Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಯಸ್ಸಾದ ಮೇಲೆ ನೋಡಿಕೊಳ್ಳುತ್ತಾರೆ ಎನ್ನುವುದು ಭ್ರಮೆ; ಮಗು ಸಾಕಲು 20 ವರ್ಷ ಯಾಕೆ ಹಾಳು ಮಾಡಲಿ? ನಿಖಿಲ್ ಕಾಮತ್ ತರ್ಕಗಳಿವು…

Billionaire Nikhil Kamath don't want child: ಝೀರೋಧ ಸಂಸ್ಥೆಯ ಸಹ-ಸಂಸ್ಥಾಪಕ ನಿಖಿಲ್ ಕಾಮತ್ ಅವರಿಗೆ ಸಂತಾನ ಬೇಕಿಲ್ಲವಂತೆ. ವಯಸ್ಸಾದ ಮೇಲೆ ಮಕ್ಕಳು ನೋಡಿಕೊಳ್ಳುತ್ತಾರೆ ಎನ್ನುವುದು ಭ್ರಮೆ. ಯಾರಿಗೆ ಗೊತ್ತು, 18 ವರ್ಷ ಆಗುತ್ತಲೇ ನಿಮ್ಮನ್ನು ಬಿಟ್ಟು ಹೋಗೇ ಬಿಡಬಹುದು. ಇಂಥದ್ದರಲ್ಲಿ ಮಗು ಸಾಕಲು 18-20 ವರ್ಷ ನನ್ನ ಜೀವನ ಸವೆಸುವುದು ತರವಲ್ಲ. ಹೀಗಾಗಿ ತನಗೆ ಮಗು ಬೇಡ ಎಂದು ನಿಖಿಲ್ ಕಾಮತ್ ಹೇಳುತ್ತಾರೆ.

ವಯಸ್ಸಾದ ಮೇಲೆ ನೋಡಿಕೊಳ್ಳುತ್ತಾರೆ ಎನ್ನುವುದು ಭ್ರಮೆ; ಮಗು ಸಾಕಲು 20 ವರ್ಷ ಯಾಕೆ ಹಾಳು ಮಾಡಲಿ? ನಿಖಿಲ್ ಕಾಮತ್ ತರ್ಕಗಳಿವು...
ನಿಖಿಲ್ ಕಾಮತ್
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: May 13, 2024 | 4:06 PM

ನವದೆಹಲಿ, ಮೇ 13: ಮದುವೆಯಾದರೆ ಒಬ್ಬ ವ್ಯಕ್ತಿ ಪರಿಪೂರ್ಣನಾಗುತ್ತಾನೆ. ಮಗುವಾದರೆ ಸಂಸಾರಕ್ಕೆ ಅರ್ಥ ಸಿಗುತ್ತೆ ಎಂಬ ಬೋಧನೆಗಳನ್ನು ನಮ್ಮ ಸಮಾಜದಲ್ಲಿ ಕೇಳಿರಬಹುದು. ಎಲ್ಲರೂ ಹಾಗೆ ಯೋಚಿಸುತ್ತಾರಾ? ಖ್ಯಾತ ಬಿಸಿನೆಸ್​ಮ್ಯಾನ್, ಹಾಗೂ ಝೀರೋಧ ಸಹ-ಸಂಸ್ಥಾಪಕ ನಿಖಿಲ್ ಕಾಮತ್ (Nikhil Kamath) ಪ್ರಕಾರ ಮಗು ಮಾಡಿಕೊಂಡರೆ ಜೀವನ ವೇಸ್ಟ್. ಮಗು ದೊಡ್ಡವನಾದ ಮೇಲೆ ತಮ್ಮನ್ನು ನೋಡಿಕೊಳ್ಳುತ್ತದೆ ಎಂಬ ನಿರೀಕ್ಷೆಯಲ್ಲಿ ದಶಕಗಳ ಕಾಲ ಮಗುವನ್ನು ಆರೈಕೆ ಮಾಡಿ ಬೆಳೆಸುವುದರಲ್ಲಿ ಯಾವ ಅರ್ಥವೂ ಇಲ್ಲವಂತೆ.

‘ಮಗುವನ್ನು ಬೆಳೆಸಲು ನನ್ನ 20 ವರ್ಷದ ಜೀವನವನ್ನು ವ್ಯಯಿಸಬೇಕಾಗುತ್ತದೆ. ಅದೃಷ್ಟ ಚೆನ್ನಾಗಿದ್ದರೆ ಒಂದು ಹಂತದಲ್ಲಿ ಮಗು ದೊಡ್ಡವನಾದ ಬಳಿಕ ನನ್ನನ್ನು ನೋಡಿಕೊಳ್ಳಬಹುದು. ಆದರೆ, 18 ವರ್ಷ ಆಗುತ್ತಲೇ ನಿಮ್ಮನ್ನು ಬಿಟ್ಟು ಹೊರಟು ಹೋದರೆ ಏನು ಮಾಡುತ್ತೀರಿ? ನಾನು ಮಗು ಹೊಂದದೇ ಇರಲು ಇದೂ ಒಂದು ಕಾರಣ,’ ಎಂದು 37 ವರ್ಷದ ನಿಖಿಲ್ ಕಾಮತ್ ಹೇಳುತ್ತಾರೆ.

ಇದನ್ನೂ ಓದಿ: ಷೇರುಪೇಟೆ ರಕ್ತದೋಕುಳಿ ಮಧ್ಯೆ ಶೇ. 45ರಷ್ಟು ಹೆಚ್ಚಿನ ಬೆಲೆಗೆ ಲಿಸ್ಟ್ ಆದ ಬೆಂಗಳೂರಿನ ಇಂಡಿಜೀನ್ ಷೇರು

ಯಾರಿಗಾಗಿ ನಾವು ದುಡಿಯಬೇಕು? ನಾವು ದುಡಿದಿದ್ದನ್ನು ತಿನ್ನಲು ಸಂತತಿಯಾದರೂ ಬೇಕಲ್ಲವಾ ಎಂದು ಹೇಳುವವರ ವಾದವನ್ನು ನಿಖಿಲ್ ಕಾಮತ್ ಅಲ್ಲಗಳೆಯುತ್ತಾರೆ. ‘ನನ್ನ ಆಸ್ತಿ ಮುಂದಿನ ತಲೆಮಾರಿಗೆ ಹೋಗಬೇಕು ಎನ್ನುವ ಭಾವನೆ ಮೇಲೆ ನನಗೆ ನಂಬಿಕೆ ಇಲ್ಲ. ನಮಗೆ ನಾವು ಅಗತ್ಯಕ್ಕಿಂತ ಹೆಚ್ಚು ಪ್ರಾಮುಖ್ಯತೆ ಕೊಡುತ್ತೇವೆ ಎಂದನಿಸುತ್ತದೆ. ಈ ಭೂಮಿಯಲ್ಲಿರುವ ಯಾವುದೇ ಪ್ರಾಣಿಯ ರೀತಿ ನೀವೂ ಕೂಡ ಹುಟ್ಟುತ್ತೀರಿ, ಸಾಯುತ್ತೀರಿ ಅಷ್ಟೇ. ನೀವು ಸತ್ತ ಬಳಿಕ ಯಾರೂ ನಿಮ್ಮನ್ನು ಸ್ಮರಿಸುವುದಿಲ್ಲ,’ ಎಂದು ನಿತಿನ್ ಕಾಮತ್ ಅವರ ಸಹೋದರರಾದ ನಿಖಿಲ್ ತಿಳಿಸಿದ್ದಾರೆ.

37 ವರ್ಷದ ನಿಖಿಲ್ ಕಾಮತ್ ಅವರು 2019ರಲ್ಲಿ ಅಮಂಡಾ ಪುರವಂಕರ ಎಂಬಾಕೆಯನ್ನು ವಿವಾಹವಾಗಿದ್ದರು. ಒಂದು ವರ್ಷದ ಬಳಿಕ ಇಬ್ಬರೂ ಬೇರೆಯಾದರು. 2021ರಲ್ಲಿ ವಿಚ್ಛೇದನ ಪಡೆದಿದ್ದಾರೆ. ಇದಾದ ಬಳಿಕ ಮಾಜಿ ವಿಶ್ವ ಸುಂದರಿ ಮಾನುಷಿ ಚಿಲ್ಲರ್ ಜೊತೆ ನಿಖಿಲ್ ಕಾಮತ್ ಅಫೇರ್ ಹೊಂದಿದ್ದರು. ಅದೂ ಬ್ರೇಕಪ್ ಆಯಿತು. ಈಗ ನಟಿ ರಿಯಾ ಚಕ್ರಬರ್ತಿ ಜೊತೆ ನಿಖಿಲ್ ಡೇಟಿಂಗ್ ನಡೆಸುತ್ತಿದ್ದಾರೆ ಎನ್ನುವ ಗುಮಾನಿ ಇದೆ.

ಇದನ್ನೂ ಓದಿ: ಜಪಾನ್: 50 ವರ್ಷಗಳಿಂದ ಖಾಲಿ ಇದೆ ಈ ದ್ವೀಪ, ಇದರ ಹಿಂದಿದೆ ಕರಾಳ ಇತಿಹಾಸ

ಕೊಂಕಣಿ ಕನ್ನಡಿಗರಾದ ನಿಖಿಲ್ ಕಾಮತ್ ಶಿವಮೊಗ್ಗದಲ್ಲಿ ಹುಟ್ಟಿದವರು. ಇವರ ತಂದೆ ಬ್ಯಾಂಕಿಂಗ್ ಉದ್ಯಮಿ. ನಿಖಿಲ್ ಹಾಗೂ ಅವರ ಅಣ್ಣ ನಿತಿನ್ ಕಾಮತ್ ಇಬ್ಬರೂ ಸೇರಿ ಝೀರೋಧ ಎಂಬ ಷೇರು ಬ್ರೋಕರ್ ಸಂಸ್ಥೆಯನ್ನು ಸ್ಥಾಪಿಸಿದ್ದಾರೆ. ಅಣ್ಣ ನಿತಿನ್ ಕಾಮತ್ 2008ರಲ್ಲಿ ಸೀಮಾ ಪಾಟೀಲ್ ಎಂಬಾಕೆಯನ್ನು ಮದುವೆಯಾಗಿದ್ದಾರೆ. ಇವರಿಗೆ ಕಿಯಾನ್ ಎಂಬ ಮಗ ಇದ್ದಾನೆ.

ಇನ್ನಷ್ಟು ವೈರಲ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ