
Noida: ನೋಯ್ಡಾದ ಜೋಡಿಯೊಂದು ಪಾರ್ಕ್ನಲ್ಲಿ ನೀರು ಕುಡಿದು ಪರಸ್ಪರರ ಬಾಯೊಳಗೆ ಉಗುಳಿಕೊಂಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ ನೋಯ್ಡಾದ ಪೊಲೀಸರು ಪ್ರತಿಕ್ರಿಯಿಸಿದ್ದಾರೆ. ಅನೇಕ ನೆಟ್ಟಿಗರು ಪ್ರತಿಕ್ರಿಯಿಸಿ ಈ ಜೋಡಿಯ ಅಸಭ್ಯ ವರ್ತನೆಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ‘ದೆಹಲಿ ಮೆಟ್ರೋ (Delhi Metro) ಬಿಟ್ಟು ಇದೀಗ ಇಂಥ ಅಸಭ್ಯ ಜನ ನೋಯ್ಡಾ ಸೆಕ್ಟರ್ 78 ಗೆ ಬರುತ್ತಿದ್ದಾರೆ ಎಂದು ಹೇಳಿದ್ದಾರೆ. ಲೈಕ್, ಕಮೆಂಟ್ಗಳಿಗಾಗಿ ಇಂಥ ರೀಲ್ಗಳನ್ನು ಮಾಡುತ್ತಿದ್ದಾರೆ. ಸಾರ್ವಜನಿಕ ಸ್ಥಳಗಳಲ್ಲಿ ಇಂಥ ರೀಲ್ಗಳನ್ನು ಮಾಡುವುದುನ್ನು ನಿಷೇಧಿಸಬೇಕು’ ಎಂದು ಗ್ರೇಟರ್ ನೋಯ್ಡಾ ವೆಸ್ಟ್ ಎಂಬ X ಖಾತೆಯು ಈ ವಿಡಿಯೋಗೆ ಒಕ್ಕಣೆ ಬರೆದು ಪೋಸ್ಟ್ ಮಾಡಿದೆ.
ಇದನ್ನೂ ಓದಿ : Viral Video: ವೆಲ್ಕಮ್ ಟು ಮರ್ಲಿ ಹೇರ್ ಸಲೂನ್! ಈ ವೇಕಪ್ ವಿಡಿಯೋಗಳಲ್ಲಿ ನಿಮಗ್ಯಾವುದು ಇಷ್ಟ?
ನವೆಂಬರ್ 1ರಂದು ಈ ವಿಡಿಯೋವನ್ನು ಪೋಸ್ಟ್ ಮಾಡಲಾಗಿದೆ. ಈತನಕ 46,000 ಜನರು ಈ ವಿಡಿಯೋ ನೋಡಿದ್ದಾರೆ. ಸುಮಾರು 90 ಜನರು ಪ್ರತಿಕ್ರಿಯಿಸಿದ್ದಾರೆ. ಇದು ವೈರಲ್ ಆಗುತ್ತಿದ್ದಂತೆ ನೋಯ್ಡಾದ ಡಿಸಿಪಿ, ಮುಂದಿನ ದಿನಗಳಲ್ಲಿ ಈ ಪ್ರದೇಶದಲ್ಲಿ ಗಸ್ತು/ತಪಾಸಣೆಗೆ ಅಗತ್ಯ ಕ್ರಮ ಕೈಗೊಳ್ಳಲು ನಿರ್ದೇಶಿಸಿದ್ದಾರೆ.
ಇವರಿಬ್ಬರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಿ ಎಂದು ಅನೇಕರು ಹೇಳಿದ್ದಾರೆ. ಸಾರ್ವಜನಿಕ ಸ್ಥಳಗಳಲ್ಲಿ ಇಂಥ ಕೆಲಸಗಳನ್ನು ಮಾಡುವುದು ನಾಚಿಕೆಗೇಡು ಎಂದಿದ್ದಾರೆ ಮತ್ತೊಂದಿಷ್ಟು ಜನ. ಇಂತ ಅನಾಹುತಗಳನ್ನು ತಡೆಹಿಡಿಯಲು ಅಲ್ಲಿಯ ಆಡಳಿತ ಗಮನ ಹರಿಸಿ ಕ್ರಮ ಕೈಗೊಳ್ಳಬೇಕು ಎಂದಿದ್ದಾರೆ ಇನ್ನೂ ಕೆಲವರು.
ಇದನ್ನೂ ಓದಿ : Viral Video: ಮುಂಬೈ; ಟ್ರಾಫಿಕ್ನಲ್ಲಿ ಆಟೊ ಚಾಲಕನ ಗಾಯನ, ಎಲ್ಲೆಡೆ ಇಂಥವರಿರಲಿ ಎಂದ ನೆಟ್ಟಿಗರು
ದೆಹಲಿ ಮೆಟ್ರೋಗಳಲ್ಲಿಯ ಜನರು ಇಲ್ಲಿಗೆ ಶಿಫ್ಟ್ ಆಗಿದ್ದಾರೆ. ಪೊಲೀಸರು ಏನು ಮಾಡುತ್ತಿದ್ದಾರೆ ಎಂದು ಕೇಳಿದ್ದಾರೆ ಒಬ್ಬರು. ಇಂಥ ಮನಸ್ಥಿತಿಯವರು ಎಲ್ಲೆಡೆಯೂ ಇದ್ದಾರೆ. ಇಂಥವರನ್ನು ಪತ್ತೆ ಹಚ್ಚಿ ರೀಲಿಗಾಗಿ ಹೀಗೆ ಅಸಭ್ಯವಾಗಿ ವರ್ತಿಸುವವರನ್ನು ಶಿಕ್ಷೆಗೆ ಒಳಪಡಿಸಬೇಕು. ಇದಕ್ಕಾಗಿ ವಿಶೇಷ ತಂಡವನ್ನು ಪೊಲೀಸರು ರಚಿಸಬೇಕು ಎಂದಿದ್ದಾರೆ ಇನ್ನಹೊಬ್ಬರು.
ಇದನ್ನು ಓದಿದ ನಿಮ್ಮ ಅಭಿಪ್ರಾಯವೇನು?
ಮತ್ತಷ್ಟು ವೈರಲ್ ನ್ಯೂಸ್ಗಾಗಿ ಕ್ಲಿಕ್ ಮಾಡಿ
Published On - 12:29 pm, Thu, 2 November 23