ರಾಂಗ್ ಸೈಡ್ ನಲ್ಲಿ ಬಂದು ಎದುರಿಗೆ ಬಂದ ಕಾರಿನ ಚಾಲಕನ ಮೇಲೆ ದರ್ಪ ತೋರಿದ ಅಧಿಕಾರಿ
ರಾಂಗ್ ಸೈಡ್ ನಲ್ಲಿ ಬಂದರೂ ಕೂಡ ಎದುರಿಗೆ ಬಂದ ಕಾರಿಗೆ ದಾರಿ ಬಿಡುವಂತೆ ಬೆದರಿಸಿದ್ದಾನೆ. ಈತನ ದರ್ಪದ ವರ್ತನೆ ಕಾರಿನ ಮುಂಭಾಗದಲ್ಲಿದ್ದ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಪಾಟ್ನಾ: ರಾಂಗ್ ಸೈಡ್ ನಲ್ಲಿ ಬಂದು ಎದುರಿಗಿದ್ದ ಕಾರಿನ ಚಾಲಕನ ಮೇಲೆ ದರ್ಪ ತೋರಿದ ಬಿಹಾರದ ಪಾಟ್ನಾದ ಸರ್ಕಾರಿ ಅಧಿಕಾರಿಯೊಬ್ಬನ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗುತ್ತಿದೆ. ರಾಂಗ್ ಸೈಡ್ ನಲ್ಲಿ ಬಂದರೂ ಕೂಡ ಎದುರಿಗೆ ಬಂದ ಕಾರಿಗೆ ದಾರಿ ಬಿಡುವಂತೆ ಬೆದರಿಸಿದ್ದಾನೆ. ಅಧಿಕಾರಿ ರಾಂಗ್ ಸೈಡ್ ನಲ್ಲಿ ಬಂದಿರುವುದು ಮತ್ತು ಕಾರಿನಿಂದ ಇಳಿದು ಬಂತು ಮುಂದೆ ಇರುವ ಕಾರು ಚಾಲಕನಿಗೆ ಬೆದರಿಕೆ ಹಾಕುತ್ತಿರುವುದು ಕಾರಿನ ಮುಂದಿನ ಕ್ಯಾಮೆರಾದಲ್ಲಿ ಸೆರೆಯಾಗಿದೆ.
@abhijitmajumder ಎಂಬ ಹೆಸರಿನ ಟ್ವಿಟರ್ ಖಾತೆಯಲ್ಲಿ ಅಧಿಕಾರಿಯ ದರ್ಪದ ಮಾತುಗಳ ವಿಡಿಯೋವನ್ನು ಏಪ್ರಿಲ್ 04ರಂದು ಹಂಚಿಕೊಳ್ಳಲಾಗಿದೆ. ವಿಡಿಯೋ ಹಂಚಿಕೊಂಡ ಒಂದೇ ದಿನದಲ್ಲಿ 4ಲಕ್ಷಕ್ಕೂ ಹೆಚ್ಚಿನ ವೀಕ್ಷಣೆಯನ್ನು ಪಡೆದುಕೊಂಡಿದೆ. ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಜನರ ಆಕ್ರೋಶಕ್ಕೆ ಕಾರಣವಾಗಿದೆ. ಈ ಅಧಿಕಾರ ವಿರುದ್ದ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸಾಕಷ್ಟು ನೆಟ್ಟಿಗರು ಕಾಮೆಂಟ್ನಲ್ಲಿ ಬರೆದುಕೊಂಡಿದ್ದಾರೆ.
ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಸಿದ್ದರಾಮಯ್ಯ ಹೊಸ ದಾಖಲೆ: ಬೆಂಬಲಿಗರಿಂದ ನಾಟಿ ಕೋಳಿ ಔತಣ
ಆಂಧ್ರದಲ್ಲಿ ಭಾರಿ ಅನಿಲ ಸೋರಿಕೆಯಾಗಿ ಬೆಂಕಿ ದುರಂತ; ಸ್ಥಳೀಯರ ಸ್ಥಳಾಂತರ
ಗವಿಸಿದ್ದೇಶ್ವರ ಮಹಾರಥೋತ್ಸವ: ಪುಣ್ಯ ಕ್ಷಣಕ್ಕೆ ಸಾಕ್ಷಿಯಾದ 5 ಲಕ್ಷ ಮಂದಿ
ಮೂಳೆ ಬಿದ್ದು ಹೋಗೋಕಿಂತ ಮೊದಲು ಮದುವೆ ಆಗು: ಗಿಲ್ಲಿ ಮೇಲೆ ಅಶ್ವಿನಿ ಆಕ್ರೋಶ

