AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Dinosaur: ರೆಸ್ಟೋರೆಂಟ್​ಗೆ ಹೋಗಿದ್ದು ಊಟಕ್ಕೆ, ನೋಡಿದ್ದು ಜಗತ್ತಿನ ಅತಿದೊಡ್ಡ ಪ್ರಾಣಿ ಡೈನೋಸಾರ್ ಹೆಜ್ಜೆ ಗುರುತು!

ಚೀನಾದ ಸಿಚುವಾನ್ ಪ್ರಾಂತ್ಯದ ಲೆಶಾನ್‌ನಲ್ಲಿರುವ ರೆಸ್ಟೋರೆಂಟ್​ನಲ್ಲಿ ಡೈನೋಸಾರ್​ ಹೆಜ್ಜೆ ಗುರುತುಗಳು ಪತ್ತೆಯಾಗಿದ್ದು, ಬ್ರಾಂಟೊಸಾರಸ್ ಸಂತತಿಯ ಎರಡು ಡೈನೋಸಾರ್​ನ ಹೆಜ್ಜೆ ಗುರುತು ಇದಾಗಿದೆ. ಇದು ಅತಿ ದೊಡ್ಡ ಕ್ವಾಡ್ರುಪೆಡಲ್ ಸೌರೋಪಾಡ್ ಡೈನೋಸಾರ್ ಜಾತಿಯೆಂದು ತಿಳಿದುಬಂದಿದೆ.

Dinosaur: ರೆಸ್ಟೋರೆಂಟ್​ಗೆ ಹೋಗಿದ್ದು ಊಟಕ್ಕೆ, ನೋಡಿದ್ದು ಜಗತ್ತಿನ ಅತಿದೊಡ್ಡ ಪ್ರಾಣಿ ಡೈನೋಸಾರ್ ಹೆಜ್ಜೆ ಗುರುತು!
ಪತ್ತೆಯಾದ ಡೈನೋಸಾರ್ ಹೆಜ್ಜೆ ಗುರುತುಗಳು ಮತ್ತು ಡೈನೋಸಾರ್​ನ ಸಾಂಕೇತಿಕ ಚಿತ್ರ
TV9 Web
| Edited By: Rakesh Nayak Manchi|

Updated on:Jul 24, 2022 | 10:03 AM

Share

ಒಂದು ಹೊತ್ತಿನ ಹಸಿವನ್ನು ನೀಗಿಸುವ ನಿಟ್ಟಿನಲ್ಲಿ ಊಟ ಮಾಡಲು ವ್ಯಕ್ತಿಯೊಬ್ಬರು ರೆಸ್ಟೋರೆಂಟ್​ಗೆ ಹೋಗಿದ್ದಾರೆ. ಆದರೆ ಇದ್ದಕ್ಕಿದ್ದಂತೆ ಅವರ ಕಣ್ಣು ಬೇರೆ ಪ್ರದೇಶವೊಂದಕ್ಕೆ ಬಿದ್ದಿದೆ. ಅವರು ಆ ಪ್ರದೇಶದ ಮೇಲೆ ಕಣ್ಣು ಹಾಯಿಸಲೂ ಒಂದು ಕಾರಣ ಇದೆ. ಅದೇನೆಂದರೆ ಆ ಜಾಗದಲ್ಲಿ ಜಗತ್ತಿನ ಅತಿದೊಡ್ಡ ಪ್ರಾಣಿಯೂ ಆಗಿದ್ದ ಸದ್ಯ ನಶಿಸಿ ಹೋಗಿದೆ ಎಂದು ಭಾವಿಸಲಾಗಿರುವ ಸಂತತಿಯ ಹೆಜ್ಜೆ ಗುರುತು. ಆ ಹೆಜ್ಜೆ ಗುರುತು ಬೇರೆ ಯಾವುದೇ ಪ್ರಾಣಿಯದ್ದು ಅಲ್ಲ, ನೂರು ಮಿಲಿಯನ್ ವರ್ಷಗಳ ಹಿಂದೆ ಭೂಮಿ ಮೇಲೆ ಬದುಕಿದ್ದ ದೈತ್ಯ ಡೈನೋಸಾರ್ (Dinosaur)​ ಜೀವಿಯದ್ದು.

ಹೌದು, ಚೀನಾದ ಹೊಂಗ್ಟಾವೊ ಎಂಬ ವ್ಯಕ್ತಿ ಇತ್ತೀಚೆಗೆ ಸಿಚುವಾನ್ ಪ್ರಾಂತ್ಯದ ಲೆಶಾನ್‌ನಲ್ಲಿರುವ ರೆಸ್ಟೋರೆಂಟ್‌ಗೆ ಭೇಟಿ ನೀಡಿದ್ದರು. ಈ ರೆಸ್ಟೋರೆಂಟ್​ನ ಪ್ರದೇಶದಲ್ಲಿ ಹೊಂಡಗಳು ಬಿದ್ದಿರುವ ಒಂದು ಪ್ರದೇಶವನ್ನು ಹೊಂಗ್ಟಾವೊ ನೋಡಿದ್ದಾರೆ. ಆ ಪ್ರದೇಶದಲ್ಲಿ ಇದ್ದ ಹೊಂಡಗಳು ಸಾಮಾನ್ಯವಾಗಿರಲಿಲ್ಲ ಬದಲಾಗಿ ವಿಶೇಷವಾದ ಹೊಂಡಗಳಾಗಿದ್ದವು. ಈ ಹೊಂಡಗಳ ಮೇಲೆ ಸರಿಯಾಗಿ ಕಣ್ಣು ಹಾಯಿಸಿದ ಹೊಂಗ್ಟಾವೊ, ಅದು ಡೈನೋಸಾರ್​ ಹೆಜ್ಜೆ ಗುರುತು ಎಂದು ಪತ್ತೆಹಚ್ಚಿದ್ದಾರೆ.

ಡೈನೋಸಾರ್ ಹೆಜ್ಜೆ ಗುರುತು ಪತ್ತೆಯಾದ ಬಗ್ಗೆ ಹೊಂಗ್ಟಾವೊ ಅವರು ಸಂಶೋಧಕರಿಗೆ ಮಾಹಿತಿ ನೀಡುತ್ತಾರೆ. ಅದರಂತೆ ಚೀನಾ ಯೂನಿವರ್ಸಿಟಿ ಆಫ್ ಜಿಯೋಸೈನ್ಸ್​ನ ಪ್ರಾಗ್ಜೀವಶಾಸ್ತ್ರಜ್ಞರಾದ ಅಸೋಸಿಯೇಟ್ ಪ್ರೊಫೆಸರ್ ಡಾ. ಲಿಡಾ ಕ್ಸಿಂಗ್ ನೇತೃತ್ವದ ತಂಡವು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದೆ.

ಈ ತಂಡವು 3D ಪ್ರಿಂಟರ್ ಬಳಸಿ ಪತ್ತೆಹಚ್ಚಿದಾಗ ಬ್ರಾಂಟೊಸಾರಸ್ ಸಂತತಿಯ ಎರಡು ಡೈನೋಸಾರ್ ಹೆಜ್ಜೆಗುರುತು ಇದಾಗಿದೆ ಎಂದು ತಿಳಿದುಬಂದಿದೆ. ಇದು ಅತಿ ದೊಡ್ಡ ಕ್ವಾಡ್ರುಪೆಡಲ್ ಸೌರೋಪಾಡ್ ಡೈನೋಸಾರ್ ಜಾತಿಯೆಂದು ತಿಳಿದುಬಂದಿದೆ. ಈ ಡೈನೋಸಾರ್‌ಗಳು 145 ರಿಂದ 66 ಮಿಲಿಯನ್ ವರ್ಷಗಳ ಹಿಂದೆ ಕ್ರಿಟೇಶಿಯಸ್ ಅವಧಿಯಲ್ಲಿ ಭೂಮಿಯ ಮೇಲೆ ಸಂಚರಿಸಿದವು ಎಂದು ಸಂಶೋಧಕರು ಅಂದಾಜಿಸಿದ್ದಾರೆ.

ಡೈನೋಸಾರ್ ಅನ್ನು ನಾವೆಲ್ಲರು ಸಿನಿಮಾಗಳಲ್ಲಿ ಕಂಡಿದ್ದೇವೆ ಅಷ್ಟೆ. ಅದರ ಗಾತ್ರ ಎಷ್ಟಿದೆ ಎಂದು ಕೇಳಿದರೆ ಒಮ್ಮೆ ನೀವೆಲ್ಲರೂ ದಂಗಾಗುತ್ತೀರ. ಈ ಪ್ರಾಣಿ 122 ಅಡಿ ಉದ್ದ ಮತ್ತು 70 ಟನ್ ತೂಕವಿರುತ್ತದೆ ಎಂದು ಅಂದಾಜಿಸಲಾಗಿದೆ. ಅಂದರೆ ಮೂರು ಬಸ್​ಗಳ ಉದ್ದ ಮತ್ತು 10 ಆಫ್ರಿಕನ್ ಆನೆಗಳ ತೂಕದಷ್ಟು ಒಂದು ಡೈನೋಸಾರ್ ಇರುತ್ತದೆ ಎಂದು ಅಂದಾಜಿಸಲಾಗಿದೆ.

Published On - 9:59 am, Sun, 24 July 22

Follow Us
TV9 Web
TV9 Web

TV9 Kannada

Read More
‘ಸತ್ಯ ಇನ್ ಲವ್’, ‘ಜೋಗಯ್ಯ’ ವಿಗ್ ನನಗೆ ಇಷ್ಟ ಆಗಿರಲಿಲ್ಲ: ಶಿವರಾಜ್​ಕುಮಾರ್
‘ಸತ್ಯ ಇನ್ ಲವ್’, ‘ಜೋಗಯ್ಯ’ ವಿಗ್ ನನಗೆ ಇಷ್ಟ ಆಗಿರಲಿಲ್ಲ: ಶಿವರಾಜ್​ಕುಮಾರ್
ಬೆಂಗಳೂರಿನಲ್ಲಿ ಗುಂಡಿ ಮುಕ್ತ ರಸ್ತೆಗೆ ಕೃಷ್ಣಭೈರೇಗೌಡ ಪಣ
ಬೆಂಗಳೂರಿನಲ್ಲಿ ಗುಂಡಿ ಮುಕ್ತ ರಸ್ತೆಗೆ ಕೃಷ್ಣಭೈರೇಗೌಡ ಪಣ
ದೊಮ್ಮಸಂದ್ರ ಫ್ಲೈಓವರ್ ಕಾಮಗಾರಿ ವಿಳಂಬಕ್ಕೆ ಕೃಷ್ಣಬೈರೇಗೌಡ ಅಸಮಾಧಾನ
ದೊಮ್ಮಸಂದ್ರ ಫ್ಲೈಓವರ್ ಕಾಮಗಾರಿ ವಿಳಂಬಕ್ಕೆ ಕೃಷ್ಣಬೈರೇಗೌಡ ಅಸಮಾಧಾನ
ಮಂಗಳೂರು MRPL ಸ್ಪೋಟ: 2 ಕಿ.ಮೀ ದೂರದಲ್ಲಿರುವ ಚರ್ಚ್​​​ಗೆ ಹಾನಿ
ಮಂಗಳೂರು MRPL ಸ್ಪೋಟ: 2 ಕಿ.ಮೀ ದೂರದಲ್ಲಿರುವ ಚರ್ಚ್​​​ಗೆ ಹಾನಿ
ಬೆಳಗಾವಿ ಪಾಲಿಕೆ ಸಭೆಯಲ್ಲಿ BJP-ಕಾಂಗ್ರೆಸಿಗರ ನಡುವೆ 'ವಂದೇ ಮಾತರಂ' ಗದ್ದಲ
ಬೆಳಗಾವಿ ಪಾಲಿಕೆ ಸಭೆಯಲ್ಲಿ BJP-ಕಾಂಗ್ರೆಸಿಗರ ನಡುವೆ 'ವಂದೇ ಮಾತರಂ' ಗದ್ದಲ
4 ಮಂದಿ ರಕ್ಷಣೆ, ಆಸ್ಪತ್ರೆಗೆ ದಾಖಲು; 150 ಆಂಬುಲೆನ್ಸ್ ಸಿದ್ಧ
4 ಮಂದಿ ರಕ್ಷಣೆ, ಆಸ್ಪತ್ರೆಗೆ ದಾಖಲು; 150 ಆಂಬುಲೆನ್ಸ್ ಸಿದ್ಧ
ಬೀದರ್ ಕೋಟೆಗೆ 'ಕರ್ನಾಟಕ ಪ್ರವಾಸೋದ್ಯಮ ಪ್ರಶಸ್ತಿ'
ಬೀದರ್ ಕೋಟೆಗೆ 'ಕರ್ನಾಟಕ ಪ್ರವಾಸೋದ್ಯಮ ಪ್ರಶಸ್ತಿ'
ಕೇಂದ್ರದ 10 ಅಧಿಕಾರಿಗಳ‌ ತಂಡದಿಂದ ಕರ್ನಾಟಕದಲ್ಲಿ ಬರ ಅಧ್ಯಯನ: ಎಲ್ಲೆಲ್ಲಿ
ಕೇಂದ್ರದ 10 ಅಧಿಕಾರಿಗಳ‌ ತಂಡದಿಂದ ಕರ್ನಾಟಕದಲ್ಲಿ ಬರ ಅಧ್ಯಯನ: ಎಲ್ಲೆಲ್ಲಿ
ಬೆಂಗಳೂರು: 4 ಗ್ಯಾಸ್ ಸಿಲಿಂಡರ್ ಸ್ಫೋಟ, ತಪ್ಪಿದ ಭಾರೀ ಅನಾಹುತ
ಬೆಂಗಳೂರು: 4 ಗ್ಯಾಸ್ ಸಿಲಿಂಡರ್ ಸ್ಫೋಟ, ತಪ್ಪಿದ ಭಾರೀ ಅನಾಹುತ
ಮಂಗಳೂರಿನ ಎಂಆರ್‌ಪಿಎಲ್‌ನಲ್ಲಿ ಸ್ಫೋಟ: ಮುಗಿಲೆತ್ತರಕ್ಕೆ ಆವರಿಸಿದ ಹೊಗೆ
ಮಂಗಳೂರಿನ ಎಂಆರ್‌ಪಿಎಲ್‌ನಲ್ಲಿ ಸ್ಫೋಟ: ಮುಗಿಲೆತ್ತರಕ್ಕೆ ಆವರಿಸಿದ ಹೊಗೆ