Viral Video: ಸುರಿದ ಭಾರೀ ಮಳೆಗೆ ಉಂಟಾದ ಪ್ರವಾಹ, ದೋಣಿ ಮೂಲಕ ವರನ ಮನೆಗೆ ಹೋದ ವಧು

Andhra Pradesh News: ಸುರಿದ ಭಾರೀ ಮಳೆಗೆ ಆಂಧ್ರಪ್ರದೇಶದಲ್ಲಿ ಪ್ರವಾಹ ಪರಿಸ್ಥಿತಿ ತಲೆದೋರಿದೆ. ಪರಿಣಾಮವಾಗಿ ಮದುವೆ ದಿನದಂದು ವಧು ವರನ ಮನೆಗೆ ದೋಣಿ ಮೂಲಕ ಹೋಗುವಂತಾಗಿದೆ. ಸದ್ಯ ಸಾಮಾಜಿಕ ಜಾಲತಾಣದಲ್ಲಿ ಇದರ ವಿಡಿಯೋ ವೈರಲ್ ಆಗುತ್ತಿದೆ.

Viral Video: ಸುರಿದ ಭಾರೀ ಮಳೆಗೆ ಉಂಟಾದ ಪ್ರವಾಹ, ದೋಣಿ ಮೂಲಕ ವರನ ಮನೆಗೆ ಹೋದ ವಧು
ವರನ ಮನೆಗೆ ದೋಣಿ ಮೂಲಕ ಹೋದ ವಧು
Updated By: Rakesh Nayak Manchi

Updated on: Jul 15, 2022 | 12:23 PM

ಆಂಧ್ರಪ್ರದೇಶ: ಕರಾವಳಿ ಭಾಗವಾದ ಆಂಧ್ರಪ್ರದೇಶದ ಕೋನಸೀಮಾ ಜಿಲ್ಲೆಯಲ್ಲಿ ಸುರಿದ ಭಾರೀ ಮಳೆಯಿಂದಾಗಿ ಒಂದಷ್ಟು ಪ್ರದೇಶಗಳು ನೀರಿನಿಂದ ಆವೃತವಾಗಿವೆ. ಇದು ಜನಜೀವನವನ್ನು ಅಸ್ತವ್ಯಸ್ಥಗೊಳಿಸಿದ್ದು, ಸಂಚಾರಕ್ಕೆ ಅಡ್ಡಿಯುಂಟು ಮಾಡಿತು. ಪರಿಣಾಮವಾಗಿ ಮದುವೆ ದಿನದಂದು ವಧು ವರನ ಮನೆಗೆ ದೋಣಿ ಮೂಲಕ ಹೋಗುವಂತಾಗಿದೆ. ಸದ್ಯ ಸಾಮಾಜಿಕ ಜಾಲತಾಣದಲ್ಲಿ ಇದರ ವಿಡಿಯೋ ವೈರಲ್ (Video Viral) ಆಗುತ್ತಿದೆ.

ಇದನ್ನೂ ಓದಿ: Viral: ಟ್ರಾಫಿಕ್‌ನಲ್ಲಿ ಹಾರ್ನ್ ಮಾಡಿದಾಗ ಏನಾಗುತ್ತದೆ? ಆಟೋ ರಿಕ್ಷಾದ ಹಿಂದೆ ಬರೆದ ಪ್ರಶ್ನೆ ವೈರಲ್

ವೈರಲ್ ವಿಡಿಯೋದಲ್ಲಿ ಇರುವಂತೆ, ಬಣ್ಣದ ಸೀರೆಯೊಂದಿಗೆ ಶೃಂಗರಿಸಿದ ವಧು ಮತ್ತು ಆಕೆಯ ಕುಟುಂಬಸ್ಥರು ವರನ ಮನೆಗೆ ಹೋಗುವ ವೇಳೆಯಲ್ಲಿ ಭಾರೀ ಮಳೆಯನ್ನು ಎದುರಿಸಿದರು. ಸುರಿದ ಧಾರಾಕಾರ ಮಳೆಯಿಂದ ಪ್ರವಾಹ ಸ್ಥಿತಿ ತಲೆದೋರಿದೆ. ಪರಿಣಾಮವಾಗಿ ವರನ ಮನೆಗೆ ವಾಹನದಲ್ಲಿ ಹೋಗುವ ಬದಲು ದೋಣಿ ಮೂಲಕ ಹೋಗುವಂತಾಯಿತು.

ಮಳೆಗಾಲವನ್ನು ತಪ್ಪಿಸುವ ಆಶಯದೊಂದಿಗೆ ಆಗಸ್ಟ್‌ನಲ್ಲಿ ಹಸೆಮಣೆ ಏರುವ ಯೋಜನೆಯಲ್ಲಿದ್ದ ವರ ಅಶೋಕ್ ಮತ್ತು ವಧು ಪ್ರಶಾಂತಿ ಅವರು ಜುಲೈನಲ್ಲಿ ಮದುವೆಯಾಗಲು ನಿರ್ಧರಿಸಿದರು. ಆದರೂ ಇವರ ಮದುವೆಗೆ ಮಳೆರಾಯಣ ಕಾಟ ತಪ್ಪಲಿಲ್ಲ. ಭಾರೀ ಮಳೆ ಮತ್ತು ಪ್ರವಾಹದಿಂದಾಗಿ ಮದುವೆ ಆರಂಭದಲ್ಲಿ ವಿಳಂಬವಾಯಿತು. ಅದರ ಹೊರತಾಗಿಯೂ ವಧು ಮತ್ತು ಅವರ ಕುಟುಂಬವು ಮದುವೆಯ ವಿಧಿವಿಧಾನಗಳನ್ನು ಮುಗಿಸಲು ವರನ ಮನೆಗೆ ದೋಣಿಯಲ್ಲಿ ತೆರಳಿದರು.

ಇದನ್ನೂ ಓದಿ: Viral Video: ಮೀನುಗಾರರ ಬಲೆಗೆ ಸಿಕ್ಕಿಬಿದ್ದ 16 ಅಡಿ ಉದ್ದದ ಮೀನು! ಇದು ಭೂಕಂಪನದ ಸಂಕೇತವಂತೆ

ಆಂಧ್ರಪ್ರದೇಶವು 36 ವರ್ಷಗಳ ನಂತರ ಭೀಕರ ಪ್ರವಾಹದ ಅಂಚಿನಲ್ಲಿದೆ, ಗೋದಾವರಿ ನದಿಯು ಶರವೇಗದಲ್ಲಿ ಹರಿದುಹೋಗುತ್ತಿದೆ. ಗೋದಾವರಿಯಲ್ಲಿ 1986ರಲ್ಲಿ ಸಂಭವಿಸಿದ ಅತಿ ಹೆಚ್ಚು ಪ್ರವಾಹ ಇದಾಗಿದೆ. ಪಶ್ಚಿಮ ಗೋದಾವರಿ ಮತ್ತು ಕೋನಸೀಮಾ ಜಿಲ್ಲೆಗಳ ಹತ್ತಾರು ಹಳ್ಳಿಗಳು ಪ್ರವಾಹದ ಅಪಾಯವಿದೆ ಎಂದು ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ.

ಪ್ರವಾಹದಿಂದ ಉಂಟಾದ ಹಾನಿಯನ್ನು ನಿರ್ಣಯಿಸಲು ಮುಖ್ಯಮಂತ್ರಿ ವೈ.ಎಸ್ ಜಗನ್ ಮೋಹನ್ ರೆಡ್ಡಿ ಶುಕ್ರವಾರ ವೈಮಾನಿಕ ಸಮೀಕ್ಷೆ ನಡೆಸಲಿದ್ದಾರೆ. ಮಹಾರಾಷ್ಟ್ರ ಮತ್ತು ತೆಲಂಗಾಣದ ಮೇಲ್ಭಾಗದ ಜಲಾನಯನ ಪ್ರದೇಶಗಳಲ್ಲಿ ಮಳೆಯಾಗುತ್ತಿದ್ದು, ಪ್ರವಾಹದ ಮಟ್ಟದಲ್ಲಿ ಏರಿಕೆಯಾಗುತ್ತಿರುವ ಹಿನ್ನೆಲೆ ಮುಂದಿನ ಎರಡು ದಿನಗಳಲ್ಲಿ 24 ಲಕ್ಷ ಕ್ಯೂಸೆಕ್‌ಗಿಂತ ಹೆಚ್ಚಿನ ನೀರನ್ನು ಹೊರಬಿಡುವ ನಿರೀಕ್ಷೆಯಿದೆ ಎಂದು ಅಧಿಕಾರಿಗಳು ನಿರೀಕ್ಷಿಸಿದ್ದಾರೆ.

ಇದನ್ನೂ ಓದಿ: Viral Photo: ಶ್ರೀಲಂಕಾದಲ್ಲಿ ತುರ್ತು ಪರಿಸ್ಥಿತಿ ಈ ಜೋಡಿಗಳದ್ದು ಬೇರೆಯದ್ದೇ ‘ತುರ್ತು ಸ್ಥಿತಿ’

Published On - 12:23 pm, Fri, 15 July 22