Viral Video : ದಾರಿ ತಪ್ಪಿದ ಹೆಣ್ಮಕ್ಕಳಿಗೆ ಸರಿಯಾದ ದಾರಿ ತೋರಿಸಿದ ಅಣ್ಣ, ವಿಡಿಯೋ ವೈರಲ್

ದಿನಬೆಳಗಾದರೆ ಸೋಶಿಯಲ್ ಮೀಡಿಯಾದಲ್ಲಿ ಒಂದಲ್ಲ ಒಂದು ವಿಡಿಯೋಗಳು ವೈರಲ್ ಆಗುತ್ತಿರುತ್ತದೆ. ಕೆಲವು ವಿಡಿಯೋಗಳು ನಗು ತರಿಸಿದರೆ, ಕೆಲವು ವಿಡಿಯೋಗಳು ಭಯ ಹುಟ್ಟಿಸುತ್ತವೆ. ಇದೀಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ವಿಡಿಯೋದಲ್ಲಿ ಟ್ರಾಫಿಕ್ ನಡುವೆಯೇ ಕಿರಿದಾದ ಜಾಗದಲ್ಲಿ ಯುವತಿಯರಿಬ್ಬರೂ ವಾಹನವನ್ನು ನುಗ್ಗಿಸುತ್ತಿದ್ದಾರೆ. ಈ ವೇಳೆಯಲ್ಲಿ ಅಲ್ಲೇ ಇದ್ದ ಯುವಕನೊಬ್ಬನು ಈ ಗಾಡಿಯನ್ನು ತಳ್ಳುತ್ತ ನಗುತ್ತಿದ್ದಾನೆ. ಈ ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದ್ದು ನೆಟ್ಟಿಗರ ಮುಖದಲ್ಲಿ ನಗು ತರಿಸಿದೆ.

Viral Video : ದಾರಿ ತಪ್ಪಿದ ಹೆಣ್ಮಕ್ಕಳಿಗೆ ಸರಿಯಾದ ದಾರಿ ತೋರಿಸಿದ ಅಣ್ಣ, ವಿಡಿಯೋ ವೈರಲ್
Edited By:

Updated on: May 25, 2024 | 5:28 PM

ನಗರ ಪ್ರದೇಶಗಳಲ್ಲಿ ಟ್ರಾಫಿಕ್ ಜಾಮ್ ಸರ್ವೇ ಸಾಮಾನ್ಯವಾಗಿರುತ್ತದೆ. ಬೆಳಗ್ಗೆ ಕೆಲಸಕ್ಕೆ ಹೋಗುವವರಂತೂ ನಡು ರಸ್ತೆಯಲ್ಲಿ ಸಿಕ್ಕಿ ಹಾಕಿಕೊಳ್ಳುವುದೇ ಹೆಚ್ಚು. ಹೀಗಾಗಿ ಈ ಟ್ರಾಫಿಕ್ ಜಾಮ್ ಕಾರಣದಿಂದ ಜನರು ಹಲವು ರೀತಿಯ ಸಮಸ್ಯೆಯನ್ನು ಎದುರಿಸುತ್ತಾರೆ. ಕೆಲವರು ಅದೇಗೋ ಗಾಡಿಯಲ್ಲಿ ಸ್ವಲ್ಪ ಜಾಗ ಸಿಕ್ಕರೂ ನುಗ್ಗಿಸಿಕೊಂಡು ಹೋಗಿ ಬಿಡುತ್ತಾರೆ. ಆದರೆ ಇದೀಗ ವೈರಲ್ ಆಗಿರುವ ವಿಡಿಯೋದಲ್ಲಿ ಯುವತಿಯೊಬ್ಬರು ಟ್ರಾಫಿಕ್ ಜಾಮ್ ನಲ್ಲಿ ಸಿಕ್ಕಿ ಹಾಕಿಕೊಂಡು, ಹೇಗೋ ಕಿರಿದಾದ ದಾರಿಯಲ್ಲಿ ಸ್ಕೂಟಿಯನ್ನು ನುಗ್ಗಿಸಿಕೊಂಡು ಹೋಗುವ ದೃಶ್ಯವು ನಗು ತರಿಸುತ್ತಿದೆ.

ವಿಡಿಯೋವನ್ನು ನೋಡಿದರೆ ಯುವತಿಯರಿಬ್ಬರೂ ಇವತ್ತಿಗಂತೂ ಈ ಟ್ರಾಫಿಕ್ ನಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಭಾವಿಸಿ ಅಲ್ಲೇ ಇದ್ದ ಕಿರಿದಾದ ದಾರಿಯಲ್ಲಿ ಸ್ಕೂಟಿಯನ್ನು ನುಗ್ಗಿಸಲು ಪ್ರಯತ್ನಿಸಿದ್ದಾರೆ. ಈ ವೇಳೆಯಲ್ಲಿ ಅಲ್ಲೇ ಇದ್ದ ಯುವಕನೊಬ್ಬನು ಈ ಯುವತಿಯರು ಇದ್ದ ಸ್ಕೂಟಿಯನ್ನು ಜೋರಾಗಿ ತಳ್ಳುತ್ತ ವಾಹನಗಳು ಇರುವಲ್ಲಿಗೇ ತಂದು ನಿಲ್ಲಿಸಿ ಜೋರಾಗಿ ನಗುತ್ತಿದ್ದಾನೆ. ಇತ್ತ ಸ್ಕೂಟಿಯಲ್ಲಿದ್ದ ಇಬ್ಬರೂ ಯುವತಿಯರು ನಗುತ್ತಿದ್ದಾರೆ.

ಇದನ್ನೂ ಓದಿ: ಎಕ್ಸ್​​​ನಲ್ಲಿ ಸಖತ್​​ ಟ್ರೆಂಡ್ ಆಗುತ್ತಿದೆ ಹಾರ್ದಿಕ್ ಪಾಂಡ್ಯ ಡೈವೋರ್ಸ್ ಸುದ್ದಿಯ ಮೀಮ್ಸ್, ಇಲ್ಲಿದೆ ನೋಡಿ

ವೈರಲ್​​ ವಿಡಿಯೋ ಇಲ್ಲಿದೆ ನೊಡಿ:

ಈ ವಿಡಿಯೋವನ್ನು ನಮ್ಗೆಲ್ಲಾ ಯಾರ್ ಬೀಳ್ತಾರೆ ಎನ್ನುವ ಪೇಜ್ ನಲ್ಲಿ ಶೇರ್ ಮಾಡಲಾಗಿದ್ದು, ದಾರಿ ತಪ್ಪಿದ ಹೆಣ್ಣು ಮಕ್ಕಳಿಗೆ ಸರಿಯಾದ ದಾರಿ ತೋರಿಸಿದ ಅಣ್ಣ ಎಂದು ಬರೆದುಕೊಂಡಿದ್ದಾರೆ. ಈ ವಿಡಿಯೋವನ್ನು ನೋಡುತ್ತಿದ್ದಂತೆ ನೆಟ್ಟಿಗರು ನಾನಾ ರೀತಿಯ ಕಾಮೆಂಟ್ ಗಳು ವ್ಯಕ್ತವಾಗಿದ್ದು, ಬಳಕೆದಾರರೊಬ್ಬರು ಚಪ್ಪಾಳೆ ತಟ್ಟುವ ಇಮೋಜಿಯನ್ನು ಶೇರ್ ಮಾಡಿಕೊಂಡಿದ್ದಾರೆ. ಮತ್ತೊಬ್ಬರು ಅಣ್ಣಗೆ ಒಂದು ಎಗ್ ರೈಸ್ ಪಾರ್ಸೆಲ್ ಎಂದು ಬರೆದುಕೊಂಡಿದ್ದಾರೆ.