AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಂಗಳೂರಿನಲ್ಲಿ ಪೂಕಳಂ ಗಲಾಟೆ: ಮಕ್ಕಳು ಮುದ್ದಾಗಿ ಬಿಡಿಸಿದ ಹೂವಿನ ರಂಗೋಲಿ ಹಾಳು ಮಾಡಿದ ಮಹಿಳೆ

ಓಣಂ ಹಬ್ಬದ ಸಮಯದಲ್ಲಿ ಕೇರಳಿಗರು ತಮ್ಮ ಮನೆಯಲ್ಲಿ ಹೂವಿನ ರಂಗೋಲಿಯನ್ನು ಬಿಡಿಸುತ್ತಾರೆ. ಅದೇ ರೀತಿ ಬೆಂಗಳೂರಿನ ಅಪಾರ್ಟ್‌ಮೆಂಟ್‌ ಒಂದರಲ್ಲಿ ಕೇರಳ ಮೂಲದ ಕೆಲವು ಮಕ್ಕಳು ತಮ್ಮ ಹಬ್ಬದ ಆಚರಣೆಯ ಸಲುವಾಗಿ ಸುಂದರವಾದ ಹೂವಿನ ರಂಗೋಲಿಯನ್ನು ಬಿಡಿಸಿದ್ದು, ತನ್ನ ಅನುಮತಿಯಿಲ್ಲದೆ ಹೂವಿನ ರಂಗೋಲಿ ಹಾಕಿದರೆಂದು ಅದನ್ನು ಕಾಲಿನಿಂದ ಒದ್ದು ಮಹಿಳೆಯೊಬ್ಬರು ಕಿರಿಕ್‌ ಮಾಡಿದ್ದಾರೆ. ಈ ವಿಡಿಯೋ ಇದೀಗ ಸೋಷಿಯಲ್‌ ಮೀಡಿಯಾದಲ್ಲಿ ಭಾರೀ ವೈರಲ್‌ ಆಗುತ್ತಿದ್ದು, ಮಹಿಳೆಯ ದುರ್ವರ್ತನೆಗೆ ನೆಟ್ಟಿಗರು ಭಾರೀ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬೆಂಗಳೂರಿನಲ್ಲಿ ಪೂಕಳಂ ಗಲಾಟೆ: ಮಕ್ಕಳು ಮುದ್ದಾಗಿ ಬಿಡಿಸಿದ ಹೂವಿನ ರಂಗೋಲಿ ಹಾಳು ಮಾಡಿದ ಮಹಿಳೆ
ವೈರಲ್​​ ವಿಡಿಯೋ
ಮಾಲಾಶ್ರೀ ಅಂಚನ್​
| Edited By: |

Updated on: Sep 24, 2024 | 11:39 AM

Share

ಓಣಂ ಹಬ್ಬದಲ್ಲಿ ಪೂಕಳಂ ಪ್ರಮುಖ ಆಕರ್ಷಣೆ ಅಂತಾನೇ ಹೇಳಬಹುದು. ಪೂಕಳಂ ಎಂದ್ರೆ ಹೂವಿನ ರಂಗೋಲಿ. ಈ ಸುಗ್ಗಿ ಹಬ್ಬದ ಸಮಯದಲ್ಲಿ ಸಂಪ್ರದಾಯದ ಭಾಗವಾಗಿ ಕೇರಳಿಗರು ತಮ್ಮ ಮನೆಗಳಲ್ಲಿ ಸುಂದರವಾದ ಹೂವಿನ ರಂಗೋಲಿಯನ್ನು ಬಿಡಿಸುತ್ತಾರೆ. ಅದೇ ರೀತಿ ಬೆಂಗಳೂರಿನ ಅಪಾರ್ಟ್‌ಮೆಂಟ್‌ ಒಂದರಲ್ಲಿ ಕೇರಳ ಮೂಲದ ಕೆಲವು ಮಕ್ಕಳು ತಮ್ಮ ಹಬ್ಬದ ಆಚರಣೆಯ ಸಲುವಾಗಿ ಸುಂದರವಾದ ಹೂವಿನ ರಂಗೋಲಿಯನ್ನು ಬಿಡಿಸಿದ್ದು, ತನ್ನ ಅನುಮತಿಯಿಲ್ಲದೆ ಹೂವಿನ ರಂಗೋಲಿ ಹಾಕಿದರೆಂದು ಅದನ್ನು ಕಾಲಿನಿಂದ ಒದ್ದು ಮಹಿಳೆಯೊಬ್ಬರು ಕಿರಿಕ್‌ ಮಾಡಿದ್ದಾರೆ. ಈ ವಿಡಿಯೋ ಇದೀಗ ಸೋಷಿಯಲ್‌ ಮೀಡಿಯಾದಲ್ಲಿ ಭಾರೀ ವೈರಲ್‌ ಆಗುತ್ತಿದ್ದು, ಮಹಿಳೆಯ ದುರ್ವರ್ತನೆಗೆ ನೆಟ್ಟಿಗರು ಭಾರೀ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬೆಂಗಳೂರಿನ ಸಂಪಿಗೆಹಳ್ಳಿ ಠಾಣಾ ವ್ಯಾಪ್ತಿಯ ಥಣಿಸಂದ್ರದ ಮೊನಾರ್ಕ್‌ ಸೆರಿನಿಟಿ ಅಪಾರ್ಟ್‌ಮೆಂಟ್‌ನಲ್ಲಿ ಈ ಘಟನೆ ನಡೆದಿದ್ದು, ತನ್ನ ಅನುಮತಿಯಿಲ್ಲದೆ ಹೂವಿನ ರಂಗೋಲಿ ಬಿಡಿಸಿದರೆಂದು ರೊಚ್ಚಿಗೆದ್ದ ಮಹಿಳೆ ಮಕ್ಕಳು ಸುಂದರವಾಗಿ ಬಿಡಿಸಿದ ರಂಗೋಲಿಯನ್ನು ಕಾಲಲ್ಲಿ ಒದ್ದು ಕಿರಿಕ್‌ ಮಾಡಿದ್ದಾರೆ. ಓಣಂ ಹಬ್ಬದ ಸಲುವಾಗಿ ಕೇರಳ ಮೂಲದ ಒಂದಷ್ಟು ಮಕ್ಕಳು ತಮ್ಮ ಅಪಾರ್ಟ್‌ಮೆಂಟ್‌ ಎದುರಲ್ಲಿ ಹೂವಿನ ರಂಗೋಲಿಯನ್ನು ಬಿಡಿಸಿದ್ದು, ಅದು ಹೇಗೆ ನನ್ನ‌ ಅನುಮಿತಿಲ್ಲದೆ ರಂಗೋಲಿ ಬಿಡಿಸಿದ್ರಿ ಎಂದು ಸಿಮಿ ನಾಯರ್‌ ಎಂಬ ಮಹಿಳೆ ರಂಗೋಲಿ ನಾಶ ಮಾಡಿ ದುರ್ವರ್ತನೆ ತೋರಿದ್ದಾರೆ.

ವೈರಲ್​​ ವಿಡಿಯೋ ಇಲ್ಲಿದೆ ನೋಡಿ:

ಈ ಕುರಿತ ವಿಡಿಯೋವನ್ನು karnakataportf ಹೆಸರಿನ ಎಕ್ಸ್‌ ಖಾತೆಯಲ್ಲಿ ಹಂಚಿಕೊಳ್ಳಲಾಗಿದ್ದು, “ಇದು ನಿಜಕ್ಕೂ ನಾಚಿಕೆಗೇಡಿನ ನಡವಳಿಕೆಯಾಗಿದೆ” ಎಂಬ ಶಿರ್ಷಿಕೆಯನ್ನು ಬರೆಯಲಾಗಿದೆ. ವೈರಲ್‌ ವಿಡಿಯೋದಲ್ಲಿ ಮಹಿಳೆಯೊಬ್ಬರು ಮಕ್ಕಳು ಬಿಡಿಸಿದ ಪೂಕಳಂ ಮೇಲೆ ನಿಂತಿರುವ ದೃಶ್ಯವನ್ನು ಕಾಣಬಹುದು. ಅದು ಹೇಗೆ ನನ್ನ ಅನುಮತಿಯಿಲ್ಲದೆ ಇಲ್ಲಿ ರಂಗೋಲಿ ಬಿಡಿಸಿದ್ರಿ, ಏನ್‌ ಮಾಡ್ಬೇಕು ಎಂಬುದು ನನಗೆ ಗೊತ್ತು ಎಂದು ರಂಗೋಲಿಯನ್ನು ಕಾಲಲ್ಲಿ ಒದ್ದು, ಚೆಲ್ಲಾಪಿಲ್ಲಿ ಮಾಡಿ ದುರ್ವರ್ತನೆಯನ್ನು ತೋರಿದ್ದಾರೆ.

ಇದನ್ನೂ ಓದಿ: ತನ್ನ ಕಂದಮ್ಮನ ರಕ್ಷಣೆಗಾಗಿ ಬೀದಿ ನಾಯಿಗಳ ಜತೆ ಒಂಟಿಯಾಗಿ ಕಾದಾಡಿದ ಅಮ್ಮ

ಸೆಪ್ಟೆಂಬರ್‌ 22 ರಂದು ಹಂಚಿಕೊಳ್ಳಲಾದ ಈ ಪೋಸ್ಟ್‌ 41 ಸಾವಿರಕ್ಕೂ ಅಧಿಕ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್‌ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼಛೀ ಇದೆಂಥಾ ಮನಸ್ಥಿತಿ ಈಕೆಯದ್ದು, ಧರ್ಮ ಮತ್ತು ಸಂಪ್ರದಾಯಕ್ಕೆ ಗೌರವ ಕೊಡುವುದನ್ನು ಆಕೆ ಕಲಿಯಬೇಕಿದೆʼ ಎಂದು ಹೇಳಿದ್ದಾರೆ. ಮತ್ತೊಬ್ಬ ಬಳಕೆದಾರರು ʼಮೊದಲು ಆಕೆ ಮತ್ತು ಆಕೆಯ ಕುಟುಂಬವನ್ನು ಅಪಾರ್ಟ್‌ಮೆಂಟ್‌ನಿಂದ ಒದ್ದು ಹೊರ ಹಾಕಬೇಕುʼ ಎಂದು ಕಿಡಿ ಕಾರಿದ್ದಾರೆ.

ವೈರಲ್​​ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ