ಅ. 26ರಿಂದ ಭಾರತ, ಪಾಕಿಸ್ತಾನ ಸೇರಿ 6 ದೇಶಗಳ ಪ್ರಯಾಣಿಕರ ಪ್ರವೇಶಕ್ಕೆ ಸಿಂಗಾಪುರ ಅನುಮತಿ

Singapore Flight: ಭಾರತ, ಪಾಕಿಸ್ತಾನ, ನೇಪಾಳ ಮತ್ತು ಬಾಂಗ್ಲಾದೇಶ ಸೇರಿದಂತೆ ದಕ್ಷಿಣ ಏಷ್ಯಾದ ದೇಶಗಳಿಗೆ ಪ್ರಯಾಣವನ್ನು ಪುನರಾರಂಭಿಸುವುದಾಗಿ ಸಿಂಗಾಪುರ ಇಂದು ಘೋಷಿಸಿದೆ.

ಅ. 26ರಿಂದ ಭಾರತ, ಪಾಕಿಸ್ತಾನ ಸೇರಿ 6 ದೇಶಗಳ ಪ್ರಯಾಣಿಕರ ಪ್ರವೇಶಕ್ಕೆ ಸಿಂಗಾಪುರ ಅನುಮತಿ
ಸಿಂಗಾಪುರ ವಿಮಾನ

ನವದೆಹಲಿ: ಕೊವಿಡ್ ಹಿನ್ನೆಲೆಯಲ್ಲಿ ಭಾರತ, ಪಾಕಿಸ್ತಾನ, ಬಾಂಗ್ಲಾದೇಶ, ಮಯನ್ಮಾರ್, ನೇಪಾಳ, ಶ್ರೀಲಂಕಾ ದೇಶಗಳ ವಿಮಾನ ಪ್ರಯಾಣಿಕರಿಗೆ ಹೇರಿದ್ದ ನಿಷೇಧವನ್ನು ಸಿಂಗಾಪುರ್ ರದ್ದುಪಡಿಸಿದೆ. ಹೀಗಾಗಿ, ಇನ್ನು ಮುಂದೆ ಭಾರತದ ಪ್ರಯಾಣಿಕರು ಸಿಂಗಾಪುರಕ್ಕೆ ಪ್ರಯಾಣಿಸಲು ಯಾವುದೇ ತೊಂದರೆಯಿಲ್ಲ. ಆದರೆ, ನಿಷೇಧ ತೆರವಾಗಿರುವ ದೇಶಗಳ ಪ್ರಯಾಣಿಕರು ಸಿಂಗಾಪುರದ ವಿಮಾನ ನಿಲ್ದಾಣದಲ್ಲಿ ಕೊವಿಡ್ ನೆಗೆಟಿವ್ ವರದಿ ನೀಡುವುದು ಹಾಗೂ ಸಿಂಗಾಪುರದಲ್ಲಿ ಕ್ವಾರಂಟೈನ್ ಆಗುವುದು ಕಡ್ಡಾಯವಾಗಿದೆ.

ಸಿಂಗಾಪುರ ಇಂದು ಭಾರತ, ಪಾಕಿಸ್ತಾನ, ನೇಪಾಳ ಮತ್ತು ಬಾಂಗ್ಲಾದೇಶ ಸೇರಿದಂತೆ ದಕ್ಷಿಣ ಏಷ್ಯಾದ ದೇಶಗಳಿಗೆ ಪ್ರಯಾಣವನ್ನು ಪುನರಾರಂಭಿಸುವುದಾಗಿ ಘೋಷಿಸಿದೆ. ಕಳೆದ 14 ದಿನಗಳಲ್ಲಿ ಭಾರತ, ಬಾಂಗ್ಲಾದೇಶ, ಮ್ಯಾನ್ಮಾರ್, ನೇಪಾಳ, ಪಾಕಿಸ್ತಾನ ಮತ್ತು ಶ್ರೀಲಂಕಾಕ್ಕೆ ತೆರಳಿರುವ ಟ್ರಾವೆಲ್ ಹಿಸ್ಟರಿಯನ್ನು ಹೊಂದಿರುವವರಿಗೆ ಕೂಡ ಅಕ್ಟೋಬರ್ 26ರಿಂದ ಸಿಂಗಾಪುರವನ್ನು ಪ್ರವೇಶಿಸಲು ಹಾಗೂ ಸಿಂಗಾಪುರದ ಮೂಲಕ ಪ್ರಯಾಣಿಸಲು ಅನುಮತಿ ನೀಡಲಾಗಿದೆ ಎಂದು ANI ವರದಿ ಮಾಡಿದೆ.


ಕೊರೊನಾ ಅಬ್ಬರ ಹೆಚ್ಚಾಗಿದ್ದರಿಂದ ಈ 6 ದೇಶಗಳ ಪ್ರಯಾಣಿಕರಿಗೆ ಸಿಂಗಾಪುರದಲ್ಲಿ ನಿಷೇಧ ಹೇರಲಾಗಿತ್ತು. ಇದೀಗ ನಿಷೇಧವನ್ನು ತೆರವುಗೊಳಿಸಲಾಗಿದ್ದರೂ ಈ ದೇಶಗಳಿಂದ ಬರುವ ಪ್ರಯಾಣಿಕರು 10 ದಿನಗಳ ಹೋಂ ಕ್ವಾರಂಟೈನ್ ಆಗಬೇಕಾದುದು ಕಡ್ಡಾಯ ಎಂದು ಸಿಂಗಾಪುರದ ಆರೋಗ್ಯ ಸಚಿವಾಲಯ ತಿಳಿಸಿದೆ.

ಸಿಂಗಾಪುರವು ಇನ್ನೂ 15 ದೇಶಗಳಿಂದ ಸಂಪೂರ್ಣವಾಗಿ ಲಸಿಕೆ ಹಾಕಿದ ಪ್ರಯಾಣಿಕರಿಗೆ ಕ್ವಾರಂಟೈನ್ ಮಾಡದೇ ಹಾಗೇ ದೇಶದೊಳಗೆ ಪ್ರವೇಶಿಸಲು ಅನುಮತಿ ನೀಡಲು ಯೋಜಿಸುತ್ತಿದೆ. ಅವುಗಳಲ್ಲಿ ಇಂಡೋನೇಷ್ಯಾ, ಮಲೇಷ್ಯಾ, ವಿಯೆಟ್ನಾಂ ಮತ್ತು ಯುಎಇ ಕೂಡ ಸೇರಿವೆ.

ಇದನ್ನೂ ಓದಿ: China Covid Cases: ಚೀನಾದಲ್ಲಿ ಮತ್ತೆ ಕೊರೊನಾ ಅಟ್ಟಹಾಸ ಹೆಚ್ಚಳ; ವಿಮಾನ ಸಂಚಾರ ಸ್ಥಗಿತ, ಶಾಲೆಗಳು ಬಂದ್

International Flights: ಭಾರತದಲ್ಲಿ ಅ. 31ರವರೆಗೂ ಅಂತಾರಾಷ್ಟ್ರೀಯ ವಿಮಾನ ಸಂಚಾರ ನಿಷೇಧ

Click on your DTH Provider to Add TV9 Kannada