ಅಪ್ಪನ ಹುಟ್ಟುಹಬ್ಬದ ದಿನ ಆತನ ಕನಸಿನ ಕಾರನ್ನು ಕೊಡಿಸಿದ ಮಗಳು

| Updated By: ಶ್ರೀದೇವಿ ಕಳಸದ

Updated on: Jan 09, 2023 | 12:14 PM

Dream Car : ‘ಅಪ್ಪಾ, ನಿಮಗೆ ಹುಟ್ಟುಹಬ್ಬದ ಶುಭಾಶಯಗಳು. ನಾನು ಪ್ರೀತಿಸಿದ ಮೊದಲ ವ್ಯಕ್ತಿ ನೀವು. ಸಾಮಾಜಿಕ ನಿಯಮಗಳನ್ನು ಮುರಿದು ನನ್ನನ್ನು ಬೆಳೆಸಿದ್ದಕ್ಕಾಗಿ ಮತ್ತು ನಂಬಿದ್ದಕ್ಕಾಗಿ ಧನ್ಯವಾದ.’

ಅಪ್ಪನ ಹುಟ್ಟುಹಬ್ಬದ ದಿನ ಆತನ ಕನಸಿನ ಕಾರನ್ನು ಕೊಡಿಸಿದ ಮಗಳು
ಅಪ್ಪನ ಕನಸಿನ ಕಾರನ್ನು ಕೊಡಿಸಿದ ಮಗಳು
Follow us on

Viral : ಮಕ್ಕಳಿಗಾಗಿ ಪೋಷಕರು ಏನೆಲ್ಲಾ ತ್ಯಾಗ ಮಾಡುತ್ತಾರೆ. ಅವರ ಕನಸನ್ನು ಈಡೇರಿಸಲು ಜೀವನವಿಡೀ ಶ್ರಮಿಸುತ್ತಾರೆ. ಆದರೆ ಇದೀಗ ವೈರಲ್ ಆಗಿರುವ ಈ ವಿಡಿಯೋದಲ್ಲಿ ಉಲ್ಟಾ ಆಗಿದೆ. ಅಪ್ಪನ ಹುಟ್ಟುಹಬ್ಬದ ದಿನ ಆತನ ಕನಸಿನ ಕಾರನ್ನು ಮಗಳು ಕೊಡಿಸಿ ಅಚ್ಚರಿ ಮೂಡಿಸಿದ್ದಾಳೆ. ಈ ವಿಡಿಯೋ ಅನ್ನು ಈತನಕ 5 ಲಕ್ಷಕ್ಕಿಂತಲೂ ಹೆಚ್ಚು ಜನ ನೋಡಿದ್ದಾರೆ. ಭಲೇ ಮಗಳೆ! ಎನ್ನುತ್ತಿದ್ದಾರೆ ನೆಟ್ಟಿಗರು.

ರಿದಾ ಥರನಾ ಈ ಪೋಸ್ಟ್​ ಹಂಚಿಕೊಂಡಿದ್ದಾರೆ. ರಿದಾ ಜನವರಿ 3ರಂದು ತನ್ನ ಹುಟ್ಟೂರು ಕೂರ್ಗ್​ಗೆ ಹೋದರು. ಮರುದಿನವೇ ತಂದೆಯ ಹುಟ್ಟುಹಬ್ಬ. ಅಂದೇ ಅವರ ಕನಸಿನ ಕಾರ್ ಅನ್ನು ಡೆಲಿವರಿ ಪಡೆಯುವ ವ್ಯವಸ್ಥೆಯನ್ನು ಮೊದಲೇ ಮಾಡಿಕೊಂಡಿದ್ದರು. ಈ ಖುಷಿಯ ಘಳಿಗೆಗಳನ್ನು ಚಿತ್ರೀಕರಿಸಿದ ಇನ್​ಸ್ಟಾಗ್ರಾಂಗೆ ಅಪ್​ಲೋಡ್ ಮಾಡಿದರು.

ಇದನ್ನೂ ಓದಿ : ನಾನು ಗೌರವಿಸಲ್ಪಟ್ಟಿದ್ದೇನೆ; 89ರ ಹರೆಯದಲ್ಲಿ ಸ್ನಾತಕೋತ್ತರ ಪದವಿ ಪಡೆದ ವೃದ್ಧೆ

ನೆಟ್ಟಿಗರು ಈ ವಿಡಿಯೋ ನೋಡಿ ಭಾವುಕರಾಗಿದ್ದಾರೆ ಮತ್ತು ಸ್ಫೂರ್ತಿಗೊಂಡಿದ್ದಾರೆ. ಈ ಅಪ್ಪುಗೆಯೇ ಎಲ್ಲವನ್ನೂ ಹೇಳುತ್ತದೆ ಎಂದಿದ್ದಾರೆ ಹಲವರು. ನಾನಂತೂ ಅಳುತ್ತಿದ್ದೇನೆ ಈ ವಿಡಿಯೋ ನೋಡಿ ಎಂದಿದ್ದಾರೆ ಒಬ್ಬರು. ನಿಮ್ಮ ಬಗ್ಗೆ ಹೆಮ್ಮೆ ಎನ್ನಿಸುತ್ತಿದೆ ಎಂದಿದ್ದಾರೆ ಮತ್ತೊಬ್ಬರು. ನಿಮ್ಮ ಕುಟುಂಬಕ್ಕೆ ಮತ್ತು ನಿಮಗೆ ಒಳ್ಳೆಯದಾಗಲಿ ಎಂದಿದ್ದಾರೆ ಹಲವರು.

ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 7:07 pm, Sat, 7 January 23