ಅಪ್ಪನ ಹುಟ್ಟುಹಬ್ಬದ ದಿನ ಆತನ ಕನಸಿನ ಕಾರನ್ನು ಕೊಡಿಸಿದ ಮಗಳು
Dream Car : ‘ಅಪ್ಪಾ, ನಿಮಗೆ ಹುಟ್ಟುಹಬ್ಬದ ಶುಭಾಶಯಗಳು. ನಾನು ಪ್ರೀತಿಸಿದ ಮೊದಲ ವ್ಯಕ್ತಿ ನೀವು. ಸಾಮಾಜಿಕ ನಿಯಮಗಳನ್ನು ಮುರಿದು ನನ್ನನ್ನು ಬೆಳೆಸಿದ್ದಕ್ಕಾಗಿ ಮತ್ತು ನಂಬಿದ್ದಕ್ಕಾಗಿ ಧನ್ಯವಾದ.’
Viral : ಮಕ್ಕಳಿಗಾಗಿ ಪೋಷಕರು ಏನೆಲ್ಲಾ ತ್ಯಾಗ ಮಾಡುತ್ತಾರೆ. ಅವರ ಕನಸನ್ನು ಈಡೇರಿಸಲು ಜೀವನವಿಡೀ ಶ್ರಮಿಸುತ್ತಾರೆ. ಆದರೆ ಇದೀಗ ವೈರಲ್ ಆಗಿರುವ ಈ ವಿಡಿಯೋದಲ್ಲಿ ಉಲ್ಟಾ ಆಗಿದೆ. ಅಪ್ಪನ ಹುಟ್ಟುಹಬ್ಬದ ದಿನ ಆತನ ಕನಸಿನ ಕಾರನ್ನು ಮಗಳು ಕೊಡಿಸಿ ಅಚ್ಚರಿ ಮೂಡಿಸಿದ್ದಾಳೆ. ಈ ವಿಡಿಯೋ ಅನ್ನು ಈತನಕ 5 ಲಕ್ಷಕ್ಕಿಂತಲೂ ಹೆಚ್ಚು ಜನ ನೋಡಿದ್ದಾರೆ. ಭಲೇ ಮಗಳೆ! ಎನ್ನುತ್ತಿದ್ದಾರೆ ನೆಟ್ಟಿಗರು.
ಇದನ್ನೂ ಓದಿView this post on Instagram
ರಿದಾ ಥರನಾ ಈ ಪೋಸ್ಟ್ ಹಂಚಿಕೊಂಡಿದ್ದಾರೆ. ರಿದಾ ಜನವರಿ 3ರಂದು ತನ್ನ ಹುಟ್ಟೂರು ಕೂರ್ಗ್ಗೆ ಹೋದರು. ಮರುದಿನವೇ ತಂದೆಯ ಹುಟ್ಟುಹಬ್ಬ. ಅಂದೇ ಅವರ ಕನಸಿನ ಕಾರ್ ಅನ್ನು ಡೆಲಿವರಿ ಪಡೆಯುವ ವ್ಯವಸ್ಥೆಯನ್ನು ಮೊದಲೇ ಮಾಡಿಕೊಂಡಿದ್ದರು. ಈ ಖುಷಿಯ ಘಳಿಗೆಗಳನ್ನು ಚಿತ್ರೀಕರಿಸಿದ ಇನ್ಸ್ಟಾಗ್ರಾಂಗೆ ಅಪ್ಲೋಡ್ ಮಾಡಿದರು.
ಇದನ್ನೂ ಓದಿ : ನಾನು ಗೌರವಿಸಲ್ಪಟ್ಟಿದ್ದೇನೆ; 89ರ ಹರೆಯದಲ್ಲಿ ಸ್ನಾತಕೋತ್ತರ ಪದವಿ ಪಡೆದ ವೃದ್ಧೆ
ನೆಟ್ಟಿಗರು ಈ ವಿಡಿಯೋ ನೋಡಿ ಭಾವುಕರಾಗಿದ್ದಾರೆ ಮತ್ತು ಸ್ಫೂರ್ತಿಗೊಂಡಿದ್ದಾರೆ. ಈ ಅಪ್ಪುಗೆಯೇ ಎಲ್ಲವನ್ನೂ ಹೇಳುತ್ತದೆ ಎಂದಿದ್ದಾರೆ ಹಲವರು. ನಾನಂತೂ ಅಳುತ್ತಿದ್ದೇನೆ ಈ ವಿಡಿಯೋ ನೋಡಿ ಎಂದಿದ್ದಾರೆ ಒಬ್ಬರು. ನಿಮ್ಮ ಬಗ್ಗೆ ಹೆಮ್ಮೆ ಎನ್ನಿಸುತ್ತಿದೆ ಎಂದಿದ್ದಾರೆ ಮತ್ತೊಬ್ಬರು. ನಿಮ್ಮ ಕುಟುಂಬಕ್ಕೆ ಮತ್ತು ನಿಮಗೆ ಒಳ್ಳೆಯದಾಗಲಿ ಎಂದಿದ್ದಾರೆ ಹಲವರು.
ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?
ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ
Published On - 7:07 pm, Sat, 7 January 23