ಮಕ್ಕಳು ಏನೇ ಮಾಡಿದರೂ ಚೆಂದ. ಕೆಲವೊಮ್ಮೆ ಅವರ ತುಂಟಾಟ, ತಲೆಹರಟೆ, ಹಠ ಅತಿರೇಕಕ್ಕೆ ಹೋಗಿಬಿಡುತ್ತದೆ. ಈಗಂತೂ ಮಕ್ಕಳ ತುಂಟಾಟದ ಲಕ್ಷಾಂತರ ವಿಡಿಯೋಗಳು ಯೂಟ್ಯೂಬ್, ಫೇಸ್ಬುಕ್ನಲ್ಲಿ ಸಿಗುತ್ತವೆ. ಅಂಥದ್ದೇ ಒಂದು ವಿಡಿಯೋ ಇದು. ಈ ವಿಡಿಯೋ ನೋಡಿದರೆ ‘ಇವರೇನು ಮಕ್ಕಳಾ ಅಥವಾ WWE ಸ್ಪರ್ಧಿಗಳಾ!’ ಎಂದು ನೀವು ಮೂಗಿನ ಮೇಲೆ ಬೆರಳಿಡೋದು ಗ್ಯಾರಂಟಿ. ನಾವೇನಾದರೂ ಸುಳ್ಳು ಹೇಳುತ್ತಿದ್ದೇವೆ ಎನಿಸಿದರೆ ನೀವೇ ಈ ವಿಡಿಯೋವನ್ನೊಮ್ಮೆ ನೋಡಿಬಿಡಿ.
ಮೂರ್ನಾಲ್ಕು ಮಕ್ಕಳು ಒಟ್ಟಾಗಿ ಸೇರಿದರೆ ಅಲ್ಲಿ ಜಗಳವೆದ್ದೇ ಏಳುತ್ತದೆ. ನನ್ನ ಆಟದ ಸಾಮಾನನ್ನು ಆತ ಕಿತ್ತುಕೊಂಡ ಎಂದೋ, ನನ್ನ ಕಾಲೆಳೆದ ಎಂದೋ, ಹೊಡೆದ ಎಂದೋ ಹೀಗೆ ಪ್ರತಿಯೊಂದು ಗಲಾಟೆಗೂ ಒಂದೊಂದು ಕಾರಣವಿರುತ್ತದೆ. ಆದರೆ, ಈ ಹುಡುಗರಿಬ್ಬರು ಕಿತ್ತಾಡಿಕೊಳ್ಳುವ ಪರಿ ನೋಡಿದರೆ ಗಾಬರಿಯಾಗದಿರದು. ಸಿಕ್ಕಾಪಟ್ಟೆ ಕೋಪಗೊಂಡ ಹುಡುಗರಿಬ್ಬರು ಒಬ್ಬರ ತಲೆಯನ್ನು ಮತ್ತೊಬ್ಬರು ಹಿಡಿದು ಕಿತ್ತಾಡುವ ವಿಡಿಯೋ ಎಲ್ಲೆಡೆ ಹರಿದಾಡುತ್ತಿದೆ.
ಈ ವಿಡಿಯೋ ನೋಡಿದ ನೆಟ್ಟಿಗರು ಅವರಿಬ್ಬರನ್ನೂ ಡಬ್ಲುಡಬ್ಲುಇ ಶೋಗೆ ಕಳುಹಿಸಿಬಿಡಿ ಎಂದು ಸಲಹೆ ಕೊಟ್ಟಿದ್ದಾರೆ. ಇನ್ಸ್ಟಾಗ್ರಾಂನಲ್ಲಿ ಈ ವಿಡಿಯೋ ವೈರಲ್ ಆಗಿದ್ದು, ಸಾಕಷ್ಟು ಜನರು ಶೇರ್ ಮಾಡಿಕೊಂಡಿದ್ದಾರೆ. ಹುಲ್ಲಿನ ಅಂಗಳದಲ್ಲಿ ಕಲ್ಲು, ಕೋಲು ಹಿಡಿದುಕೊಂಡು ಫೈಟಿಂಗ್ ಮಾಡುತ್ತಿರುವ ಇವರ ಜಗಳವನ್ನು ಅಲ್ಲಿ ಸುತ್ತಲೂ ಕುಳಿತವರು ನೋಡಿ ನಗುತ್ತಿದ್ದಾರೆ. ನೀವಿನ್ನೂ ಈ ವಿಡಿಯೋ ನೋಡದಿದ್ದರೆ ಮಿಸ್ ಮಾಡಿಕೊಳ್ಳಬೇಡಿ.
ಇದನ್ನೂ ಓದಿ: Viral Video: ಕುಡುಕರಿಗೇ ಪೈಪೋಟಿ!; ವಿಸ್ಕಿ ಬಾಟಲ್ ಓಪನ್ ಮಾಡಿ ಗಟಗಟನೆ ಕುಡಿದ ಕೋತಿಯ ವಿಡಿಯೋ ವೈರಲ್
ಇದನ್ನೂ ಓದಿ: Coffee Benefits: ದಿನಕ್ಕೊಂದು ಕಪ್ ಕಾಫಿ ಕುಡಿದರೆ ಏನಾಗುತ್ತೆ?; ಸಂಶೋಧನೆಯಲ್ಲಿ ಬಯಲಾಯ್ತು ಅಚ್ಚರಿಯ ಸಂಗತಿ