AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ಅಪರಿಚಿತ ವಿಶಿಷ್ಟಚೇತನ ವ್ಯಕ್ತಿಯೊಂದಿಗೆ ಜನ್ಮದಿನವನ್ನು ಆಚರಿಸಿದ ವಿದ್ಯಾರ್ಥಿ, ನೆಟ್ಟಿಗರ ಮನಗೆದ್ದ ವಿಡಿಯೋ ಇಲ್ಲಿದೆ

ವಿಶಿಷ್ಟಚೇತನ ವ್ಯಕ್ತಿಯನ್ನು ಭೇಟಿಯಾಗಿ ಸಿಹಿ ತಿನ್ನಿಸುವ ಮೂಲಕ ವಿದ್ಯಾರ್ಥಿಯೊಬ್ಬರು ತನ್ನ ಜನ್ಮದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಿದ್ದಾರೆ. ಈ ಹೃದಯಸ್ಪರ್ಶಿ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

Viral Video: ಅಪರಿಚಿತ ವಿಶಿಷ್ಟಚೇತನ ವ್ಯಕ್ತಿಯೊಂದಿಗೆ ಜನ್ಮದಿನವನ್ನು ಆಚರಿಸಿದ ವಿದ್ಯಾರ್ಥಿ, ನೆಟ್ಟಿಗರ ಮನಗೆದ್ದ ವಿಡಿಯೋ ಇಲ್ಲಿದೆ
ವಿಶಿಷ್ಟಚೇತನ ವ್ಯಕ್ತಿಯೊಂದಿಗೆ ಜನ್ಮದಿನಾಚರಣೆ ಆಚರಿಸಿಕೊಂಡ ವಿದ್ಯಾರ್ಥಿ
TV9 Web
| Edited By: |

Updated on:Jul 03, 2022 | 4:31 PM

Share

ತನ್ನ ಹುಟ್ಟುಹಬ್ಬವನ್ನು ಎಲ್ಲಿ ಆಚರಿಸುವುದು, ಹೇಗೆ ಆಚರಿಸುವುದು ಎಂದು ಎಲ್ಲರೂ ಯೋಚಿಸುತ್ತಾರೆ. ಆದರೆ ಇಲ್ಲೊಬ್ಬ ವಿದ್ಯಾರ್ಥಿ ಎಲ್ಲರಿಗೆ ಮಾದರಿಯಾಗುವಂತೆ ತನ್ನ ಜನ್ಮದಿನವನ್ನು ಆಚರಿಸಿದ್ದಾನೆ. ಕಾಲೇಜಿಗೆ ಹೋಗುವ ದಾರಿಯಲ್ಲಿ ಪದೇಪದೇ ಭೇಟಿಯಾಗುತ್ತಿದ್ದ ವಿಕಲಚೇತನ ವ್ಯಕ್ತಿಯನ್ನು ಭೇಟಿಯಾಗುವ ಮೂಲಕ ವಿದ್ಯಾರ್ಥಿಯು ಜನ್ಮದಿನವನ್ನು ಆಚರಿಸಿದ್ದಾನೆ. ಇದರ ಹೃದಯಸ್ಪರ್ಶಿ ವೀಡಿಯೋ ಆನ್‌ಲೈನ್‌ನಲ್ಲಿ ಎಲ್ಲರ ಹುಬ್ಬೇರಿಸುವಂತೆ ಮಾಡಿದೆ.

ಮೂಲತಃ ಕೇರಳದ ಕಣ್ಣೂರಿನ ಹಾಗೂ ಮಂಗಳೂರಿನ ಯೆನೆಪೊಯ ವಿಶ್ವವಿದ್ಯಾನಿಲಯದ ಮನಃಶಾಸ್ತ್ರ ವಿದ್ಯಾರ್ಥಿ ವಿಹಾಯಸ್ ತನ್ನ 20ನೇ ಜನ್ಮ ವರ್ಷಾಚರಣೆಯನ್ನು ವಿಕಲಾಂಗ ವ್ಯಕ್ತಿಗೆ ಸಿಹಿ ತಿನ್ನಿಸುವ ಮೂಲಕ ಅರ್ಥಪೂರ್ಣವಾಗಿ ಆಚಿಸಿದ್ದಾನೆ. ವಿಹಾಯಸ್ ಮತ್ತು ಸ್ನೇಹಿತೆ ಮೃಧುಲಾ ಮಧು ಪವನ್ ನೆಲೆಸಿದ್ದ ಮನೆಗೆ ಭೇಟಿ ನೀಡಿ ಅಚ್ಚರಿ ಮೂಡಿಸಿದ್ದಾರೆ. ಈ ವೇಳೆ ಪವನ್ ಮತ್ತು ಅವರ ತಾಯಿಯ ಸಂತೋಷಕ್ಕೆ ಪಾರವೇ ಇಲ್ಲದಂತಾಗಿದೆ.

ಇದನ್ನೂ ಓದಿ: Viral Video: ಚಬಾ ಚಂಡಮಾರುತಕ್ಕೆ ಮುಳುಗಿದ ಹಡಗು, ನಾವಿಕರನ್ನು ರಕ್ಷಿಸುವ ರೋಚಕ ವಿಡಿಯೋ ವೈರಲ್

ಇದರ ವಿಡಿಯೋ ವೈರಲ್ ಆಗುತ್ತಿದೆ. ವಿಡಿಯೋ ಕ್ಲಿಪ್​ನಲ್ಲಿರುವಂತೆ, ವಿದ್ಯಾರ್ಥಿ “ನಾವು ಅವನಿಗೆ ಕೈ ಬೀಸಿದಾಗಲೆಲ್ಲಾ ಅವನ ಮುಖವು ಬೆಳಗುತ್ತದೆ. ಸಾಮಾನ್ಯವಾಗಿ ಅವನನ್ನು ನೋಡುವುದು ನಮ್ಮ ದಿನದ ಪ್ರಮುಖ ಅಂಶವಾಗಿದೆ” ಎಂದು ವಿಡಿಯೋದಲ್ಲಿ ಬರೆದಿದ್ದಾರೆ.

ಕೈಯಲ್ಲಿ ಕೇವಲ ಒಂದು ಸಣ್ಣ ಕೇಕ್ ತೆಗೆದುಕೊಂಡು ಹೋದ ಇಬ್ಬರು ವಿದ್ಯಾರ್ಥಿಗಳು ಪವನ್ ಯಾವ ಅಪಾರ್ಟ್ಮೆಂಟ್​ನಲ್ಲಿ ವಾಸಿಸುತ್ತಿದ್ದರು ಎಂದು ಖಚಿತವಾಗಿರದಿದ್ದರೂ ಹುಡುಕಾಡಿ ಭೇಟಿಯಾಗಿದ್ದಾರೆ. ಭೇಟಿ ವೇಳೆ ಪವನ್ ತಮ್ಮನ್ನು ಗುರುತಿಸುತ್ತಾರೆಯೇ ಎಂಬ ಕುತೂಹಲ ವಿದ್ಯಾರ್ಥಿಗಳಲ್ಲಿ ಇತ್ತು. ಆದರೆ ಅವರು ಅಂತಿಮವಾಗಿ ಅವನ ಮನೆ ಬಾಗಿಲಿಗೆ ಬಂದಾಗ ಗುರುತಿಸಿದ ಪವನ್ ಮತ್ತು ತಾಯಿ ಸಂತೋಷಪಟ್ಟಿದ್ದಾರೆ.

View this post on Instagram

A post shared by Vihayas ? (@what.the.vick)

ತನ್ನದೇ ಆದ ರೀತಿಯಲ್ಲಿ ವಿಹಾಯಸ್‌ಗೆ ಜನ್ಮದಿನದ ಶುಭಾಶಯಗಳನ್ನು ಕೋರಿದ ಪವನ್​ಗೆ ವಿಹಾಯಸ್​ ಕೇಕ್ ತಿನ್ನಿಸಿದ್ದಾರೆ. ನಂತರ ಪವನ್ ತಾಯಿಯ ಸಹಾಯದಿಂದ ವಿಹಾಯಸ್​ಗೆ ಕೇಕ್ ತಿನ್ನಿಸುವುದನ್ನು ವಿಡಿಯೋದಲ್ಲಿ ಕಾಣಬಹುದು. ತಮ್ಮ ಹೊಸ ಸ್ನೇಹವನ್ನು ಗುರುತಿಸಲು ಮೂವರು ಫೋಟೋ ತೆಗೆಸಿಕೊಂಡಿದ್ದಾರೆ. “ಪವನ್ ನಿಮ್ಮನ್ನು ನೋಡಿದಾಗಲೆಲ್ಲಾ ಅಣ್ಣ ಮತ್ತು ಅಕ್ಕ ಎಂಬ ಪದಗಳನ್ನು ಸನ್ನೆ ಮಾಡುತ್ತಾನೆ ಎಂದು ಪವನ್ ತಾಯಿ ಹೇಳಿದಾಗ ನಮ್ಮ ಹೃದಯ ಕರಗಿತು” ಎಂದು ವಿಹಾಯಸ್ ಹೇಳಿದ್ದಾರೆ.

ಇದನ್ನೂ ಓದಿ: Viral Video: ‘ಚೈಲ್ಡ್ಸ್ ಪ್ಲೇ’ ಚಲನಚಿತ್ರ ಸರಣಿಯ ಚುಕ್ಕಿ ವೇಷಧರಿಸಿದ ಕುಬ್ಜ ವ್ಯಕ್ತಿ ದರೋಡೆಗೆ ಯತ್ನಿಸುವ ವಿಡಿಯೋ ವೈರಲ್

Published On - 4:31 pm, Sun, 3 July 22

ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ