Viral Video: ನಿವೃತ್ತಿಗೂ ಮುನ್ನ ಅಮ್ಮನಿಗೆ ನಮಸ್ಕರಿಸಿದ ಸೇನಾಧಿಕಾರಿ, ಇದು ಭಾರತದ ಸಂಸ್ಕೃತಿ ಎಂದ ಜನ

ಸೇನಾಧಿಕಾರಿ ನಿವೃತ್ತಿಗೂ ಮುನ್ನ ಸಮವಸ್ತ್ರವನ್ನು ಧರಿಸಿ ಮನೆಗೆ ಹೋಗಿ ತಾಯಿಯನ್ನು ಭೇಟಿಯಾಗಿ, ಮಗ ಬರುವುದನ್ನು ಕಂಡು ಅವರ ತಾಯಿ ಆಶ್ಚರ್ಯಚಕಿತರಾದರು. ಅಮ್ಮ ಬಳಿ ಬಂದು ಸೇನಾಧಿಕಾರಿ ತಾಯಿಗೆ ನಮಸ್ಕರಿಸುತ್ತಾರೆ. ಇದು ಭಾವನಾತ್ಮಕ ಕ್ಷಣವಾಗಿದೆ ಮತ್ತು ತಾಯಿ-ಮಗ ಇಬ್ಬರೂ ಒಬ್ಬರನ್ನೊಬ್ಬರು ಅಪ್ಪಿಕೊಳ್ಳುತ್ತಾರೆ.

Viral Video: ನಿವೃತ್ತಿಗೂ ಮುನ್ನ ಅಮ್ಮನಿಗೆ ನಮಸ್ಕರಿಸಿದ ಸೇನಾಧಿಕಾರಿ, ಇದು ಭಾರತದ ಸಂಸ್ಕೃತಿ ಎಂದ ಜನ
Viral Video
Image Credit source: NDTV
Edited By:

Updated on: Dec 24, 2022 | 12:10 PM

ಒಬ್ಬ ಮನಷ್ಯನಿಗೆ ತಾಯಿ ಎಷ್ಟು ಮಹತ್ವ ಎಂಬುದನ್ನು ಈ ವಿಡಿಯೊದಲ್ಲಿ (ViralVideo) ನೀವು ನೋಡಬಹುದು, ಅಮ್ಮ ಎಂದರೆ ಎಲ್ಲವನ್ನೂ ತಿಳಿದವಳು, ಅಮ್ಮ ಅಪ್ಪುಗೆ ಧೈರ್ಯ, ಶಕ್ತಿ, ಎಲ್ಲವನ್ನು ನೀಡುತ್ತದೆ ಎನ್ನುವುದಕ್ಕೆ ಈ ವಿಡಿಯೊ ಸಾಕ್ಷಿ. ಅಮ್ಮ ಜೀವನದಲ್ಲಿ ಅತಿ ಮುಖ್ಯವಾದ ವ್ಯಕ್ತಿ, ಮಕ್ಕಳು ಹೇಗಿದರು ಅವರನ್ನು ಒಪ್ಪಿಕೊಳ್ಳುವ ಮನಸ್ಸು ಅವಳದ್ದು, ಮಕ್ಕಳು ಎತ್ತರಕ್ಕೆ ಬೆಳೆದಾಗ ಮೊದಲು ಖುಷಿಪಡುವ ಜೀವ ಅಮ್ಮ. ಇದೀಗ ಒಂದು ವಿಡಿಯೊ ಸಖತ್ ವೈರಲ್ ಆಗುತ್ತಿದೆ. ದೇಶದ ಹಿರಿಯ ಸೇನಾಧಿಕಾರಿ ತಾನು ನಿವೃತ್ತಿ ಪಡೆಯುವ ಮೊದಲು ಅವರ ಅಮ್ಮನ್ನು ಭೇಟಿ ಮಾಡಿರುವ ವಿಡಿಯೊ ವೈರಲ್ ಆಗಿದೆ.

ಈ ವಿಡಿಯೋವನ್ನು ಮೇಜರ್ ಜನರಲ್ ರಂಜನ್ ಮಹಾಜನ್ ಅವರು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ. ವೀಡಿಯೊದಲ್ಲಿ, ಸೇನಾಧಿಕಾರಿ ಸಮವಸ್ತ್ರವನ್ನು ಧರಿಸಿ ಮನೆಗೆ ಹೋಗಿ ತಾಯಿಯನ್ನು ಭೇಟಿಯಾಗುತ್ತಿರುವುದನ್ನು ಕಾಣಬಹುದು. ಮಗ ಬರುವುದನ್ನು ಕಂಡು ಅವರ ತಾಯಿ ಆಶ್ಚರ್ಯಚಕಿತರಾದರು. ಅಮ್ಮ ಬಳಿ ಬಂದು ಸೇನಾಧಿಕಾರಿ ಅವರಿಗೆ ನಮಸ್ಕರಿಸುತ್ತಾರೆ. ಇದು ಭಾವನಾತ್ಮಕ ಕ್ಷಣವಾಗಿದೆ ಮತ್ತು ತಾಯಿ-ಮಗ ಇಬ್ಬರೂ ಒಬ್ಬರನ್ನೊಬ್ಬರು ಅಪ್ಪಿಕೊಳ್ಳುತ್ತಾರೆ. ಸೇನಾಧಿಕಾರಿ ತಾಯಿಗೆ ಮಾಲೆಯನ್ನೂ ಅರ್ಪಿಸುತ್ತಾನೆ.

ತಾನು ನಿವೃತ್ತಿ ಪಡೆಯುವ ಮೊದಲು ನನ್ನ ತಾಯಿಗೆ ಅಂತಿಮ ನಮಸ್ಕಾರ ಮಾಡಿದ್ದಾನೆ. ನಾವು ಅಂಬಾಲಾದಿಂದ ದೆಹಲಿಗೆ ಹೋಗಿ ನನ್ನ ಸೈನ್ಯ ಕರ್ತವ್ಯವನ್ನು ಮಾಡಿದ್ದಾನೆ, ನನ್ನ ಈ ಪುಣ್ಯ ಕೆಲಸಕ್ಕೆ ಸಾಕ್ಷಿಯಾಗಿ, ಈ ಜೀವನಕ್ಕೆ ಅರ್ಹರನ್ನಾಗಿ ಮಾಡಿದ ಮತ್ತು ಸೇವೆ ಮಾಡಲು ಸಮವಸ್ತ್ರ ನೀಡಿದ ನನ್ನ ತಾಯಿಗೆ ಅಭಿನಂದಿಸುವುದು ಕರ್ತವ್ಯ ಎಂದು ಹೇಳಿದ್ದಾರೆ. 35 ವರ್ಷಗಳ ಕಾಲ ನನ್ನ ತಾಯ್ನಾಡಿಗೆ ಹೆಮ್ಮೆಯಿಂದ ಸೇವೆ ಸಲ್ಲಿಸಿದ್ದೇನೆ. ಸೈನ್ಯ ನನಗೆ ಒಂದು ಅವಕಾಶವನ್ನು ನೀಡಿತ್ತು, ನಾನು ಮತ್ತೊಮ್ಮೆ ಗಣ್ಯ ಭಾರತೀಯ ಸೇನೆಗೆ ಸೇವೆ ಸಲ್ಲಿಸಲು ಯಾವಾಗಲೂ ಸಿದ್ಧ.

ಇದನ್ನು ಓದಿ:Viral Video: ಬ್ರೆಜಿಲ್ ದೇಶದ ಮಾಡೆಲೊಬ್ಬಳನ್ನು ಸ್ಥೂಲದೇಹಿ ಎಂಬ ಕಾರಣಕ್ಕೆ ಕತಾರ್ ಏರ್ವೇಸ್ ವಿಮಾನದಿಂದ ಕೆಳಗಿಳಿಸಲಾಯಿತು!

ಡಿಸೆಂಬರ್ 13 ರಂದು ಹಂಚಿಕೊಂಡ ಈ ವಿಡಿಯೊ ಕ್ಲಿಪ್ 38,000 ಕ್ಕೂ ಹೆಚ್ಚು ಮೆಚ್ಚುಗೆ ಮತ್ತು ನಾಲ್ಕು ಲಕ್ಷಕ್ಕೂ ಹೆಚ್ಚು ಜನ ವೀಕ್ಷಣೆ ಮಾಡಿದ್ದಾರೆ. ಈ ವಿಡಿಯೊವನ್ನು ನೋಡಿ ಸೆಲೆಬ್ರಿಟಿ ರಣವಿಜಯ್ ಸಂಘ ಕಾಮೆಂಟ್ ಮಾಡಿದ್ದು, ನಿಮ್ಮ ಬಗ್ಗೆ ತುಂಬಾ ಹೆಮ್ಮೆ ಇದೆ ಎಂದು ಕಮೆಂಟ್​ಗಳನ್ನು ಮಾಡಿದ್ದಾರೆ.

ಇದು ಎಂತಹ ಸಂಸ್ಕೃತಿ. ಅದ್ಭುತ. ಭಾರತೀಯ ಸಶಸ್ತ್ರ ಪಡೆಗಳ ನೈತಿಕತೆ ಮತ್ತು ಭಾರತೀಯ ಸಂಸ್ಕೃತಿ ಮತ್ತು ಸಂಪ್ರದಾಯಗಳನ್ನು ಇದು ಪ್ರತಿಬಿಂಬಿಸುತ್ತದೆ. ನಾವು ಜೀವನದಲ್ಲಿ ಎಷ್ಟೇ ದೊಡ್ಡವರಾಗಿದ್ದರೂ ಅಥವಾ ಎಷ್ಟು ವಯಸ್ಸಾಗಿದ್ದರೂ, ಪೋಷಕರು ಯಾವಾಗಲೂ ದೇವರ ಸ್ಥಾನಮಾನವನ್ನು ಹೊಂದಿರುತ್ತಾರೆ ಎಂದು ಮತ್ತೊಬ್ಬ ಬಳಕೆದಾರರೂ ತಿಳಿಸಿದ್ದಾರೆ.

ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ