Viral Video: ಮೇಲೇರಲು ಸಹಾಯ ಮಾಡಿದ ಈ ಇರುವೆಗೆ ಕೊನೆಗೆ ಏನು ಉಳಿಯಿತು?; ಬದುಕಿನ ಪಾಠ ಹೇಳುವ ಈ ವಿಡಿಯೋ ನೋಡಿ

Trending: ಅಂತರ್ಜಾಲದಲ್ಲಿ ವೈರಲ್ ಆಗುವ ಹಲವು ವಿಡಿಯೋಗಳು ವಿವಿಧ ರೀತಿಯಲ್ಲಿ ಬದುಕಿನ ಪಾಠ ಹೇಳುತ್ತವೆ. ಇರುವೆಗಳ ವಿಡಿಯೋ ತುಣುಕೊಂದು ಸದ್ಯ ನೆಟ್ಟಿಗರ ಮನಗೆದ್ದಿದೆ.

Viral Video: ಮೇಲೇರಲು ಸಹಾಯ ಮಾಡಿದ ಈ ಇರುವೆಗೆ ಕೊನೆಗೆ ಏನು ಉಳಿಯಿತು?; ಬದುಕಿನ ಪಾಠ ಹೇಳುವ ಈ ವಿಡಿಯೋ ನೋಡಿ
ವಿಡಿಯೋದಿಂದ ಸೆರೆಹಿಡಿಯಲಾದ ಚಿತ್ರ
Follow us
TV9 Web
| Updated By: shivaprasad.hs

Updated on:Oct 23, 2021 | 5:37 PM

ಜೀವನದ ಪಾಠಗಳು ಸಣ್ಣ ಸಣ್ಣ ಜೀವಿಯಿಂದಲೂ ಕಲಿಯುವುದಿರುತ್ತದೆ. ಪ್ರಸ್ತುತ ಅಂತರ್ಜಾಲದಲ್ಲಿ ಇರುವೆಗಳ ಒಂದು ವಿಡಿಯೋ ವೈರಲ್ ಆಗಿದ್ದು, ಈ ಸಣ್ಣ ತುಣುಕು ನೆಟ್ಟಿಗರ ಮನಗೆದ್ದಿದೆ. ಅಲ್ಲದೇ, ಬಹಳ ಮೆಚ್ಚುಗೆಗೂ ಪಾತ್ರವಾಗಿದ್ದು, ಇಷ್ಟು ಸಣ್ಣ ತುಣುಕಿನಲ್ಲಿ ಎಷ್ಟು ದೊಡ್ಡ ಸಾರ ಅಡಗಿದೆ ಎಂದು ನೆಟ್ಟಿಗರು ಅಭಿಪ್ರಾಯಪಟ್ಟಿದ್ದಾರೆ. ಅಷ್ಟಕ್ಕೂ ವಿಡಿಯೋದಲ್ಲೇನಿದೆ? ಬೆನ್ ಫಿಲಿಪ್ಸ್ ಎನ್ನುವವರು ಟ್ವಿಟರ್​ನಲ್ಲಿ ಈ ವಿಡಿಯೋ ಹಂಚಿಕೊಂಡಿದ್ದಾರೆ.

ವಿಡಿಯೋದಲ್ಲಿ ಮೂರು ಇರುವೆಗಳು ಒಂದು ಸ್ಥಳದಿಂದ ಎತ್ತರದಲ್ಲಿರುವ ಎಲೆಗೆ ಏರಲು ಪ್ರಯತ್ನಿಸುತ್ತಿರುತ್ತವೆ. ಅದರಲ್ಲಿ ಒಂದು ಇರುವೆಯು ತನ್ನ ಸಹವರ್ತಿಗಳಾದ ಇತರ ಇರುವೆಗಳಿಗೆ ಮೇಲೇರಲು ಸಹಾಯ ಮಾಡುತ್ತದೆ. ಇದರ ಸಹಾಯದಿಂದ ಮೇಲೇರುವ ಇರುವೆಗಳು, ಎಲೆಯನ್ನು ಹತ್ತಿದ ನಂತರ ಹಿಂತಿರುಗಿಯೂ ನೋಡದೇ ಹೊರಟುಬಿಡುತ್ತವೆ. ಮೇಲೇರಲು ಸಹಾಯ ಮಾಡಿದ ಇರುವೆಯೂ ಮೇಲೆ ಹತ್ತಲು ಪ್ರಯತ್ನಿಸುತ್ತಾ ಅಸಹಾಯಕವಾಗಿ ಕೈ ಮೇಲೆತ್ತಿಕೊಂಡು ನಿಲ್ಲುವಾಗ ವಿಡಿಯೋ ಮುಕ್ತಾಯವಾಗಿದೆ.

ವಿಡಿಯೋಕ್ಕೆ ‘ಇದುವರೆಗೆ ತಯಾರಿಸಲಾಗಿರುವ ಅತ್ಯಂತ ದುಃಖದ ಚಿತ್ರವಿದು’ ಎಂದು ಕ್ಯಾಪ್ಶನ್ ನೀಡಲಾಗಿದೆ. ಈ ವಿಡಿಯೋಕ್ಕೆ ನೆಟ್ಟಿಗರು ವಿಧವಿಧವಾಗಿ ಪ್ರತಿಕ್ರಿಯಿಸಿದ್ದು, ಕೆಲವರು ಬಹಳ ಅಚ್ಚರಿ ವ್ಯಕ್ತಪಡಿಸಿದ್ದಾರೆ. ಬಹಳಷ್ಟು ಜನ ಇದನ್ನು ಮನುಷ್ಯನ ಜೀವನಕ್ಕೆ ಹೋಲಿಸಿದ್ದು, ಇದೊಂದು ಬಹಳ ದೊಡ್ಡ ಬದುಕಿನ ಪಾಠ ಎಂದು ವ್ಯಾಖ್ಯಾನಿಸಿದ್ದಾರೆ.

ವಿಡಿಯೋ ಇಲ್ಲಿದೆ:

ನೆಟ್ಟಿಗರ ಮೆಚ್ಚುಗೆಗೆ ಪಾತ್ರವಾಗಿರುವ ಈ ಪುಟಾಣಿ ವಿಡಿಯೋ ತುಣುಕು ನಿಮಗೇನನ್ನಿಸಿತು? ನಿಮ್ಮ ಬದುಕಿನ ಯಾವುದಾದರೂ ಘಟನೆಯನ್ನು ಇದು ನೆನಪಿಸಿತೇ?

ಇದನ್ನೂ ಓದಿ:

ಎಲ್ಲ ಬಗೆಯ ಪಾತ್ರಗಳಿಗೆ ಒಗ್ಗುವ ನಿವಿನ್ ಪೌಲಿ ಈಗ ಮಾಲಿವುಡ್​ನ ಜನಪ್ರಿಯ ನಟರಲ್ಲಿ ಒಬ್ಬರು

ಕಾಶ್ಮೀರಕ್ಕೆ ಮೊದಲಿನಂತೆ ವಿಶೇಷ ಸ್ಥಾನಮಾನ ನೀಡದಿದ್ದರೆ ಶಾಂತಿ ಮರುಸ್ಥಾಪಿಸಲು ಸಾಧ್ಯವಿಲ್ಲ: ಫಾರೂಕ್ ಅಬ್ದುಲ್ಲಾ ಅನಿಸಿಕೆ

Published On - 5:35 pm, Sat, 23 October 21

ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್