AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮುಂಬೈನವರು ನೋಡಲು ಚಂದ, ಆದರೆ ಬೆಂಗಳೂರಿಗರು…? ನಿಖಿಲ್ ಕಾಮತ್​ಗೆ ಸಿಲಿಕಾನ್ ಸಿಟಿ ಯಾಕೆ ಇಷ್ಟ ಗೊತ್ತಾ? ಝೀರೋಧ ಮುಖ್ಯಸ್ಥರ ನೇರ ಮಾತು

Nikhil Kamath on Bengalureans: ಝೀರೋಧ ಸಹ-ಸಂಸ್ಥಾಪಕ ನಿಖಿಲ್ ಕಾಮತ್ ಅವರು ಬೆಂಗಳೂರಿನ ನಿವಾಸಿಯಾಗಿ ನಗರದ ಮೇಲಿನ ತಮ್ಮ ಪ್ರೇಮವನ್ನು ಮತ್ತೊಮ್ಮೆ ಬಿಚ್ಚಿಟ್ಟಿದ್ದಾರೆ. ಹೈದರಾಬಾದ್ ಎಂದರೆ ಬಿರಿಯಾನಿ; ದಿಲ್ಲಿ ಎಂದರೆ ದುಡ್ಡುಳ್ಳುವರು; ಮುಂಬೈ ಎಂದರೆ ನೋಡಲು ಸುಂದರ; ಆದರೆ, ಬೆಂಗಳೂರಿಗರು ಹೃದಯವಂತರು ಎಂದು ಅವರು ಹೇಳಿದ್ದಾರೆ. ಕೆಟ್ಟ ಟ್ರಾಫಿಕ್, ಕೆಟ್ಟ ರಸ್ತೆ ಇವ್ಯಾವುದೂ ಲೆಕ್ಕಕ್ಕೆ ಬರೋದಿಲ್ಲ. ಬೆಂಗಳೂರಿನ ಜನರಿಗೆ ಅವರ ನಗರ ಎಂದರೆ ಬಹಳ ಪ್ರೀತಿ. ಜನರೂ ಕೂಡ ಆತ್ಮೀಯತೆ ಹೊಂದಿರುವವರು ಎಂದು ನಿಖಿಲ್ ಕಾಮತ್ ಅಭಿಪ್ರಾಯಪಟ್ಟಿದ್ದಾರೆ.

ಮುಂಬೈನವರು ನೋಡಲು ಚಂದ, ಆದರೆ ಬೆಂಗಳೂರಿಗರು...? ನಿಖಿಲ್ ಕಾಮತ್​ಗೆ ಸಿಲಿಕಾನ್ ಸಿಟಿ ಯಾಕೆ ಇಷ್ಟ ಗೊತ್ತಾ? ಝೀರೋಧ ಮುಖ್ಯಸ್ಥರ ನೇರ ಮಾತು
ನಿಖಿಲ್ ಕಾಮತ್
ಸುಗ್ಗನಹಳ್ಳಿ ವಿಜಯಸಾರಥಿ
|

Updated on: May 15, 2024 | 4:44 PM

Share

ಮುಂಬೈ, ಮೇ 15: ಷೇರು ಬ್ರೋಕರ್ ಸಂಸ್ಥೆಯಾದ ಝೀರೋಧ ಸಹ-ಸಂಸ್ಥಾಪಕ ನಿಖಿಲ್ ಕಾಮತ್ (Nikhil Kamath) ನೇರ ಮಾತುಗಳಿಗೆ ಹೆಸರುವಾಸಿ. ತಮಗೆ ಅನಿಸಿದ್ದನ್ನು ನೇರವಾಗಿ ಹೇಳಿಬಿಡುತ್ತಾರೆ. ಇತ್ತೀಚೆಗೆ ಅವರು ತನಗೆ ಮಗು ಯಾಕೆ ಬೇಡ ಎನ್ನುವುದನ್ನು ಹೇಳಿ ಅಚ್ಚರಿ ಮೂಡಿಸಿದ್ದರು. ಈಗ ಬೆಂಗಳೂರಿನ ಬಗ್ಗೆ ಟಿಪಿಕಲ್ ಬೆಂಗಳೂರಿಗನಂತೆ ಕಾಮೆಂಟ್ ಮಾಡಿದ್ದಾರೆ. ನಿಖಿಲ್ ಕಾಮತ್ ಬೆಂಗಳೂರಿನಲ್ಲಿಯೇ ಇರುವುದು. ತಮ್ಮ ಪೋಡ್​ಕ್ಯಾಸ್ಟ್​ನಲ್ಲಿ (podcast) ಮಾತನಾಡುತ್ತಾ ಅವರು ಬೆಂಗಳೂರು ಯಾಕೆ ತನಗೆ ಇಷ್ಟ ಎಂದು ಹೇಳಿದ್ದಾರೆ. ಈ ಹಿಂದೆಯೂ ಅವರು ಸಿಲಿಕಾನ್ ಸಿಟಿ ಬಗ್ಗೆ ಅನೇಕ ಬಾರಿ ಪಾಸಿಟಿವ್ ಮಾತುಗಳನ್ನು ಹೇಳಿದ್ದಾರೆ. ಇತ್ತೀಚೆಗೆ ನಡೆಸಿದ ಪೋಡ್​ಕ್ಯಾಸ್ಟ್​​ನಲ್ಲಿ ಅವರು ಬೆಂಗಳೂರಿನ ಕೆಟ್ಟ ಟ್ರಾಫಿಕ್ ನಡುವೆಯೂ ಇಷ್ಟವಾಗುವಂತಹದ್ದು ಏನಿದೆ ಎಂಬುದನ್ನು ಬಿಚ್ಚಿಟ್ಟಿದ್ದಾರೆ. ಬೆಂಗಳೂರಿಗರು ಹೃದಯವಂತರು ಎಂದು ಹೊಗಳಿದ್ದಾರೆ.

ಬೇರೆ ನಗರಕ್ಕೂ ಬೆಂಗಳೂರಿಗೂ ವ್ಯತ್ಯಾಸ ಇರುವುದು ಜನರ ಆತ್ಮೀಯತೆಯಲ್ಲಿ…

ದೇಶದ ಬೇರೆ ನಗರಗಳಿಗೆ ಹೋಲಿಸಿದರೆ ಬೆಂಗಳೂರು ವಿಶೇಷ ಎನಿಸಿಲು ಅದರಲ್ಲಿರುವ ಜನರು ಕಾರಣ ಎನ್ನುತ್ತಾರೆ ನಿಖಿಲ್ ಕಾಮತ್. ‘ರಸ್ತೆ, ಟ್ರಾಫಿಕ್ ಇವೆಲ್ಲವನ್ನೂ ಬಿಟ್ಹಾಕಿ. ಇವ್ಯಾವುದೂ ದೊಡ್ಡ ವಿಷಯವೇ ಅಲ್ಲ. ಬೇರೆ ನಗರಗಳಿಗೆ ಹೋಲಿಸಿದರೆ ಬೆಂಗಳೂರು ವಿಶೇಷ ಎನಿಸುವುದು ಅದರ ಜನರಿಂದಾಗಿಯೇ. ಇಲ್ಲಿಯ ಜನರು ಬೆಂಗಳೂರನ್ನು ಬಹಳ ಪ್ರೀತಿಸುತ್ತಾರೆ. ಬಹಳ ಆತ್ಮೀಯತೆ ತೋರುವ ಜನರು ಇವರು,’ ಎಂದು ಹೇಳಿದ್ದಾರೆ.

ಇದನ್ನೂ ಓದಿ: ವಯಸ್ಸಾದ ಮೇಲೆ ನೋಡಿಕೊಳ್ಳುತ್ತಾರೆ ಎನ್ನುವುದು ಭ್ರಮೆ; ಮಗು ಸಾಕಲು 20 ವರ್ಷ ಯಾಕೆ ಹಾಳು ಮಾಡಲಿ? ನಿಖಿಲ್ ಕಾಮತ್ ತರ್ಕಗಳಿವು…

‘ಹೈದರಾಬಾದ್ ಬಿರಿಯಾನಿಗೆ ಫೇಮಸ್ ಆಗಿದೆ. ಬಾಂಬೆಯಲ್ಲಿ ನೋಡಲು ಚಂದ ಇರುವ ಜನರಿದ್ದಾರೆ. ದೆಹಲಿಯಲ್ಲಿ ಸಾಕಷ್ಟು ಹಣ ಇರುವ ಜನರು ಸಿಗುತ್ತಾರೆ. ಬೆಂಗಳೂರು ಬಹಳ ಒಳ್ಳೆಯ ಜನರಿಗೆ ಖ್ಯಾತವಾಗಿದೆ. ಇಲ್ಲಿನ ಜನರು ಬಹಳ ಸಹಜ ಸ್ವಭಾವದವರು, ಸಂಕೋಚದ ಸ್ವಭಾವದವರು, ಸೂಕ್ಷ್ಮತೆ ಉಳ್ಳವರು.

ಬೆಂಗಳೂರಿನಲ್ಲಿ ಪರಿಣಿತರು ಸಾಕಷ್ಟು ಸಿಗುತ್ತಾರೆ: ನಿಖಿಲ್ ಕಾಮತ್

ಸ್ಟಾರ್ಟಪ್​ಗಳಿಗೆ ಅಗತ್ಯವಾಗಿರುವ ಪರಿಣಿತ ಉದ್ಯೋಗಿಗಳು ಲಭ್ಯ ಇರುವುದರಲ್ಲಿ ವಿಶ್ವದ ಯಾವುದೇ ನಗರಕ್ಕಿಂತಲೂ ಬೆಂಗಳೂರು ಕಡಿಮೆ ಅಲ್ಲ. ‘ನೀವು ಏನಾದರೂ ನಿರ್ಮಿಸಬೇಕೆಂದರೆ ಅಥವಾ ಕಂಪನಿ ಆರಂಭಿಸಬೇಕೆಂದರೆ ಬೆಂಗಳೂರಿನಲ್ಲಿ ಪರಿಣಿತರು ಸುಲಭವಾಗಿ ಸಿಗುತ್ತಾರೆ. ಇಷ್ಟು ಕಡಿಮೆ ಬೆಲೆಗೆ ವಿಶ್ವದಲ್ಲಿ ಬೇರೆಲ್ಲೂ ನಿಮಗೆ ಸಿಗಲು ಸಾಧ್ಯವಿಲ್ಲ ಎನಿಸುತ್ತದೆ,’ ಎಂದು ನಿಖಿಲ್ ಕಾಮತ್ ಹೇಳುತ್ತಾರೆ.

ಇದನ್ನೂ ಓದಿ: ಒಂದೇ ರೈಲ್ವೆ ಟಿಕೆಟ್ ಹಲವು ಸೇವೆ; ಊಟ, ಚಿಕಿತ್ಸೆ, ವಿಶ್ರಾಂತಿ ಕೊಠಡಿ, ಡಾರ್ಮಿಟರಿ, ಲಾಕರ್ ರೂಂ ಸೌಲಭ್ಯ

ನಿಖಿಲ್ ಕಾಮತ್ ಅವರಿಗೆ ಮುಂದಿನ ತಲೆಮಾರಿಗೆ ಆಸ್ತಿ ಕೂಡಿಡಬೇಕೆನ್ನುವ ಜಾಯಮಾನದವರಲ್ಲ. ಕೆರೆಯ ನೀರನ್ನು ಕೆರೆಗೆ ಚೆಲ್ಲಿ ಎಂಬಂತೆ ತಾನು ಗಳಿಸಿದ ಸಂಪಾದನೆಯನ್ನು ಸಮಾಜದ ಅಭ್ಯುದಯಕ್ಕೆ ಹಾಕಬೇಕೆನ್ನುವವರ ಪೈಕಿಯವರು. ಬೆಂಗಳೂರಿನಲ್ಲಿ ಗಿಡ ನೆಡುವುದರಿಂದ ಹಿಡಿದು ವಿವಿಧ ಯೋಜನೆಗಳಲ್ಲಿ ನಿಖಿಲ್ ಕಾಮತ್ ತೊಡಗಿಸಿಕೊಳ್ಳುತ್ತುತ್ತಿದ್ದಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us
ಸುಗ್ಗನಹಳ್ಳಿ ವಿಜಯಸಾರಥಿ
ಸುಗ್ಗನಹಳ್ಳಿ ವಿಜಯಸಾರಥಿ

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
ಕಣ್ಣು ಆಪರೇಷನ್​​ಗೆ ಕರೆದು ಕೇವಲ ಅನಸ್ತೇಷಿಯಾ ಕೊಟ್ಟು ಕಳುಹಿಸಿದ್ರು!
ಕಣ್ಣು ಆಪರೇಷನ್​​ಗೆ ಕರೆದು ಕೇವಲ ಅನಸ್ತೇಷಿಯಾ ಕೊಟ್ಟು ಕಳುಹಿಸಿದ್ರು!
ತಾಂಡವ್ ಕ್ಯಾಪ್ಟನ್ ಆದ್ರೆ ಪ್ರಶಾಂತ್​​ಗೆ ಸಂಕಷ್ಟ: ವಿಡಿಯೋ ನೋಡಿ
ತಾಂಡವ್ ಕ್ಯಾಪ್ಟನ್ ಆದ್ರೆ ಪ್ರಶಾಂತ್​​ಗೆ ಸಂಕಷ್ಟ: ವಿಡಿಯೋ ನೋಡಿ
ದಸರಾದಲ್ಲಿ ಸಚಿವರನ್ನ ತಡೆದ ಮಹತ್ವದ ಬೆಳವಣಿಗೆ: ಸಿಎಂ ಭೇಟಿಯಾದ ಐಪಿಎಸ್
ದಸರಾದಲ್ಲಿ ಸಚಿವರನ್ನ ತಡೆದ ಮಹತ್ವದ ಬೆಳವಣಿಗೆ: ಸಿಎಂ ಭೇಟಿಯಾದ ಐಪಿಎಸ್
ಮತದಾನ ಕೇಂದ್ರದ ಬಳಿಯೇ ಸಚಿವರ ಕಾಲಿಗೆ ನಮಸ್ಕರಿಸಿದ ಬಿಜೆಪಿ ಆಭ್ಯರ್ಥಿ
ಮತದಾನ ಕೇಂದ್ರದ ಬಳಿಯೇ ಸಚಿವರ ಕಾಲಿಗೆ ನಮಸ್ಕರಿಸಿದ ಬಿಜೆಪಿ ಆಭ್ಯರ್ಥಿ
ದೊಡ್ಡಬಳ್ಳಾಪುರದ ತೂಬಗೆರೆಯಲ್ಲಿ ಕಂಪಿಸಿದ ಭೂಮಿ
ದೊಡ್ಡಬಳ್ಳಾಪುರದ ತೂಬಗೆರೆಯಲ್ಲಿ ಕಂಪಿಸಿದ ಭೂಮಿ
ಬಹಳ ದಿನಗಳ ಬಳಿಕ ಸುತ್ತೂರು ಶಕ್ತಿಪೀಠಕ್ಕೆ ಸಿಎಂ ಸಿದ್ದರಾಮಯ್ಯ ಭೇಟಿ
ಬಹಳ ದಿನಗಳ ಬಳಿಕ ಸುತ್ತೂರು ಶಕ್ತಿಪೀಠಕ್ಕೆ ಸಿಎಂ ಸಿದ್ದರಾಮಯ್ಯ ಭೇಟಿ
ಮೆಕ್ಕಾದಲ್ಲಿ ಸಿಲುಕಿದ 4,000 ಕನ್ನಡಿಗರು: ನೆರವಿಗೆ ಧಾವಿಸುವಂತೆ CMಗೆ ಮನವಿ
ಮೆಕ್ಕಾದಲ್ಲಿ ಸಿಲುಕಿದ 4,000 ಕನ್ನಡಿಗರು: ನೆರವಿಗೆ ಧಾವಿಸುವಂತೆ CMಗೆ ಮನವಿ
ತಾಂಡವ್ ರಾಮ್, ಗಗನ್ ಚಿನ್ನಪ್ಪ ಸ್ನೇಹದ ನಡುವೆ ಬಂದ ಸೌಂದರ್ಯಾ ಶೆಟ್ಟಿ
ತಾಂಡವ್ ರಾಮ್, ಗಗನ್ ಚಿನ್ನಪ್ಪ ಸ್ನೇಹದ ನಡುವೆ ಬಂದ ಸೌಂದರ್ಯಾ ಶೆಟ್ಟಿ
ನಿರುದ್ಯೋಗಿ ತರ ವರ್ತಿಸಬೇಡಿ: ಪ್ರಿಯಾಂಕ್ ಖರ್ಗೆಗೆ ಜೋಶಿ ಟಾಂಗ್
ನಿರುದ್ಯೋಗಿ ತರ ವರ್ತಿಸಬೇಡಿ: ಪ್ರಿಯಾಂಕ್ ಖರ್ಗೆಗೆ ಜೋಶಿ ಟಾಂಗ್
ಶಿಕ್ಷಕರ ಕ್ಷೇತ್ರದ ಚುನಾವಣೆ ವೇಳೆ ಗಲಾಟೆ :ಮುನಿರತ್ನ ಮೇಲೆ ಹಲ್ಲೆಗೆ ಯತ್ನ!
ಶಿಕ್ಷಕರ ಕ್ಷೇತ್ರದ ಚುನಾವಣೆ ವೇಳೆ ಗಲಾಟೆ :ಮುನಿರತ್ನ ಮೇಲೆ ಹಲ್ಲೆಗೆ ಯತ್ನ!