತಿ 1992 ರಲ್ಲಿ ನಿಧನರಾದರು. 4 ವರ್ಷಳ ಬಳಿಕ ಮತ್ತೊಂದು ಮದುವೆಯಾದರು. ಆದರೆ ಅವರಿಗೆ ಮಕ್ಕಳಾಗಿರಲಿಲ್ಲ. ಈ ಕಾರಣಕ್ಕಾಗಿ ಅವರನ್ನು ಅನೇಕರು ಗೇಲಿ ಮಾಡಿದ್ದೂ ಉಂಟು. ಸಮಾಜದ ಚುಚ್ಚು ಮಾತು ಹಾಗೂ ಮಕ್ಕಳಿಲ್ಲದ ಕೊರಗು ಸಫೀನಾ ಅವರನ್ನು ಅತೀವವಾಗಿ ಕಾಡುತ್ತಿತ್ತು. ಆದ್ದರಿಂದ ಅವರು ಈ ವಯಸ್ಸಿನಲ್ಲಿ ಐವಿಎಫ್ ಚಿಕಿತ್ಸೆಯ ಮೂಲಕ ಮಗುವನ್ನು ಪಡೆಯುವ ಗಟ್ಟಿ ನಿರ್ಧರವನ್ನು ಮಾಡಿದರು. ಇದೀಗ 70 ನೇ ವಯಸ್ಸಿನಲ್ಲಿ ಅವಳಿ ಮಕ್ಕಳಿಗೆ ಜನ್ಮ ನೀಡುವ ಮೂಲಕ, ತಾಯ್ತನದ ಸಂತೋಷವನ್ನು ಅನುಭವಿಸಿದ್ದಾರೆ.
ಮತ್ತಷ್ಟು ವೈರಲ್ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ