ಕಾಶ್ಮೀರಕ್ಕೆ ಮೊದಲಿನಂತೆ ವಿಶೇಷ ಸ್ಥಾನಮಾನ ನೀಡದಿದ್ದರೆ ಶಾಂತಿ ಮರುಸ್ಥಾಪಿಸಲು ಸಾಧ್ಯವಿಲ್ಲ: ಫಾರೂಕ್ ಅಬ್ದುಲ್ಲಾ ಅನಿಸಿಕೆ

ರಾಜೌರಿ ಜಿಲ್ಲೆಯ ನೌಶೇರಾದಲ್ಲಿ ಖಾಸಗಿ ಚಾನಲ್ ಒಂದರ ಜೊತೆಗೆ ಮಾತನಾಡಿದ ಫಾರೂಕ್ ಅಬ್ದುಲ್ಲಾ, ಕೇವಲ ಹಿಂದೂಗಳನ್ನು ಮಾತ್ರವಲ್ಲ, ಮುಸ್ಲಿಮರನ್ನು ಕೂಡ ಭಯೋತ್ಪಾದಕರು ಕೊಂದಿದ್ದಾರೆ ಎಂದು ತಿಳಿಸಿದರು. ಕಾಶ್ಮೀರ ಕಣಿವೆಯಲ್ಲಿನ ವಾತಾವರಣವು "ಕಾಶ್ಮೀರಿ ಪಂಡಿತರ ಕಾಶ್ಮೀರ ಕಣಿವೆಗೆ ಮರಳಲು ಅನುಕೂಲಕರವಾಗಿಲ್ಲ" ಎಂದು ಹೇಳಿದರು.

ಕಾಶ್ಮೀರಕ್ಕೆ ಮೊದಲಿನಂತೆ ವಿಶೇಷ ಸ್ಥಾನಮಾನ ನೀಡದಿದ್ದರೆ ಶಾಂತಿ ಮರುಸ್ಥಾಪಿಸಲು ಸಾಧ್ಯವಿಲ್ಲ: ಫಾರೂಕ್ ಅಬ್ದುಲ್ಲಾ ಅನಿಸಿಕೆ
ಕಾಶ್ಮೀರಕ್ಕೆ ಮೊದಲಿನಂತೆ ವಿಶೇಷ ಸ್ಥಾನಮಾನ ನೀಡದಿದ್ದರೆ ಶಾಂತಿ ಮರುಸ್ಥಾಪಿಸಲು ಸಾಧ್ಯವಿಲ್ಲ: ಫಾರೂಕ್ ಅಬ್ದುಲ್ಲಾ ಅನಿಸಿಕೆ

ಕಾಶ್ಮೀರಿ ಪಂಡಿತರು ಕಾಶ್ಮೀರ ಕಣಿವೆಗೆ ವಾಪಸಾಗಲ್ಲ, ಈಗ ಪರಿಸ್ಥಿತಿ ಅನುಕೂಲಕರವಾಗಿಲ್ಲ ಎಂದು ಜಮ್ಮು ಕಾಶ್ಮೀರದ ಮಾಜಿ ಸಿಎಂ ಫಾರೂಕ್ ಅಬ್ದುಲ್ಲಾ ಹೇಳಿದ್ದಾರೆ. ಕಾಶ್ಮೀರದಲ್ಲಿ ಉಗ್ರಗಾಮಿಗಳು, ಹಿಂದೂಗಳನ್ನು ಮಾತ್ರವಲ್ಲ, ಮುಸ್ಲಿಂರನ್ನು ಕೂಡ ಹತ್ಯೆ ಮಾಡಿದ್ದಾರೆ. ಕಾಶ್ಮೀರಕ್ಕೆ ಮೊದಲಿನಂತೆ ವಿಶೇಷ ಸ್ಥಾನಮಾನ ನೀಡುವವರೆಗೆ ಶಾಂತಿಯನ್ನು ಮರುಸ್ಥಾಪಿಸಲು ಸಾಧ್ಯವಿಲ್ಲ ಎಂದು ಫಾರೂಕ್ ಅಬ್ದುಲ್ಲಾ ಹೇಳಿದ್ದಾರೆ.

ಕಾಶ್ಮೀರಿ ಪಂಡಿತರು ಮರಳಲು ಪರಿಸ್ಥಿತಿ ಪೂರಕವಾಗಿಲ್ಲ
ನ್ಯಾಷನಲ್ ಕಾನ್ಪರೆನ್ಸ್ ಪಕ್ಷದ ನಾಯಕ ಮತ್ತು ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಫಾರೂಕ್ ಅಬ್ದುಲ್ಲಾ ಶನಿವಾರ ಕೇಂದ್ರದ ಭಾರತೀಯ ಜನತಾ ಪಕ್ಷದ ನೇತೃತ್ವದ ಸರ್ಕಾರವನ್ನು ಟೀಕಿಸಿದರು. ಬಿಜೆಪಿ ಪಕ್ಷವು ಧರ್ಮದ ಆಧಾರದ ಮೇಲೆ ರಾಷ್ಟ್ರವನ್ನು ವಿಭಜಿಸುತ್ತಿದೆ ಎಂದು ಆರೋಪಿಸಿದರು.

ರಾಜೌರಿ ಜಿಲ್ಲೆಯ ನೌಶೇರಾದಲ್ಲಿ ಖಾಸಗಿ ಚಾನಲ್ ಒಂದರ ಜೊತೆಗೆ ಮಾತನಾಡಿದ ಫಾರೂಕ್ ಅಬ್ದುಲ್ಲಾ, ಕೇವಲ ಹಿಂದೂಗಳನ್ನು ಮಾತ್ರವಲ್ಲ, ಮುಸ್ಲಿಮರನ್ನು ಕೂಡ ಭಯೋತ್ಪಾದಕರು ಕೊಂದಿದ್ದಾರೆ ಎಂದು ತಿಳಿಸಿದರು. ಕಾಶ್ಮೀರ ಕಣಿವೆಯಲ್ಲಿನ ವಾತಾವರಣವು “ಕಾಶ್ಮೀರಿ ಪಂಡಿತರ ಕಾಶ್ಮೀರ ಕಣಿವೆಗೆ ಮರಳಲು ಅನುಕೂಲಕರವಾಗಿಲ್ಲ” ಎಂದು ಅವರು ಹೇಳಿದರು.

370 ನೇ ವಿಧಿಯನ್ನು ರದ್ದುಗೊಳಿಸಿದ ನಂತರ ಕೇಂದ್ರ ಗೃಹ ಸಚಿವ ಅಮಿತ್ ಶಾ ಜಮ್ಮು ಮತ್ತು ಕಾಶ್ಮೀರಕ್ಕೆ ಬಂದ ಮೊದಲ ದಿನವೇ, ಫಾರೂಕ್ ಅಬ್ದುಲ್ಲಾ ಅವರು ಕೇಂದ್ರಾಡಳಿತ ಪ್ರದೇಶದಲ್ಲಿ 370 ನೇ ವಿಧಿಯನ್ನು ಮರುಸ್ಥಾಪಿಸುವವರೆಗೆ ಸರ್ಕಾರಕ್ಕೆ ಶಾಂತಿಯನ್ನು ತರಲು ಸಾಧ್ಯವಿಲ್ಲ ಎಂದು ಹೇಳಿದರು.

“ಕಣಿವೆಯಲ್ಲಿ ಇತ್ತೀಚಿನ ಘಟನೆಗಳು 370 ನೇ ವಿಧಿಯನ್ನು ರದ್ದುಗೊಳಿಸಿದ ನಂತರ ಭಯೋತ್ಪಾದನೆಯನ್ನು ತೊಡೆದು ಹಾಕಲಾಗುವುದು ಎಂದು ಹೇಳುತ್ತಿದ್ದವರ ಕಣ್ಣು ತೆರೆಸುತ್ತದೆ” ಎಂದು ನ್ಯಾಷನಲ್ ಕಾನ್ಫರೆನ್ಸ್ ನಾಯಕ ಫಾರೂಕ್ ಅಬ್ದುಲ್ಲಾ ಹೇಳಿದ್ದಾರೆ.

ಆರ್ಟಿಕಲ್ 370 ಅನ್ನು ಆಗಸ್ಟ್, 5, 2019 ರಲ್ಲಿ ರದ್ದುಗೊಳಿಸಲಾಯಿತು. ಈ ಮೂಲಕ ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನವನ್ನು ರದ್ದುಗೊಳಿಸಲಾಯಿತು. 370 ನೇ ವಿಧಿಯನ್ನು ಮರುಸ್ಥಾಪಿಸುವವರೆಗೆ ನೀವು [ಸರ್ಕಾರ] ಶಾಂತಿಯನ್ನು ತರಲು ಸಾಧ್ಯವಿಲ್ಲ ಎಂದು ಫಾರೂಕ್ ಅಬ್ದುಲ್ಲಾ ಹೇಳಿದ್ದಾರೆ.

ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿಯೂ ಆದ ಫಾರೂಕ್ ಅಬ್ದುಲ್ಲಾ, ಕಣಿವೆಯಲ್ಲಿ ಕಲ್ಲು ತೂರಾಟಕ್ಕಾಗಿ 900 ಜನರನ್ನು ಬಂಧಿಸಿರುವುದನ್ನು ತೀವ್ರವಾಗಿ ವಿರೋಧಿಸಿದರು. ಕಣಿವೆಗೆ ಕೇಂದ್ರ ಗೃಹ ಸಚಿವ ಅಮಿತ್ ಶಾರ ಮೂರು ದಿನಗಳ ಭೇಟಿಯ ಸಂದರ್ಭದಲ್ಲಿ ಅಮಿತ್ ಶಾ ಅವರನ್ನು ಭೇಟಿ ಮಾಡುವ ಕುರಿತು ಪ್ರಸ್ತಾಪವಿದೆಯೇ ಎಂದು ಕೇಳಿದಾಗ, ಫಾರೂಕ್ ಅಬ್ದುಲ್ಲಾ ಅವರು, “ಹೌದು, ಸರ್ಕಾರ ನನ್ನನ್ನು ಸಂಪರ್ಕಿಸಿದೆ. ಅಮಿತ್ ಶಾ ನನ್ನನ್ನು ಭೇಟಿ ಮಾಡಲು ಬಯಸಿದ್ದರು. ನಾನು ನಿರಾಕರಿಸಿದೆ. ನಾನು ರಾಜೌರಿ ಮತ್ತು ಪೂಂಚ್‌ಗೆ ಭೇಟಿ ನೀಡುವ ಪೂರ್ವ ನಿಗದಿತ ಕಾರ್ಯಕ್ರಮಗಳಿದ್ದವು ಎಂದು ಹೇಳಿದ್ದಾರೆ.

ಕೇಂದ್ರ ಸರ್ಕಾರವು ಬೇರೆ ಬೇರೆ ರಾಜ್ಯಗಳಿಗೆ ವಲಸೆ ಬಂದಿರುವ ಕಾಶ್ಮೀರಿ ಪಂಡಿತರು, ವಾಪಸ್ ಕಾಶ್ಮೀರಕ್ಕೆ ಹೋಗಿ ನೆಲೆಸುವಂತೆ ಮಾಡಲು ಪ್ಲ್ಯಾನ್ ಗಳನ್ನು ಮಾಡುತ್ತಿದೆ. ಕಾಶ್ಮೀರದ ರಾಜಕಾರಣಿಗಳು ಕಾಶ್ಮೀರಿ ಪಂಡಿತರು ವಾಪಸ್ ಕಾಶ್ಮೀರಕ್ಕೆ ಬಂದು ನೆಲೆಸಬೇಕು ಎಂದು ಹೇಳುತ್ತಿದ್ದರು. ಆದರೇ, ಈಗ ಉಗ್ರಗಾಮಿಗಳು ಕಾಶ್ಮೀರದಲ್ಲಿ ಹಿಂದೂಗಳು ಹಾಗೂ ವಲಸೆ ಕಾರ್ಮಿಕರನ್ನು ಟಾರ್ಗೆಟ್ ಮಾಡಿ ಹತ್ಯೆ ಮಾಡುತ್ತಿದ್ದಾರೆ. ಹೀಗಾಗಿ ಈಗ ಕಾಶ್ಮೀರಿ ಪಂಡಿತರು, ಕಾಶ್ಮೀರ ಕಣಿವೆಗೆ ವಾಪಸಾಗಲು ಪರಿಸ್ಥಿತಿ ಅನುಕೂಲಕರವಾಗಿಲ್ಲ ಎಂದು ಫಾರೂಕ್ ಅಬ್ದುಲ್ಲಾ ಹೇಳಿದ್ದಾರೆ.

90 ರ ದಶಕದಲ್ಲಿ ಕಾಶ್ಮೀರ ಕಣಿವೆಯಲ್ಲಿ ಸುಮಾರು 80 ಸಾವಿರ ಕಾಶ್ಮೀರಿ ಪಂಡಿತರು ಇದ್ದರು. ಆದರೇ, ಆಗ ಕಾಶ್ಮೀರ ಪಂಡಿತರನ್ನು ಗುರಿಯಾಗಿಸಿ ಉಗ್ರಗಾಮಿಗಳು ದಾಳಿ ನಡೆಸಿದ್ದರು. ಇದರಿಂದ ಭಯಭೀತಿಗೊಂಡ ಕಾಶ್ಮೀರಿ ಪಂಡಿತರು ಜೀವ ಉಳಿಸಿಕೊಳ್ಳಲು ಕಾಶ್ಮೀರವನ್ನು ಬಿಟ್ಟು, ಜಮ್ಮು, ಹರಿಯಾಣ, ಪಂಜಾಬ್, ದೆಹಲಿ ಸೇರಿದಂತೆ ಬೇರೆ ಬೇರೆ ರಾಜ್ಯಗಳಿಗೆ ವಲಸೆ ಬಂದರು. ಇದರಿಂದ ಈಗ 3 ಸಾವಿರ ಕಾಶ್ಮೀರಿ ಪಂಡಿತರು ಮಾತ್ರ ಕಾಶ್ಮೀರಿ ಕಣಿವೆಯಲ್ಲಿದ್ದಾರೆ.

(Special status should be restored on kashmir to imbibe peace in the valley opines farooq abdullah)

Click on your DTH Provider to Add TV9 Kannada