Viral Post: ಆಟೋಗೆ ಆಫೀಸ್ ಚೇರ್‌ ಫಿಟ್‌‌ ಮಾಡಿದ ಚಾಲಕ; ಫೋಟೋ ವೈರಲ್

|

Updated on: Sep 24, 2024 | 4:09 PM

ಆರಾಮಾಗಿ ಕೂತು ಆಟೋ ಚಲಾಯಿಸಲು ಆಗುವಂತೆ ಆಟೋಗೆ ಆಫೀಸ್ ಚೇರ್‌ ಫಿಟ್‌‌ ಮಾಡಿರುವುದನ್ನು ಫೋಟೋದಲ್ಲಿ ಕಾಣಬಹುದು. ಸದ್ಯ ಈ ಆಟೋ ಚಾಲಕನ ಕ್ರಿಯೇಟಿವ್​​ ಐಡಿಯಾಗೆ ನೆಟ್ಟಿಗರಿಂದ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ. ವೈರಲ್​​ ಫೋಸ್ಟ್​​ ಇಲ್ಲಿದೆ ನೋಡಿ.

Viral Post: ಆಟೋಗೆ ಆಫೀಸ್ ಚೇರ್‌ ಫಿಟ್‌‌ ಮಾಡಿದ ಚಾಲಕ; ಫೋಟೋ ವೈರಲ್
ಆಟೋಗೆ ಆಫೀಸ್ ಚೇರ್‌ ಫಿಟ್‌‌ ಮಾಡಿದ ಚಾಲಕ
Follow us on

ಇತ್ತೀಚಿಗಷ್ಟೇ ಬೆಂಗಳೂರಿನ ಆಟೋ ಚಾಲಕರೊಬ್ಬರು ಚಿಲ್ಲರೆ ಸಮಸ್ಯೆ ಯಾರಿಗೆ ಬೇಕಪ್ಪಾ ಎನ್ನುತ್ತಾ ತನ್ನಲ್ಲಿರುವ ಸ್ಮಾರ್ಟ್‌ವಾಚ್‌ನಲ್ಲಿ ತನ್ನ ಯುಪಿಐ ಕ್ಯೂಆರ್ ಕೋಡ್ ಬಳಸಿ ಗ್ರಾಹಕರಿಂದ ಆನ್ಲೈನ್ ಪೇಮೆಂಟ್ ಸ್ವೀಕರಿಸಿರುವ ಫೋಟೋ ಒಂದು ಎಲ್ಲೆಡೆ ವೈರಲ್​ ಆಗಿತ್ತು. ಇದೀಗ ಇಂತದ್ದೇ ಮತ್ತೊಬ್ಬ ಆಟೋ ಚಾಲಕನ ಕ್ರಿಯೇಟಿವ್​​ ಐಡಿಯಾವೊಂದು ಸೋಶಿಯಲ್​​ ಮೀಡಿಯಾಗಳಲ್ಲಿ ಭಾರೀ ವೈರಲ್​​ ಆಗುತ್ತಿದೆ. ಇಲ್ಲಿ ಆಟೋ ಚಾಲಕ ತನ್ನ ಡ್ರೈವರ್ ಸೀಟ್ ಅನ್ನು ಆಫೀಸ್ ಚೇರ್‌ ಆಗಿ ಅಪ್‌ಗ್ರೇಡ್ ಮಾಡಿದ್ದು, ಇದರ ಫೋಟೋ ಎಲ್ಲೆಡೆ ಹರಿದಾಡುತ್ತಿದೆ.

@shivaniiiiiii_ ಎಂಬ ಟ್ವಿಟರ್​ ಖಾತೆಯಲ್ಲಿ ಈ ಆಟೋ ಚಾಲಕನ ಫೋಟೋ ಹಂಚಿಕೊಳ್ಳಲಾಗಿದ್ದು, ಸದ್ಯ ಎಲ್ಲೆಡೆ ವೈರಲ್​ ಆಗಿದೆ. ಸೆಪ್ಟೆಂಬರ್​​​ 23ರಂದು ಹಂಚಿಕೊಂಡಿರುವ ಈ ಫೋಸ್ಟ್​​ ಅನ್ನು ಒಂದೇ ದಿನದಲ್ಲಿ 76 ಸಾವಿರಕ್ಕೂ ಹೆಚ್ಚು ಜನರು ವೀಕ್ಷಿಸಿದ್ದಾರೆ. ಸದ್ಯ ಫೋಟೋ ಎಲ್ಲೆಡೆ ವೈರಲ್​​ ಆಗುತ್ತಿದೆ.

ವೈರಲ್​​ ಫೋಸ್ಟ್​​ ಇಲ್ಲಿದೆ ನೋಡಿ:

ಇದನ್ನೂ ಓದಿ: ಬೆಂಗಳೂರಿನಲ್ಲಿ ಪೂಕಳಂ ಗಲಾಟೆ: ಮಕ್ಕಳು ಮುದ್ದಾಗಿ ಬಿಡಿಸಿದ ಹೂವಿನ ರಂಗೋಲಿ ಹಾಳು ಮಾಡಿದ ಮಹಿಳೆ

ಎಷ್ಟೇ ಟ್ರಾಫಿಕ್​​ ಇದ್ದರೂ ಕೂಡ ಆರಾಮಾಗಿ ಆಟೋ ಚಲಾಯಿಸಲು ಆಗುವಂತೆ ಕೂರಲು ಆಟೋಗೆ ಆಫೀಸ್ ಚೇರ್‌ ಫಿಟ್‌‌ ಮಾಡಿರುವುದನ್ನು ಕಾಣಬಹುದು. ಸದ್ಯ ಈ ಆಟೋ ಚಾಲಕನ ಕ್ರಿಯೇಟಿವ್​​ ಐಡಿಯಾಗೆ ನೆಟ್ಟಿಗರಿಂದ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ. ಸಾಕಷ್ಟು ಜನರು ಕಾಮೆಂಟ್​​ ಮೂಲಕ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.

ವೈರಲ್​​ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ