ನಾನು ಬದುಕಿದ್ದೇನೆಂದು ಹೇಳುತ್ತಾ ಪೋಸ್ಟ್ಮಾರ್ಟಮ್ ವೇಳೆ ಎದ್ದು ಕುಳಿತ ವ್ಯಕ್ತಿ
ಅಸಹಜ ಸಾವು ಎಂದೆನಿಸಿದಾಗ ಮರಣೋತ್ತರ ಪರೀಕ್ಷೆ ಮಾಡಿಸುವುದು ಸಾಮಾನ್ಯ. ಇಲ್ಲವೇ ಆಸ್ಪತ್ರೆಯಲ್ಲೇನಾದರೂ ಸಾವನ್ನಪ್ಪಿದ್ದರೆ ಪೋಸ್ಟ್ಮಾರ್ಟಮ್ ಮಾಡುತ್ತಾರೆ. ಆದರೆ ಪೋಸ್ಟ್ಮಾರ್ಟಮ್ಗೆ ಕರೆದೊಯ್ಯುವಾಗ ವ್ಯಕ್ತಿ ಎಚ್ಚರಗೊಂಡು ಸ್ಟ್ರೆಚರ್ ಮೇಲೆ ಹತ್ತಿ ನಿಂತಿದ್ದ ಘಟನೆ ಬಿಹಾರದಲ್ಲಿ ನಡೆದಿದೆ.
ಅಸಹಜ ಸಾವು ಎಂದೆನಿಸಿದಾಗ ಮರಣೋತ್ತರ ಪರೀಕ್ಷೆ ಮಾಡಿಸುವುದು ಸಾಮಾನ್ಯ. ಇಲ್ಲವೇ ಆಸ್ಪತ್ರೆಯಲ್ಲೇನಾದರೂ ಸಾವನ್ನಪ್ಪಿದ್ದರೆ ಪೋಸ್ಟ್ಮಾರ್ಟಮ್ ಮಾಡುತ್ತಾರೆ. ಆದರೆ ಪೋಸ್ಟ್ಮಾರ್ಟಮ್ಗೆ ಕರೆದೊಯ್ಯುವಾಗ ವ್ಯಕ್ತಿ ಎಚ್ಚರಗೊಂಡು ಸ್ಟ್ರೆಚರ್ ಮೇಲೆ ಹತ್ತಿ ನಿಂತಿದ್ದ ವಿಚಿತ್ರ ಘಟನೆ ಬಿಹಾರದಲ್ಲಿ ನಡೆದಿದೆ.
ಆಸ್ಪತ್ರೆಗೆ ಬಂದಾಗ ರಾಕೇಶ್ ಕುಮಾರ್ ಎನ್ನುವ ವ್ಯಕ್ತಿಯೊಬ್ಬರು ನೆಲದ ಮೇಲೆ ಬಿದ್ದಿರುವುದು ಕಂಡಿತ್ತು, ದೇಹದ ಚಲನೆ ಇರಲಿಲ್ಲ. ಅವರಿಗೆ ಹೃದಯಾಘಾತವಾಗಿರಬಹುದು ಎಂದು ಶಂಕಿಸಲಾಗಿತ್ತು ಎಂದು ನಗರ ಪೊಲೀಸ್ ಠಾಣೆಯ ಸಹಾಯಕ ಸಬ್ ಇನ್ಸ್‌ಪೆಕ್ಟರ್ ಬಯಾಸ್ ಪ್ರಸಾದ್ ಹೇಳಿದರು.
ನಾಡಿ ಮಿಡಿತವನ್ನೂ ನೋಡದೆ ವೈದ್ಯರು ಆತ ಸತ್ತಿದ್ದಾನೆಂದು ಘೋಷಿಸಿ, ಮರಣೋತ್ತರ ಪರೀಕ್ಷೆಗೆ ಕಳುಹಿಸಿಕೊಟ್ಟಿದ್ದರು. ಆ ಸಮಯದಲ್ಲಿ ಆತ ಎಚ್ಚರಗೊಂಡಿದ್ದು, ಬಳಿಕ ವಿಚಾರಣೆಗೆಂದು ಕರೆದೊಯ್ದಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ. ಬಾತ್ ರೂಂ ಕ್ಲೀನ್ ಮಾಡಲು ಹೋದಾಗ ಈ ವ್ಯಕ್ತಿ ಕ್ಲೀನರ್ಗೆ ಸಿಕ್ಕಿದ್ದರು, ನಾನು ಔಷಧಿ ಖರೀದಿಸಲು ಹೋಗಿದ್ದೆ, ಏನೂ ತಿಂದಿರಲಿಲ್ಲ ಹಾಗಾಗಿ ತಲೆತಿರುಗಿ ಬಿದ್ದಿದ್ದೆ ಎಂದು ರಾಕೇಶ್ ಹೇಳಿದ್ದಾರೆ.
ಮತ್ತಷ್ಟು ಓದಿ: Viral: ಆಸ್ಪತ್ರೆಗೂ ಕಾಲಿಟ್ಟ ರೀಲ್ಸ್ ವೈರಸ್, ಕಫ್ತಾನ್ ತೊಟ್ಟು ರೋಗಿಗಳ ಮುಂದೆ ಸೊಂಟ ಬಳುಕಿಸಿದ ಯುವತಿ
ರಾಕೇಶ್ ಕುಮಾರ್ ಜೆರೋಯಿನ್ ಗ್ರಾಮದ ನಿವಾಸಿ. ಘಟನೆ ನಡೆದ ಬಳಿಕ ಕೆಲಕಾಲ ಗೊಂದಲದ ವಾತಾವರಣ ಉಂಟಾಯಿತು ಎಂದು ವೈದ್ಯರು ತಿಳಿಸಿದ್ದಾರೆ. ಸ್ಟ್ರೆಚರ್ನಲ್ಲಿ ಕುಳಿತು ನಾನು ಸತ್ತಿಲ್ಲಪ್ಪ ಬದುಕಿದ್ದೇನೆ ಎಂದು ಹೇಳಿದಾಗ ಎಲ್ಲರಿಗೂ ಅಚ್ಚರಿಯಾಗಿತ್ತು.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ