ಸುಮ್ಮನೆ ಇಂಟರ್ನೆಟ್ನಲ್ಲಿ (Internet) ಕಣ್ಣಾಡಿಸಿದರೂ ಸಾಕು ಸಾವಿರಾರು ಸ್ಫೂರ್ತಿದಾಯಕ, ತಮಾಷೆಯ, ಸಂದೇಶವಿರುವ, ಎಮೋಷನಲ್ ಹೀಗೆ ನಾನಾ ರೀತಿಯ ವಿಡಿಯೋಗಳು ಕಾಣಸಿಗುತ್ತವೆ. ವೀಲ್ಚೇರ್ನಲ್ಲಿ (Wheelchair) ಕುಳಿತಿದ್ದ ಗೆಳೆಯನಿಗೆ ಶಾಲೆಯ ಆಟದಲ್ಲಿ ಭಾಗವಹಿಸಲು ಸಹಾಯ ಮಾಡುವ ಹುಡುಗನ ವಿಡಿಯೋ ವೈರಲ್ (Video Viral) ಆಗಿದೆ. ಈ ಮುಗ್ಧ ಸ್ನೇಹವನ್ನು ನೋಡಿದರೆ ಕಣ್ತುಂಬಿ ಬರುವುದು ಗ್ಯಾರಂಟಿ.
ತನ್ನ ವಿಕಲಚೇತನ ಸ್ನೇಹಿತನ ಎಲ್ಲ ಆಸೆಗಳನ್ನೂ ಈಡೇರಿಸಬೇಕೆಂದು ಬಯಸಿದ ಆತನ ಗೆಳೆಯ ಶಾಲೆಯ ಗುಂಪಿನ ಚಟುವಟಿಕೆಯಲ್ಲಿ ಭಾಗವಹಿಸಲು ಸಹಾಯ ಮಾಡಿದ್ದಾನೆ. ಈ ವಿಡಿಯೋವನ್ನು ಫ್ರೆಡ್ ಷುಲ್ಟ್ಜ್ ಎಂಬುವವರು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ. ಇದುವರೆಗೆ ಈ ವಿಡಿಯೋ 8 ಲಕ್ಷ ವೀಕ್ಷಣೆಗಳನ್ನು ಪಡೆದಿದೆ.
Buddy making sure his friend is included in on the fun. ?❤️??? pic.twitter.com/zgDv4nMNvP
— Fred Schultz (@FredSchultz35) May 22, 2022
ಶಾಲೆಯ ಗುಂಪಿನ ಚಟುವಟಿಕೆಯಲ್ಲಿ ಭಾಗವಹಿಸುವ ವಿದ್ಯಾರ್ಥಿಗಳ ಗುಂಪನ್ನು ವೀಡಿಯೊದಲ್ಲಿ ನೋಡಬಹುದು. ಈ ಹುಡುಗ ವೀಲ್ಚೇರನ್ನು ತಳ್ಳುವ ಮೂಲಕ ತನ್ನ ಸ್ನೇಹಿತನಿಗೆ ಸಹಾಯ ಮಾಡಿದನು. ವೀಲ್ಚೇರ್ನಲ್ಲಿದ್ದುಕೊಂಡೇ ಅಂತಿಮ ಹಂತವನ್ನು ತಲುಪಲು ಓಡುತ್ತಿದ್ದ ಇತರ ಮಕ್ಕಳೊಂದಿಗೆ ಸ್ಪರ್ಧಿಸಿದನು. ಆ ಹುಡುಗ ತುಂಬಾ ಕ್ರಿಯಾಶೀಲನಾಗಿದ್ದ. ಹಾಗೇ, ತಾನು ಕೂಡ ಇತರ ವಿದ್ಯಾರ್ಥಿಗಳಿಗೆ ಸರಿಸಮಾನ ಎಂದು ಭಾವಿಸಿ ಖುಷಿಪಟ್ಟ.
This is what good people do. And despite all the rotten ones around today, there still are good people.
— Paula S – ?? (@pjs0210) May 22, 2022
ಇದನ್ನೂ ಓದಿ: Viral Video: ಮಂಟಪದಲ್ಲೇ ವರನ ತಲೆಯಿಂದ ಕೆಳಗೆ ಬಿತ್ತು ವಿಗ್; ಮದುವೆಯೇ ಬೇಡವೆಂದ ವಧು!
ಈ ವಿಡಿಯೋ ನೆಟ್ಟಿಗರಿಂದ ಭಾರೀ ಮೆಚ್ಚುಗೆ ಗಳಿಸಿದೆ. ನನ್ನ ಮಗ ಕೂಡ ವೀಲ್ಚೇರ್ ಬಳಸುತ್ತಾನೆ. ಇತರ ಮಕ್ಕಳು ಅವನಿಗೆ ಎಲ್ಲ ರೀತಿಯ ಕೆಲಸಗಳನ್ನು ಮಾಡಿಕೊಟ್ಟು ಸಹಾಯ ಮಾಡುತ್ತಾರೆ. ಮಕ್ಕಳ ಮನಸು ಪರಿಶುದ್ಧವಾಗಿರುತ್ತದೆ ಎಂದು ಈ ವಿಡಿಯೋ ನೆಟ್ಟಿಗರೊಬ್ಬರು ತಮ್ಮ ಅನುಭವವನ್ನು ಕೂಡ ಹಂಚಿಕೊಂಡಿದ್ದಾರೆ.
My son uses a wheelchair. I can’t even count the amount of times other children did this kind of thing for him (on their own). Children are so pure and wonderful.
— Caroline Smit (@CarolineSmit5) May 23, 2022
ಇನ್ನಷ್ಟು ಟ್ರೆಂಡಿಂಗ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ