Viral Video: ವಧು ವರರು ಡಿಫರೆಂಟಾಗಿ ವೇದಿಕೆಗೆ ಎಂಟ್ರಿಯಾಗೋಕೆ ಹೋಗಿ ಆಗಿದ್ದೇ ಬೇರೆ! ವಿಡಿಯೊ ವೈರಲ್

ಡಿಫರೆಂಟಾಗಿ ವೇದಿಕೆಗೆ ಎಂಟ್ರಿಯಾಗೋಕೆ ಹೋದ ವದು ವರರು ಕೆಳಗೆ ಬಿದ್ದಿದ್ದಾರೆ. ಅತಿಥಿಗಳೆಲ್ಲಾ ಬಾಯ್​ ಮೇಲೆ ಬೆರಳಿಟ್ಟು ನೋಡಿದ ದೃಶ್ಯ ಇದೀಗ ಸಾಮಾಜಿಕ ಜಾಲತಾಣದಲ್ಲಿ ಫುಲ್​ ವೈರಲ್​ ಆಗಿದೆ.

Viral Video: ವಧು ವರರು ಡಿಫರೆಂಟಾಗಿ ವೇದಿಕೆಗೆ ಎಂಟ್ರಿಯಾಗೋಕೆ ಹೋಗಿ ಆಗಿದ್ದೇ ಬೇರೆ! ವಿಡಿಯೊ ವೈರಲ್
Edited By:

Updated on: Nov 14, 2021 | 12:32 PM

ಒಂದು ಉಲ್ಲಾಸದ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಫುಲ್ ವೈರಲ್ ಆಗುತ್ತಿದೆ. ಡಿಫರೆಂಟಾಗಿ ವೇದಿಕೆಗೆ ಎಂಟ್ರಿ ಕೊಡೋಕೆ ಸಿದ್ಧರಾಗಿದ್ದ ವಧು ವರರಿಗೆ ಆಗಿದ್ದೇ ಬೇರೆ! ತಮಾಷೆಯ ವಿಡಿಯೊ ಇದೀಗ ಸಕತ್ ವೈರಲ್ ಆಗಿದೆ. ಏನೋ ಅಂದುಕೊಂಡಿದ್ದ ವಧು ವರರಿಗೆ ಮತ್ತೇನೋ ಆಗಿದೆ. ಅತಿಥಿಗಳೆಲ್ಲಾ ಬಾಯ್ ಮೇಲೆ ಬೆರಳಿಟ್ಟು, ಖುರ್ಚಿಯಿಂದ ಎದ್ದು ನಿಂತು ಅವರನ್ನೇ ನೋಡುತ್ತಿದ್ದಾರೆ. ವಿಡಿಯೊ ಇದೆ ನೀವೇ ನೋಡಿ.

ಮದುವೆಯಲ್ಲಿ ಏನಾದರೂ ಯುನಿಕ್​ ಐಡಿಯಾಗಳನ್ನು ಮಾಡುವುದು ಮಾಮೂಲಿಯಾಗಿಬಿಟ್ಟಿದೆ. ಹೊಸ ಸ್ಟೈಲ್​ನಲ್ಲಿ ಡಿಫರೆಂಟಾಗಿ ವಧು ವರರು ವೇದಿಗೆ ಆಗಮಿಸಲು ಯೋಚಿಸಿದ್ದಾರೆ. ಆದರೆ ಎಡವಟ್ಟಾಗಿ ಇಬ್ಬರೂ ಸಹ ಕೆಳಗೆ ಬಿದ್ದಾರೆ. ಬಳಿಕ ಇಬ್ಬರೂ ಎದ್ದು ನಿಂತುಕೊಂಡಿರುವುದನ್ನು ವಿಡಿಯೊದಲ್ಲಿ ಗಮನಿಸಬಹುದು. ವಿಡಿಯೊ ಸಕತ್ ವೈರಲ್ ಆಗಿದ್ದು ನೆಟ್ಟಿಗರು ತಮಾಷೆಯ ಎಮೊಜಿಗಳನ್ನು ಕಳುಹಿಸುವ ಮೂಲಕ ಪ್ರತಿಕ್ರಿಯಿಸಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಅದೆಷ್ಟೋ ತಮಾಷೆಯ ವಿಡಿಯೊಗಳು ಹರಿದಾಡುತ್ತವೆ. ಅವುಗಳನ್ನು ಎಚ್ಚರಿಸುವ ಸಂದೇಶಗಳು ಸಹ ಇರುತ್ತವೆ. ಏನೋ ಮಾಡೋಕೆ ಹೋಗಿ ಇದೇನಾಯ್ತಪ್ಪಾ! ಎಂದು ಓರ್ವರು ಪ್ರತಿಕ್ರಿಯಿಸಿದ್ದಾರೆ. ಇನ್ನೋರ್ವರು ನಗುವ ಎಮೋಜಿಯನ್ನು ಕಳುಹಿಸಿದ್ದಾರೆ. ಇದೇ ರೀತಿ ಹಲವರು ತಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ವಿಭಾಗದಲ್ಲಿ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ:

Viral Video: ಮದುವೆಯ ದಿನ ವಧು ಸಂತೋಷದಿಂದ ಕುಣಿದು ಕುಪ್ಪಳಿಸಿದ ವಿಡಿಯೊ ನೋಡಿ

Viral News: ಕಬೂಲ್ ನಹೀ ಹೇ; ವರನ ಆ ಒಂದು ಎಡವಟ್ಟಿಂದ ಮದುವೆಯಾಗಲ್ಲ ಎಂದ ವಧು!