27 ವರ್ಷಗಳಲ್ಲಿ ಒಂದು ದಿನವೂ ರಜೆ ತೆಗೆದುಕೊಳ್ಳದ ತನ್ನ ತಂದೆಗಾಗಿ 2 ಕೋಟಿ ರೂಪಾಯಿ ಸಂಗ್ರಹಿಸಿದ ಮಗಳು

27 ವರ್ಷಗಳಲ್ಲಿ ಒಂದು ದಿನವೂ ರಜೆ ತೆಗೆದುಕೊಳ್ಳದ ಹಿನ್ನೆಲೆ ಕಂಪನಿ ನೀಡಿದ ಸಾಧಾರಣ ಉಡುಗೊರೆಯಿಂದಾಗಿ ವೈರಲ್ ಆಗಿದ್ದ ಬರ್ಗರ್ ಕಿಂಗ್ ಇದೀಗ ಮತ್ತೆ ಇಂಟರ್ನೆಟ್​ನಲ್ಲಿ ಮುನ್ನೆಲೆಗೆ ಬಂದಿದ್ದಾರೆ. ಬರ್ಗರ್ ಕಿಂಗ್ ಮಗಳು ತಂದೆಗಾಗಿ 2ಕೋಟಿ ರೂಪಾಯಿ ದೇಣಿಗೆ ಸಂಗ್ರಹಿಸಿದ್ದಾಳೆ.

27 ವರ್ಷಗಳಲ್ಲಿ ಒಂದು ದಿನವೂ ರಜೆ ತೆಗೆದುಕೊಳ್ಳದ ತನ್ನ ತಂದೆಗಾಗಿ 2 ಕೋಟಿ ರೂಪಾಯಿ ಸಂಗ್ರಹಿಸಿದ ಮಗಳು
ಬರ್ಗರ್ ಕಿಂಗ್ ಕೆವಿನ್ ಫೋರ್ಡ್
Follow us
TV9 Web
| Updated By: Rakesh Nayak Manchi

Updated on: Jul 03, 2022 | 2:05 PM

ಯುಎಸ್‌ನ ಲಾಸ್ ವೇಗಾಸ್‌ನ ನಿಷ್ಠಾವಂತ ಬರ್ಗರ್ ಕಿಂಗ್ (Burger King) ಇತ್ತೀಚೆಗೆ 27 ವರ್ಷಗಳಲ್ಲಿ ಒಂದು ದಿನವೂ ರಜೆ ತೆಗೆದುಕೊಳ್ಳದ ಕಾರಣ ತನ್ನ ಕಂಪನಿಯಿಂದ ಉಡುಗೊರೆ(Gift)ಯನ್ನು ಪಡೆದಿದ್ದರು. ಇದರ ವಿಡಿಯೋ ವೈರಲ್ (Video Viral) ಆಗಿತ್ತು. ಅಲ್ಲದೆ ಕಂಪನಿಯ ಸಾಧಾರಣ ಉಡುಗೊರೆ ನೀಡಿದ್ದನ್ನು ನೋಡಿ ನೆಟ್ಟಿಗರು ಶಾಕ್ ಆಗಿದ್ದರು. ಆದರೀಗ ದೇಣಿಗೆ(Donation)ಯಾಗಿ ಕೋಟ್ಯಾಂತರ ರೂಪಾಯಿ ಸಂಗ್ರಹವಾಗುವ ಮೂಲಕ ಆ ವ್ಯಕ್ತಿ ಇಂಟರ್ನೆಟ್​ನಲ್ಲಿ ಮತ್ತೆ ಸುದ್ದಿಯಾಗಿದ್ದಾರೆ. 

54 ವರ್ಷದ ಬರ್ಗರ್ ಕಿಂಗ್ ಕೆವಿನ್ ಫೋರ್ಡ್ ಅವರು ಕ್ಯಾಷಿಯರ್ ಆಗಿ ಮತ್ತು 1995 ರಿಂದ ಮ್ಯಾಕ್‌ಕಾರನ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅಡುಗೆ ಮಾಡುವವರಾಗಿ ಕೆಲಸ ಮಾಡುತ್ತಿದ್ದಾರೆ. ಅವರ 27ನೇ ವಾರ್ಷಿಕೋತ್ಸವದಂದು ಅವರ ಮೇಲಧಿಕಾರಿಗಳು ಅವರಿಗೆ ಚಲನಚಿತ್ರ ಟಿಕೆಟ್, ಚಾಕೊಲೇಟ್ ಸೇರಿದಂತೆ ಕೆಲವೊಂದನ್ನು ಉಡುಗೊರೆಯಾಗಿ ನೀಡಿದ್ದರು.

ಇದನ್ನೂ ಓದಿ: Viral News: ದಂಬಾಲು ಬಿದ್ದು 61 ವರ್ಷದ ಮುದುಕನ ಮದುವೆಯಾದ 18ರ ಯುವತಿ

ಕಂಪನಿ ನೀಡಿದ ಉಡುಗೊರೆಯನ್ನು ಸ್ವೀಕರಿಸಿ ತಮ್ಮ ಸಹೋದ್ಯೋಗಿಗಳಿಗೆ ವಿಡಿಯೋ ಮೂಲಕ ಧನ್ಯವಾದ ತಿಳಿಸಿದ್ದರು. ಈ ವಿಡಿಯೋ ವೈರಲ್ ಪಡೆಕೊಂಡಿತ್ತು. ಕಂಪನಿ ಮೇಲಿನ ಅವರ ನಿಷ್ಠೆಗೆ ಅಂತಹ ಉಡುಗೊರೆ ನೀಡಿರುವುದು ಆಘಾತವಾಗಿದೆ ಎಂದು ಅನೇಕ ಜನರು ಹೇಳಿದರು.

ಇದರ ನಂತರ, ಕೆವಿನ್ ಅವರ ಮಗಳು ಸೆರಿನಾ ತಮ್ಮ ತಂದೆಗಾಗಿ GoFundMe ಪುಟವನ್ನು ಸ್ಥಾಪಿಸಿ ಸುಮಾರು $200 (15,790 ರೂಪಾಯಿ) ಸಂಗ್ರಹಿಸಲು ಉದ್ದೇಶಿಸಿದರು. ಕೆವಿನ್ ನಿಷ್ಠೆಗೆ ಮನಸೋತ ಜನರು ದೇಣಿಗೆ ನೀಡಲು ಮುಂದಾದರು. ಅದರಂತೆ ಸುಮಾರು $300,000 ( 2.36 ಕೋಟಿಗೂ ಹೆಚ್ಚು) ದೇಣಿಗೆ ಸಂಗ್ರಹವಾಗಿದೆ.

ಕೆವಿನ್ ಫೋರ್ಡ್ ಅವರ ಮಗಳು ಸೆರಿನಾ ನಿಧಿಸಂಗ್ರಹಣೆ ವೇಳೆ “ಆ ವೀಡಿಯೊದಲ್ಲಿರುವ ವ್ಯಕ್ತಿ ನನ್ನ ತಂದೆ. ಅವರು 27 ವರ್ಷಗಳಿಂದ ತಮ್ಮ ಕೆಲಸದಲ್ಲಿ ಕೆಲಸ ಮಾಡಿದ್ದಾರೆ ಮತ್ತು ಅವರು ಎಂದಿಗೂ ಕೆಲಸವನ್ನು ತಪ್ಪಿಸಲಿಲ್ಲ. ಅವರು 27 ವರ್ಷಗಳ ಹಿಂದೆ ನನ್ನ ಮತ್ತು ನನ್ನ ಅಕ್ಕನ ಪಾಲನೆಯನ್ನು ಪಡೆದಾಗ ಅವರು ಈ ಕೆಲಸದಲ್ಲಿ ಕೆಲಸ ಮಾಡಲು ಪ್ರಾರಂಭಿಸಿದರು. ನಂತರ ನಮ್ಮ ಕುಟುಂಬವು ಬೆಳೆದಂತೆ ಮತ್ತು ಅವರು ಮರುಮದುವೆಯಾದಾಗ ಒದಗಿಸಿದ ಅದ್ಭುತವಾದ ಆರೋಗ್ಯ ವಿಮೆಯಿಂದಾಗಿ ಅವರು ಅಲ್ಲಿ ಕೆಲಸ ಮಾಡುವುದನ್ನು ಮುಂದುವರೆಸಿದರು” ಎಂದಿದ್ದಾಳೆ. ಕುಟುಂಬವು ಯಾವುದೇ ರೀತಿಯಲ್ಲಿ ಹಣವನ್ನು ಕೇಳುತ್ತಿಲ್ಲ, ಯಾರಾದರು ಆಶೀರ್ವಾದಿಸಲು ಇಚ್ಚಿಸಿದರೆ ಅವರು ಮೊಮ್ಮಕ್ಕಳನ್ನು ನೋಡಲು ಇಚ್ಚಿಸುತ್ತಾರೆ ಎಂದಿದ್ದಳು.

ಇದನ್ನೂ ಓದಿ: Viral Video: ‘ಚೈಲ್ಡ್ಸ್ ಪ್ಲೇ’ ಚಲನಚಿತ್ರ ಸರಣಿಯ ಚುಕ್ಕಿ ವೇಷಧರಿಸಿದ ಕುಬ್ಜ ವ್ಯಕ್ತಿ ದರೋಡೆಗೆ ಯತ್ನಿಸುವ ವಿಡಿಯೋ ವೈರಲ್

ಮಂಗಳವಾರ, NBCಯ ಟುಡೆ ಶೋನಲ್ಲಿ ಕಾಣಿಸಿಕೊಳ್ಳಲು ನ್ಯೂಯಾರ್ಕ್ ನಗರಕ್ಕೆ ಹೋಗಿದ್ದಾಗ ತನಗಾಗಿ ಸಂಗ್ರಹಿಸಿದ ಹಣವನ್ನು ಏನು ಮಾಡಲು ಯೋಜಿಸಿದ್ದೀರಿ ಎಂದು ಪ್ರಶ್ನೆಯೊಂದನ್ನು ಕೇಳಲಾಯ್ತು. ಇದಕ್ಕೆ ಉತ್ತಿರಿಸಿದ ಫೋರ್ಡ್, ನಿವೃತ್ತಿಯ ಯಾವುದೇ ಯೋಜನೆಯನ್ನು ಹೊಂದಿಲ್ಲ. ನನ್ನ ಮೊಮ್ಮಕ್ಕಳನ್ನು ಸ್ವಲ್ಪ ಸಮಯದವರೆಗೆ ಭೇಟಿ ಮಾಡುವುದನ್ನು ಮತ್ತು ಅವರ ಕಾಲೇಜಿಗೆ ಸ್ವಲ್ಪ ಹಣವನ್ನು ಹಾಕುವುದನ್ನು ಹೊರತುಪಡಿಸಿ ಆ ಹಣದೊಂದಿಗೆ ನಾನು ಏನನ್ನೂ ಮಾಡಬೇಕೆಂದು ಯೋಚಿಸಲಿಲ್ಲ, ನಾನು ಅದರ ಬಗ್ಗೆ ಯೋಚಿಸುವುದಿಲ್ಲ. ನಾನು ಕೆಲಸ ಮಾಡುತ್ತಿದ್ದೇನೆ” ಎಂದು ಹೇಳಿದರು.

ಇದನ್ನೂ ಓದಿ: Viral Video: ಅಲಿಗೇಟರ್ ಮೊಸಳೆಯನ್ನು ಮದುವೆಯಾದ ಮೆಕ್ಸಿಕೋ ಮೇಯರ್, ಡಾನ್ಸ್ ಮಾಡುತ್ತಾ ಮೊಸಳೆಗೆ ಕಿಸ್ ಕೊಟ್ಟ ಮೇಯರ್

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ