ಗಿಡ ಗಂಟಿಗಳ ಮಧ್ಯೆ ಕೊಳಚೆ ನೀರಿನಲ್ಲಿ ಸಿಲುಕಿದ್ದ ವೃದ್ಧನನ್ನು ರಕ್ಷಿಸಿದ ಪೊಲೀಸ್ ಕಾಸ್ಟೇಬಲ್; ಪೇದೆಯ ಧೈರ್ಯ, ಸಾಹಸಕ್ಕೆ ನೆಟ್ಟಿಗರ ಮೆಚ್ಚುಗೆ

ಅಪಾಯಕಾರಿ ಕೆಲಸವನ್ನು ಪೂರ್ಣಗೊಳಿಸಿ ರಕ್ಷಣೆಗೆ ಮಾಡಿದ ಪೊಲೀಸ್ ಕಾನ್ಸ್ಟೇಬಲ್ನನ್ನು ನೆಟ್ಟಿಗರು ಶ್ಲಾಘಿಸಿದ್ದಾರೆ. "ಅವರ ಅಸಾಧಾರಣ ಧೈರ್ಯಕ್ಕೆ ಸೆಲ್ಯೂಟ್" ಎಂದು ಬಳಕೆದಾರರು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬ ಬಳಕೆದಾರ, " ಇದು ಆಗ್ರಾ ಪೋಲೀಸರು ಮಾಡಿದ ಮಹತ್ತರ ಕೆಲಸ. ಆ ವ್ಯಕ್ತಿಗೆ ಹ್ಯಾಟ್ಸ್ ಆಫ್" ಎಂದು ಕಾಮೆಂಟ್ ಮಾಡಿದ್ದಾರೆ.

ಗಿಡ ಗಂಟಿಗಳ ಮಧ್ಯೆ ಕೊಳಚೆ ನೀರಿನಲ್ಲಿ ಸಿಲುಕಿದ್ದ ವೃದ್ಧನನ್ನು ರಕ್ಷಿಸಿದ ಪೊಲೀಸ್ ಕಾಸ್ಟೇಬಲ್; ಪೇದೆಯ ಧೈರ್ಯ, ಸಾಹಸಕ್ಕೆ ನೆಟ್ಟಿಗರ ಮೆಚ್ಚುಗೆ
ಕೊಳಚೆ ನೀರಿನಲ್ಲಿ ಸಿಲುಕಿದ್ದ ವೃದ್ಧನನ್ನು ರಕ್ಷಿಸಿದ ಪೊಲೀಸ್ ಕಾಸ್ಟೇಬಲ್; ಪೇದೆಯ ಧೈರ್ಯ, ಸಾಹಸಕ್ಕೆ ನೆಟ್ಟಿಗರ ಮೆಚ್ಚುಗೆ
TV9kannada Web Team

| Edited By: Ayesha Banu

Jul 04, 2022 | 9:02 AM

ಸಂದೇಶ್ ಕುಮಾರ್ ಎಂದು ಹೇಳಲಾದ ಪೊಲೀಸ್ ಕಾನ್ಸ್ಟೇಬಲೊಬ್ಬರು ಗಿಡ ಗಂಟಿಗಳ ಮಧ್ಯೆ ಬೆಳೆದ ಕೊಚ್ಚೆ ಪ್ರದೇಶದಲ್ಲಿ ಸಿಲುಕಿದ್ದ ವೃದ್ಧರನ್ನು ರಕ್ಷಿಸಿದ್ದಾರೆ(UP Police Constable Rescues Man). ಹಾಗೂ ಅವರು ತೋರಿದ ಧೈರ್ಯಕ್ಕಾಗಿ ಸಾಮಾಜಿಕ ಜಾಲತಾಣಗಳಲ್ಲಿ ಅನೇಕರಿಂದ ಪ್ರಶಂಸೆ ವ್ಯಕ್ತವಾಗಿದೆ. ಸದ್ಯ ಪೊಲೀಸ್ ಕಾಸ್ಟೇಬಲ್ರ ಈ ಸಾಹಸದ ವಿಡಿಯೋವನ್ನು ಆಗ್ರಾ ಪೊಲೀಸರು ಹಂಚಿಕೊಂಡಿದ್ದಾರೆ.

ಟ್ವಿಟರ್‌ನಲ್ಲಿ ಹಂಚಿಕೊಂಡ ವಿಡಿಯೋ ಕ್ಲಿಪ್ನಲ್ಲಿ ಪೊಲೀಸ್ ಅಧಿಕಾರಿ ಹಗ್ಗದ ಸಹಾಯದೊಂದಿಗೆ ಕೆಸರಿನಲ್ಲಿ ಇಳಿದು ಗಿಡ ಗಂಟಿಗಳ ನಡುವೆ ಸಿಕ್ಕಿ ಹಾಕಿಕೊಂಡಿದ್ದ ವ್ಯಕ್ತಿ ಇರುವ ಪ್ರದೇಶಕ್ಕೆ ಹೋಗುತ್ತಾರೆ. ಅಲ್ಲಿ ವಯಸ್ಸಾದ ವ್ಯಕ್ತಿ ನೀರಿನಲ್ಲಿ ಮುಳುಗುತ್ತಿರುತ್ತಾರೆ. ಈ ವೇಳೆ ಪೋಲೀಸ್ ಸಿಬ್ಬಂದಿ ಅವರನ್ನು ತಮ್ಮ ಹೆಗಲ ಮೇಲೆ ಹಾಕಿಕೊಂಡು ರಕ್ಷಣೆಗೆ ಮುಂದಾಗುತ್ತಾರೆ. ಆಗ ಇತರೆ ಅಧಿಕಾರಿಗಳು ಅವರನ್ನು ಹಗ್ಗದ ಮೂಲಕ ಎಳೆದು ರಕ್ಷಿಸುತ್ತಾರೆ. ಇದನ್ನೂ ಓದಿ: ಕರ್ನಾಟಕದಲ್ಲಿ ಮುಂದುವರಿದ ಭಾರೀ ಮಳೆ! ದಕ್ಷಿಣ ಕನ್ನಡದಲ್ಲಿ ಕೆಲ ಶಾಲೆಗಳಿಗೆ ರಜೆ ಘೋಷಣೆ

ರಕ್ಷಣಾ ಕಾರ್ಯಾಚರಣೆಯನ್ನು ಸ್ಟೇಷನ್ ಹೌಸ್ ಆಫೀಸರ್ (ಎಸ್‌ಎಚ್‌ಒ) ಶೇರ್ ಸಿಂಗ್ ನೇತೃತ್ವ ವಹಿಸಿದ್ದರು. “ಕೊಳಚೆ ಪ್ರದೇಶದಲ್ಲಿ ಅಸಹಾಯಕವಾಗಿ ಸಿಕ್ಕಿಬಿದ್ದಿರುವ ವೃದ್ಧನನ್ನು ಹೊರತೆಗೆಯಲು ಕಾನ್‌ಸ್ಟೆಬಲ್ ಸಂದೇಶ್ ಕುಮಾರ್ ಮತ್ತು ತಂಡ PS ಬರ್ಹಾನ್ ಅವರ ಧೈರ್ಯಶಾಲಿ ಪ್ರಯತ್ನಗಳಿಗೆ ವಂದನೆಗಳು” ಎಂದು ಯುಪಿ ಪೊಲೀಸರು ಟ್ವೀಟ್ ಮಾಡಿದ್ದಾರೆ.

ಅಪಾಯಕಾರಿ ಕೆಲಸವನ್ನು ಪೂರ್ಣಗೊಳಿಸಿ ರಕ್ಷಣೆಗೆ ಮಾಡಿದ ಪೊಲೀಸ್ ಕಾನ್ಸ್ಟೇಬಲ್ನನ್ನು ನೆಟ್ಟಿಗರು ಶ್ಲಾಘಿಸಿದ್ದಾರೆ. “ಅವರ ಅಸಾಧಾರಣ ಧೈರ್ಯಕ್ಕೆ ಸೆಲ್ಯೂಟ್” ಎಂದು ಬಳಕೆದಾರರು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬ ಬಳಕೆದಾರ, ” ಇದು ಆಗ್ರಾ ಪೋಲೀಸರು ಮಾಡಿದ ಮಹತ್ತರ ಕೆಲಸ. ಆ ವ್ಯಕ್ತಿಗೆ ಹ್ಯಾಟ್ಸ್ ಆಫ್” ಎಂದು ಕಾಮೆಂಟ್ ಮಾಡಿದ್ದಾರೆ.

ಇದಕ್ಕೂ ಮುನ್ನ, ಬತ್ತಿದ ಬಾವಿಗೆ ಹಾರಿದ ಮಹಿಳೆಯನ್ನು ರಕ್ಷಿಸಿದ್ದಕ್ಕಾಗಿ ಯುಪಿ ಪೊಲೀಸರನ್ನು ಆನ್‌ಲೈನ್‌ನಲ್ಲಿ ಪ್ರಶಂಸಿಸಲಾಗಿತ್ತು. ಪೊಲೀಸ್ ಅಧಿಕಾರಿಯೊಬ್ಬರು ಹಗ್ಗವನ್ನು ಬಳಸಿ ಬಾವಿಯೊಳಗೆ ಇಳಿದು ತಾತ್ಕಾಲಿಕ ರಾಟೆ ಮಾಡಿ ಸುತ್ತಲೂ ಹಗ್ಗಗಳನ್ನು ಕಟ್ಟಿ ಅದನ್ನು ಬಳಸಿ ಮಹಿಳೆಯನ್ನು ಸುರಕ್ಷಿತವಾಗಿ ಎಳೆದು ಮೇಲೆತ್ತಿದ್ದರು. ಬಳಿಕ ಆಕೆಗೆ ವೈದ್ಯಕೀಯ ನೆರವು ನೀಡಿ ಅವಳ ಕುಟುಂಬದೊಂದಿಗೆ ಮತ್ತೆ ಸೇರಿಸಲಾಗಿತ್ತು. ಈಗ ಮತ್ತೊಮ್ಮೆ ಸಹಾಸ ಮಾಡುವ ಮೂಲಕ ಪೊಲೀಸರ ಕಾರ್ಯಕ್ಕೆ ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ.

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada