AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಂತರ್ಜಾಲದಲ್ಲಿ ಹರಿದಾಡುತ್ತಿರುವ ‘ರೆನ್ ಅಂಡ್ ಮಾರ್ಟಿನ್‘ ಹಳೆಯ​ ಆವೃತ್ತಿ

Wren and Martin : ಶಾಲಾದಿನಗಳಲ್ಲಿ ಇಂಗ್ಲಿಷ್​ ವ್ಯಾಕರಣಕ್ಕೆ ಸಂಗಾತಿಯಾಗಿದ್ದ ರೆನ್​ ಅಂಡ್​ ಮಾರ್ಟಿನ್​ ಹಳೆಯ ಆವೃತ್ತಿ ನೆಟ್ಟಿಗರನ್ನು ಪುಳಕಗೊಳಿಸಿ ನೆನಪಿನ ಸುರುಳಿಯನ್ನು ಬಿಚ್ಚಿಸಿದೆ. ಹಾಗೆಯೇ ಹೊಸ ಆವೃತ್ತಿಯ ಬಗ್ಗೆಯೂ ಚರ್ಚೆಯಾಗಿದೆ.

ಅಂತರ್ಜಾಲದಲ್ಲಿ ಹರಿದಾಡುತ್ತಿರುವ ‘ರೆನ್ ಅಂಡ್ ಮಾರ್ಟಿನ್‘ ಹಳೆಯ​ ಆವೃತ್ತಿ
ರೆನ್ ಅಂಡ್ ಮಾರ್ಟಿನ್​ ಹಳೆಯ ಆವೃತ್ತಿ
TV9 Web
| Edited By: |

Updated on:Jan 07, 2023 | 4:49 PM

Share

Viral : ಶಾಲಾದಿನಗಳನ್ನು ನೆನಪಿಸಿಕೊಳ್ಳಿ, ಇಂಗ್ಲಿಷ್​ ವ್ಯಾಕರಣ ಕಬ್ಬಿಣದ ಕಡಲೆಯಾಗಿ ಕಾಡಿದಾಗೆಲ್ಲ ನೀವು ನೀವು ಕಪಾಟಿನಲ್ಲೋ ಲೈಬ್ರರಿಯಲ್ಲೋ ತಡಕಾಡುತ್ತಿದ್ದದ್ದು ರೆನ್ ಅಂಡ್ ಮಾರ್ಟಿನ್ (Wren and Martin)​ ಪುಸ್ತಕವನ್ನೇ. ಇದೀಗ ವೈರಲ್ ಆಗಿರುವ ಈ ಫೋಟೋ ನೋಡಿ, ರೆನ್ ಅಂಡ್​ ಮಾರ್ಟಿನ್​ನ ಹಳೆಯ ಆವೃತ್ತಿ. ನೆಟ್ಟಿಗರು ತಮ್ಮ ಶಾಲಾದಿನಗಳ ನೆನಪುಗಳನ್ನು ಹಂಚಿಕೊಳ್ಳುತ್ತಿದ್ದಾರೆ.

ಶೇಖರ್ ಅಯ್ಯರ್ ಎನ್ನುವವರು ಈ ಫೋಟೋ ಟ್ವೀಟ್ ಮಾಡಿದ್ದಾರೆ. 31,000ಕ್ಕೂ ಹೆಚ್ಚು ಜನರು ಈ ಫೋಟೋ ನೋಡಿದ್ದಾರೆ. ಸುಮಾರು 7,000ಕ್ಕೂ ಜನರು ಇಷ್ಟಪಟ್ಟಿದ್ದಾರೆ. ಹಲವಾರು ವರ್ಷಗಳ ಕಾಲ ಒಡನಾಡಿಯಾಗಿದ್ದ ಪುಸ್ತಕವೊಂದು ಅದರಲ್ಲೂ ಅದರ ಹಳೆಯ ಆವೃತ್ತಿ ಹೀಗೆ ಧುತ್ತನೆ ಕಾಣಿಸಿಕೊಂಡಾಗ ಯಾರಿಗೆ ತಾನೆ ಅಚ್ಚರಿ, ಖುಷಿಯಾಗುವುದಿಲ್ಲ?

ಇದನ್ನೂ ಓದಿ : ತೋಳದಂತೆ ಕಾಣಲು ಜಪಾನಿನ ವ್ಯಕ್ತಿ ರೂ 18 ಲಕ್ಷ ಖರ್ಚು ಮಾಡಿದ ಕಥೆ ಇದು

ಜನವರಿ 5ರಂದು ಈ ಪೋಸ್ಟ್​ ಹಂಚಿಕೊಳ್ಳಲಾಗಿದೆ. ಸಾಕಷ್ಟು ಬೇಡಿಕೆ ಇದ್ದಿದ್ದರಿಂದ ಸಾಕಷ್ಟು ಸಂಖ್ಯೆಯಲ್ಲಿ ಈ ಆವೃತ್ತಿ ಪರಿಷ್ಕೃತಗೊಂಡಿದೆ ನಿಜ. ಆದರೂ ಅನೇಕರಿಗೆ ಈ ಹಳೆಯ ಆವೃತ್ತಿ ಹಳೆಯ ದಿನಗಳನ್ನು ನೆನಪಿಗೆ ತಂದಿದೆ. ಇಂಗ್ಲಿಷ್​ನ ವ್ಯಾಕರಣ ಸೂಕ್ಷ್ಮಗಳನ್ನು ಅರ್ಥ ಮಾಡಿಕೊಳ್ಳಲು ಸಹಾಯ ಮಾಡಿದ ಈ ಪುಸ್ತಕವನ್ನು ನೂರಾರು ಜನರು ಸ್ಮರಿಸಿದ್ದಾರೆ.

ಇದನ್ನೂ ಓದಿ : ನಡುರಸ್ತೆಯಲ್ಲಿ ಬಸ್​ ನಿಲ್ಲಿಸಿ ಚಹಾ ಕುಡಿಯಲು ಹೋಗಿದ್ದ ದೆಹಲಿ ಡ್ರೈವರ್ ವಿಡಿಯೋ ವೈರಲ್

ಪರೀಕ್ಷೆ ತಯಾರಿ ನಡೆಸುವಾಗ ನನ್ನ ಸಂಗಾತಿಯಾಗಿದ್ದ ಈ ಪುಸ್ತಕವನ್ನು ಹೇಗೆ ಮರೆಯಲಿ? ಎಂದಿದ್ದಾರೆ ಹಲವರು. ಈ ಪುಸ್ತಕ ಇನ್ನೂ ಸಿಗುತ್ತದೆಯೇ ಎಂದು ಕೇಳಿದ್ದಾರೆ ಮತ್ತೊಬ್ಬರು. ಸಿಗುತ್ತದೆ, ಇತ್ತೀಚೆಗೆ ನಾನು ಹೊಸ ಆವೃತ್ತಿಯನ್ನು ಖರೀದಿಸಿದೆ. ಸಂಪೂರ್ಣ ಬದಲಾಗಿದೆ. ತುಂಬಾ ನಿರಾಸೆ ಎನ್ನಿಸಿತು. ವ್ಯಾಕರಣದಲ್ಲಿ ಅನುಮಾನ ಬಂದಾಗ ರೆನ್​ ಅಂಡ್ ಮಾರ್ಟಿನ್​ ತೆಗೆದುಕೊಳ್ಳಿ ಎನ್ನುತ್ತಿದ್ದೆವು. ಆದರೆ ಈಗ ಹಾಗೆ ವಿಶ್ವಾಸದಿಂದ ಹೇಳುವ ಮಟ್ಟದಲ್ಲಿ ಇಲ್ಲ ಎಂದಿದ್ದಾರೆ ಮಗದೊಬ್ಬರು.

ಇದನ್ನೂ ಓದಿ : ‘ನಾಯಿಯಂತೆ ಕಾಣಲು ನಾನು ರೂ. 12 ಲಕ್ಷ ಖರ್ಚು ಮಾಡಿದ್ದೆ’ ವರ್ಷದ ಹಿಂದಿನ ರಹಸ್ಯ ಬಿಚ್ಚಿಟ್ಟ ವ್ಯಕ್ತಿ

ಈಗಿನ ಮಕ್ಕಳು ಕೂಡ ಇದನ್ನು ಓದುತ್ತಾರಾ? ನಮಗಂತೂ ಇದು ಬಹಳ ಅಮೂಲ್ಯವಾದ ಪುಸ್ತಕವಾಗಿತ್ತು, ಇದು ಈಗಲೂ ಸಿಗುತ್ತದೆಯಾ ಎಂದು ಹಲವಾರು ಜನ ಕೇಳಿದ್ದಾರೆ. ಇದನ್ನು ಹೇಗೆ ಮರೆಯಲು ಸಾಧ್ಯ? ಪರೀಕ್ಷಾ ದಿನಗಳಲ್ಲಿ ನಾನಿದನ್ನು ಬಿಟ್ಟು ಸರಿದಾಡುತ್ತಲೇ ಇರುತ್ತಿರಲಿಲ್ಲ ಎಂದಿದ್ದಾರೆ ಮತ್ತೊಬ್ಬರು. ಈಗಿನ ಮಕ್ಕಳು ಈ ಪುಸ್ತಕದ ಬಗ್ಗೆ ಕೇಳಿರಲು ಸಾಧ್ಯವೇ ಇಲ್ಲ ಎಂದಿದ್ದಾರೆ ಮಗದೊಬ್ಬರು.

ಇದನ್ನೂ ಓದಿ : ಪಾರ್ಕಿನ್ಸನ್ಸ್​ಗೆ ಒಳಗಾದ ವಯೋವೃದ್ಧರಿಗೆ ದಿನಪತ್ರಿಕೆ ಓದಲು ಸಹಾಯ ಮಾಡಿದ ಅಪರಿಚಿತ ಮಹಿಳೆಯ ವಿಡಿಯೋ ವೈರಲ್

ಈ ಪುಸ್ತಕದ ಬದಲಾಗಿ ಬೇರೆ ಯಾವ ವ್ಯಾಕರಣ ಪುಸ್ತಕವು ರೀಪ್ಲೇಸ್ ಮಾಡಿದೆ ಎಂಬುದರ ಬಗ್ಗೆ ಏನಾದರೂ ಐಡಿಯಾ ಇದೆಯಾ ಎಂದು ಕೇಳಿದ್ದಾರೆ ಇನ್ನೂ ಕೆಲವರು. ಇದು ನನ್ನ ಮನೆಯ ಗ್ರಂಥಾಲಯವನ್ನು ಹೆಮ್ಮೆಯಿಂದ ಅಲಂಕರಿಸಿದೆ ಎಂದು ಮತ್ತೊಬ್ಬರು ಹೇಳಿದ್ಧಾರೆ.

ಈ ವಿಷಯಕ್ಕೆ ಸಂಬಂಧಿಸಿ ನಿಮ್ಮ ನೆನಪುಗಳೇನಾದರು ಉಂಟೇ?

ಮತ್ತಷ್ಟು ವೈರಲ್ ವಿಡಿಯೋ ಕ್ಲಿಕ್ ಮಾಡಿ

Published On - 4:34 pm, Sat, 7 January 23

Follow Us
ಇನ್ನೇನು ವಿಶೇಷ ಚೇತನರಿಗೆ ಹಸ್ತಾಂತರಿಸಬೇಕಿದ್ದ ವಾಹನಗಳು ಸುಟ್ಟು ಭಸ್ಮ
ಇನ್ನೇನು ವಿಶೇಷ ಚೇತನರಿಗೆ ಹಸ್ತಾಂತರಿಸಬೇಕಿದ್ದ ವಾಹನಗಳು ಸುಟ್ಟು ಭಸ್ಮ
ಬಂಗಾಳದ ಮತಗಟ್ಟೆಗೆ ಕಾಡಾನೆ ಎಂಟ್ರಿ; ಕಂಗಾಲಾದ ಮತದಾರರು
ಬಂಗಾಳದ ಮತಗಟ್ಟೆಗೆ ಕಾಡಾನೆ ಎಂಟ್ರಿ; ಕಂಗಾಲಾದ ಮತದಾರರು
ಟಿಎಂಸಿಯ ಗೂಂಡಾಗಿರಿ ಅಂತ್ಯವಾಗುವ ಸಮಯ ಬಂದಿದೆ; ಬಂಗಾಳದಲ್ಲಿ ಅಮಿತ್ ಶಾ
ಟಿಎಂಸಿಯ ಗೂಂಡಾಗಿರಿ ಅಂತ್ಯವಾಗುವ ಸಮಯ ಬಂದಿದೆ; ಬಂಗಾಳದಲ್ಲಿ ಅಮಿತ್ ಶಾ
ದೆಹಲಿಯಲ್ಲಿ ಡಿಕೆಶಿ ಸ್ಫೋಟಕ ಹೇಳಿಕೆ, ರಾಜ್ಯ ರಾಜಕಾರಣದಲ್ಲಿ ಸಂಚಲನ
ದೆಹಲಿಯಲ್ಲಿ ಡಿಕೆಶಿ ಸ್ಫೋಟಕ ಹೇಳಿಕೆ, ರಾಜ್ಯ ರಾಜಕಾರಣದಲ್ಲಿ ಸಂಚಲನ
ಬಂಗಾಳದ ಹೌರಾದಲ್ಲಿ ಪ್ರಧಾನಿ ಮೋದಿ ಬೃಹತ್ ರೋಡ್ ಶೋ
ಬಂಗಾಳದ ಹೌರಾದಲ್ಲಿ ಪ್ರಧಾನಿ ಮೋದಿ ಬೃಹತ್ ರೋಡ್ ಶೋ
ಬೆಂಗಳೂರಿನಲ್ಲಿ ಭಾರೀ ಅಗ್ನಿ ದುರಂತ, 10ಕಿ.ಮೀ ವರೆಗೂ ಗೋಚರಿಸಿದ ದಟ್ಟ ಹೊಗೆ
ಬೆಂಗಳೂರಿನಲ್ಲಿ ಭಾರೀ ಅಗ್ನಿ ದುರಂತ, 10ಕಿ.ಮೀ ವರೆಗೂ ಗೋಚರಿಸಿದ ದಟ್ಟ ಹೊಗೆ
ತಂದೆ ಸಾವಿನ ನಡುವೆ ಪರೀಕ್ಷೆ ಬರೆದಿದ್ದ ವಿದ್ಯಾರ್ಥಿ SSLC ಪಾಸ್​​
ತಂದೆ ಸಾವಿನ ನಡುವೆ ಪರೀಕ್ಷೆ ಬರೆದಿದ್ದ ವಿದ್ಯಾರ್ಥಿ SSLC ಪಾಸ್​​
ಬಂಗಾಳದಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಅಟ್ಟಾಡಿಸಿಕೊಂಡು ಹೋಗಿ ಹಲ್ಲೆ
ಬಂಗಾಳದಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಅಟ್ಟಾಡಿಸಿಕೊಂಡು ಹೋಗಿ ಹಲ್ಲೆ
ಶುರುವಾಯ್ತು ಸಲ್ಮಾನ್ ಖಾನ್-ನಯನತಾರಾ ಸಿನಿಮಾ: ವಿಡಿಯೋ
ಶುರುವಾಯ್ತು ಸಲ್ಮಾನ್ ಖಾನ್-ನಯನತಾರಾ ಸಿನಿಮಾ: ವಿಡಿಯೋ
ಮದುವೆ ಮಂಟಪದಿಂದ ಮತಗಟ್ಟೆಗೆ; ತಿರುನಲ್ವೇಲಿಯಲ್ಲಿ ನವವಿವಾಹಿತರ ಮತದಾನ
ಮದುವೆ ಮಂಟಪದಿಂದ ಮತಗಟ್ಟೆಗೆ; ತಿರುನಲ್ವೇಲಿಯಲ್ಲಿ ನವವಿವಾಹಿತರ ಮತದಾನ