
ತಂದೆ, ಮಗಳ ಭಾಂದವ್ಯವನ್ನು ವರ್ಣಿಸಲು ಸಾಧ್ಯವಿಲ್ಲ. ಅದಕ್ಕಾಗಿಯೇ ಪ್ರತಿಯೊಬ್ಬ ತಂದೆಯೂ ಮಗನಿಗಿಂತ ಮಗಳನ್ನೇ ಹೆಚ್ಚಾಗಿ ಪ್ರೀತಿಸುತ್ತಾನೆ. ಮಗನಿಲ್ಲದಿದ್ದರೂ ಪರವಾಗಿಲ್ಲ ಮಗಳನ್ನೇ ಕೊಡು ಎಂದು ದೇವರಲ್ಲಿ ಪ್ರಾರ್ಥಿಸುತ್ತಾನೆ. ಅಷ್ಟೇ ಅಲ್ಲ ಮನೆಯಲ್ಲಿ ಯಾರಿಗೂ ಹೆದರದ ಆಸಾಮಿ ತನ್ನ ಮಗಳ ಯಾವ ಮಾತನ್ನು ಮೀರುವುದಿಲ್ಲ. ಹಾಗಾಗಿಯೇ ಹೆಣ್ಣು ಮಕ್ಕಳಿಗೆ ಅಪ್ಪನೆಂದರೆ ಆಕಾಶ, ಮುಗಿಯದಂತ ಪ್ರೀತಿ ಕೊಡುವ ಜೊತೆಗಾರ. ಇದಕ್ಕೆ ಪೂರಕ ಎಂಬಂತೆ ಇಂಟರ್ನೆಟ್‌ನಲ್ಲಿ ವೈರಲ್ ಆಗುತ್ತಿರುವ ವಿಡಿಯೋ ಒಂದು ತಂದೆ, ಮಗಳ (Father-Daughter Dance) ಹೃದಯಸ್ಪರ್ಶಿ ಕ್ಷಣಗಳನ್ನು ಎಲ್ಲರೂ ಕಣ್ಣು ತುಂಬಿಕೊಳ್ಳುವಂತೆ ಮಾಡಿದೆ. ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಅಪ್ಪ ಮಗಳ ಮುದ್ದಾದ ಡಾನ್ಸ್ ವಿಡಿಯೋವನ್ನು @holyangels.school ಎಂಬ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ.
ಮಗಳ ಶಾಲೆಯಲ್ಲಿ ತಂದೆಯರ ದಿನದ ಪ್ರಯುಕ್ತ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗಿದ್ದು, ಅಪ್ಪ, ಮಗಳು ಬಾಲಿವುಡ್‌ನ “ತುಮ್ಸೆ ಹಿ ದಿನ್ ಹೋತಾ ಹೈ” ಎಂಬ ಟ್ರ್ಯಾಕ್ ಗೆ ಹೆಜ್ಜೆ ಹಾಕಿದ್ದಾರೆ. ಇದು ಕೇವಲ ಶಾಲಾ ಕಾರ್ಯಕ್ರಮಕ್ಕೆಂದು ಮಾಡಿದ ನೃತ್ಯವಾದರೂ ಕೂಡ ಅಪ್ಪ -ಮಗಳು ಹಂಚಿಕೊಂಡ ಶುದ್ಧವಾದ ಭಾವನೆಗಳು ಎಲ್ಲರ ಕಣ್ಣು ತುಂಬಿ ಬರುವಂತೆ ಮಾಡಿದೆ. ನೃತ್ಯಕ್ಕೆ ಹಾಕಿರುವ ಹೆಜ್ಜೆಗಳಂತೆ ಅವರ ಹಾವಭಾವ ಕೂಡ ಮ್ಯಾಚ್ ಆಗಿದ್ದು ತಂದೆ ಮಗಳೆಂದರೆ ಹೀಗಿರಬೇಕು ಎಂಬುದನ್ನು ತೋರಿಸಿದ್ದಾರೆ. ಈ ಡಾನ್ಸ್ ವಿಡಿಯೋ, ತರಬೇತಿ ಪಡೆದು ಮಾಡಿರುವುದಾದರೂ ಕೂಡ, ತಂದೆ, ತನ್ನ ಮಗಳನ್ನು ಸಂತೋಷಪಡಿಸಲು ಏನು ಬೇಕಾದರೂ ಮಾಡಬಲ್ಲ ಎಂಬುದನ್ನು ತೋರಿಸಿಕೊಟ್ಟಿದೆ. ಈ ಹೃದಯಸ್ಪರ್ಶಿ ಕ್ಷಣವನ್ನು ಆನ್‌ಲೈನ್‌ನಲ್ಲಿ ಲಕ್ಷಾಂತರ ಜನ ಹಂಚಿಕೊಂಡಿದ್ದಾರೆ.
ಇದನ್ನೂ ಓದಿ: ಅಪ್ಪನ 14 ವರ್ಷದ ಆಸೆಯನ್ನು ಮಗ ಈಡೇರಿಸಿದ ಅದ್ಭುತ ಕ್ಷಣ ಹೇಗಿದೆ ನೋಡಿ?
ಈ ವೀಡಿಯೊ ಈಗಾಗಲೇ 9 ಲಕ್ಷಕ್ಕೂ ಹೆಚ್ಚು ವೀಕ್ಷಣೆಗಳನ್ನು ಗಳಿಸಿದೆ, ಸಾವಿರಾರು ಲೈಕ್ ಕಾಮೆಂಟ್‌ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು, “ಅಪ್ಪ ತುಂಬಾ ಚೆನ್ನಾಗಿ ನೃತ್ಯ ಮಾಡಿದ್ದಾರೆ” ಎಂದು ಕಾಮೆಂಟ್ ಮಾಡಿದ್ದಾರೆ. ಇನ್ನೊಬ್ಬರು, “ಈ ಹುಡುಗಿಯ ಜೀವನದಲ್ಲಿ ಇದೊಂದು ಸುಂದರ ಕ್ಷಣ” ಎಂದು ಬರೆದಿದ್ದಾರೆ. ಮತ್ತೊಬ್ಬರು ಇವರಿಗೆ “ಈ ವರ್ಷದ ತಂದೆ” ಎಂಬ ಅವಾರ್ಡ್ ನೀಡಬೇಕೆಂದು ಹೇಳಿದ್ದಾರೆ. ಈ ವೀಡಿಯೊ ತಂದೆ ಮತ್ತು ಹೆಣ್ಣುಮಕ್ಕಳ ನಡುವೆ ಇರುವಂತಹ ಬಾಂಧವ್ಯದ ಸಂಕೇತವಾಗಿದೆ. ಶ್ರೀಮಂತರಾಗಿರಲಿ ಅಥವಾ ಬಡವರಾಗಿರಲಿ, ತಂದೆಯ ಪ್ರೀತಿ ಮಗಳಿಗೆ ದೊಡ್ಡ ಶಕ್ತಿಯಾಗಿರುತ್ತದೆ. ತಂದೆ ಗಟ್ಟಿಯಾಗಿ ಯಾವುದನ್ನೂ ಹೇಳದಿದ್ದರೂ ಈ ರೀತಿಯ ಕ್ಷಣಗಳು ಹೇಳಲಾಗದ ಪದಗಳನ್ನು ಬಣ್ಣಿಸುತ್ತದೆ.
ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ