ಇತ್ತೀಚೆಗೆ ಗೋ ಫಸ್ಟ್ ವಿಮಾಣ (Go First flight)ನಲ್ಲಿ ಎಸಿ ಅಸಮರ್ಪಕವಾಗಿ ಕಾರ್ಯನಿರ್ವಹಿಸಿದ ಬೆನ್ನಲ್ಲೆ ಮುಂಬೈಗೆ ತೆರಳುತ್ತಿದ್ದ ಗೋಏರ್ ವಿಮಾನ(Go Air flight)ದಲ್ಲಿ ಎಸಿ ಸ್ಥಗಿತಗೊಂಡಿರುವ ಘಟನೆ ಬೆಳಕಿಗೆ ಬಂದಿದೆ. ವಿಮಾನ ಹಾರಾಟದ ವೇಳೆ ಎಸಿ ಇಲ್ಲದೆ ಪರದಾಡಿದ ಪ್ರಯಾಣಿಕರು ಸಿಬ್ಬಂದಿಗಳ ನಿರ್ಲಕ್ಷ್ಯಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಜೊತೆಗೆ ವಿಮಾನ ಬಹಿಷ್ಕಾರದ ಎಚ್ಚರಿಕೆಯನ್ನು ಕೂಡ ನೀಡಿದ್ದಾರೆ.
ಗೋಏರ್ ಸ್ಥಾಪಿಸಿದ ಕಡಿಮೆ ವೆಚ್ಚದ ಮುಂಬೈ ವಿಮಾನಯಾನದ ವೇಳೆ ಎಸಿ ಸ್ಥಗಿತಗೊಂಡು ಆನ್‌ಲೈನ್‌ನಲ್ಲಿ ಹೆಚ್ಚು ಸುದ್ದಿಯಾಗಿದೆ. ವಿಮಾನದಲ್ಲಿ ಸಹ ಪ್ರಯಾಣಿಕರು ಪರದಾಡುತ್ತಿರುವ ಬಗ್ಗೆ ಕೆಲವು ಪ್ರಯಾಣಿಕರು ಅನುಭವಗಳನ್ನು ಹಂಚಿಕೊಂಡಿದ್ದಾರೆ. ಡೆಹ್ರಾಡೂನ್‌ನಿಂದ ಮುಂಬೈಗೆ ತೆರಳುತ್ತಿದ್ದ ವಿಮಾನದಲ್ಲಿ ಪ್ರಯಾಣಿಕರು ವಿಮಾನದ ಕೂಲಿಂಗ್ ವ್ಯವಸ್ಥೆಯ ಬಗ್ಗೆ ದೂರುತ್ತಿರುವ ವಿಡಿಯೋ ವೈರಲ್ ಆಗುತ್ತಿದೆ.
G8 2316 ಫ್ಲೈಟ್‌ನಲ್ಲಿ ಮಾಡಲಾದ ವಿಡಿಯೋ ಇದಾಗಿದ್ದು, ಪ್ರಯಾಣಿಕರು ವಿಮಾನಯಾನದ ಸಲಹೆ ಸೂಚನೆಗಳು ಒಳಗೊಂಡ ಸೂಚನಾ ಪತ್ರಗಳನ್ನು ಹಿಡಿದುಕೊಂಡು ಗಾಳಿ ಹಾಕುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದು. ಅಲ್ಲದೆ ಒಬ್ಬ ಮಹಿಳೆ ಸಹ ಪ್ರಯಾಣಿಕೆಯನ್ನು ಮುಂಭಾಗದ ಆಸನಕ್ಕೆ ಕರೆದೊಯ್ಯುವುದನ್ನು ಕಾಣಬಹುದು.
ಪ್ರಯಾಣಿಕರಿಗೆ ಸಹಾಯ ಮಾಡುತ್ತಿರುವ ಮಹಿಳೆಯು, ”ಅವರು ಕ್ಯಾನ್ಸರ್ ರೋಗಿಯಿದ್ದಾರೆ ಮತ್ತು ರೋಗಿಯು ಕ್ಲಾಸ್ಟ್ರೋಫೋಬಿಕ್ ಅನುಭವಿಸುತ್ತಿದ್ದಾರೆ. ಏರ್ ಕಂಡಿಷನರ್ ಕೆಲಸ ಮಾಡುತ್ತಿಲ್ಲ ಎಂದಾದರೆ ಪೈಲಟ್ ಎಂದಿಗೂ ವಿಮಾನವನ್ನು ಟೇಕಾಫ್ ಮಾಡಬಾರದಿತ್ತು. ಇದು ಇಡೀ ವ್ಯವಸ್ಥೆಗೆ ನಾಚಿಕೆಗೇಡು” ಎಂದ ಅವರ ಇಂತಹ ಘಟನೆಗಳು ಪುನರಾವರ್ತನೆಯಾಗದಂತೆ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಒತ್ತಾಯಿಸಿದ್ದಾರೆ.
@GoFirstairways G8 2316 was one of the worst experiences!With Ac’s not working & a full flight,suffocation struck passengers had no way out,sweating profusely paranoid passengers were on the verge of collapsing.3 ppl fainted,a chemo patient couldn’t even breathe.#complaint pic.twitter.com/mqjFiiQHKF
— Roshni Walia (@roshniwalia2001) June 14, 2022
ಜನಪ್ರಿಯ ದೂರದರ್ಶನ ನಟಿ ರೋಶ್ನಿ ವಾಲಿಯಾ ಅವರು ವಿಡಿಯೋವನ್ನು ಹಂಚಿಕೊಂಡು, ”ಎಸಿ ಕಾರ್ಯನಿರ್ವಹಿಸದ ಪರಿಣಾಮ ಪ್ರಯಾಣಿಕರು ಉಸಿರುಗಟ್ಟುವಿಕೆಗೆ ಒಳಗಾದರು ಮತ್ತು ಕೆಲವು ಪ್ರಯಾಣಿಕರು ಕುಸಿದು ಬೀಳುವ ಹಂತದಲ್ಲಿದ್ದರು” ಎಂದು ಹೇಳಿಕೊಂಡಿದ್ದಾರೆ.
ಕಳೆದ ವಾರವೇ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಲಾಗಿದ್ದರೂ ಇದೀಗ ವೈರಲ್ ಪಡೆದು ಸದ್ದು ಮಾಡುತ್ತಿದೆ. ಘಟನೆ ಬಗ್ಗೆ ಪ್ರತಿಕ್ರಿಯಿಸಿದ ಕಂಪನಿ, “ಹಾಯ್, ನಮ್ಮನ್ನು ತಲುಪಿದ್ದಕ್ಕಾಗಿ ನಾವು ನಿಮಗೆ ಧನ್ಯವಾದಗಳನ್ನು ತಿಳಿಸುತ್ತೇವೆ ಮತ್ತು ನಿಮ್ಮ ಅಗತ್ಯದ ಸಮಯದಲ್ಲಿ ನಾವು ನಿಮ್ಮೊಂದಿಗಿದ್ದೇವೆ.
ದಯವಿಟ್ಟು ನಿಮ್ಮ PNR, ಸಂಪರ್ಕ ಸಂಖ್ಯೆ ಮತ್ತು ಇಮೇಲ್ ಐಡಿಯನ್ನು DM ಮೂಲಕ ಹಂಚಿಕೊಳ್ಳಿ, ನಮ್ಮ ತಂಡವು ನಿಮ್ಮನ್ನು ಸಂಪರ್ಕಿಸುತ್ತದೆ”ಎಂದು ಟ್ವೀಟ್ ಮಾಡಿದೆ.
Published On - 10:59 am, Sun, 26 June 22