Viral Video: ಕ್ಯಾಮೆರಾ ಕಂಡು ಮನುಷ್ಯರಂತೆಯೇ ಪೋಸ್ ಕೊಟ್ಟ ಶ್ವಾನಗಳು; ವಿಡಿಯೋ ನೋಡಿ

ಕ್ಯಾಮೆರಾ ಕಂಡು ಪೋಸ್​ ಕೊಡುತ್ತಿವೆ ಶ್ವಾನಗಳು. ವಿಡಿಯೋ ನೋಡಿ ಕೆಲವರು ಆಶ್ಚರ್ಯಗೊಂಡಿದ್ದಾರೆ. ಮನುಷ್ಯರಂತೆಯೇ ಅನುಕರಿಸಿದ ಶ್ವಾನಗಳ ದೃಶ್ಯ ಇದೀಗ ಫುಲ್​ ವೈರಲ್​ ಆಗಿದೆ.

Viral Video: ಕ್ಯಾಮೆರಾ ಕಂಡು ಮನುಷ್ಯರಂತೆಯೇ ಪೋಸ್ ಕೊಟ್ಟ ಶ್ವಾನಗಳು; ವಿಡಿಯೋ ನೋಡಿ
ಕ್ಯಾಮೆರಾ ಎದುರು ಪೋಸ್​ ಕೊಟ್ಟ ಶ್ವಾನಗಳು
Edited By:

Updated on: Oct 24, 2021 | 9:35 AM

ಸಾಮಾಜಿಕ ಜಾಲತಾಣದಲ್ಲಿ ದಿನಕ್ಕೊಂದು ಹೊಸ ಹೊಸ ವಿಡಿಯೊಗಳು ವೈರಲ್ ಆಗುತ್ತಲೇ ಇರುತ್ತವೆ. ಕೆಲವು ತಮಾಷೆಯಾಗಿದ್ದರೆ, ಇನ್ನುಳಿದವು ಹೃದಯ ಸ್ಪರ್ಶಿಯಾಗಿರುತ್ತವೆ. ಕೆಲವು ದೃಶ್ಯಗಳಂತೂ ಹೊಟ್ಟೆ ಹುಣ್ಣಾಗಿಸುವಷ್ಟು ನಗು ತರಿಸುತ್ತವೆ. ಇದೀಗ ವೈರಲ್ ಆಗಿರುವ ವಿಡಿಯೋದಲ್ಲಿ ಗಮನಿಸುವಂತೆ ಮೂರು ಶ್ವಾನಗಳು ಒಟ್ಟಿಗೆ ನಿಂತಿವೆ. ಕ್ಯಾಮೆರಾ ಎದುರು ಬಂದಂತೆಯೇ ಮನುಷ್ಯರಂತೆಯೇ ಪೋಸ್ ಕೊಡುತ್ತಿವೆ. ವಿಡಿಯೋ ನೋಡಿದ ಕೆಲವರು ಆಶ್ಚರ್ಯಗೊಂಡಿದ್ದಾರೆ. ವಿಡಿಯೋ ಇದೆ ನೀವೇ ನೋಡಿ.

ಮನೆಯಲ್ಲಿ ಸಾಕಿದ ಶ್ವಾನಗಳು ತಮ್ಮ ಕರ್ತವ್ಯವನ್ನು ಪಾಲಿಸುವರ ಜೊತೆಗೆ ತುತ್ತು ಅನ್ನ ಹಾಕಿದವರ ಕಾವಲಾಗಿ ಎಂದೂ ನಿಲ್ಲುತ್ತದೆ. ಅದೇ ರೀತಿ ಮನೆಯವರನ್ನು ಬಹುಬೇಗ ಅನುಕರಿಸುತ್ತದೆ. ಹೇಳಿಕೊಟ್ಟದ್ದನ್ನು ಬಹುಬೇಗ ಕಲಿತುಕೊಳ್ಳುವ ಬುದ್ಧಿವಂತ ನಾಯಿಗಳ ದೃಶ್ಯಗಳು ಆಗಾಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತವೇ ಇರುತ್ತವೆ. ಅಂಥಹುದೇ ಒಂದು ದೃಶ್ಯ ಇದೀಗ ಫುಲ್ ವೈರಲ್ ಆಗಿದೆ.

ಕ್ಯಾಮೆರಾ ಎದುರು ಬರುತ್ತಿದ್ದಂತೆಯೇ ನಾಯಿಗಳು ಒಟ್ಟು ಸೇರಿ ಪೋಸ್ ಕೊಡುತ್ತಿವೆ. ವಿವಿಧ ರೀತಿಯ ಪೋಸ್ ಕೊಡುತ್ತಿರುವುದು ನಿಜವಾಗಿಯೂ ಆಶ್ಚರ್ಯವನ್ನುಂಟು ಮಾಡುತ್ತದೆ. ಒಳ್ಳೆಯ ಸ್ನೇಹಿರಂತೆಯೇ ಒಬ್ಬರನ್ನೊಬ್ಬರು ಹಿಡಿದುಕೊಂಡು ಕ್ಯಾಮೆರಾಕ್ಕೆ ಪೋಸ್ ಕೊಟ್ಟಿರುವ ರೀತಿ ಜನರಿಗೆ ಹೆಚ್ಚು ಇಷ್ಟವಾಗಿದೆ.

ಈ ವಿಡಿಯೋವನ್ನು ಇನ್ಸ್ಟಾಗ್ರಾಂನಲ್ಲಿ ಹಂಚಿಕೊಳ್ಳಲಾಗಿದೆ. ವಿಡಿಯೋ ನೋಡಿದ ನೆಟ್ಟಿಗರು ಹೆಚ್ಚು ಇಷ್ಟಪಟ್ಟಿದ್ದು ತುಂಬಾ ಮುದ್ದಾದ ದೃಶ್ಯ ಎಂದು ಪ್ರತಿಕ್ರಿಯೆ ನೀಡಿದ್ದಾರೆ. ತುಂಬಾ ಜನರಿಗೆ ವಿಡಿಯೋ ಮೆಚ್ಚುಗೆಯಾಗಿದ್ದು, ವಿವಿಧ ಎಮೋಜಿಗಳನ್ನು ಕಳುಹಿಸುವ ಮೂಲಕ ಪ್ರತಿಕ್ರಿಯಿಸಿದ್ದಾರೆ.

ಇದನ್ನೂ ಓದಿ:

Viral Video: ಬಾತುಕೋಳಿಯ ಮೂನ್ ವಾಕ್ ನೋಡಿದ್ದೀರಾ? ಇಲ್ಲಿದೆ ನೋಡಿ ವಿಡಿಯೊ

Viral Video: ಮೇಲೇರಲು ಸಹಾಯ ಮಾಡಿದ ಈ ಇರುವೆಗೆ ಕೊನೆಗೆ ಏನು ಉಳಿಯಿತು?; ಬದುಕಿನ ಪಾಠ ಹೇಳುವ ಈ ವಿಡಿಯೋ ನೋಡಿ

Published On - 9:31 am, Sun, 24 October 21