Viral Video: ಒನ್ ಸೆಲ್ಫಿ, ಸ್ಮೈಲ್ ಪ್ಲೀಸ್: ಸೆಲ್ಫಿಗೆ ಸಖತ್​​​ ಪೋಸ್ ಕೊಟ್ಟ ಶ್ವಾನ

ಇತ್ತೀಚಿನ ದಿನಗಳಲ್ಲಿ ಪ್ರಾಣಿಗಳಿಗೆ ಸಂಬಂಧಿಸಿದ ಹಲವಾರು ವಿಡಿಯೋಗಳು  ಸಾಮಾಜಿಕ ಜಾಲತಾಣಗಳಲ್ಲಿ ಪ್ರತಿನಿತ್ಯ ಹರಿದಾಡುತ್ತಿರುತ್ತವೆ. ಪ್ರಾಣಿಗಳ ಕುರಿತ ವಿಡಿಯೋಗಳನ್ನು ಬಹುತೇಕ ಎಲ್ಲರೂ ಇಷ್ಟಪಟ್ಟು ನೋಡುತ್ತಾರೆ.  ಅದೇ ರೀತಿ ಇಲ್ಲೊಂದು ಮುದ್ದಾದ ವಿಡಿಯೋ ವೈರಲ್ ಆಗಿದ್ದು, ಜಾನ ಶ್ವಾನವೊಂದು  ಸೆಲ್ಫಿಗೆ  ಸಖತ್ ಆಗಿ ಪೋಸ್ ಕೊಡುವುದನ್ನು ಕಾಣಬಹುದು.

Viral Video: ಒನ್ ಸೆಲ್ಫಿ, ಸ್ಮೈಲ್ ಪ್ಲೀಸ್: ಸೆಲ್ಫಿಗೆ ಸಖತ್​​​ ಪೋಸ್ ಕೊಟ್ಟ ಶ್ವಾನ
ವೈರಲ್​​ ವಿಡಿಯೋ
Follow us
ಮಾಲಾಶ್ರೀ ಅಂಚನ್​
| Updated By: ಅಕ್ಷಯ್​ ಪಲ್ಲಮಜಲು​​

Updated on:Dec 04, 2023 | 2:03 PM

ತಮ್ಮ ನೆಚ್ಚಿನ ವ್ಯಕ್ತಿಗಳೊಂದಿಗೆ ಅಥವಾ ಪ್ರೀತಿಪಾತ್ರರೊಂದಿಗೆ ಸೆಲ್ಫಿ ಕ್ಲಿಕ್ಕಿಸಿಕೊಳ್ಳುವುದೆಂದರೆ ಬಹುತೇಕ ಎಲ್ಲರಿಗೂ ಇಷ್ಟ. ಅದರಲ್ಲೂ ಕೆಲವರಿಗಂತೂ ಪ್ರತಿನಿತ್ಯ ಒಂದಾದರೂ ಸೆಲ್ಫಿ ತೆಗೆಯದಿದ್ದರೆ, ನಿದ್ರೆ ಕಣ್ಣಿಗೆ ಹತ್ತದು.  ಹೀಗೆ ಸೆಲ್ಫಿ ಹುಚ್ಚಿನ ಹಲವರಿದ್ದಾರೆ.  ಆದರೆ ನಾಯಿಗಳು  ಸೇರಿದಂತೆ ಇತರೆ ಯಾವುದೇ ಪ್ರಾಣಿಯಾದರೂ ಸೆಲ್ಫಿಗೆ ಪೋಸ್ ನೀಡುವುದನ್ನು ಅಥವಾ ಸೆಲ್ಫಿಯನ್ನು ಇಷ್ಟಪಡುವುದನ್ನು ನೀವು ನೋಡಿದ್ದೀರಾ? ಸಾಮಾನ್ಯವಾಗಿ ಯಾವುದೇ ಪ್ರಾಣಿಗಳಾಗಿರಲಿ ಫೋಟೋ, ಸೆಲ್ಫಿಗೆಲ್ಲಾ ಫೋಸ್ ನೀಡುವುದಿಲ್ಲ. ಆದರೆ ಈ ಶ್ವಾನಕ್ಕೆ ಮಾತ್ರ ಸೆಲ್ಫಿ ತೆಗೆದುಕೊಳ್ಳುವುದೆಂದರೆ ಬಲು ಇಷ್ಟವಂತೆ. ಈ ಮುದ್ದಾದ ಶ್ವಾನ ಸೆಲ್ಫಿಗೆ ಪೋಸ್ ನೀಡುವ ಸುಂದರವಾದ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ನಮಗಿಂತ ಈ ಮುದ್ದು ಶ್ವಾನವೇ ಚೆನ್ನಾಗಿ ಫೋಟೋಗೆ ಪೋಸ್ ನೀಡುತ್ತೆ ಎಂದು ನೆಟ್ಟಿಗರು ಹೇಳಿದ್ದಾರೆ.

@manishadeokar ಎಂಬ ಇನ್ಸ್ಟಾಗ್ರಾಮ್ ಪೇಜ್ ಅಲ್ಲಿ ಹಂಚಿಕೊಳ್ಳಲಾದ ಈ ವಿಡಿಯೋದಲ್ಲಿ  ನಾಯಿಯೊಂದು ಸಖತ್ ಆಗಿ ಸೆಲ್ಫಿಗೆ ಪೋಸ್ ನೀಡುವ ದೃಶ್ಯವನ್ನು ಕಾಣಬಹುದು.

ವೈರಲ್​ ವಿಡಿಯೋ ಇಲ್ಲಿದೆ ನೋಡಿ:

ವಿಡಿಯೋದಲ್ಲಿ  ಮಹಿಳೆಯೊಬ್ಬರು ಮೊಬೈಲ್ ಹಿಡಿದುಕೊಂಡು ಸೆಲ್ಫಿ ವಿಡಿಯೋ ಮಾಡುತ್ತಾ ಸೆಲ್ಫಿ ಕ್ಲಿಕ್ಕಿಸಿಕೊಳ್ಳುವಂತೆ ನಾಟಕವಾಡುತ್ತಾರೆ.  ಹಾಗೂ ಅವರ ಪಕ್ಕದಲ್ಲಿಯೇ ಕುಳಿತಿದ್ದ  ಅವರ ಸಾಕುನಾಯಿಯನ್ನು ʼಬಿಂಗೋ ಸೆಲ್ಫಿʼ ಎಂದು ಜೋರಾಗಿ ಕೂಗಿ ಕರೆಯುತ್ತಾರೆ.  ಸೆಲ್ಫಿ ಎಂಬ ಹೆಸರನ್ನು ಕೇಳಿದ ತಕ್ಷಣವೇ  ಈ ಬಿಂಗೋ  ಬಹಳ ಖುಷಿಯಿಂದ  ಥಟ್ಟನೆ ಎದ್ದು ಬಂದು ಆ ಮಹಿಳೆಯ ಭುಜದ ಮೇಲೆ ಎರಡು ಕಾಲುಗಳನ್ನಿಟ್ಟು  ಬಾಲ ಅಲ್ಲಾಡಿಸುತ್ತಾ ಸ್ಟೈಲ್ ಆಗಿ ಸೆಲ್ಫಿಗೆ ಪೋಸ್ ನೀಡುವುದನ್ನು ಕಾಣಬಹುದು.

ಇದನ್ನೂ ಓದಿ: ಶಾಲೆಯಲ್ಲಿ ಕಲಿತ ಕಾಗಕ್ಕನ ಬುದ್ಧಿವಂತಿಕೆ ಪಾಠ ಇಲ್ಲಿ ನಿಜವಾಗಿದೆ ನೋಡಿ

ಈ ಸುಂದರವಾದ ವಿಡಿಯೋವನ್ನು ಇನ್ಸ್ಟಾಗ್ರಾಮ್ ಅಲ್ಲಿ ಹಂಚಿಕೊಳ್ಳಲಾಗಿದ್ದು, 628K ವೀಕ್ಷಣೆಗಳನ್ನು 38.4K ಲೈಕ್ಸ್ ಗಳನ್ನು ಪಡೆದುಕೊಳಡಿದೆ. ಹಾಗೂ ಹಲವಾರು ಕಮೆಂಟ್ಸ್ಗಳೂ ಹರಿದು ಬಂದಿವೆ. ಒಬ್ಬ ಬಳಕೆದಾರರು ʼಅಬ್ಬಬ್ಬಾ ಈ ಶ್ವಾನ ಎಷ್ಟು ಮುದ್ದಾಗಿದೆಯಲ್ಲವೇʼ ಎಂದು ಹೇಳಿದ್ದಾರೆ.  ಇನ್ನೊಬ್ಬ ಬಳಕೆದಾರರು “ಈ ಶ್ವಾನಕ್ಕೆ ಈಗ ಇಂಗ್ಲೀಷ್ ಭಾಷೆಯು ಕೂಡಾ ಬಹಳ ಚೆನ್ನಾಗಿ ಅರ್ಥವಾಗುತ್ತೆ ಅಲ್ವಾʼ ಎಂದು ತಮಾಷೆಯ ಕಮೆಂಟ್ ಬರೆದುಕೊಂಡಿದ್ದಾರೆ.  ಇನ್ನೂ ಅನೇಕರು ವಿಡಿಯೋ ತುಂಬಾ ಮುದ್ದಾಗಿದೆ ಎಂದು ಹೊಗಳಿಕೆಯ ಮಾತುಗಳನ್ನಾಡಿದ್ದಾರೆ.

ಮತ್ತಷ್ಟು ವೈರಲ್​ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 2:43 pm, Sat, 2 December 23

ಪ್ರೀತಿಯಿಂದ ಸಂಭಾವನೆ ಕೊಟ್ಟರು: ಬಿಗ್ ಬಾಸ್ ಪೇಮೆಂಟ್ ಬಗ್ಗೆ ಗೌತಮಿ ಮಾತು
ಪ್ರೀತಿಯಿಂದ ಸಂಭಾವನೆ ಕೊಟ್ಟರು: ಬಿಗ್ ಬಾಸ್ ಪೇಮೆಂಟ್ ಬಗ್ಗೆ ಗೌತಮಿ ಮಾತು
ಅಮೆರಿಕ ಅಧ್ಯಕ್ಷ ಟ್ರಂಪ್​ಗೂ ಮೊದಲೇ ಪ್ರಮಾಣವಚನ ಸ್ವೀಕರಿಸಿದ ಉಪಾಧ್ಯಕ್ಷ
ಅಮೆರಿಕ ಅಧ್ಯಕ್ಷ ಟ್ರಂಪ್​ಗೂ ಮೊದಲೇ ಪ್ರಮಾಣವಚನ ಸ್ವೀಕರಿಸಿದ ಉಪಾಧ್ಯಕ್ಷ
ಅಮೆರಿಕದ 47ನೇ ಅಧ್ಯಕ್ಷರಾಗಿ ಡೊನಾಲ್ಡ್ ಟ್ರಂಪ್​ ಪ್ರಮಾಣ ವಚನದ ನೇರಪ್ರಸಾರ
ಅಮೆರಿಕದ 47ನೇ ಅಧ್ಯಕ್ಷರಾಗಿ ಡೊನಾಲ್ಡ್ ಟ್ರಂಪ್​ ಪ್ರಮಾಣ ವಚನದ ನೇರಪ್ರಸಾರ
ಮೋಕ್ಷಿತಾ ಕಿಡ್ನಾಪ್ ಕೇಸ್ ಬಗ್ಗೆ ಗೊತ್ತಾದಾಗ ಗೌತಮಿ ರಿಯಾಕ್ಷನ್ ಹೇಗಿತ್ತು?
ಮೋಕ್ಷಿತಾ ಕಿಡ್ನಾಪ್ ಕೇಸ್ ಬಗ್ಗೆ ಗೊತ್ತಾದಾಗ ಗೌತಮಿ ರಿಯಾಕ್ಷನ್ ಹೇಗಿತ್ತು?
ಟ್ರಂಪ್ ಪ್ರಮಾಣವಚನ ಸ್ವೀಕಾರಕ್ಕೆ ಕ್ಷಣಗಣನೆ; ವೇದಿಕೆ ಸುತ್ತ ಜನವೋ ಜನ
ಟ್ರಂಪ್ ಪ್ರಮಾಣವಚನ ಸ್ವೀಕಾರಕ್ಕೆ ಕ್ಷಣಗಣನೆ; ವೇದಿಕೆ ಸುತ್ತ ಜನವೋ ಜನ
ಚಾರ್ಮಾಡಿ ಘಾಟಿಯಲ್ಲಿ ಭಾರಿ ಕಾಡ್ಗಿಚ್ಚು: ನೂರಾರು ಎಕರೆ ಅರಣ್ಯಕ್ಕೆ ಬೆಂಕಿ
ಚಾರ್ಮಾಡಿ ಘಾಟಿಯಲ್ಲಿ ಭಾರಿ ಕಾಡ್ಗಿಚ್ಚು: ನೂರಾರು ಎಕರೆ ಅರಣ್ಯಕ್ಕೆ ಬೆಂಕಿ
ನನ್ನ ವಿರುದ್ಧ ವರಿಷ್ಠರಿಗೆ ಯಾರೇ ದೂರು ನೀಡಿದರೂ ಹೆದರಲ್ಲ: ಯತ್ನಾಳ್
ನನ್ನ ವಿರುದ್ಧ ವರಿಷ್ಠರಿಗೆ ಯಾರೇ ದೂರು ನೀಡಿದರೂ ಹೆದರಲ್ಲ: ಯತ್ನಾಳ್
ಮಂಗಳೂರು ಬ್ಯಾಂಕ್ ದರೋಡೆಕೋರರು ಸಿಕ್ಕಿಬಿದ್ದಿದ್ಹೇಗೆ?
ಮಂಗಳೂರು ಬ್ಯಾಂಕ್ ದರೋಡೆಕೋರರು ಸಿಕ್ಕಿಬಿದ್ದಿದ್ಹೇಗೆ?
ಫಿನಾಲೆ ವೀಕ್ ತಲುಪದೆ ಹೋಗಿದ್ದು ನನ್ನ ಪತಿಗೆ ನಿರಾಶೆ ತಂದಿದೆ: ಗೌತಮಿ ಜಾಧವ್
ಫಿನಾಲೆ ವೀಕ್ ತಲುಪದೆ ಹೋಗಿದ್ದು ನನ್ನ ಪತಿಗೆ ನಿರಾಶೆ ತಂದಿದೆ: ಗೌತಮಿ ಜಾಧವ್
ಮಂಜು ಮನೆಯವರ ಮಾತುಗಳು ಬೇಸರ ತರಿಸಿತು: ಗೌತಮಿ
ಮಂಜು ಮನೆಯವರ ಮಾತುಗಳು ಬೇಸರ ತರಿಸಿತು: ಗೌತಮಿ