Viral Video: ಐದನೇ ಮಹಡಿಯಿಂದ ಕೆಳಗೆ ಬಿದ್ದ ಮಗುವನ್ನು ಹಿಡಿದ ರಿಯಲ್ ಹೀರೋ; ವೈರಲ್ ವಿಡಿಯೋ ಇಲ್ಲಿದೆ

| Updated By: Rakesh Nayak Manchi

Updated on: Jul 23, 2022 | 12:22 PM

ಮಗುವೊಂದು ಐದನೇ ಮಹಡಿಯಿಂದ ಕೆಳಗೆ ಬಿದ್ದಾಗ ದೇವರಂತೆ ಬಂದ ವ್ಯಕ್ತಿಯೊಬ್ಬರು ಹಿಡಿದು ಮಗುವಿನ ಪ್ರಾಣ ಉಳಿಸಿದ್ದಾರೆ. ಸದ್ಯ ಸಾಮಾಜಿಕ ಜಾಲತಾಣದಲ್ಲಿ ಇದರ ವಿಡಿಯೋ ವೈರಲ್ ಆಗುತ್ತಿದೆ.

Viral Video: ಐದನೇ ಮಹಡಿಯಿಂದ ಕೆಳಗೆ ಬಿದ್ದ ಮಗುವನ್ನು ಹಿಡಿದ ರಿಯಲ್ ಹೀರೋ; ವೈರಲ್ ವಿಡಿಯೋ ಇಲ್ಲಿದೆ
ಮಗುವನ್ನು ರಕ್ಷಿಸಿದ ರಿಯಲ್ ಹೀರೋ
Follow us on

ಮನೆಯಲ್ಲಿ ಮಕ್ಕಳನ್ನು ಬಹಳ ಜಾಗರೂಕತೆಯಿಂದ ನೋಡಿಕೊಳ್ಳಬೇಕು. ಮಕ್ಕಳ ಚಲನವಲನಗಳ ಮೇಲೆ ನಿಗಾ ಇಟ್ಟಿರಲೇ ಬೇಕು, ಇಲ್ಲವಾದಲ್ಲಿ ಏನೂ ಅರಿಯದ ಮಗುವಿನ ಜೀವಕ್ಕೆ ಕುತ್ತು ತರಬಹುದು. ಪೋಷಕರಿಗೆ ಅರಿವೇ ಇಲ್ಲದಂತೆ ಮನೆಯಿಂದ ಹೊರಬಂದು ಕಳೆಗೆ ಬಿದ್ದು ಮಕ್ಕಳು ಸಾವನ್ನಪ್ಪಿರುವ ಪ್ರಕರಣಗಳು ದಾಖಲಾಗಿವೆ. ಮಗುವಿನ ಆಯಸ್ಸು ಗಟ್ಟಿಯಾಗಿದ್ದರೆ ವ್ಯಕ್ತಿಯೊಬ್ಬರು ದೆವರಂತೆ ಬಂದು ಕಾಪಾಡುತ್ತಾನೆ. ಇಂತಹ ಘಟನೆಗಳ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಲೇ ಇರುತ್ತದೆ. ಇದೀಗ ಸಣ್ಣ ಮಗುವೊಂದು ಐದನೇ ಮಹಡಿಯಿಂದ ಕೆಳಗೆ ಬಿದ್ದಾಗ ದೇವರಂತೆ ಬಂದ ವ್ಯಕ್ತಿಯೊಬ್ಬರು ಹಿಡಿದು ಮಗುವಿನ ಪ್ರಾಣ ಉಳಿಸಿದ್ದಾರೆ. ಸದ್ಯ ಸಾಮಾಜಿಕ ಜಾಲತಾಣದಲ್ಲಿ ಇದರ ವಿಡಿಯೋ ವೈರಲ್ (Video Viral) ಆಗುತ್ತಿದೆ.

ವಿಡಿಯೋದಲ್ಲಿ ಕಾಣುವಂತೆ, ಸಣ್ಣ ಮಗುವೊಂದು ಐದನೇ ಮಹಡಿಯ ಕಿಟಕಿಯಿಂದ ಕೆಳಗೆ ಬೀಳುತ್ತದೆ. ಇದನ್ನು ನೋಡಿದ ಅದೇ ಕಟ್ಟಡದ ಕೆಳಗಿದ್ದ ಓರ್ವ ಯುವಕ ಓಡಿ ಬಂದು ಹಿಡಿದಿದ್ದಾರೆ. ಇವರೊಂದಿಗೆ ಮಹಿಳೆ ಕೂಡ ಕೈಜೋಡಿಸಿರುವುದನ್ನು ವಿಡಿಯೋ ತೋರಿಸುತ್ತದೆ.

ಮೆಟ್ರೋ ಪ್ರಕಾರ, ಶೆನ್ ಡಾಂಗ್ ಅವರು ತಮ್ಮ ಕಾರನ್ನು ರಸ್ತೆಯಲ್ಲಿ ನಿಲ್ಲಿಸುತ್ತಿದ್ದಾಗ ದೊಡ್ಡ ಸದ್ದು ಕೇಳಿಸಿತು. ವಾಸ್ತವವಾಗಿ, ಚಿಕ್ಕ ಹುಡುಗಿ ನಾಲ್ಕು ಅಂತಸ್ತಿನ ಮೇಲೆ ಬಿದ್ದು ಉಕ್ಕಿನ ಛಾವಣಿಯ ಮೇಲೆ ಬಿದ್ದಿದ್ದಳು. ನಂತರ ಅವಳು ಕೆಳಕ್ಕೆ ಉರುಳಿದಾಗ ಶೆನ್ ಡಾಂಗ್‌ ಹಿಡಿದರು. ಈ ಘಟನೆಯ ವಿಡಿಯೋವನ್ನು ಚೀನಾದ ಸರ್ಕಾರಿ ಅಧಿಕಾರಿ ಲಿಜಿಯಾನ್ ಝಾವೋ ಅವರು ತಮ್ಮ ಟ್ವಿಟರ್‌ ಖಾತೆಯಲ್ಲಿ ಹಂಚಿಕೊಂಡು, “ನಮ್ಮ ನಡುವಿನ ಹೀರೋಗಳು” ಎಂದು ಶೀರ್ಷಿಕೆ ಬರೆದಿದ್ದಾರೆ.

ವಿಡಿಯೋ ನೋಡಿದ ಒಂದಷ್ಟು ಮಂದಿ ಪ್ರತಿಕ್ರಿಯಿಸಿ ಮಗುವನ್ನು ಕಾಪಾಡಿದ ವ್ಯಕ್ತಿಯನ್ನು ಶ್ಲಾಘಿಸಿದ್ದಾರೆ. ನೆಟ್ಟಿಗರೊಬ್ಬರು, “ನಿಜವಾದ ನಾಯಕರು ಜಗತ್ತಿನಲ್ಲಿ ಅಸ್ತಿತ್ವದಲ್ಲಿದ್ದಾರೆ, ಕೇವಲ ಚಲನಚಿತ್ರಗಳಲ್ಲಿ ಅಲ್ಲ” ಎಂದು ಹೇಳಿದ್ದಾರೆ. ಮತ್ತೊಬ್ಬ ನೆಟ್ಟಿಗರ ಕಾಮೆಂಟ್ ಮಾಡಿ, “ಉತ್ತಮ ಕೆಲಸ, ಸೆಲ್ಯೂಟ್, ದೇವರಿಗೆ ವಂದನೆ” ಎಂದು ಹೇಳಿದ್ದಾರೆ. ಅದೇ ರೀತಿ ಅನೇಕರು ನಿಜವಾದ ಹೀರೋ, ಹೀರೋ ಎಂಬಿತ್ಯಾದಿ ಕಾಮೆಂಟ್​ಗಳನ್ನು ಮಾಡಿದ್ದಾರೆ.

Published On - 12:22 pm, Sat, 23 July 22