ಗಿನ್ನಿಸ್ ವರ್ಲ್ಡ್ ರೆಕಾರ್ಡ್ಸ್ ಇನ್ಸ್ಟಾಗ್ರಾಂ ಪುಟವು ಸಾಮಾನ್ಯವಾಗಿ ಕುತೂಹಲ ಕೆರಳಿಸುವ ಕೆಲವು ವಿಡಿಯೋಗಳನ್ನು ಅಥವಾ ಫೋಟೋಗಳನ್ನು ಹಂಚಿಕೊಳ್ಳುತ್ತದೆ. ಅಕ್ಟೋಬರ್ 2ರಂದು ಹಂಚಿಕೊಂಡ ಈ ಪೋಸ್ಟ್ನಲ್ಲಿ ಚೆನ್ನೈ ಮೂಲದ ಆಟೋ ರಿಕ್ಷಾ ಚಾಲಕ ಎರಡೇ ಚಕ್ರದಲ್ಲಿ ವಾಹನ ಓಡಿಸುತ್ತಿರುವುದನ್ನು ನೋಡಬಹುದು. ಇವರು 2.2 ಕಿಲೋಮೀಟರ್ಗಳಷ್ಟು ಆಟೋ ಓಡಿಸಿ ಗಿನ್ನಿಸ್ ವರ್ಲ್ಡ್ ರೆಕಾರ್ಡ್ನಲ್ಲಿ ಹೆಸರು ಪಡೆದಿದ್ದಾರೆ.
ಇವರ ಹೆಸರು ಜಗದೀಶ್ ಎಂ. ಚೆನ್ನೈ ಮೂಲದವರು. ತನ್ನ ಸ್ವಂತ ಆಟೋ ರಿಕ್ಷಾವನ್ನು ಎರಡೇ ಚಕ್ರದಲ್ಲಿ ಸುಮಾರು 2.2 ಕಿಲೋಮೀಟರ್ನಷ್ಟು ಓಡಿಸಿದ್ದಾರೆ. ಈ ವಿಡಿಯೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಫುಲ್ ವೈರಲ್ ಆಗಿದೆ. ಈ ಅದ್ಭುತ ಸ್ಟಂಟ್ ಇದೀಗ ಜನರನ್ನು ಬೆರಗುಗೊಳಿಸಿದೆ.
ಗಿನ್ನಿಸ್ ವರ್ಲ್ಡ್ ರೆಕಾರ್ಡ್ ಅಧಿಕೃತ ಇನ್ಸ್ಟಾಗ್ರಾಂ ಪುಟವು ವಿಡಿಯೋವನ್ನು ಹಂಚಿಕೊಂಡಿದೆ. ಎಪಿಕ್ ಆಟೋ ರಿಕ್ಷಾ ಸೈಡ್ ವೀಲಿಂಗ್. ಆಟೋರಿಕ್ಷಾ ಚಾಲಕ ಜಗದೀಶ್ ಎಂ, ಚೆನ್ನೈ ಎಂದು ಶೀರ್ಷಿಕೆ ನೀಡುವ ಮೂಲಕ ವಿಡಿಯೋ ಪೋಸ್ಟ್ ಮಾಡಲಾಗಿದೆ.
ಜಗದೀಶ್ ಅವರು ಸೈಡ್ ವೀಲಿಂಗ್ನಲ್ಲಿ ಎರಡೇ ಚಕ್ರದಲ್ಲಿ ಆಟೋರಿಕ್ಷಾ ಓಡಿಸಿ ಗಿನ್ನಿಸ್ ವರ್ಲ್ಡ್ ರೆಕಾರ್ಡ್ ಸಾಧಿಸಿದ್ದಾರೆ. ಈ ದಾಖಲೆಯನ್ನು ಸಾಧಿಸುತ್ತೇನೆ ಎದು ನನಗೆ ಯಾವ ಭರವಸೆಯೂ ಇರಲಿಲ್ಲ. ಇದರಿಂದ ನನಗೆ ತೃಪ್ತಿಯಾಗಿದೆ ಎಂದು ಜಗದೀಶ್ ಹೇಳಿದ್ದಾರೆ. ವರದಿಗಳ ಪ್ರಕಾರ ಜಗದೀಶ್ 2 ಕಿಲೋಮೀಟರ್ವರೆಗೂ ತನ್ನ ಮೂರು ಚಕ್ರದ ವಾಹನ ಆಟೋ ರಿಕ್ಷಾವನ್ನು ಎರಡೇ ಚಕ್ರ ಬಳಸಿ ಚಲಿಸುವ ಮೂಲಕ ದಾಖಲೆ ನಿರ್ಮಿಸಿದ್ದಾರೆ ಎಂಬುದು ತಿಳಿದು ಬಂದಿದೆ.
ಇದನ್ನೂ ಓದಿ:
Viral Video: ಪುಟ್ಟ ಕಂದಮ್ಮನನ್ನು ರಂಜಿಸಲು ಅಪ್ಪ ನುಡಿಸಿದ ಗಿಟಾರ್ ವಾದ್ಯ; ನೀವೂ ಕೇಳಿ ಆನಂದಿಸಿ
Viral Video: ಸ್ವತಃ ತಾನೇ ಬಾಳೆಹಣ್ಣಿನ ಖಾದ್ಯ ತಯಾರಿಸಿ ರುಚಿ ಸವಿದ ಶ್ವಾನ; ವಿಡಿಯೋ ವೈರಲ್